ಪ್ರಚಲಿತ

ಭಾರತೀಯ ಪ್ರವಾಸಿಗರ ಸಂಖ್ಯೆ ಇಳಿಕೆ: ಮಾಲ್ಡೀವ್ಸ್ ಪ್ರವಾಸೋದ್ಯಮಕ್ಕೆ ಹೊಡೆತ

ಭಾರತದ, ಭಾರತೀಯರ ವಿಚಾರಕ್ಕೆ ಬಂದರೆ, ತಗಾದೆ ತೆಗೆದರೆ ಪರಿಣಾಮ ಊಹಿಸಲಾಗದಷ್ಟು ಕೆಟ್ಟ ಸ್ಥಿತಿಗೆ ತಲುಪುತ್ತದೆ ಎನ್ನುವುದಕ್ಕೆ ಮಾಲ್ಡೀವ್ಸ್ ಎಂಬ ದ್ವೀಪ ರಾಷ್ಟ್ರದ ಸ್ಥಿತಿಯೇ ಸಾಕ್ಷಿ ಹೇಳುತ್ತದೆ.

ಕೆಲ ಸಮಯದ ಹಿಂದೆ ಪ್ರಧಾನಿ ಮೋದಿ ಅವರು ಮಾಲ್ಡೀವ್ಸ್‌ಗೆ ಭೇಟಿ ನೀಡಲು ಮುಂದಾಗಿದ್ದಾಗ ಭಾರತದ ಶತ್ರು ರಾಷ್ಟ್ರದ ಬೆಂಬಲದ ಕಾರಣಕ್ಕೆ ಮಾಲ್ಡೀವ್ಸ್ ತಗಾದೆ ಎತ್ತಿತ್ತು. ಆಗ ಪ್ರಧಾನಿ ಮೋದಿ ಅವರು ಮಾಲ್ಡೀವ್ಸ್ ಪ್ರವಾಸ ರದ್ದು ಮಾಡಿ, ನಮ್ಮದೇ ಲಕ್ಷ ದ್ವೀಪಕ್ಕೆ ಹೋಗಿದ್ದರು. ಇದರಿಂದಾಗಿ ಮಾಲ್ಡೀವ್ಸ್ಗೆ ಪ್ರಯಾಣ ಬಯಸಿದ್ದ, ಆಗಲೇ ಅಲ್ಲಿನ ಹೊಟೇಲ್‌ಗಳಲ್ಲಿ ರೂಮ್ ಬುಕ್ ಮಾಡಿದ್ದ, ವಿಮಾನ ಪ್ರಯಾಣಕ್ಕೆ ಟಿಕೆಟ್ ನಿಗದಿ ಮಾಡಿದ್ದ ಹಲವಾರು ಭಾರತೀಯರು ಅದೆಲ್ಲವನ್ನೂ ಕ್ಯಾನ್ಸಲ್ ಮಾಡಿ, ಮಾಲ್ಡೀವ್ಸ್ ಪ್ರವಾಸೋದ್ಯಮಕ್ಕೆ ಬರೆ ಎಳೆದಿದ್ದರು. ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ಮಾಲ್ಡೀವ್ಸ್‌ಗೆ ತೆರಳಲು ಬಯಸಿದ್ದವರಲ್ಲಿ ಹಲವರು, ಅಲ್ಲಿಗೆ ತೆರಳದೇ ಇರಲು ನಿರ್ಧರಿಸಿ ಅಲ್ಲಿನ ಸರ್ಕಾರಕ್ಕೆ ಪ್ರತಿಕಾರದ ಏಟು ನೀಡಿದ್ದಾರೆ ಎನ್ನುವುದು ಅಲ್ಲಿನ ಈಗಿನ ಪ್ರವಾಸೋದ್ಯಮ ಕ್ಷೇತ್ರದ ಅವಸ್ಥೆಯನ್ನು ಕಂಡೇ ಹೇಳಬಹುದು.

ಪ್ರಧಾನಿ ಮೋದಿ ಅವರು ಲಕ್ಷ ದ್ವೀಪದತ್ತ ಲಕ್ಷ್ಯ ವೆಚ್ಚ ಬಳಿಕ, ಅಲ್ಲಿಗೆ ತೆರಳಲು ಬಯಸುವ ಭಾರತೀಯರ ಸಂಖ್ಯೆ ಹೆಚ್ಚಾಗಿದೆ ಎನ್ನುವುದು ಗಮನಾರ್ಹ.

ಕಳೆದ ಮೂರು ವಾರಗಳಲ್ಲಿ ಮಾಲ್ಡೀವ್ಸ್ ತನ್ನ ಪ್ರವಾಸಿಗರ ಸಂಖ್ಯೆಯಲ್ಲಿ ಬದಲಾವಣೆ ಕಾಣುತ್ತಿದೆ. ಅಲ್ಲಿನ ಪ್ರವಾಸೋದ್ಯಮ ಸಚಿವಾಲಯದ ಅಂಕಿ ಅಂಶಗಳು ಅಲ್ಲಿಗೆ ಭಾರತೀಯ ಪ್ರವಾಸಿಗರ ಸಂಖ್ಯೆ ಇಳಿಕೆಯಾದ ವರದಿಗಳನ್ನು ನೀಡುತ್ತಿವೆ. ಅಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಪೈಕಿ ಭಾರತೀಯರ ಸ್ಥಾನ ಮೂರರಿಂದ ಐದಕ್ಕೆ ಕುಸಿದಿದ್ದು, ಇದು ಮಾಲ್ಡೀವ್ಸ್ ಪ್ರವಾಸೋದ್ಯಮದ ಮೇಲೆ ದೊಡ್ಡ ಮಟ್ಟದ ಹೊಡೆತ ನೀಡಿದೆ ಎನ್ನಬಹುದಾಗಿದೆ.

ಈ ಅಂಕಿ ಅಂಶಗಳು ಭಾರತ ಮತ್ತು ಮಾಲ್ಡೀವ್ಸ್ ನಡುವಿನ ರಾಜತಾಂತ್ರಿಕ ಸಂಬಂಧಗಳ ಪರಿಣಾಮಕ್ಕೆ ಕೈಗನ್ನಡಿಯಂತೆ ಕಾಣುತ್ತಿದೆ ಎನ್ನುವುದು ಸ್ಪಷ್ಟ.

ಕಳೆದ ಡಿಸೆಂಬರ್‌ನಲ್ಲಿ ಮಾಲ್ಡೀವ್ಸ್‌ಗೆ ಭೇಟಿ ನೀಡುವ ದೇಶಗಳ ಪೈಕಿ ಭಾರತ ಅಗ್ರ ಸ್ಥಾನದಲ್ಲಿ ಇತ್ತು. ಆದರೆ ಯಾವಾಗ ಪ್ರಧಾನಿ ಮೋದಿ ಅವರೊಂದಿಗೆ ಮಾಲ್ಡೀವ್ಸ್ ಕಿರಿಕ್ ಮಾಡಿಕೊಂಡಿತೋ ಇದು ಭಾರತೀಯ ಪ್ರವಾಸಿಗರು ಅಲ್ಲಿಗೆ ತೆರಳುವುದರ ಮೇಲೆಯೂ ಪರಿಣಾಮ ಬೀರಿತು. ಮಾಲ್ಡೀವ್ಸ್ ಪ್ರವಾಸೋದ್ಯಮಕ್ಕೆ ಹೊಡೆತ ನೀಡಿತು ಎನ್ನುವುದು ಸತ್ಯ.

Tags

Related Articles

Close