ಪ್ರಚಲಿತ

ಇಸ್ಲಾಂ ಬಗ್ಗೆ ಇಟಲಿ ಪ್ರಧಾನಿ ಏನಂದ್ರು ಗೊತ್ತಾ?

ಯುರೋಪಿಯನ್ ನಾಗರೀಕತೆ ಮತ್ತು ಇಸ್ಲಾಂ ಸಂಸ್ಕೃತಿ ಕುರಿತಂತೆ ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೊನಿ‌ ಮಾತನಾಡಿದ್ದಾರೆ.

ಅವರು ಇಟಲಿಯ ರೈಟ್‌ ವಿಂಗ್ಸ್ ಆಲ್ಟ್ರಾ ಕನ್ಸರ್ವೇಟಿವ್ ಬ್ರದರ್ಸ್ ಆಫ್ ಇಟಲಿ ಪಕ್ಷದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ, ಮಾತನಾಡಿದ್ದು ಇಸ್ಲಾಮಿಕ್ ಸಂಸ್ಕೃತಿ ಮತ್ತು ಯುರೋಪಿಯನ್ ನಾಗರಿಕತೆಯ ಮೌಲ್ಯಗಳು ಮತ್ತು ಹಕ್ಕುಗಳು ಹೊಂದಾಣಿಕೆಯ ಸಮಸ್ಯೆಯನ್ನು ಹೊಂದಿರುವುದಾಗಿ ತಿಳಿಸಿದ್ದಾರೆ.

ಇಸ್ಲಾಮಿಕ್ ಸಂಸ್ಕೃತಿ ಅಥವಾ ಅದರ ಒಂದು ವ್ಯಾಖ್ಯಾನದ ನಡುವೆ ಮತ್ತು ನಮ್ಮ ನಾಗರೀಕತೆಯ ಹಕ್ಕುಗಳು ಮತ್ತು ಮೌಲ್ಯಗಳ ನಡುವೆ ಹೊಂದಾಣಿಕೆಯ ಕೊರತೆ ಇದೆ. ಇದನ್ನು ನಾನು ಬಲವಾಗಿ ನಂಬುತ್ತೇನೆ ಎಂದು ಅವರು ಹೇಳಿದ್ದಾರೆ. ಹಾಗೆಯೇ ಇಟಲಿ ದೇಶದಲ್ಲಿರುವ ಹೆಚ್ಚಿನ ಇಸ್ಲಾಮಿಕ್ ಸಾಂಸ್ಕೃತಿಕ ಕೇಂದ್ರಗಳು ಸೌದಿ ಅಕೇಬಿಯಾದಿಂದ ಆರ್ಥಿಕ ನೆರವು ಪಡೆಯುತ್ತವೆ ಎಂಬುದಾಗಿಯೂ ಅವರು ಹೇಳಿದ್ದಾರೆ.

ಹಾಗೆಯೇ ಅವರು ಸೌದಿ‌ ಅರೇಬಿಯಾ ಷರಿಯಾ ಕಾನಬನಿನ ಬಗ್ಗೆ ತಮ್ಮ ಅಸಮಾಧಾನ ತೋರಿಸಿದ್ದಾರೆ. ಧರ್ಮ ಭ್ರಷ್ಟತೆ, ಸಲಿಂಗಕಾಮ ಕ್ರಿಮಿನಲ್ ಅಫರಾಧಗಳಿಗೆ ಹೆಸರಾಗಿರುವ ಸೌದಿ ಅರೇಬಿಯಾದ ಷರಿಯಾ ಕಾನೂನನ್ನು ಅವರು ಟೀಕೆ ಮಾಡಿದ್ದಾರೆ.

ಷರಿಯಾ ಎಂದರೆ ವ್ಯಭಿಚಾರ, ಸಲಿಂದ ಕಾಮ, ಧರ್ಮ ಭ್ರಷ್ಟತೆಗೆ ಮರಣ ದಂಡನೆ ಎಂಬ ಅರ್ಥ ನೀಡುತ್ತದೆ. ಇದನ್ನು ತೆಗೆದು ಹಾಕಬೇಕು ಎಂಬುದು ನನ್ನ ವಾದ. ಅಂದರೆ ಇದು ಇಸ್ಲಾಂ ಅನ್ನು ಸಾಮಾನ್ಯೀಕರಿಸುವುದು ಎಂಬ ಅರ್ಥವಲ್ಲ. ನಮ್ಮ ದೇಶದಲ್ಲಿ ಇಸ್ಲಾಮಿಕರಣ ಪ್ರಕ್ರಿಯೆ ನಮ್ಮ ನಾಗರಿಕತೆಯಿಂದ ಬಹಳಷ್ಟು ದೂರದಲ್ಲಿದೆ.‌ ಯುರೋಪ್‌ನಲ್ಲಿ ಇಸ್ಲಾಮೀಕಕಣದ ಪ್ರಕ್ರಿಯೆ ನಮ್ಮ ದೇಶದ ಮೌಲ್ಯ ಗಳಿಂದ ಬಹಳೇ ದೂರದಲ್ಲಿರುವುದಾಗಿ‌ ಅವರು ತಿಳಿಸಿದ್ದಾರೆ. ‌

Tags

Related Articles

Close