ಪ್ರಚಲಿತ

ಮಣಿಪುರ ಘಟನೆಗೆ ಮಿಡಿದ ಹೃದಯಗಳು ಉಡುಪಿ, ಕೇರಳದ ಘಟನೆಗಳಿಗೆ ಮಿಡಿಯದಿರುವುದು ದುರಂತ

ಎಲ್ಲರಿಗೂ ಗೊತ್ತಿರಬಹುದು. ಇತ್ತೀಚೆಗೆ ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆ‌ ಮೆರವಣಿಗೆ ಮಾಡಿ, ಅವರ ಮೇಲೆ ದೌರ್ಜನ್ಯ ಎಸಗಿದ್ದು. ನಾಗರಿಕ ಸಮಾಜವೇ ತಲೆ ತಗ್ಗಿಸುವ ಇಂತಹ ಹೇಯ ಕೃತ್ಯದ ಬಗ್ಗೆ ದೇಶದೆಲ್ಲೆಡೆಯಿಂದ ವ್ಯಕ್ತವಾದ ಆಕ್ರೋಶ, ಇದನ್ನು ಯಾವುದೋ ಒಂದು ಪಕ್ಷದ ತಲೆಗೆ ಸುತ್ತಿ, ಪ್ರಧಾನಿ ಮೋದಿ ಅವರನ್ನೂ ಇದಕ್ಕೆ ಹೊಣೆಯಾಗಿಸಲು ಹೊರಟ ತಂಡವೊಂದರ ವ್ಯವಸ್ಥಿತ ಸಂಚು ಇದೆಲ್ಲವೂ ಎಲ್ಲರಿಗೂ ನೆನಪಿರಬಹುದು.

ಮಣಿಪುರದಲ್ಲಿ ನಡೆದ ಘಟನೆ ಅಮಾನವೀಯವೆ. ಇಂತಹ ಕೃತ್ಯ ನಡೆಸಿದ ಆರೋಪಿಗಳು ಯಾರೇ ಆಗಿದ್ದರೂ, ಎಷ್ಟು ಪ್ರಭಾವಿಗಳೇ ಆಗಿದ್ದರೂ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾದದ್ದು ಅಲ್ಲಿನ ರಾಜ್ಯ ಸರ್ಕಾರ, ಜೊತೆಗೆ ಕೇಂದ್ರ ಸರ್ಕಾರದ ಕರ್ತವ್ಯವೇ ಸರಿ.

ಮಣಿಪುರದ ಘಟನೆಯ ಹಾಗೆಯೇ ನಮ್ಮದೇ ನೆರೆಯ ರಾಜ್ಯ ಕೇರಳದಲ್ಲಿ ಪುಟಾಣಿ ಮಗುವೊಂದು ಅಶಾಂತಿದೂತ ಕಾಮುಕನ ಅಟ್ಟಹಾಸಕ್ಕೆ ಬಲಿಯಾಗಿ, ಪ್ರಾಣವನ್ನೇ ಕಳೆದುಕೊಂಡಿದೆ. ಇನ್ನೂ ಪ್ರಪಂಚವನ್ನೇ ಅರಿಯದ ಐದು ವರ್ಷದ ಹೆಣ್ಣು ಮಗು ಕಾಮಾಂಧನ ಕೆಟ್ಟ ದೃಷ್ಟಿಗೆ ತುತ್ತಾಗಿ ಬದುಕು ಮುಗಿಸಿದೆ. ಕಾಮುಕ ಅಸ್ಫಾಕ್ ಅಲಂ ಎಂಬಾತ ಪುಟ್ಟ ಮಗು ಎಂಬುದನ್ನೂ ನೋಡದೆ, ಆಕೆಯನ್ನು ಅಪಹರಿಸಿ, ಅತ್ಯಾಚಾರ ಮಾಡಿ, ಕೊಂದು, ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಅಲುವಾ‌ ಮಾರುಕಟ್ಟೆ ಬಳಿ ಎಸೆದಿದ್ದ. ಮಗು ಪತ್ತೆಯಿಲ್ಲದ್ದನ್ನು ಕಂಡು ಪೊಲೀಸರಿಗೆ ದೂರು ನೀಡಲಾಗಿದ್ದು, ಪೊಲೀಸರು ಶಂಕೆಯ ಮೇಲೆ ಅಸ್ಫಾಕ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ, ಈತ ತನ್ನ ನೀಚ ಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದಾನೆೆ.

ಅಂದ ಹಾಗೆ ಮೃತ ಬಾಲಕಿಯರ ಹೆತ್ತವರು ಬಿಹಾರ ಮೂಲದವರಾಗಿದ್ದು, ಆರೋಪಿ ಸಹ ಬಿಹಾರದವನೇ ಆಗಿದ್ದಾನೆ. ಕೇರಳದ ಅನುವಾದ ಕಟ್ಟಡವೊಂದರಲ್ಲಿ ಈ ಬಾಲಕಿಯ ಹೆತ್ತವರು ವಾಸವಿದ್ದರು. ಆರೋಪಿ ಸಹ ಅದೇ ಕಟ್ಟಡದಲ್ಲಿ ವಾಸವಿದ್ದ. ಈತ ಬಾಲಕಿಯನ್ನು ಅಪಹರಿಸಿ, ಆಕೆಯ ಮೇಲೆ ಅತ್ಯಾಚಾರ ಎಸಗಿ, ಕುತ್ತಿಗೆ ಬಿಗಿದು ಹತ್ಯೆ ನಡೆಸಿ, ಶವವನ್ನು ಮೂಟೆ‌ ಕಟ್ಟಿ ಅಲುವಾದ ನಿರ್ಜನ ಪ್ರದೇಶದಲ್ಲಿ ಎಸೆದಿದ್ದ. ಈತ ಮಗುವಿಗೆ ಸಿಹಿ ತಿಂಡಿಯ ಆಸೆ ತೋರಿಸಿ, ಜೊತೆಗೆ ಕರೆದೊಯ್ದು ಈ ಕೃತ್ಯ ಎಸಗಿದ್ದಾನೆ ಎಂದು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ.

ಆರೋಪಿಗೆ ಗಲ್ಲು ಶಿಕ್ಷೆ ನೀಡಬೇಕೆಂಬ ಕೂಗು ಕೇರಳದಾದ್ಯಂತ ಕೇಳಿ ಬರುತ್ತಿದ್ದು, ಈ ಘಟನೆ ವ್ಯಾಪಕ ಆಕ್ರೋಶಕ್ಕೂ ತುತ್ತಾಗಿದೆ.

ಆದರೆ ದುರಾದೃಷ್ಟಕರ ವಿಷಯವೆಂದರೆ, ಈ ಘಟನೆಯ ಬಗ್ಗೆ ಮಣಿಪುರ ವಿಚಾರಕ್ಕೆ ಬೊಬ್ಬೆ ಹೊಡೆದ ಯಾವೊಬ್ಬ ಬುದ್ಧಿ ಜೀವಿ ಸಹ ಸೊಲ್ಲೆತ್ತದೇ ಇರುವುದು. ಮಣಿಪುರದ ಮಹಿಳೆಯರಿಗೆ ಮಿಡಿದ ಹೃದಯಗಳು, ಕೇರಳದಲ್ಲಿ ನಡೆದ ಪುಟ್ಟ ಮಗುವಿನ ಅತ್ಯಾಚಾರ, ಹತ್ಯೆಗೆ ಮರುಗದೇ ಇರುವುದು ಸೋಜಿಗ. ಯಾಕೆ ಈ ಘಟನೆ ಮಾನವ ಸಮಾಜ ತಲೆಕೆಡಿಸುವಂತಹ, ನಾಚಿಗೆ ಪಡುವಂತಹ ಕೃತ್ಯವಲ್ಲವೇ? ಈ ಪುಟಾಣಿ ಮಗು ಇನ್ನೂ ಪ್ರಪಂಚವನ್ನೇ ಅರಿತಿಲ್ಲ. ಆದರೂ ಕಾಮುಕರ ಅಟ್ಟಹಾಸಕ್ಕೆ ಬಲಿಯಾಗಿದೆ. ಈ ಹತ್ಯೆಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸೋ ಕಾಲ್ಡ್ ಬುದ್ಧಿಜೀವಿಗಳು ಮಾತನಾಡದೇ ಇರುವುದು ಎಷ್ಟು ಅವಮಾನಕರ, ಅಮಾನವೀಯ ಅಲ್ಲವೇ.

ಹಾಗೆಯೇ ಉಡುಪಿಯಲ್ಲಿ ಮಾನಗೇಡಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಂದೂ ಹುಡುಗಿಯರ‌ ಶೌಚಾಲಯದ ದೃಶ್ಯವನ್ನು ಮೊಬೈಲ್‌ ನಲ್ಲಿ ಸೆರೆ ಹಿಡಿದು, ಅದನ್ನು ಅವರ ಧರ್ಮದ ಯುವಕರಿಗೆ ನೀಡುವ ತಲೆಹಿಡುಕ ಕೆಲಸದ ಬಗೆಗೂ ಮಣಿಪುರಕ್ಕೆ ಮಿಡಿದ ಸೋ ಕಾಲ್ಡ್ ಲದ್ದಿ ಜೀವಿಗಳು ಮಿಡಿಯದೇ ಇರುವುದು ಅಚ್ಚರಿಯೇ ಸರಿ.

ಅಂದ ಹಾಗೆ ಎಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿ ಇರುವುದೋ, ಅಲ್ಲಿ ಇಂತಹ ಮಾನಗೇಡಿ ಕೃತ್ಯಗಳು ನಡೆದಾಗ ಪ್ರಧಾನಿ ಮೋದಿ ಅವರಿಗೂ ಬಾಯಿಗೆ ಬಂದಂತೆ ಒದರುವ ಇವರು, ಕಾಂಗ್ರೆಸ್, ಕಮ್ಯುನಿಸ್ಟ್ ಸೇರಿದಂತೆ ಇತರ ಪಕ್ಷ ಗಳಿರುವ ರಾಜ್ಯದಲ್ಲಿ ಇಂತಹ ಹೀನ ಕೃತ್ಯಗಳು ನಡೆದಾಗ ಮೌನವಾಗುತ್ತಾರೆ. ಜೊತೆಗೆ ಇಂತಹ ಕೃತ್ಯಗಳನ್ನು ನಡೆಸಿದವರು ಮುಸ್ಲಿಮ್ ಸಮುದಾಯಕ್ಕೆ ಸೇರಿದವರಾಗಿದ್ದರಂತೂ ನಮಗೇನೂ ತಿಳಿದಿಲ್ಲ, ನಾವೇನೂ ಕೇಳಿಲ್ಲ, ನಾವೇನೂ ನೋಡಿಲ್ಲ, ನಾವೇನೂ ಮಾತನಾಡುವುದಿಲ್ಲ ಎಂದು ಸದ್ದು ಮಾಡದೆ ಗಂಜಿ ಹುಟ್ಟಿಸುವ ಕಾರ್ಯದಲ್ಲೇ ತಲ್ಲೀನರಾಗಿರುತ್ತಾರೆ ಎನ್ನುವುದು ದುರಂತ.

ಕೇವಲ ಬಿಜೆಪಿ ಮತ್ತು ಹಿಂದೂಗಳ ವಿರುದ್ಧ ಮಾತ್ರ ಸಿಡಿದೇಳುವ ಇಂತಹ ಗಂಜಿ ಗಿರಾಕಿಗಳದ್ದು ಯಾವ ರೀತಿಯ ನ್ಯಾಯದ ಹೋರಾಟ?, ತಮ್ಮ ಬೇಳೆ ಬೇಯಿಸಿಕೊಳ್ಳಲು ಅವರ ಮಾಡುವ ನಾಟಕವೇ ಇಂತಹ ಹೋರಾಟಗಳು ಎಂಬ ಸಂಶಯ ಎಲ್ಲರದು.

Tags

Related Articles

Close