ಪ್ರಚಲಿತ

ಮಥುರಾದಲ್ಲಿ ತನಿಖೆ ಆರಂಭ! ಶೀಘ್ರವೇ ಹಿಂದೂಗಳಿಗಿದೆ ಮತ್ತೊಂದು ಸಿಹಿ ಸುದ್ದಿ…

ಮಥುರೆಯ ಕೃಷ್ಣ ಜನ್ಮಭೂಮಿಯಲ್ಲಿ ಅನಧಿಕೃತವಾಗಿ ನಿರ್ಮಾಣವಾಗಿರುವ ಶಾಹಿ ಈದ್ಗಾ ಮಸೀದಿಯ ಸಮೀಕ್ಷೆ ಕಾರ್ಯ‌ಗಳು ಆರಂಭವಾಗಿದೆ.

ಈ ವಿವಾದಿತ ಮಸೀದಿ ತೆರವು ಮಾಡುವಂತೆ ಈಗಾಗಲೇ ಹಲವು ಕೃಷ್ಣ ಭಕ್ತರು ಕೋರ್ಟ್ ಮೊರೆ ಹೋಗಿದ್ದು, ಈ ಹಿನ್ನೆಲೆಯಲ್ಲಿ ಮಥುರಾ‌ದ ಕೋರ್ಟ್ ಈ ಜಾಗವನ್ನು ಸಮೀಕ್ಷೆ ಮಾಡುವಂತೆ ಪುರಾತತ್ವ ಇಲಾಖೆಗೆ ಕೆಲ ಸಮಯದ ಹಿಂದೆ ಸೂಚಿಸಿತ್ತು. ಜನವರಿ ೧ ರಿಂದಲೇ ಸಮೀಕ್ಷೆ ನಡೆಸುವಂತೆ ಹೇಳಿದ್ದು, ಜನವರಿ ೨೦ ರೊಳಗೆ ವರದಿ ಸಲ್ಲಿಸುವಂತೆಯೂ ಕೋರ್ಟ್ ಸೂಚಿಸಿತ್ತು. ಇದರನ್ವಯ ಇದೀಗ ಸಮೀಕ್ಷೆ ಕಾರ್ಯಗಳು ಆರಂಭವಾಗಿದೆ.

ಶಾಹಿ ಈದ್ಗಾ ಮಸೀದಿ ಇರುವ ಜಾಗ ಮತ್ತು ಅಲ್ಲಿರುವ ಹಿಂದೂ ಧರ್ಮಕ್ಕೆ ಸಂಬಂಧಿತ ಚಿಹ್ನೆಗಳ ಬಗ್ಗೆ ಸಮೀಕ್ಷೆ ನಡೆಸಲು ಹಿಂದೂ ಸಂಘಟನೆಗಳು ಮಾಡಿದ ಮನವಿಯನ್ನು ಪರಿಗಣಿಸಿ ಮಥುರಾದ ನ್ಯಾಯಾಲಯವು ಈ ಆದೇಶವನ್ನು ನೀಡಿತ್ತು.

೧೯೬೯ – ೭೦ ರ ವೇಳೆಗೆ ಔರಂಗಜೇಬನ ಆದೇಶದನ್ವಯ ಈ ಮಸೀದಿಯನ್ನು ಕೃಷ್ಣ ಜನ್ಮಭೂಮಿ ಮಥುರಾದಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡಲಾಗಿತ್ತು. ಇದಕ್ಕೆ ಪೂರಕವಾದ ದಾಖಲೆಗಳು ಸಹ ಇವೆ. ಈ ಮಸೀದಿಯನ್ನು ಕತ್ರ್ ಸಮೀಪದ ಕೇಶವ್ ದೇವಾ ದೇವಾಲಯದ ೧೩.೩೭ ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗಿದೆ. ಈ ಅನಧಿಕೃತ ಕಟ್ಟಡ ನಿರ್ಮಾಣ‌ಕ್ಕೆ ದೇವಾಲಯದ ಕೆಲ ರಚನೆಗಳನ್ನು ಸಹ ಬಳಕೆ ಮಾಡಲಾಗಿದೆ. ಇದಕ್ಕೆ ಪೂರಕವಾದ ದಾಖಲೆಗಳು ಸಹ ಇವೆ, ಪುರಾವೆಗಳು ಸಹ ಸ್ಥಳದಲ್ಲಿ ಕಂಡು ಬರುತ್ತವೆ ಎಂದು ಹಿಂದೂ ಸೇನೆಯ ಪರ ವಾದ ಮಂಡಿಸುತ್ತಿರುವ ವಕೀಲ ಶೈಲೇಶ್ ದುಬೆ ಮಾಹಿತಿ ನೀಡಿದ್ದಾರೆ.

ಈಗಾಗಲೇ ರಾಮ ಜನ್ಮಭೂಮಿ ಮತ್ತೆ ಪ್ರಭು ಶ್ರೀರಾಮನಿಗೆಯೇ ಎಂಬ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಿದ್ದು, ಅಲ್ಲಿ ಭವ್ಯ ಶ್ರೀರಾಮ ಮಂದಿರ ಸಹ ನಿರ್ಮಾಣ ಹಂತದಲ್ಲಿದೆ. ಹಾಗೆಯೇ ಕೃಷ್ಣ ಜನ್ಮಭೂಮಿಗೂ ಮುಸಲ್ಮಾನರಿಂದ ಶೀಘ್ರವಾಗಿ ಮುಕ್ತಿ ದೊರೆಯಲಿ. ಹಿಂದೂಗಳಿಗೆ ನ್ಯಾಯ ದೊರೆಯಲಿ ಎಂಬುದು ನಮ್ಮ ಆಶಯ.

Tags

Related Articles

Close