ಪ್ರಚಲಿತ

JNU ಗೋಡೆ ಮೇಲೆ ಪ್ರಧಾನಿ ಮೋದಿ ವಿರೋಧಿ ಘೋಷಣೆ

ಒಂದು ದೇಶದ ಪ್ರಧಾನಿ ಎಂದರೆ ಅವರಿಗೆ ಅವರದ್ದೇ ಆದ ಘನತೆ, ಗೌರವಗಳು ಇರುತ್ತವೆ. ವ್ಯಕ್ತಿಗತವಾಗಿ ಅವರಿಗೆ ಗೌರವ ನೀಡುವ ಮನಸ್ಸಿಲ್ಲದೇ ಹೋದರೂ, ಕೊನೇ ಪಕ್ಷ ಅವರು ಅಲಂಕರಿಸಿರುವ ಗೌರವಯುತ, ತೂಕವುಳ್ಳ ಸ್ಥಾನಕ್ಕಾದರೂ ಗೌರವ ನೀಡಬೇಕು ಎನ್ನುವ ಸಾಮಾನ್ಯ ಪ್ರಜ್ಞೆ ಆ ದೇಶವಾಸಿಗಳಲ್ಲಿ ಇರಬೇಕು.

ಆದರೆ ಭಾರತದ ಪ್ರಧಾನಿ ಮೋದಿ ಅವರನ್ನು ವ್ಯಕ್ತಿಗತವಾಗಿ, ಅವರ ಅಭಿವೃದ್ಧಿಯ ಪರ ಕೆಲಸಗಳನ್ನು ಮೆಚ್ಚಲಾರದವರು, ಒಪ್ಪಿಕೊಳ್ಳಲಾರದವರು ಸದಾ ಕಾಲ ಅವರನ್ನು ಟೀಕೆ ಮಾಡುವುದು, ಅವರ ಬಗ್ಗೆ ಅವಹೇಳನ ಮಾಡುವುದನ್ನು ರೂಢಿಸಿಕೊಂಡಂತಿದೆ.‌ ಪ್ರಧಾನಿ ಮೋದಿ ಅವರ ಬಗ್ಗೆ ಯಾರು,‌ ಏನೇ ಹೇಳಿದರೂ ಯಾರಿಂದಲೂ ನಮಗೆ ಅಪಾಯ ಎದುರಾಗುವುದು, ಆ ರೀತಿಯ ಹೇಳಿಕೆಗಳನ್ನು ನೀಡಿದಲ್ಲಿ ಯಾರೂ ಕಾನೂನು ಕ್ರಮ ಜರುಗಿಸಲಾರರು ಎನ್ನುವ ವಿಶ್ವಾಸದಲ್ಲಿ ಪ್ರಧಾನಿಗಳನ್ನು ಅವಮಾನಿಸುವ ಕೆಲಸವನ್ನು ಕೆಲವು ನಾಲಾಯಕ್ಕುಗಳು ಮಾಡುತ್ತಿದ್ದಾರೆ ಎನ್ನುವುದು ದುರಂತ.

ಜೆ ಎನ್‌ ಯು (ಜವಾಹರಲಾಲ್ ನೆಹರೂ ಯೂನಿವರ್ಸಿಟಿ) ದೇಶಕ್ಕೆ ಮಾರಕವಾಗುವ ಹೇಳಿಕೆಗಳು, ಕೆಲಸಗಳ ಮೂಲಕ ಸುದ್ದಿಯಾಗುವುದು, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗುವುದು ಇದೇ ಮೊದಲಲ್ಲ.‌ ಬದಲಾಗಿ ಈ ಹಿಂದೆಯೂ ಸಾಕಷ್ಟು ದೇಶದ್ರೋಹಿ ಕಾರ್ಯಗಳ ಮೂಲಕ ಕುಖ್ಯಾತಿ ಪಡೆದ ಸಂಸ್ಥೆ ಎಂಬುದಾಗಿಯೂ ಜೆ ಎನ್ ಯು ವನ್ನು ಯಾವುದೇ ಸಂದೇಹವಿಲ್ಲದೆ ಹೇಳಬಹುದು. ‌ಇದೀಗ ಅದೇ ಸಂಸ್ಥೆಯ ಗೋಡೆಗಳ ಮೇಲೆ ಪ್ರಧಾನಿ ಮೋದಿ ಅವರ ಬಗ್ಗೆ, ಕೇಂದ್ರ ಸರ್ಕಾರದ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ಬರೆಯಲಾಗಿದ್ದು, ಆ ಮೂಲಕ ಜೆ ಎನ್ ಯು ಸಾರ್ವಜನಿಕರ ಕೆಂಗಣ್ಣಿಗೆ ಮತ್ತೆ ಗುರಿಯಾಗಿದೆ.

ಜೆ ಎನ್ ಯು ಗೋಡೆಗಳ ಮೇಲೆ ‘ಕೇಸರಿ ಉರಿಯುತ್ತದೆ’, ‘ಪ್ರಧಾನಿ ಮೋದಿ ಅವರ ಸಮಾಧಿ ಅಗೆಯಲಾಗುತ್ತದೆ’, ‘ಮುಕ್ತ ಕಾಶ್ಮೀರ’, ‘ಭಾರತ ಆಕ್ರಮಿತ ಕಾಶ್ಮೀರ’ ಎಂಬುದಾಗಿ ದೇಶ ವಿರೋಧಿ ಮತ್ತು ಪ್ರಧಾನಿ ಮೋದಿ ವಿರೋಧಿ ಘೋಷಣೆಗಳನ್ನು ಬರೆಯಲಾಗಿದೆ. ಆ ಮೂಲಕ ಜೆ ಎನ್ ಯು ದೇಶ ವಿರೋಧಿ ಸಂಸ್ಥೆ ಎಂಬುದು ಮತ್ತೊಮ್ಮೆ ಸಾಬೀತಾದಂತಾಗಿದೆ‌‌. ಜೆ ಎನ್ ರು ಸ್ಕೂಲ್ ಆಫ್ ಲ್ಯಾಂಗ್ವೇಜಸ್‌ನ ಗೋಡೆಗಳಲ್ಲಿ ಕೆಂಪು ಮತ್ತು ನೀಲಿ ಬಣ್ಣದ ಶಾಯಿಯಲ್ಲಿ ಬರೆಯಲಾಗಿದೆ. ಈ ಕೃತ್ಯ ನಡೆಸಿದ ದೇಶ ವಿರೋಧಿ ಮನ ಸ್ಥಿತಿ ಗಳ ಬಗ್ಗೆ ಸಂಸ್ಥೆಯ ಆಡಳಿತ ಮಂಡಳಿ ಇನ್ನೂ ಯಾವುದೇ ಮಾಹಿತಿ ನೀಡಿಲ್ಲ.

ಈ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ವಿಶ್ವವಿದ್ಯಾಲಯ ತನಿಖೆ ನಡೆಸುವಂತೆ ಆದೇಶ ಹೊರಡಿಸಿರುವುದಾಗಿಯೂ ತಿಳಿದು ಬಂದಿದೆ. ಕಳೆದ ವರ್ಷ ಜೆ ಎನ್ ಯು ಗೋಡೆಗಳ ಮೇಲೆ ಬ್ರಾಹ್ಮಣರು ಮತ್ತು ಬನಿಯಾ‌ ಸಮುದಾಯಗಳ ಬಗೆಗೂ ನಿಂದನಾತ್ಮಕವಾಗಿ ಬರೆಯುವ ಮೂಲಕ ಸಂಸ್ಥೆ ಸಾಮಾಜಿಕ ಸ್ವಾಸ್ಥ್ಯ ಕದಡುವ‌ ಕೆಲಸ ಮಾಡಿತ್ತು.

ಒಟ್ಟಿನಲ್ಲಿ ಜೆ ಎನ್ ಯು ದೇಶ ವಿರೋಧಿ ಮನಸ್ಥಿತಿಗಳನ್ನು ಹುಟ್ಟು ಹಾಕುವಲ್ಲಿ ಮುಮಚೂಣಿಯಲ್ಲಿದ್ದು, ಆ ಮೂಲಕ ಭಾರತ‌ ವಿರೋಧಿ‌ ಮನಸ್ಸುಗಳನ್ನು ಬೆಳೆಸುವಲ್ಲಿ ವಿಷಕಾರಿ ಗೊಬ್ಬರಗಳನ್ನು ಹಾಕುವಂತಹ ಶಿಕ್ಷಣ ನೀಡುತ್ತಿದೆ ಎನ್ನುವುದಕ್ಕೆ ಸಾಲು‌ ಸಾಲು‌ ನಿದರ್ಶನಗಳು ಸಿಗುತ್ತಿವೆ. ಇಂತಹ ಭಯೋತ್ಪಾದಕ ಮನಸ್ಸುಳ್ಳ ಸಂಸ್ಥೆಯ ವಿರುದ್ಧ ಸರ್ಕಾರ ಕಠಿಣ ಕ್ರಮ ತೆಗೆದುತೊಳ್ಳುವತ್ತ ಚಿತ್ತ ಹರಿಸಿದಲ್ಲಿ, ಈ ದೇಶದ ಸಾಮಾಜಿಕ ಆರೋಗ್ಯ ಕಾಪಾಡಿಕೊಳ್ಳುವುದು ಸಾಧ್ಯ.

Tags

Related Articles

Close