ಪ್ರಚಲಿತ

ರಾಹುಲ್ ಗಾಂಧಿ ಸುಳ್ಳುಗಳಿಗೆ ಜನರೇ ಪಾಠ ಕಲಿಸುತ್ತಾರೆ: ಪ್ರಲ್ಹಾದ ಜೋಶಿ

ಬಿಜೆಪಿ ಯನ್ನು, ಬಿಜೆಪಿ ನಾಯಕರನ್ನು ದೂಷಣೆ ಮಾಡುವುದು, ಅವರ ವಿರುದ್ಧ ಅಪಪ್ರಚಾರ‌ ಮಾಡುವುದು, ಸುಳ್ಳು ಮಾಹಿತಿ ಬಿತ್ತುವ ಕೆಲಸವನ್ನು ಮಾಡುವುದು ಕಾಂಗ್ರೆಸ್ ಪಕ್ಷದ ಯುವ ನಾಯಕನೆನಿಸಿಕೊಂಡ ರಾಹುಲ್ ಗಾಂಧಿಯಿಂದ ಹಿಡಿದು, ಕೈ ಪಕ್ಷದ ಎಲ್ಲಾ ನಾಯಕರವರೆಗೂ ಪರ್ಮನೆಂಟ್ ‌ಉದ್ಯೋಗ ಎಂಬಂತಾಗಿದೆ.

ಸಮಾಜದ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷ ಯಾವುದೇ ರೀತಿಯ ಕೊಡುಗೆ ನೀಡದಿದ್ದರೂ, ಸಮಾಜವನ್ನು ಒಡೆಯುವ, ಸಮಾಜದಲ್ಲಿ ಅಶಾಂತಿ ಬಿತ್ತುವ ಕೆಲಸದಲ್ಲಿ ಸದಾ ಮುಂದು. ದೇಶದ ಅಭಿವೃದ್ಧಿಯನ್ನು ಸಹಿಸಲಾಗದ ಕಾಂಗ್ರೆಸ್ ಬಿಜೆಪಿಗರ ಬಗ್ಗೆ, ಅದರಲ್ಲೂ ಮುಖ್ಯವಾಗಿ ದೇಶದ ಅಭಿವೃದ್ಧಿಯ ರೂವಾರಿ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಬೇಕಾಬಿಟ್ಟಿಯಾಗಿ ಮಾತನಾಡುತ್ತಲೇ ಇರುತ್ತದೆ.

ರಾಹುಲ್ ಗಾಂಧಿ ಪ್ರಧಾನಿ ಮೋದಿ ಅವರ ಬಗ್ಗೆ ಮಾತನಾಡಿದ್ದು, ಅವರು Other Backward Class (OBC) ಯಲ್ಲಿ ಜನಿಸಿಲ್ಲ. ಆದರೂ ಅವರು ತಮ್ಮನ್ನು ಒಬಿಸಿ ವರ್ಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದರು. ಅವರ ಈ ಹುರುಳಿಲ್ಲದ ಮಾತಿಗೆ ಬಿಜೆಪಿ ಪರವಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ತಿರುಗೇಟು ನೀಡಿದ್ದಾರೆ.

ರಾಹುಲ್ ಗಾಂಧಿಗೆ ನಾಚಿಕೆ ಆಗುವುದಿಲ್ಲವೇ? ಎಂದು ಜೋಶಿ ಪ್ರಶ್ನಿಸಿದ್ದಾರೆ. ಕೇವಲ ಸುಳ್ಳು ಸುದ್ದಿಗಳನ್ನು ಹಬ್ಬುವುದೇ ಅವರಿಗೆ ಕೆಲಸವಾಗಿ ಬಿಟ್ಟಿದೆ ಎಂದು ವ್ಯಂಗ್ಯವಾಡಿದ್ದಾರೆ. ಕೈ ಸರ್ಕಾರದ ಸುಳ್ಳಿನ ಬುತ್ತಿಯನ್ನು ಎಳೆ ಎಳೆಯಾಗಿ ಬಿಚ್ಚಿಡುವ ಸಮಯ ಬಂದಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸತ್ಯಗಳನ್ನು ಮರೆಮಾಚಿ ಕೇವಲ ಸುಳ್ಳುಗಳ ಮೂಲಕವೇ ಜನರ ಕಿವಿಗೆ ಗೊಂಚಲು ಗೊಂಚಲು ಹೂವಿಡುವ ಕಾರ್ಯ ಕೈ ನಾಯಕರು ಮಾಡುತ್ತಿದ್ದಾರೆ ಎಂದು ಜೋಶಿ ತಿಳಿಸಿದ್ದಾರೆ.

ಪ್ರಧಾನಿ ಮೋದಿ ಅವರು ಒಬಿಸಿ ವರ್ಗಕ್ಕೆ ಸೇರಿದವರು ಎನ್ನುವುದಕ್ಕೆ ಜೋಶಿ ಸಾಕ್ಷಿ ಸಹ ನೀಡಿದ್ದಾರೆ. ಹಾಗೆಯೇ ಪ್ರಧಾನಿ ಅವರು ಒಬಿಸಿ ಅಲ್ಲ ಎನ್ನುವ ಮೂಲಕ ಇಡೀ ಒಬಿಸಿ ವರ್ಗವನ್ನೇ ಕಾಂಗ್ರೆಸ್ ಅವಮಾನಿಸಿದೆ ಎಂದು ಅವರು ಹೇಳಿದ್ದಾರೆ. ಈ ಆರೋಪಕ್ಕೆ ಜನರು ತಕ್ಕ ಶಾಸ್ತಿ ಮಾಡಲಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.

ಪ್ರಧಾನಿ ಮೋದಿ ಸರ್ಕಾರ ಕೇಂದ್ರದಲ್ಲಿ ಆಡಳಿತ ಚುಕ್ಕಾಣಿ ಹಿಡಿದ ಬಳಿಕ ಭ್ರಷ್ಟ ಕಾಂಗ್ರೆಸ್‌ಗೆ ಕೊಳ್ಳೆ ಹೊಡೆಯಲು, ಜನರನ್ನು ಲೂಟಿ ಮಾಡಲು ಇರುವ ದಾರಿಗಳು ಮುಚ್ಚಿ ಹೋಗಿವೆ. ಸರಿಯಾದ ಮಾರ್ಗದಲ್ಲಿ ಪ್ರಧಾನಿ ಮೋದಿ ಅವರನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ಅರಿತ ಕಾಂಗ್ರೆಸ್, ಅವರ ಬಗ್ಗೆ ಇಲ್ಲಸಲ್ಲದ್ದನ್ನು ಹೇಳಿಯಾದರೂ ಜನರನ್ನು ಕುರಿ ಮಾಡಲು ಹೊರಟಿದೆ. ಪ್ರಧಾನಿ ಮೋದಿ ಮತ್ತು ಅವರ ಸರ್ಕಾರದ ಬಗ್ಗೆ ಸುಳ್ಳು ಹಬ್ಬಿಸಿ ಜನರ ಮನಸ್ಸಿನಲ್ಲಿ ಅವರನ್ನು ತಪ್ಪಿತಸ್ಥನ ಸ್ಥಾನದಲ್ಲಿ ನಿಲ್ಲಿಸುವ ಹುನ್ನಾರ ಕೈ ನಾಯಕರದ್ದು. ಆದರೆ ಕಾಂಗ್ರೆಸ್ ಪಕ್ಷದ ಈ ಟ್ರಿಕ್‌ಗೆ ಜನರು ತಕ್ಕ ಪ್ರತ್ಯುತ್ತರವನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ನೀಡಲಿದ್ದು, ಕಾಂಗ್ರೆಸಿಗರ ಕೈ ಮುರಿದು ಮೂಲೆ ಸೇರಿಸಲಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.

Tags

Related Articles

Close