ಪ್ರಚಲಿತ

ವಾಮಮಾರ್ಗ ಹಿಡಿದ ರಮ್ಯಾಗೆ ಚಾಲೆಂಜ್ ಹಾಕಿದ್ದೇ ಮಹೇಶ್ ವಿಕ್ರಮ್ ಹೆಗ್ಡೆ ಬಂಧನಕ್ಕೆ ಕಾರಣವಾಯ್ತಾ?!

ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಕ್ರಾಂತಿ ಯನ್ನು ಸೃಷ್ಟಿಸಿದ ಪೆÇೀಸ್ಟ್ ಕಾರ್ಡ್ ಸಂಸ್ಥೆಯ ಮಾಲಿಕ ಮಹೇಶ್ ವಿಕ್ರಂ ಹೆಗ್ಡೆಯವರನ್ನು ಕರ್ನಾಟಕ ಕಾಂಗ್ರೆಸ್ ಸರ್ಕಾರ ಕುತಂತ್ರದಿಂದ ಬಂಧಿಸಿರುವ ವಿಚಾರ ಇದೀಗ ದೇಶದೆಲ್ಲೆಡೆ ಭಾರೀ ಸಂಚಲನವನ್ನೇ ಸೃಷ್ಟಿಸಿದೆ. ಮುಂದಿನ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅತಿ ದೊಡ್ಡ ಹೊಡೆತವನ್ನು ಮಹೇಶ್ ವಿಕ್ರಂ ಹೆಗ್ಡೆಯವರ ಪೆÇೀಸ್ಟ್ ಕಾರ್ಡ್ ಸಂಸ್ಥೆ ನೀಡುತ್ತೆ ಎನ್ನುವ ಪೂರ್ವ ಗ್ರಹ ಪೀಡಿತ ಚಿಂತನೆಯನ್ನು ಇಟ್ಟುಕೊಂಡಿರುವ ಕಾಂಗ್ರೆಸ್ ಪಕ್ಷ ಇದೀಗ ಅವರನ್ನು ಮೋಸದಿಂದ ಬಂಧಿಸಿದೆ.

ಇದನ್ನು ಓದಿದ ಬಳಿಕ ಮಹೇಶ್ ವಿಕ್ರಮ್ ಹೆಗ್ಡೆ ಬಂಧನದಲ್ಲಿರುವ ಕಾಣದ ಕೈ ಯಾವುದು ಎಂದು ನಿಮಗೆ ತಿಳಿಯುತ್ತದೆ .. ಮಹೇಶ್ ವಿಕ್ರಮ್ ಹೆಗ್ಡೆಯವವರು ಜೈನ ಮುನಿಯೊಬ್ಬರಿಗೆ ಓರ್ವ ಮುಸ್ಲಿಮ್ ಹಲ್ಲೆ ಮಾಡಿದ್ದಾನೆ ಎಂಬ ವಿಷಯನ್ನು ಪೋಸ್ಟ್ ಕಾರ್ಡ್ ಸಂಸ್ಥೆಯ ಮಾಲಿಕರಾದಂತಹ ಮಹೇಶ್ ವಿಕ್ರಮ್ ಹೆಗ್ಡೆಯವರು ಟ್ವೀಟ್ ಮಾಡಿದ್ದರು!! ಇಲ್ಲಿ ಸರಿಯಾಗಿ ಗಮನಿಸಬೇಕಾದ ಅಂಶವೇನೆಂದರೆ ಅವರು ಟ್ವೀಟ್ ಮಾಡುವುದಕ್ಕಿಂತ ಮುಂಚೆ ಮೂರು ಜನರು ಟ್ಟೀಟ್ ಮಾಡಿದ್ದರು.. ಅದಕ್ಕೆ ಅವರು ರೀಟ್ವೀಟ್ ಮಾಡಿದ್ದು ಅದು ನಕಲಿ ಸುದ್ಧಿ ಎಂದು ತಿಳಿಯುತ್ತಿದ್ದಂತೆಯೇ ಅದನ್ನು ಡಿಲೀಟ್ ಮಾಡಿದ್ದರು!! ಗಫರ್ ಎನ್ನುವ ಕಾಂಗ್ರೆಸ್ ಪ್ರೇರಿತ ಮುಸಲ್ಮಾನ ಪೋಸ್ಟ್ ಕಾರ್ಡ್ ಸಂಸ್ಥೆಯ ಮಾಲಿಕರಾದ ಮಹೇಶ್ ವಿಕ್ರಮ್ ಹೆಗ್ಡೆಯವರ ಮೇಲೆ ದೂರು ದಾಖಲಿಸುತ್ತಾರೆ.. ಇಲ್ಲಿ ಮತ್ತೆ ಸಂಶಯ ಮೂಡುವ ಅಂಶವೇನೆಂದರೆ ಇವರು ಮಾಡಿರುವುದುರು ರೀಟ್ವೀಟ್!! ಅದಕ್ಕಿಂತ ಮುಂಚಿತವಾಗಿ ಮಾಡಿರುವ ಮೂರು ಜನರನ್ನು ಯಾವುದೇ ರೀತಿಯಾಗಿ ಪ್ರಶ್ನಿಸದೆ ಅಥವಾ ಬಂಧಿಸದೆ ಅದಾಗಲೇ ರೀ ಟ್ವೀಟ್ ಮಾಡಿರುವಂತಹ ಮಹೇಶ್ ವಿಕ್ರಮ್ ಹಗ್ಗಡೆಯವರು ತಾನು ಮಾಡಿದ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದರೂ ಸಹ ಯಾತಕ್ಕಾಗಿ ಮಹೇಶ್ ವಿಕ್ರಮ್ ಹೆಗ್ಗಡೆಯವರನ್ನೇ ಪೊಲೀಸರು ಟಾರ್ಗೆಟ್ ಮಾಡಿರುವಂತಹದ್ದು?!

ಜೈನ ಮುನಿಯೊಬ್ಬರಿಗೆ ಮುಸ್ಲಿಮ್ ಯುವಕನಿಂದ ಹಲ್ಲೆಯಾಗಿದೆ ಎಂಬುವುದಕ್ಕೆ ಮಹೇಶ್ ವಿಕ್ರಮ್ ಹೆಗಡೆಯವರು ಟ್ವೀಟ್ ಮಾಡುವುದಕ್ಕಿಂತ ಮುಂಚಿತವಾಗಿ ಮಾಡಿರುವ ಟ್ವೀಟ್ ಅದಾಗಲೇ ಫೇಸ್‍ಬುಕ್, ವಾಟ್ಸಾಪ್‍ಗಳಲ್ಲಿ ವೈರಲ್ ಆಗಿತ್ತು!! ಆ ಟ್ವೀಟ್ ನಂತರವಷ್ಟೇ ಮಹೇಶ್ ವಿಕ್ರಮ್ ಹೆಗ್ಡೆಯವರು ರೀ ಟ್ವೀಟ್ ಮಾಡಿರುವಂತಹದ್ದು ಅದೂ ನಾಲ್ಕನೇ ಟ್ವೀಟ್‍ಗೆ!! ಅದಕ್ಕಿಂತ ಮುಂಚೆ ಮೂರು ಜನರು ಟ್ವೀಟ್ ಮಾಡಿದ್ದರು.. ಅವರ ವಿರುದ್ಧ ಯಾವುದೇ ಆಕ್ಷನ್ ತೆಗೆದುಕೊಳ್ಳದೆ ಕೇವಲ ಪೋಸ್ಟ್ ಕಾರ್ಡ್ ಮಾಲಿಕರಾದ ಮಹೇಶ್ ವಿಕ್ರಮ್ ಹೆಗ್ಡೆಯವರನ್ನೇ ಯಾತಕ್ಕಾಗಿ ಟಾರ್ಗೆಟ್ ಮಾಡಲಾಯಿತು?!

ಹಾಗದರೆ ಭಗವಾನ್‍ನಂತಹ ಅದೆಷ್ಟೋ ಜನರು ತಮ್ಮ ನಾಲಗೆಯನ್ನು ಹರಿಯ ಬಿಟ್ಟು ಬಾಯಿಗೆ ಬಂದ ರೀತಿಯಲ್ಲಿ ಮಾತುಗಳನ್ನಾಡುತ್ತಾರೆ!! ದೊಡ್ಡ ದೊಡ್ಡ ಮಹಾನ್ ವ್ಯಕ್ತಿಗಳ ಬಗ್ಗೆಯೇ ಅವಾಚ್ಯ ಶಬ್ಧಗಳಿಂದ ಕೆಲವರು ನಿಂದಿಸುತ್ತಾರೆ.. ಹಿಂದೂ ದೇವರುಗಳ ಬಗ್ಗೆ ತಮ್ಮ ಬಾಯಿಗೆ ಬಂದ ರೀತಿಯಲ್ಲಿ ಮಾತನಾಡಿದರೂ ಇಲ್ಲಿಯವರೆಗೂ ಯಾವೊಬ್ಬನನ್ನು ಬಂಧಿಸಿಲ್ಲ!! ಅದೆಷ್ಟೋ ಜನ ದೇಶದ್ರೋಹಿ ಹೇಳಿಕೆಗಳನ್ನೆಲ್ಲಾ ಕೊಟ್ಟರೂ ಒಬ್ಬ ನರಪಿಳ್ಳೆಯೂ ಅವರ ಬಗ್ಗೆ ಮಾತಾಡಿಲ್ಲ!! ಹಾಗಾದರೆ ಮಹೇಶ್ ವಿಕ್ರಮ್ ಹೆಗ್ಡೆಯವರನ್ನೇ ಯಾತಕ್ಕಾಗಿ ಇಲ್ಲಿ ಬಂಧಿಸಲಾಯಿತು!!

ಮಹೇಶ್ ವಿಕ್ರಮ್ ಹೆಗಡೆಯವರನ್ನು ಟಾರ್ಗೆಟ್ ಮಾಡಿರುವಂತಹದ್ದು ಯಾರು?

ಇಂಡಿಯ ಟುಡೇ ಎನ್ನುವಂತಹ ಚಾನಲ್‍ನಲ್ಲಿ ಕರ್ನಾಟಕ ಪಂಚಾಯತ್ ಎನ್ನುವಂತಹ ಪ್ರೋಗ್ರಾಂ ಅಡಿಯಲ್ಲಿ ಚರ್ಚಾ ಕಾರ್ಯಕ್ರಮವೊಂದನ್ನು ಏರ್ಪಡಿಸಲಾಗಿತ್ತು!! ಅದರಲ್ಲಿ ಭಾಗವಹಿಸಿದ ಕಾಂಗ್ರೆಸ್‍ನ ಸೋಸಿಯಲ್ ಮೀಡಿಯಾದ ಹೆಡ್ ಆಗಿರುವಂತಹ ರಮ್ಯಾ ಅಲಿಯಾಸ್ ದಿವ್ಯಾ ಸ್ಪಂದನರವರು ಪೋಸ್ಟ್ ಕಾರ್ಡ್‍ನ ಮಾಲಿಕರಾದಂತಹ ಮಹೇಶ್ ವಿಕ್ರಮ್ ಹೆಗ್ಡೆಯವರನ್ನು ಪತ್ರಕರ್ತರೇ ಅಲ್ಲ ಎಂಬಂತನ್ನು ಮಾತನ್ನು ತನ್ನ ಚರ್ಚಾ ಕಾರ್ಯಕ್ರಮದಲ್ಲಿ ಪದೇ ಪದೇ ಹೇಳುತ್ತರೆ!! ಪೋಸ್ಟ್ ಕಾರ್ಡ್ ಕನ್ನಡ ವೆಬ್‍ಸೈಟ್ ಅಂದರೆ ಇಡೀ ಕರ್ನಾಟಕದಲ್ಲೇ ಅತೀ ಹೆಚ್ಚು ಓದುಗಾರರಿದ್ದಾರೆ!! ಅದಲ್ಲದೆ ದಿನದ ಒಂದು ಅಂಕಣ 30ರಿಂದ ಸುಮಾರು 40 ಸಾವಿರದವರೆಗೆ ಹಂಚಿಕೆಯಾಗುತ್ತದೆ!! ಯಾವಾಗ ಈಕೆ ಮಹೇಶ್ ವಿಕ್ರಮ್ ಹೆಗ್ಡೆಯವರು ಪತ್ರಕರ್ತ ಅಲ್ಲ ಎಂದು ಹೇಳಿದರೆ ಇಡೀ ದೇಶದ ಪತ್ರಕರ್ತರೇ ಇವರ ವಿರುದ್ಧ ತಿರುಗಿ ಬೀಳುತ್ತಾರೆ, ಅವರನ್ನು ಜೈಲಿನಿಂದ ಬಿಡುಗಡೆಗೊಳಿಸಲು ಯಾವ ಪತ್ರಕರ್ತರು ಇವರ ಬೆಂಬಲಕ್ಕೆ ನಿಲ್ಲಬಾರದು ಎನ್ನುವ ಉದ್ಧೇಶದಿಂದ ಅವರನ್ನು ಇಂಡಿಯಾ ಟುಡೇ ಚಾನಲ್‍ನ ಚರ್ಚೆಯಲ್ಲಿ ಪದೇ ಪದೇ ಮಹೇಶ್ ಒಬ್ಬರು ಪತ್ರಕರ್ತ ಅಲ್ಲ ಎನ್ನುವುದನ್ನು ಹೇಳುತ್ತಾರೆ ರಮ್ಯಾ ಅಲಿಯಾಸ್ ದಿವ್ಯಾಸ್ಪಂದನ!! ಯಾಕೆಂದರೆ ಈ ಮೊದಲೇ ರಮ್ಯಾರ ಚಳಿ ಬಿಡಿಸಿತ್ತು ಪೋಸ್ಟ್ ಕಾರ್ಡ್!!

ರಮ್ಯಾರಿಗೆ ಓಪನ್ ಚಾಲೆಂಜ್ ಹಾಕಿದ್ದ ಮಹೇಶ್ ವಿಕ್ರಮ್ ಹೆಗ್ಡೆ!!

ಇತ್ತೀಚೆಗೆ ಕಾಂಗ್ರೆಸ್‍ನ ಸಾಮಾಜಿಕ ಜಾಲತಾಣದ ಮುಖ್ಯಸ್ಥೆಯಾಗಿರುವಂತಹ ರಮ್ಯಾರವರು ಮಾಡಿದ್ದ ಅವಾಂತರ ಭಾರೀ ಸುದ್ಧಿ ಮಾಡಿತ್ತು. ರಾಜ್ಯ ಮಾಧ್ಯಮಗಳು ಮಾತ್ರವಲ್ಲದೆ ರಾಷ್ಟ್ರೀಯ ಸುದ್ಧಿ ಸಂಸ್ಥೆಗಳೂ ಸಹ ರಮ್ಯಾರ ಹಣೆಬರಹವನ್ನು ಜಾಲಾಡಿದ್ದರು. ರಮ್ಯಾ ಮಾಡಿದ ಆ ಒಂದು ತಪ್ಪು ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿತ್ತು. ರಮ್ಯಾ ಅಕ್ಷರಷಃ ಪೇಚೀಗೆ ಸಿಲುಕಿದ್ದರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಕಾಂಗ್ರೆಸ್ ನ ಸಾಮಾಜಿಕ ಜಾಲತಾಣದ ಕಾರ್ಯಗಾರದಲ್ಲಿ ತನ್ನ ಪಕ್ಷದ ಕಾರ್ಯಕರ್ತರಿಗೆ ನಕಲಿ ಪಾಠವನ್ನು ಮಾಡಿದ್ದರು. ಪ್ರತಿಯೋರ್ವರೂ ನಕಲಿ ಖಾತೆಗಳನ್ನು ಸೃಷ್ಟಿಸಿ ಕಾಂಗ್ರೆಸ್ ಪರ ಪ್ರಚಾರ ಮಾಡಿ. 3ಕ್ಕಿಂತ ಹೆಚ್ಚು ಅಧಿಕ ನಕಲಿ ಖಾತೆಗಳನ್ನು ರಚನೆ ಮಾಡಿ ಎಂದು ಪಾಠ ಮಾಡುತ್ತಾರೆ. ರಮ್ಯಾ ಮಾಡಿದ ಈ ನಕಲೀ ಪಾಠದ ವೀಡಿಯೋವನ್ನು ಪೆÇೀಸ್ಟ್ ಕಾರ್ಡ್ ಮಾಧ್ಯಮ ಸಂಸ್ಥೆಗೆ ಸ್ವತಃ ಕಾಂಗ್ರೆಸ್ ಕಾರ್ಯಕರ್ತ ತಂದು ಕೊಡುತ್ತಾರೆ. ರಮ್ಯಾ ಹೇಳಿದ ಪಾಠ ತಪ್ಪು ಎನಿಸಿತ್ತು. ಅದಕ್ಕಾಗಿ ನಾನು ಇದನ್ನು ಬಹಿರಂಗಪಡಿಸುತ್ತಿದ್ದೇನೆ ಎಂದು ಹೇಳುತ್ತಾನೆ. ನಂತರ ಆ ವೀಡಿಯೋವನ್ನು ಪರಿಶೀಲಿಸಿ ಪೆÇೀಸ್ಟ್ ಕಾರ್ಡ್ ನ್ಯೂಸ್ ನಲ್ಲಿ ಹಾಕಲಾಗಿತ್ತು. ಪೆÇೀಸ್ಟ್ ಕಾರ್ಡ್ ಮಾಡಿದ್ದ ಸುದ್ಧಿಯನ್ನು ಮಹೇಶ್ ವಿಕ್ರಮ್ ಹೆಗ್ಡೆಯವರು ತನ್ನ ಟ್ವಿಟರ್ ನಲ್ಲಿ ಹಾಕಿಕೊಳ್ಳುತ್ತಾರೆ.

ಯಾವಾಗ ಹೆಗ್ಡೆಯವರು ತಮ್ಮ ಟ್ವಿಟರ್ ನಲ್ಲಿ ರಮ್ಯಾಳ ಗ್ರಹಚಾರ ಬಿಡಿಸಿದರೋ ಆವಾಗ ರಮ್ಯಾಗೆ ಸಿಡಿಲಾಗಾತವಾಗಿತ್ತು. ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಕಂಗಾಲಾಗಿ ಹೋಗಿದ್ದರು!! ಏನೂ ಮಾಡದ ರಮ್ಯಾ ಅವಸರದಲ್ಲಿ ಮಹೇಶ್ ವಿಕ್ರಮ್ ಹೆಗ್ಡೆಯವರ ಟ್ವೀಟನ್ನು ರೀ ಟ್ವೇಟ್ ಮಾಡಿ `ಇದೊಂದು ಎಡಿಟಿಂಗ್ ವೀಡಿಯೋ. ಎಂಜಾಯ್ ಮಾಡಿ’ ಎಂದು ಬರೆದುಕೊಳ್ಳುತ್ತಾರೆ. ರಮ್ಯಾ ಮಾಡಿದ ಈ ಟ್ವೀಟ್ ಗೆ ತಡಮಾಡದ ಮಹೇಶ್ ವಿಕ್ರಮ್ ಹೆಗ್ಡೆ ಅದೇ ಟ್ವಿಟರ್ ನಲ್ಲಿ ರಮ್ಯಾಗೆ ಸವಾಲು ಹಾಕುತ್ತಾರೆ. “ಓಪನ್ ಚಾಲೆಂಜ್” ಒಂದು ವೇಳೆ ನಾನು ಹಾಕಿದ್ದ ವೀಡಿಯೋ ಎಡಿಟಿಂಗ್ ಆದರೆ ನನ್ನ ವಿರುದ್ಧ ಕೇಸ್ ಹಾಕಿ!! ನಾನು ರೆಡಿ’ ಎಂದು ಬಹಿರಂಗ ಸವಾಲು ಹಾಕುತ್ತಾರೆ ಮಹೇಶ್ ವಿಕ್ರಮ್ ಹೆಗ್ಡೆಯವರು!! ಅದಕ್ಕೆ ತತ್ತರಿಸಿ ರಮ್ಯಾ ಬಾಯಿಗೆ ಬಂದ ರೀತಿ ಸ್ಟೇಟ್‍ಮೆಂಟ್ ಅನ್ನು ನೀಡುತ್ತಾರೆ!! ಹಾಗಾದರೆ ತಮ್ಮ ಪಕ್ಷಕ್ಕೆ ಖತರ್ನಾಕ್ ಐಡಿಯಾಗಳನ್ನು ಕೊಟ್ಟಂತಹ ರಮ್ಯಾರನ್ನು ಯಾರೂ ಪ್ರಶ್ನಿಸುವವರೇ ಇಲ್ಲ ಯಾರೂ ಬಂಧಿಸುವವರೇ ಇಲ್ಲ!! ರಮ್ಯಾಳ ವಿರುದ್ಧ ಯಾವ ಕೇಸು ದಾಖಲಾಗಿಲ್ಲ!! ಮಹೇಶ್ ವಿಕ್ರಮ್ ಹೆಗ್ಡೆಯವರೆ ಸ್ವತಃ ಓಪನ್ ಚಾಲೆಂಜ್ ಹಾಕುವ ಮೂಲಕ ರಮ್ಯಾರ ಚಳಿ ಬಿಡಿಸಿದ್ದರು!! ಆದರೆ ರಮ್ಯಾ ಮಾತ್ರ ಮಹೇಶ್ ವಿಕ್ರಮ್ ಹೆಗ್ಡೆಯವರ ವಿರುದ್ಧ ಯಾವುದೇ ಕೇಸು ದಾಖಲಿಸಿಲ್ಲ!! ಯಾಕೆಂದರೆ ಆಕೆ ಮಾಡಿದ್ದು ಆಕೆಗೆ ಗೊತ್ತಿಲ್ಲವೇ?!! ಆ ಸಮಯದಲ್ಲಿ ರಮ್ಯಾಳಿಗೆ ಏನು ಮಾಡುವಂತೆ ತೋಚದೆ ತೆಪ್ಪಗೆ ಕುಳಿತಿದ್ದರು!! ಇದೀಗ ಮೋಸದಿಂದ ಕಾಂಗ್ರೆಸ್ ಸರಕಾರ ಮಹೇಶ್ ವಿಕ್ರಮ್ ಹೆಗ್ಡೆಯವರನ್ನು ಬಂಧಿಸಿದ ಖುಷಿಯಲ್ಲಿರುವ ರಮ್ಯಾರವರು ಇದೇ ತಕ್ಕ ಸಮಯವೆಂದು ಹೇಳಿ ಚರ್ಚಾ ಕಾರ್ಯಕ್ರಮದಲ್ಲಿ ಅವರೊಬ್ಬ ಪತ್ರಕರ್ತನೇ ಅಲ್ಲ ಎಂಬ ಹೇಳಿಕೆಯನ್ನು ನೀಡುತ್ತಾರೆ!!

ಕಾಂಗ್ರೆಸ್‍ನ ಬಣ್ಣ ಬಯಲು ಮಾಡಿದ್ದಕ್ಕೆ ಪೋಸ್ಟ್ ಕಾರ್ಡ್ ಟಾರ್ಗೆಟ್!!

ಪೋಸ್ಟ್ ಕಾರ್ಡ್ ವೆಬ್‍ಸೈಟ್ ಪಕ್ಕಾ ಬಲಪಂಥೀಯವಾಗಿದ್ದು, ಹಿಂದುತ್ವವನ್ನು ಎತ್ತಿ ಹಿಡಿದಿತ್ತು!! ಪೋಸ್ಟ್ ಕಾರ್ಡ್ ಕನ್ನಡ ವೆಬೆಸೈಟ್‍ಗೆ ಇಡೀ ಕರ್ನಾಟಕದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯ ಓದುಗರರಿದ್ದು ಕಾಂಗ್ರೆಸ್‍ನ ಇಂಚಿಂಚೂ ಬಣ್ಣ ಬಯಲು ಮಾಡಿತ್ತು!! ಅಂದಿನಿಂದ ಇಂದಿನವರೆಗೆ ಕಾಂಗ್ರೆಸ್‍ನ ಮುಖವಾಡ ಪೋಸ್ಟ್ ಕಾರ್ಡ್‍ನಲ್ಲಿ ಬಟಾಬಯಾಲಾಗಿತ್ತು!! ಕಾಂಗ್ರೆಸ್‍ನ ಕರಾಳಮುಖವನ್ನು ಎಳೆಯಾಗಿ ಎಳೆಯಾಗಿ ಇಲ್ಲಿ ಬಿಚ್ಚಿಟ್ಟದ್ದೇ ಮಹೇಶ್ ವಿಕ್ರಮ್ ಹೆಗ್ಡೆಯವರನ್ನು ಟಾರ್ಗೆಟ್ ಮಾಡಲಾಯಿತು!! ಕಾಂಗ್ರೆಸ್ ಮಾತ್ರ ಯಾವ ರೀತಿ ಕೀಳು ಮಟ್ಟದಲ್ಲಿ ವರ್ತಿಸಿದರೂ ಯಾವ ಬಂಧನದ ಭೀತಿಯೂ ಅವರಿಗಿರಲ್ಲ!! ಇದ್ಯಾವ ನ್ಯಾಯ ಸ್ವಾಮಿ?!

ಯೋಗಿ ಆದಿತ್ಯನಾಥರ ವಿರುದ್ಧ ಕೀಳು ಮಟ್ಟದ ಅಪವಾದ!! ಕಾಂಗ್ರೆಸ್‍ಗಿಲ್ಲ ಯಾವ ಭಯ!!

ಅದಲ್ಲದೆ ಇತ್ತೀಚೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ, ಹಿಂದೂ ಫೈರ್ ಬ್ರಾಂಡ್ ಯೋಗಿ ಆದಿತ್ಯನಾಥರ ಮೇಲೆ ಕಳೆದ ನವಂಬರ್ ತಿಂಗಳಲ್ಲಿ ಸಿಎಂ ಆಪ್ತೆಯಾದಂತಹ ಪ್ರಭಾ ಬೆಲವಂಗಳ ಸಾಮಾಜಿಕ ಜಾಲತಾಣಗಳಲ್ಲಿ ಫೆÇೀಟೋಗಳನ್ನು ಅತೀ ಕೀಳು ಮಟ್ಟದಲ್ಲಿ ಎಡಿಟ್ ಮಾಡಿ ಫೇಸ್‍ಬುಕ್ ನಲ್ಲಿ ಹಾಕಿಕೊಂಡಿದ್ದರು. ಈ ವಿಚಾರ ರಾಷ್ಟ್ರೀಯ ಮಟ್ಟದಲ್ಲಿ ವೈರಲ್ ಆಗಿದ್ದರೂ ಇದರ ವಿರುದ್ಧ ಯಾವುದೇ ಕ್ರಮಕೈಗೊಂಡಿರಲಿಲ್ಲ. ಒಂದು ರಾಜ್ಯದ ಮುಖ್ಯಮಂತ್ರಿಯ ಬಗ್ಗೆ ಹೀನಾಯವಾಗಿ ನಿಂದಿಸಿದ್ದಲ್ಲದೆ , ಅದನ್ನು ಫೇಸ್‍ಬುಕ್ ಗಳಲ್ಲಿ ಹರಿಯಬಿಟ್ಟಿದ್ದು , ಯಾವುದೇ ಸೈಬರ್ ಕ್ರೈಮ್ ಕೇಸ್ ದಾಖಲಾಗಲಿಲ್ಲ.

ಕಾಂಗ್ರೆಸ್ ಅದ್ಯಾವ ರೀತಿಯ ರಾಜಕೀಯ ಮಾಡುತ್ತಿದೆ ಎಂದರೆ , ಪೆÇಲೀಸರನ್ನು ತಮ್ಮ ಗುಲಾಮರಂತೆ ಬಳಸಿಕೊಂಡು ದೇಶಪ್ರೇಮಿಗಳ ವಿರುದ್ಧ ಇಲ್ಲಸಲ್ಲದ ಆರೋಪ ಹೊರಿಸಿ , ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಪ್ರಕಟಿಸಿ ಅಮಾಯಕ ಜನರನ್ನು ನಂಬಿಸಿ ಮೋಸಗೊಳಿಸುವ ಕೀಳು ಮಟ್ಟದ ರಾಜಕೀಯಕ್ಕೆ ಇಳಿದಿರುವ ಕಾಂಗ್ರೆಸ್ , ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆ ತನ್ನ ವಿರುದ್ಧ ಧ್ವನಿ ಎತ್ತುವವರನ್ನು ಅಪಹರಣಗೊಳಿಸಿ ಹಿಂಸೆ ನೀಡುತ್ತಿದೆ. ಕಾಂಗ್ರೆಸ್ ನ ಒಂದೊಂದೇ ಹಗರಣಗಳನ್ನು ಬಯಲಿಗೆಳೆಯುತ್ತಿದ್ದ ಪೆÇೀಸ್ಟ್ ಕಾರ್ಡ್ ಸಂಸ್ಥೆಯ ಮಾಲಿಕರಾದ ಮಹೇಶ್ ವಿಕ್ರಮ್ ಹೆಗ್ಡೆ ಅವರನ್ನು ಈ ಹಿಂದಿನಿಂದಲೂ ಟಾರ್ಗೆಟ್ ಮಾಡಿ ಹೊಂಚು ಹಾಕುತ್ತಿದ್ದ ವಿರೋಧಿ ಪಡೆಗಳು ಇದೀಗ ಚುನಾವಣಾ ಹೊಸ್ತಿಲಲ್ಲೇ ಮೋಸದಿಂದ ಬಂಧಿಸಿದೆ. ಯಾವುದೇ ಆರೋಪಗಳು ಇಲ್ಲದೇ ಇದ್ದರೂ , ಕಾಂಗ್ರೆಸ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಬರೆಯುತ್ತಾರೆ ಎಂಬ ಕಾರಣಕ್ಕಾಗಿ ಪೆÇಲೀಸರನ್ನು ಬಳಸಿಕೊಂಡು ದಾಳಿ ನಡೆಸಿದೆ. ಆದರೆ ದೇಶದ್ರೋಹಿ ಹೇಳಿಕೆಗಳು ಹಾಗೂ ಸುಳ್ಳು ಸುದ್ಧಿ ಹಬ್ಬಿಸುವವರ ಸಾಲಿನಲ್ಲಿ ಭಗವನ್,ಪ್ರಭಾ ಬೆಲವಂಗಳ ವಿರುದ್ಧ ಯಾತಕ್ಕಾಗಿ ದೂರು ದಾಖಲಾಗುತ್ತಿಲ್ಲ ಎಂಬ ಆಕ್ರೋಶ ಈಗ ದೇಶದೆಲ್ಲೆಡೆ ಕೇಳಿಬರುತ್ತಿದೆ!! ಮಹೇಶ್ ವಿಕ್ರಂ ಹೆಗ್ಡೆಯವರ ಬಿಡುಗಡೆಗೋಸ್ಕರ ದೇಶದ ಪ್ರತೀಯೋಬ್ಬ ರಾಷ್ಟ್ರೀಯವಾದಿಗಳು ಹಾತೊರೆಯುತ್ತಿದ್ದಾರೆ!!

ಪೋಸ್ಟ್‍ಕಾರ್ಡ್ ಮಾಲಿಕರಾದಂತಹ ಮಹೇಶ್ ವಿಕ್ರಮ್ ಹೆಗ್ಡೆಯವರನ್ನು ಬಂಧಿಸುತ್ತಲೇ ಸಾಮಾಜಿಕ ಜಾಲತಾಣದಲ್ಲಿ ಬಾರೀ ಆಕ್ರೋಶ ವ್ಯಕ್ತವಾಗಿದೆ!! ಆದಷ್ಟು ಬೇಗ ಮಹೇಶ್ ವಿಕ್ರಮ್ ಹೆಗ್ಡೆಯವರನ್ನು ಬಿಡುಗಡೆಗೊಳಿಸಬೇಕು ಎಂದು ಕರ್ನಾಟಕದದಲ್ಲಿ ಅಲ್ಲದೆ ದೇಶದೆಲ್ಲೆಡೆ ಭಾರೀ ಕೂಗು ಕೇಳಿಬರುತ್ತಿದೆ!! ಒಟ್ಟಾರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಬಯಲಾಗುವ ಭಯದಲ್ಲಿದ್ದ ಸಿದ್ದರಾಮಯ್ಯನವರ ಸರ್ಕಾರ ರಾಷ್ಟ್ರೀಯ ವಾದಿಗಳ ಬಂಧನಕ್ಕೆ ಸದಾ ಸಿದ್ಧವಾಗಿದೆ. ಆದರೆ ಅಪ್ಪಟ ರಾಷ್ಟ್ರೀಯವಾದಿ ಚಿಂತಕ ಮಹೇಶ್ ವಿಕ್ರಂ ಹೆಗ್ಡೆಯವರನ್ನು ಬಂಧಿಸಿ ಸರ್ಕಾರ ಸೋಲಿನ ಉರುಳನ್ನು ತಾನೇ ಅಪ್ಪಿಕೊಂಡಿದ್ದಂತು ಸುಳ್ಳಲ್ಲ.

source:
https://postcard.news/is-it-another-phase-of-taking-a-revenge-just-because-mahesh-vikram-hegde-has-challenged-ramya/
ಪವಿತ್ರ

Tags

Related Articles

Close