ಪ್ರಚಲಿತ

ಮತ್ತೊಂದು ಜಾತಿಯನ್ನು ಹಿಂದೂ ಧರ್ಮದಿಂದ ಒಡೆಯಲು ತಂತ್ರ ಹೂಡಿದ ಸಿದ್ದರಾಮಯ್ಯ!! ಸಿದ್ದು ವಿರುದ್ಧ ಉಗ್ರ ಪ್ರತಿಭಟನೆಯ ಎಚ್ಚರಿಕೆ!!

ವೀರಶೈವರು ಲಿಂಗಾಯತರು ಎಂದು ವಿಂಗಡಿಸುವ ಮುಖೇನ ಧರ್ಮ ಒಡೆಯುವ ಕೆಲಸ ಮಾಡಿದ್ದ ಸಿದ್ದರಾಮಯ್ಯ ಇದೀಗ ಮತ್ತೊಂದು ಜಾತಿಯನ್ನು ಧರ್ಮದಿಂದ ಪ್ರತ್ಯೇಕಿಸಲು ಮುಂದಾಗಿ ವ್ಯಾಪಕ ಖಂಡನೆಗೆ ಗುರಿಯಾಗಿದ್ದಾರೆ. ಈ ಜಾತಿಯ ಮುಖಂಡರು ಸಿದ್ದರಾಮಯ್ಯನ ಒಡೆದು ಆಳುವ ನೀತಿಗೆ ವಿರೋಧ ವ್ಯಕ್ತಪಡಿಸಿದ್ದು, ಒಂದೂ ವೇಳೆ ತಮ್ಮನ್ನು ಹಿಂದೂ ಧರ್ಮದಿಂದ ಪ್ರತ್ಯೇಕಿಸಿದ್ದೇ ಆದರೆ ಚುನಾವಣೆಯ ಹೊತ್ತಲ್ಲೇ ಉಗ್ರವಾಗಿ ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಲಿಂಗಾಯಿತನೇ ಅಲ್ಲದ ಸಿದ್ದರಾಮಯ್ಯ ಅವರು ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಧರ್ಮರಾಜಕಾರಣಕ್ಕೆ ಮುಂದಾಗಿರುವುದನ್ನು ನೋಡಿದಾಗ ಇದರಲ್ಲಿ ರಾಜಕಾರಣ ಬಿಟ್ಟು ಬೇರೆ ಏನನ್ನೂ ಕಾಣಲು ಸಾಧ್ಯವಿಲ್ಲ.

ಧರ್ಮ ವಿಭಜನೆಗೆ ಗಾಣಿಗರ ಆಕ್ರೋಶ!

ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ಲಾಭ ನಿರೀಕ್ಷೆಯಲ್ಲಿದ್ದ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಗಾಣಿಗರು ತಿರುಗಿಬಿದ್ದಿದ್ದಾರೆ. ‘ಗಾಣಿಗರು ಹಿಂದುಗಳಲ್ಲ, ಲಿಂಗಾಯತರು’ ಎಂದು ಪ್ರಮಾಣಪತ್ರ ಸಲ್ಲಿಸಿರುವುದಕ್ಕೆ ಸರ್ಕಾರದ ವಿರುದ್ಧ ಗಾಣಿಗ ಸಮುದಾಯ ಆಕ್ರೋಶ ವ್ಯಕ್ತಪಡಿಸಿದೆ.

ಹಿಂದು ಗಾಣಿಗರು ಇದ್ದೇವೆ. ನಮ್ಮನ್ನು ಹಿಂದು ಅಲ್ಲ ಅಂಥ ಹೇಳಿದ್ರೆ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಉತ್ತರ ಕರ್ನಾಟಕದಲ್ಲಿ ಪ್ರಬಲವಾಗಿರುವ ಗಾಣಿಗ ಸಮಾಜದ ಮುಖಂಡರು ಎಚ್ಚರಿಸಿದ್ದಾರೆ.

ನಗರದ ಪ್ರೆಸ್​ಕ್ಲಬ್​ನಲ್ಲಿ ಸೋಮವಾರ ಅಖಿಲ ಕರ್ನಾಟಕ ರಾಜ್ಯ ಯುವ ಗಾಣಿಗ ಕ್ಷೇಮಾಭಿವೃದ್ಧಿ ಸಂಘದ ಮುಖಂಡ, ಮಾಹಿತಿ ಹಕ್ಕು ಆಯೋಗದ ಮಾಜಿ ಅಧ್ಯಕ್ಷ ಡಾ. ಶೇಖರ ಸಜ್ಜನ ಮಾತನಾಡಿ, 1978ರಿಂದ ಹಿಂದು ಗಾಣಿಗರು ಅಂಥ ಸೌಲಭ್ಯ ಪಡೆಯುತ್ತಿದ್ದೇವೆ. ಪ್ರವರ್ಗ 2ಎ, ಅ ವರ್ಗದಲ್ಲಿ ಶಿಕ್ಷಣ, ಉದ್ಯೋಗ, ರಾಜಕೀಯವಾಗಿ ಸೌಲಭ್ಯಗಳು ಸಿಗುತ್ತಿವೆ. ಇದೀಗ ನಮ್ಮನ್ನು ಕೇಳದೇ ಗಾಣಿಗರು ಹಿಂದುಗಳಲ್ಲ, ಲಿಂಗಾಯತರು ಎಂದು ಸಲ್ಲಿಸಿರುವ ಪ್ರಮಾಣಪತ್ರ ಹಿಂಪಡೆದು ಸರಿಪಡಿಸಬೇಕು. ಇಲ್ಲವಾದಲ್ಲಿ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ ಹಾಗೂ ಜನರಲ್ಲಿ ಸರ್ಕಾರ ವಿರುದ್ಧ ಜಾಗೃತಿ ಮೂಡಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಸವಲತ್ತು ಹೋಗಲಿದೆ!

ರಾಜ್ಯದಲ್ಲಿ ಅಂದಾಜು 50 ಲಕ್ಷದಷ್ಟು ಗಾಣಿಗ ಸಮುದಾಯದ ಜನರಿದ್ದೇವೆ. ಇದೀಗ ನಾವು ಹಿಂದುಗಳಲ್ಲ, ಲಿಂಗಾಯತ ಪ್ರತ್ಯೇಕ ಧರ್ಮ ಅಂಥ ಆದರೆ, ನಮಗೆ ಇರುವ ಸೌಲಭ್ಯ ಕಳೆದುಕೊಳ್ಳ ಬೇಕಾಗುತ್ತದೆ. ಹೀಗಾಗಿ ನಾವು ಲಿಂಗಾಯತ ಪ್ರತ್ಯೇಕ ಧರ್ಮದಲ್ಲಿ ಬರಲ್ಲ. ಹಿಂದು ಗಾಣಿಗರು ಅಂಥನೇ ಮುಂದುವರಿಯುತ್ತೇವೆ. ಅಷ್ಟಕ್ಕೂ ಸರ್ಕಾರ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ, ಅಲ್ಪಸಂಖ್ಯಾತ ಮಾನ್ಯತೆಗೆ ಕೇಂದ್ರಕ್ಕೆ ಶಿಫಾರಸು ಮಾಡುವ ವೇಳೆ ಆ ಪಟ್ಟಿಯಲ್ಲಿ ನಮ್ಮ ಸಮಾಜದ ಹೆಸರು ಹಾಕುವ ಮುನ್ನ ಮುಖಂಡರನ್ನು ಸಂರ್ಪಕಿಸಿಲ್ಲ. ಇದಕ್ಕೆ ಸ್ಪಷ್ಟ ವಿರೋಧ ಇದೆ. ಆಗಿರುವ ಲೋಪವನ್ನು ಸರಿಪಡಿಸದೇ ಹೋದಲ್ಲಿ ಈ ಚುನಾವಣೆಯಲ್ಲಿ ಸರ್ಕಾರದ ವಿರುದ್ಧ ಹೋರಾಟ ಮಾಡಲಿದ್ದೇವೆ ಎಂದು ತಿಳಿಸಿದರು.

ಸಿದ್ದರಾಮಯ್ಯ ಅವರು ಲಿಂಗಾಯಿತರನ್ನು ವಿಭಜಿಸಿದಂತೆ ಇದೀಗ ರಾಜ್ಯದ ಮತ್ತೊಂದು ಜಾತಿಯಾಗಿರುವ ಗಾಣಿಗರನ್ನು ಧರ್ಮದಿಂದ ವಿಭಜಿಸಲು ಮುಂದಾಗಿದ್ದಾರೆ. ಇದರಿಂದ ಲಿಂಗಾಯಿತ ಪ್ರತ್ಯೇಕ ಧರ್ಮ ಮಾನ್ಯತೆ ಲಾಭ ನಿರೀಕ್ಷೆಯಲ್ಲಿದ್ದ ಸಿದ್ದರಾಮಯ್ಯ ಸರಕಾರದ ವಿರುದ್ಧ ಗಾಣಿಗರು ತಿರುಗಿಬಿದ್ದಿದ್ದಾರೆ.

ಧರ್ಮ ಒಡೆದ ಮುಖ್ಯಮಂತ್ರಿ ಎಂಬ ಹಣೆಪಟ್ಟಿ ಕಟ್ಟಿಕೊಂಡ ಸಿದ್ದರಾಮಯ್ಯ!!!

ಲಿಂಗಾಯಿತಕ್ಕೆ ಸ್ವತಂತ್ರ ಧರ್ಮದ ಸ್ಥಾನ ಕೊಡುವ ಉದ್ದೇಶದ ಬದಲಿಗೆ ಸಿದ್ದರಾಮಯ್ಯರ ತಂತ್ರ ಧರ್ಮವನ್ನು ಒಡೆಯುವುದಾಗಿದೆ. ಇದರಿಂದಾಗಿ ಸಿದ್ದರಾಮಯ್ಯ ಧರ್ಮ ಒಡೆದ ಮುಖ್ಯಮಂತ್ರಿ ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದಾರೆ. ಜಾತಿ ಒಡೆಯುವ ಪರಿಣಾಮವನ್ನು ಕಾಂಗ್ರೆಸ್ ಖಂಡಿತಾ ಅನುಭವಿಸಲಿದೆ. ಚುನಾವಣೆಯ ಹೊತ್ತಲ್ಲಿ ಓಟ್ ಬ್ಯಾಂಕ್ ಮಾಡಲು ಹೋದ ಸಿದ್ದರಾಮಯ್ಯರಿಗೆ ಅತ್ಯಂತ ದುಬಾರಿಯಾಗುವ ಎಲ್ಲಾ ಲಕ್ಷಣಗಳು ಕಾಣಿಸಿಕೊಳ್ಳಲಿದೆ.

ಇನ್ನಷ್ಟು ಜಾತಿಗಳು ಸಿಡಿದು ಬೀಳುವ ಸಾಧ್ಯತೆ!!!

ಗಾಣಿಗರ ಧರ್ಮ ವಿಭಜನೆ ಮಾಡಲು ಹೋದ ಸಿದ್ದರಾಮಯ್ಯ ಅವರಯ ಮುಂದೆ ಲಿಂಗಾಯಿತರೆಂದು ಇನ್ನಷ್ಟು ಜಾತಿಯನ್ನು ಒಡೆಯಲು ಮುಂದಾಗುವ ಸಾಧ್ಯತೆ ಇದೆ. ಉದಾಹರಣೆಗೆ ಹಳ್ಳಿಗಾಡಿನ ಬಹುಮಂದಿಗೆ ವೀರಶೈವ ಹಾಗೂ ಲಿಂಗಾಯಿತರ ಮಧ್ಯೆ ವ್ಯತ್ಯಾಸವೇ ಗೊತ್ತಿಲ್ಲ. ಎಲ್ಲರೂ ಬಸವಣ್ಣನವರನ್ನು ಆರಾಧಿಸುತ್ತಾರೆ. ಲಿಂಗಪೂಜೆ ಮಾಡುತ್ತಾರೆ. ಇದರಿಂದ ಪ್ರತ್ಯೇಕ ಧರ್ಮ ಮತ್ತಷ್ಟು ವಿವಾದಕ್ಕೆ ಕಾರಣವಾಗಬಹುದು. ಬಹಳಷ್ಟು ಕಡೆಗಳಲ್ಲಿ ಲಿಂಗಾಯತ-ವೀರಶೈವರ ಮಧ್ಯೆ ವಿವಾಹ ನಡೆದಿದೆ. ಗೊತ್ತಿದ್ದೂ ಗೊತ್ತಿಲ್ಲದೆಯೂ ಸಾಕಷ್ಟು ವಿವಾಹ ಸಂಬಂಧ ಏರ್ಪಟ್ಟಿದೆ. 12ನೇ ಶತಮಾನದಲ್ಲಿ ಜಾತಿಪದ್ಧತಿ, ಸಾಮಾಜಿಕ ಸ್ಥಾನಮಾನ, ಸಂಪ್ರದಾಯವಾದಿಗಳ ಕೈಯ್ಯಲ್ಲಿ ಮನುಕುಲ ಅಪಾಯವನ್ನು ಎದುರಿಸುತ್ತಿತ್ತು. ಇದಕ್ಕಾಗಿ ಪ್ರತಿಯೊಬ್ಬರಿಗೂ ದೇವರ ದರ್ಶನವಾಗಬೇಕೆಂದು ಮಾನವೀಯತೆಯ ಸಾರವನ್ನು ಸಾರಿದವರು ಬಸವಣ್ಣ. ಇಂದು ಅಂದಿನ ಸ್ಥಿತಿಗತಿಗಳಿಲ್ಲ. ಜನರು ವಿದ್ಯಾವಂತರಾಗುತ್ತಿದ್ದು, ಜಾತಿವ್ಯವಸ್ಥೆಯಿಂದ ಸಿಡಿದೇಳುತ್ತಿದ್ದಾರೆ. ಈ ಸಂದರ್ಭದಲ್ಲಿ ಪ್ರತ್ಯೇಕ ಧರ್ಮ ಎನ್ನುವುದು ಅರ್ಥ ಕಳೆದುಕೊಳ್ಳುತ್ತದೆ.

ವೀರಶೈವ-ಲಿಂಗಾಯಿತ ಸಮುದಾಯದಲ್ಲಿ ಗುರುತಿಸಿಕೊಂಡ ಅನೇಕ ಜಾತಿಗಳಿವೆ. ಉಪಜಾತಿಗಳಿವೆ. ಅನೇಕರಿಗೆ ಪ್ರತ್ಯೇಕ ಧರ್ಮ ಒಪ್ಪಿತವಲ್ಲ. ಇದೇ ರೀತಿ ಸಿದ್ದರಾಮಯ್ಯ ಪಟಲಾಂ ಒಂದೊಂದೇ ಜಾತಿಯ ಧರ್ಮವಿಭಜಿಸುತ್ತಾ ಹೋದರೆ ಅದೊಂದು ದಿನ ವಿರಾಟ್ ಸ್ವರೂಪವನ್ನು ಪಡೆಯುವ ಸಾಧ್ಯತೆ ಇದೆ. ಇದಕ್ಕೆ ಗಾಣಿಗರಿಂದ ವ್ಯಕ್ತವಾದ ವಿರೋಧವೇ ಸಾಕ್ಷಿ.

source: http://vijaya vani.net/karnataka-election-karnataka-assembly-election-karnataka-election-2018-6/

ಚೇಕಿತಾನ

Tags

Related Articles

Close