ಪ್ರಚಲಿತ

ಕೊನೆಗೂ ಬಹಿರಂಗವಾಯ್ತು ಮೈತ್ರಿ ಸರಕಾರದ ಸಚಿವರ ಪಟ್ಟಿ..! ಯಾರ್ಯಾರಿಗೆ ಯಾವ ಮಂತ್ರಿಗಿರಿ..?

ಮೈತ್ರಿ ಮಾಡಿಕೊಂಡು ಆರಾಮವಾಗಿ ಸರಕಾರ ನಡೆಸಿಕೊಂಡು ಇರಬೇಕಾಗಿದ್ದ ಕುಮಾರಸ್ವಾಮಿ ಅವರಿಗೆ ಇದೀಗ ಸಚಿವ ಸಂಪುಟ ರಚನೆಯ ಬಗ್ಗೆಯೇ ದೊಡ್ಡ ಚಿಂತೆಯಾಗಿದೆ. ಯಾಕೆಂದರೆ ಒಂದೆಡೆ ಕಾಂಗ್ರೆಸ್ ಶಾಸಕರು ಸಚಿವ ಸ್ಥಾನಕ್ಕಾಗಿ ಒತ್ತಡ ಹೇರುತ್ತಿದ್ದರೆ, ಮತ್ತೊಂದೆಡೆ ಜೆಡಿಎಸ್‌ ಶಾಸಕರೂ ಕೂಡ ದೇವೇಗೌಡರ ಹಿಂದೆ ಬಿದ್ದು ಸಚಿವ ಸ್ಥಾನಕ್ಕಾಗಿ ಒತ್ತಾಯಿಸುತ್ತಿದ್ದಾರೆ. ಕೊನೆಗೂ ಸಚಿವರ ಪಟ್ಟಿ ಸಿದ್ಧಗೊಳಿಸಿದ ಹೈಕಮಾಂಡ್ ಯಾರ್ಯಾರಿಗೆ ಯಾವ ಯಾವ ಸ್ಥಾನ ನೀಡಿದ್ದಾರೆ ಎಂಬುದು ಗೊತ್ತಾಗಿದೆ. ಸಚಿವ ಸ್ಥಾನದ ಆಕಾಂಕ್ಷೆಗಳು ಈಗಾಗಲೇ ದೆಹಲಿಗೆ ತೆರಳಿ ರಾಹುಲ್ ಗಾಂಧಿ ಅವರನ್ನು ಬೇಟಿಯಾಗಿದ್ದು, ತಮ್ಮ ಬೇಡಿಕೆಯನ್ನು ಪಕ್ಷದ ಅಧ್ಯಕ್ಷನ ಮುಂದಿಟ್ಟಿದ್ದಾರೆ.ಆದ್ದರಿಂದ ಇದೀಗ ಪಟ್ಟಿ ಬಿಡುಗಡೆಗೊಳಿಸಿದ ಮೈತ್ರಿ ಸರಕಾರ ಕೆಲವರಿಗೆ ಸಂತೋಷ ನೀಡಿದರೆ, ಹೆಚ್ಚಿನ ಆಕಾಂಕ್ಷಿಗಳಿಗೆ ನಿರಾಸೆ ಉಂಟು ಮಾಡಿದ್ದಾರೆ..!

ಯಾರಿಗೆ ಒಲಿದು ಬಂತು ಅದೃಷ್ಟ..?

ಈಗಾಗಲೇ ಭಾರೀ ಪೈಪೋಟಿ ನಡೆಸುತ್ತಿದ್ದ ಎರಡೂ ಪಕ್ಷಗಳ ಶಾಸಕರಲ್ಲಿ ಹೆಚ್ಚಿನವರಿಗೆ ನಿರಾಸೆ ಉಂಟಾಗಿದೆ. ಯಾಕೆಂದರೆ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದ ಶಾಸಕರಿಗೆ ಮಣೆ ಹಾಕದ ಹೈಕಮಾಂಡ್, ಅಚ್ಚರಿಯ ರೀತಿಯಲ್ಲಿ ಮಂತ್ರಿ ಪಟ್ಟ ನೀಡಿದೆ‌. ಜಾತಿ ಲೆಕ್ಕಾಚಾರ ಇಟ್ಟುಕೊಂಡು ಸಚಿವ ಸ್ಥಾನ ಹಂಚಿಕೆ ಮಾಡಲಾಗಿದೆ ಎಂದು ಈಗಾಗಲೇ ಮಂತ್ರಿ ಸ್ಥಾನ ವಂಚಿತ ಶಾಸಕರು ಆಕ್ರೋಶಗೊಂಡಿದ್ದು, ಪಕ್ಷದ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ.!

ಮಹಿಳಾ ಕೋಟಾದಲ್ಲಿ ದಲಿತ ಸಮುದಾಯಕ್ಕೆ ಸೇರಿದ ಸಂಸದ ಕೆ.ಎಚ್.ಮುನಿಯಪ್ಪ ಅವರ ಪುತ್ರಿ ರೂಪಾ ಶಶಿಧರ್ ಅವರ ಹೆಸರು ಹೆಚ್ಚಾಗಿ ಕೇಳಿಬಂದಿದ್ದರೂ ಕೂಡ ಹೈಕಮಾಂಡ್ ನಿರ್ಧಾರದಲ್ಲಿ ರೂಪಾ ಅವರು ಸಚಿವ ಸ್ಥಾನ ಕಳೆದುಕೊಂಡಿದ್ದಾರೆ. ಅಚ್ಚರಿಯ ರೀತಿಯಲ್ಲಿ ಇದೀಗ ಸಚಿವೆಯಾಗಿರುವ ನಟಿ ಜಯಾಮಾಲ ಅವರಿಗೆ ಅವಕಾಶ ಒದಗಿಬಂದಿದ್ದು, ಇದೀಗ ಸಚಿವೆಯಾಗಿ ಆಯ್ಕೆಯಾಗಿದ್ದಾರೆ. ಜಯಾಮಾಲ ಅವರು ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯೆಯಾಗಿದ್ದು, ಈಡುಗ ಸಮುದಾಯಕ್ಕೆ ಸೇರಿವರಾಗಿದ್ದಾರೆ. ಆದ್ದರಿಂದ ಜಾತಿ ಲೆಕ್ಕಾಚಾರ ಇಟ್ಟುಕೊಂಡು ಈ ರೀತಿ ಸಚಿವ ಸ್ಥಾನ ಹಂಚಿಕೆ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ.!

Related image

ಅದೇ ರೀತಿ ಇತ್ತೀಚೆಗೆ ಜೆಡಿಎಸ್‌ ತೊರೆದು, ಕುಮಾರಸ್ವಾಮಿ ಅವರನ್ನು ಬಾಯಿಗೆ ಬಂದಂತೆ ಬೈದಿದ್ದ ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಅವರಿಗೆ ಮುಸ್ಲಿಂ ಕೋಟಾದಲ್ಲಿ ಸಚಿವ ಸ್ಥಾನ ನೀಡಲಾಗಿದೆ. ಜಮೀರ್ ಅಹ್ಮದ್ ಜೆಡಿಎಸ್‌ ನಿಂದ ಹೊರ ನಡೆಯುತ್ತಿದ್ದಂತೆ ಕುಮಾರಸ್ವಾಮಿ ಮತ್ತು ಜೆಡಿಎಸ್‌ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದರು. ಆದರೆ ಇದೀಗ ಮೈತ್ರಿ ಮಾಡಿಕೊಂಡ ಕಾರಣಕ್ಕಾಗಿ ಮತ್ತೆ ಒಂದಾಗಿದ್ದಾರೆ. ಆದ್ದರಿಂದ ಜಮೀರ್ ಅಹ್ಮದ್ ಗೆ ಸಚಿವ ಸ್ಥಾನ ದೊರಕಿರಬಹುದು ಎಂದು ಹೇಳಲಾಗುತ್ತಿದೆ.

ಅದೇ ರೀತಿ ಸಚಿವ ಸ್ಥಾನದ ಆಕಾಂಕ್ಷಿ ಮಂಗಳೂರು ಉಳ್ಳಾಲದ ಶಾಸಕ ಯು‌.ಟಿ.ಖಾದರ್ ಅವರಿಗೂ ನಿರೀಕ್ಷೆಯಂತೆ ಸಚಿಚ ಸ್ಥಾನ ದೊರಕಿದೆ. ಮುಸ್ಲಿಂ ಕೋಟಾದ ಅಡಿಯಲ್ಲಿ ಬರುವ ಈ ಇಬ್ಬರಿಗೂ ಸಮಿಶ್ರ ಸರಕಾರದಲ್ಲಿ ಸ್ಥಾನ ದೊರಕಿದ್ದು, ಕೊಂಚ ಮಟ್ಟಿಗೆ ಅಲ್ಪಸಂಖ್ಯಾತರ ಕಡೆ ಗಮನಹರಿಸಿರುವುದಾಗಿ ತೋರ್ಪಡಿಸಿಕೊಂಡಿದ್ದಾರೆ. ಅದೂ ಅಲ್ಲದೆ ಇತ್ತೀಚೆಗೆ ಭಾರೀ ಸುದ್ದಿ ಮಾಡಿದ್ದ ಗೂಂಡಾ ಮಹಮ್ಮದ್ ನಲಪಾಡ್ ತಂದೆ ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ನಲಪಾಡ್ ಈ ಬಾರಿಯೂ ಗೆಲುವು ಸಾಧಿಸಿದ್ದರು. ಆದ್ದರಿಂದ ಹ್ಯಾರಿಸ್ ಗೂ ಕೂಡ ಸಚಿವ ಸ್ಥಾನ ದೊರಕಿದೆ.

ಒಕ್ಕಲಿಗ ಕೋಟಾದಲ್ಲಿ ಕನಕಪುರ ಕ್ಷೇತ್ರದ ಶಾಸಕ ಡಿ.ಕೆ.ಶಿವಕುಮಾರ್, ಕೃಷ್ಣ ಭೈರೇಗೌಡ ಅವರಿಗೆ ಸ್ಥಾನ ಕಲ್ಪಿಸಲಾಗಿದೆ. ಡಿಕೆಶಿ ಇಂಧನ ಖಾತೆಯ ಮೇಲೆ ಕಣ್ಣಿಟ್ಟಿದ್ದು, ಜೆಡಿಎಸ್‌ ತನ್ನದೇ ಮುಖಂಡರಿಗೆ ಈ ಸ್ಥಾನ ನೀಡಲು ನಿರ್ಧರಿಸಿತ್ತು. ಆದರೆ ಕಾಂಗ್ರೆಸ್ ಮುಖಂಡರ ದಂಡೇ ರಾಹುಲ್ ಬಳಿಗೆ ತೆರಳಿ ಮಾತುಕತೆ ನಡೆಸಿದ್ದರು. ಇತ್ತ ಜೆಡಿಎಸ್‌ ಇಂಧನ ಖಾತೆಯ ಹಂಚಿಕೆಯನ್ನು ಹೈಕಮಾಂಡ್ ಗೆ ಬಿಟ್ಟಿತ್ತು. ಆದ್ದರಿಂದ ಇಂಧನ ಖಾತೆಯನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲು ನಿರ್ಧರಿಸಿದ್ದ ಜೆಡಿಎಸ್‌ ತಮ್ಮ ನಿರ್ಧಾರದಿಂದ ಹಿಂದೆ ಸರಿದಿತ್ತು.

Related image

ಅದೇ ರೀತಿ ಹಿರಿತನದ ಆಧಾರದಲ್ಲಿ ಹಳಿಯಾಳ ಶಾಸಕ ಆರ್ ವಿ ದೇಶ್‌ಪಾಂಡೆ ಅವರಿಗೆ ಅವಕಾಶ ನೀಡಿದ್ದು, ಪ್ರತಿಯೊಂದು ಸಚಿವ ಸ್ಥಾನವೂ ಜಾತಿವಾರು ಲೆಕ್ಕಾಚಾರದಲ್ಲಿಯೇ ನಡೆದಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಲಿಂಗಾಯತ ಕೋಟಾದ ಅಡಿಯಲ್ಲಿ ರಾಜಶೇಖರ ಪಾಟೀಲ್ ಹುಮ್ನಾಬಾದ್ ಹಾಗೂ ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ್ ಅವರಿಗೆ ಅವಕಾಶ ನೀಡಲಾಗಿದೆ. ಮಾಜಿ ಸಚಿವ, ಬಬಲೇಶ್ವರ ಶಾಸಕ , ಕಾಂಗ್ರೆಸ್ ಮುಖಂಡ ಎಂಬಿ ಪಾಟೀಲ್ ಅವರ ಹೆಸರನ್ನು ಕೈಬಿಟ್ಟ ಮೈತ್ರಿ ಸರಕಾರ ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ರಾಣೆ ಬೆನ್ನೂರು ಪಕ್ಷೇತರ (ಕೆಪಿಜೆಪಿ) ಶಾಸಕ ಶಂಕರ್ ಅವರಿಗೆ ಕುರುಬ ಕೋಟಾದಲ್ಲಿ ಸಚಿವ ಸ್ಥಾನ ನೀಡಲಾಗಿದೆ. ಅದೇ ರೀತಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತ , ಕಾಂಗ್ರೆಸ್ ಮುಖಂಡ ಕೆ‌.ಜೆ.ಜಾರ್ಜ್ ಅವರಿಗೂ ನಿರೀಕ್ಷೆಯಂತೆ ಕ್ರಿಶ್ಚಿಯನ್ ಕೋಟಾದಲ್ಲಿ ಸಚಿವ ಸ್ಥಾನ ಅವಕಾಶ ಸಿಕ್ಕಿದೆ.
ಅದೇ ರೀತಿ ಸಿದ್ದರಾಮಯ್ಯನವರ ಸರಕಾರದಲ್ಲಿ ಗೃಹ ಸಚಿವರಾಗಿದ್ದ ರಾಮಲಿಂಗಾರೆಡ್ಡಿ ಅವರ ಹೆಸರನ್ನು ಕೈಬಿಟ್ಟಿದ್ದು, ಗೌರಿ ಬಿದನೂರು ಶಾಸಕ ಶಿವಶಂಕರ್ ರೆಡ್ಡಿ ಅವರಿಗೆ ಹಿರಿತನ ಮತ್ತು ರೆಡ್ಡಿ ಕೋಟಾದಲ್ಲಿ ಸ್ಥಾನ ನೀಡಲಾಗಿದೆ

ವಾಲ್ಮೀಕಿ (ಎಸ್‌ಟಿ) ಸಮಾಜದ ಕೋಟಾದಲ್ಲಿ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಮತ್ತು ಬಳ್ಳಾರಿಯ ಸಂಡೂರು ಶಾಸಕ ತುಕರಾಂ ಅವರಿಗೆ ಅವಕಾಶ ನೀಡಲಾಗಿದೆ. 

ಇನ್ನು , ದಲಿತ ಸಮಾಜದ ಆಧಾರದಲ್ಲಿ ಪ್ರಿಯಾಂಕಾ ಖರ್ಗೆ ಅವರಿಗೆ ಸ್ಥಾನ ನೀಡಿದ್ದು, ಪಾವಗಡ ಶಾಸಕ ಭೋವಿ ಜನಾಂಗದ ವೆಂಕಟರಮಣಪ್ಪ ಅವರಿಗೆ ಮತ್ತು ಚಾಮರಾಜನಗರದ ಪುಟ್ಟರಂಗ ಶೆಟ್ಟಿ ಅವರಿಗೂ ಸಚಿವ ಸ್ಥಾನ ನೀಡಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಸಚಿವ ಸಂಪುಟ ಜಾತಿ ಆಧಾರದಲ್ಲಿ ನಡೆದಿದೆ ಎಂಬುದು ಸ್ಪಷ್ಟ. ಯಾಕೆಂದರೆ ಎಲ್ಲಾ ಸಚಿವರಿಗೂ ಜಾತಿ – ಧರ್ಮದ ಆಧಾರದಲ್ಲಿಯೇ ಮಂತ್ರಿ ಸ್ಥಾನ ಹಂಚಿಕೆ ಮಾಡಲಾಗಿದೆ..!

–ಅರ್ಜುನ್

Tags

Related Articles

Close