ಪ್ರಚಲಿತ

ಇಸ್ರೋದ ಮಹಿಳಾ ವಿಜ್ಞಾನಿ ಮಾಡಿರುವ ಸಾಧನೆಯಿಂದಾಗಿ ಹೊಸ ದಾಖಲೆ ಸೃಷ್ಟಿ!! ಅಷ್ಟಕ್ಕೂ ಆ ಮಹಿಳೆ ಮಾಡಿರುವ ಸಾಧನೆಯಾದರೂ ಏನು ಗೊತ್ತೇ??

ಈಗಾಗಲೇ ಭಾರತದಲ್ಲಿ ನಾರಿಮಣಿಯರ ಶಕ್ತಿ ದಿನೇ ದಿನೇ ಹೆಚ್ಚುತ್ತಿದ್ದು, ನರೇಂದ್ರ ಮೋದಿಯವರು ಅಧಿಕಾರ ಸ್ವೀಕರಿಸಿದಂದಿನಿಂದಲೂ ಮಹಿಳೆಯರಿಗೆ ಹೆಚ್ಚಿನ ಸ್ಥಾನಮಾನ ಸಿಗುತ್ತಿರುವ ವಿಚಾರ ತಿಳಿದೇ ಇದೆ. ಅದಕ್ಕೆ ಸಾಕ್ಷಿ ಎನ್ನುವಂತೆ ಇತ್ತೀಚೆಗೆ ಮಿಗ್ -21 ವಿಮಾನವನ್ನು ಯಶಸ್ವಿಯಾಗಿ ಚಲಾಯಿಸುವ ಮೂಲಕ ಮಹಿಳಾ ಪೈಲಟ್ ಅವನಿ ಚತುರ್ವೇದಿ ಗಮನ ಸೆಳೆದಿದ್ದರಲ್ಲದೇ ಭಾರತದ ಮಹಿಳೆಯರ ತಾಕತ್ತು ಕೇವಲ ಯುದ್ದಭೂಮಿಯಲ್ಲಿ ಮಾತ್ರವಲ್ಲದೇ ಬಾನಂಗಳದಲ್ಲಿ ಪ್ರದರ್ಶಿತವಾಗಿತ್ತು!! ಆದರೆ ಇದೀಗ ಇಸ್ರೋದ ಮಹಿಳಾ ವಿಜ್ಞಾನಿಯೋರ್ವರು ಮಾಡಿರುವ ಸಾಧನೆಯಿಂದಾಗಿ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ.

ಹೌದು… ಮಹಿಳೆಯರೂ ಯಾವ ಸಾಧನೆಗೂ ಸೈ ಎನ್ನುವುದಕ್ಕೆ ಉತ್ತಮ ನಿದರ್ಶನ ಎಂದರೆ ಕಲ್ಪನಾ ಚಾವ್ಲ, ಪಿಟಿ ಉಷಾ, ಧೀರೆ ನೀರಜಾ ಹೀಗೆ ಅದೆಷ್ಟೋ ಮಹಿಳಾ ಮಣಿಯರ ದಂಡೇ ಹರಿದು ಬರುತ್ತೇ!! ಅಷ್ಟೇ ಅಲ್ಲದೇ ಇತ್ತಿಚೆಗಷ್ಟೇ ಭಾರತೀಯ ವಾಯುಪಡೆಯ ಮಹಿಳಾ ಪೈಲೆಟ್ ಅವನಿ ಚತುರ್ವೇದಿ ಏಕಾಂಗಿಯಾಗಿ ಮಿಗ್-21 ಯುದ್ಧ ವಿಮಾನವನ್ನು ಹಾರಾಟ ನಡೆಸಿದ್ದು, ಈ ಸಾಧನೆ ಮಾಡುವ ಮೂಲಕ ಇತಿಹಾಸವನ್ನು ಸೃಷ್ಟಿಸಿರುವ ಜೊತೆಗೆ ಮೊದಲ ಭಾರತೀಯ ಮಹಿಳೆ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದರು. ಆದರೆ ಇದೀಗ 56 ವರ್ಷದ ಇಸ್ರೋದಲ್ಲಿ ವಿಜ್ಞಾನಿಯಾಗಿರುವ ಮಹಿಳೆಯೊಬ್ಬರು ಮತ್ತೊಂದು ದಾಖಲೆಯನ್ನು ನಿರ್ಮಿಸಿದ್ದಾರೆ.

ಭಾರತೀಯ ಮಹಿಳೆಯರು ಯಾವುದೇ ಕ್ಷೇತ್ರದಲ್ಲೂ ಕಡಿಮೆ ಇಲ್ಲ ಎಂಬುದನ್ನು ಪದೇ ಪದೆ ಸಾಬೀತುಪಡಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ವಿಶ್ವದ ಅತ್ಯಂತ ತಣ್ಣನೆಯ ಪ್ರದೇಶ ಎಂದು ಕರೆಯಲ್ಪಡುವ ಅಂಟಾರ್ಟಿಕದಲ್ಲಿ 403 ದಿನಗಳನ್ನು ಕಳೆಯುವ ಮೂಲಕ ಹೊಸ ಇತಿಹಾಸವನ್ನು ಸೃಷ್ಟಿಸಿರುವುದೇ ಹೆಮ್ಮೆಯ ವಿಚಾರವಾಗಿದೆ. ನಾರಿ ಶಕ್ತಿಗೆ ಪಕ್ಕಾ ಉದಾಹರಣೆಯಾಗಿರುವ ಮಂಗಳ ಮಣಿ -90 ಡಿಗ್ರಿ ತಾಪಮಾನ ಇರುವ ಅಂಟಾರ್ಟಿಕದಲ್ಲಿ 403 ದಿನ ಕಳೆದಿದ್ದಾರೆ. ಈ ಸಾಹಸಕ್ಕೂ ಮುನ್ನ ಅವರು ಯಾವತ್ತೂ ಹಿಮಪಾತಗಳನ್ನು ನೋಡೇ ಇಲ್ಲ ಎಂಬುವುದು ವಿಶೇಷವಾಗಿದೆ.

Image result for mangala mani

ಇಸ್ರೋದಲ್ಲಿ ವಿಜ್ಞಾನಿಯಾಗಿರುವ 56 ವಯಸ್ಸಿನ ಮಂಗಳ ಮಣಿ 90 ಡಿಗ್ರಿ ಸೆಲ್ಸಿಯಸ್ ತಾಪಮಾನವಿರುವ ಅಂಟಾರ್ಟಿಕಾದಲ್ಲಿ ವಾಸವಿರುವ ಮೂಲಕ ಗಮನ ಸೆಳೆದಿದ್ದಾರೆ. ಭಾರತ “ಇಂಡಿಯಾ ಭಾರತಿ” ಸಂಘಟನೆಯಿಂದ 2016ರಲ್ಲಿ ಅಂಟಾರ್ಟಿಕಾಕ್ಕೆ ಸಂಶೋಧನೆಗೆ ಹೋಗಿದ್ದ 23 ಜನರ ತಂಡದಲ್ಲಿ ಮಂಗಳಾ ಮಣಿಯೊಬ್ಬರೇ ಮಹಿಳೆಯಾಗಿದ್ದರು. “ಅಂಟಾರ್ಟಿಕಾ ವಾಸ್ತವ್ಯ ಮಾಡುವುದು ಸವಾಲಿನ ಕೆಲಸವಾಗಿತ್ತು. ಅಷ್ಟೇ ಅಲ್ಲದೇ, ಅತ್ಯಂತ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕಿತ್ತು. ನಮ್ಮ ನಿಯಂತ್ರಣ ಕಚೇರಿಯೊಂದಿಗೆ ನಿರಂತರವಾಗಿ ಸಂಪರ್ಕವಿಟ್ಟುಕೊಂಡು ದಿನ ದೂಡುತ್ತಿದ್ದೇವಲ್ಲದೇ ಪ್ರತಿ ಕ್ಷಣವೂ ಸವಾಲು ಎದುರಿಸುತ್ತಿದೆ. 2 ರಿಂದ 3 ಗಂಟೆಗಿಂತ ಹೆಚ್ಚು ಅವಧಿಯಲ್ಲಿ ನಾವು ಸಾಮಾನ್ಯ ಧಿರಿಸಿನಲ್ಲಿ ಇರಲು ಆಗುತ್ತಿರಲಿಲ್ಲ” ಎಂದು ಮಣಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಮಹಿಳಾ ವಿಜ್ಞಾನಿ ಅಂಟಾರ್ಟಿಕಾದಲ್ಲಿ 400 ದಿನ ವಾಸ ಮಾಡುವ ಮೂಲಕ ದಾಖಲೆ ನಿರ್ಮಿಸಿರುವ ಇವರ ಸಾಧನೆಯನ್ನು ಮೆಚ್ಚಲೇ ಬೇಕಾದ್ದಂತಹದ್ದು!! ಒಟ್ಟು 23 ಮಂದಿಯ ತಂಡ ಅಂಟಾರ್ಟಿಕದ ಭಾರತಿ ರಿಸರ್ಚ್ ಸ್ಟೇಶನ್ ಗೆ ಅಧ್ಯಯನದ ನಿಮಿತ್ತ ತೆರಳಿದ್ದ ಸಂದರ್ಭದಲ್ಲಿ, ಈ ತಂಡದಲ್ಲಿದ್ದ ಏಕೈಕ ಮಹಿಳೆ ಮಣಿ ಆಗಿರುವುದೇ ಹೆಮ್ಮೆಯ ವಿಚಾರವಾಗಿದೆ.

ದಕ್ಷಿಣ ಧ್ರುವದಲ್ಲಿರುವ ಹಿಮಾಚ್ಛಾದಿತ ಖಂಡವಾಗಿರುವ ಅಂಟಾರ್ಟಿಕಾ ವಿಶ್ವದ ಅತಿ ಕಡಿಮೆ ತಾಪಮಾನ ಇರುವ ಪ್ರದೇಶವಾಗಿದೆ. ಒಂದು ಕೋಟಿ 40 ಲಕ್ಷ ಚದರ ಕಿ.ಮೀ. ವ್ಯಾಪ್ತಿಯ ಅಂಟಾರ್ಟಿಕಾ ವಿಶ್ವದ ಐದನೇ ದೊಡ್ಡ ಖಂಡವಾಗಿದ್ದು, ಯೂರೋಪ್, ಆಸ್ಟ್ರೇಲಿಯಾಗಿಂತ ಇದು ದೊಡ್ಡದು. ಇಂತಹ ಅಧಿಕ ತಾಪಮಾನ ಹೊಂದಿರುವ ಪ್ರದೇಶದಲ್ಲಿ ತಮ್ಮ ಮಿಶನ್ ನನ್ನು ಕಳೆದ ಡಿಸೆಂಬರ್ ನಲ್ಲಿ ಪೂರ್ಣಗೊಳಿಸಿರುವ ಇವರು 403 ದಿನ ವಾಸ ಮಾಡುವ ಮೂಲಕ ನೂತನ ದಾಖಲೆ ನಿರ್ಮಿಸಿದ್ದಾರೆ.

ಈ ಬಗ್ಗೆ ಮಾತಾನಾಡಿರುವ ಮಂಗಳಾ ಮಣಿ, “2016 ರಿಂದ 2017 ರವರೆಗೆ ಸುಮಾರು 400 ದಿನ ನಾವು ಅಂಟಾರ್ಟಿಕಾದಲ್ಲಿ ವಾಸ ಮಾಡಿದ್ದೆವಲ್ಲದೇ ನಮ್ಮ ಇಡೀ ತಂಡ ಪರಸ್ಪರ ಸಹಕಾರದೊಂದಿಗೆ ಕಾರ್ಯ ನಿರ್ವಹಿಸುತ್ತಿತ್ತು. ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡುತ್ತಿದ್ದೇವು. ಅಷ್ಟೇ ಅಲ್ಲದೇ ನನ್ನ ಜನ್ಮದಿನವನ್ನು ನಮ್ಮ ತಂಡ ಆಚರಿಸಿದ್ದು, ಅವಿಸ್ಮರಣೀಯ” ಎಂದು ಹೇಳಿದ್ದಾರೆ.!! ಈ ಮಹತ್ವದ ಸಂಶೋಧನೆಗೆ ತೆರಳುವ ಮುಂಚೆ ಮಂಗಲಾ ಮಣಿ ಅವರಿಗೆ ಭಾರತದ ಬದ್ರಿನಾಥ, ಚಮೋಲಿಗಳಲ್ಲಿ ತರಬೇತಿ ನೀಡಲಾಗಿದೆಯಲ್ಲದೇ ಮಾನಸಿಕ, ದೈಹಿಕ ಸಾಮರ್ಥ್ಯವನ್ನು ಪರೀಕ್ಷಿಸಲಾಗಿತ್ತು. ಮಹಿಳೆಯರಲ್ಲೂ ಸಾಮರ್ಥ್ಯವಿದ್ದು, ಆತ್ಮಬಲದೊಂದಿಗೆ ಮುನ್ನುಗಿದ್ದರೆ ಯಾವುದೇ ಸಾಧನೆ ಮಾಡಬಹುದು ಎಂಬುದನ್ನು ಹೇಳಿದ್ದಾರೆ.

ಒಟ್ಟಾರೆಯಾಗಿ ಭಾರತೀಯ ಮಹಿಳೆಯರು ಯಾವುದೇ ಕ್ಷೇತ್ರದಲ್ಲೂ ಕಡಿಮೆ ಇಲ್ಲ ಎಂಬುದನ್ನು ಪದೇ ಪದೇ ಸಾಬೀತು ಪಡಿಸುತ್ತಿರುವ ಮಹಿಳೆಯರು ಈಗಾಗಲೇ ಕ್ರೀಡಾ ಕ್ಷೇತ್ರ, ರಕ್ಷಣಾ ಕ್ಷೇತ್ರದಲ್ಲಿ ತಮ್ಮ ಹೆಸರನ್ನು ಪಸರಿಸುತ್ತಿರುವ ವಿಚಾರ ತಿಳಿದೇ ಇದೆ. ಆದರೆ ಇದೀಗ -90 ಡಿಗ್ರಿ ತಾಪಮಾನ ಇರುವ ಅಂಟಾರ್ಟಿಕದಲ್ಲಿ 403 ದಿನ ಕಳೆಯುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿರುವ ಏಕೈಕ ಭಾರತೀಯ ಮಹಿಳೆ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ.

– ಅಲೋಖಾ

Tags

Related Articles

Close