ಪ್ರಚಲಿತ

ಮತ ಬ್ಯಾಂಕ್ ಉಳಿಸಲು ಮಮತಾ ಬ್ಯಾನರ್ಜಿ ನಾಟಕ

ಕಾಂಗ್ರೆಸ್ ಮತ್ತು ಅದರ ಇಂಡಿ ಒಕ್ಕೂಟದ ಜೊತೆಗೆ ಕೈ ಜೋಡಿಸಿದ ದೇಶದ ಶಾಂತಿಗೆ ಭಂಗ ತರುವ ಪಕ್ಷಗಳ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುಡುಗಿದ್ದಾರೆ.

ಕಾಂಗ್ರೆಸ್ ಪಕ್ಷ ಮತ್ತು ಅದರ ಜೊತೆಗೆ ಕೈ ಜೋಡಿಸಿರುವ ಮಮತಾ ಬ್ಯಾನರ್ಜಿ ನೇತೃತ್ವದ ಟಿ ಎಂ ಸಿ ವಿರುದ್ಧ ಅವರು ವಾಗ್ದಾಳಿ ನಡೆಸಿರುವುದಾಗಿದೆ. ಈ ಪಕ್ಷಗಳು ದೇಶದ ಭದ್ರತಾ ಕಾಳಜಿಯನ್ನು ವಹಿಸುವುದಕ್ಕಿಂತ ಹೆಚ್ಚಾಗಿ, ಓಟ್ ಬ್ಯಾಂಕ್ ರಾಜಕೀಯಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡುತ್ತಿದ್ದಾರೆ ಎಂದು ಅವರು ಕಿಡಿ ಕಾರಿದ್ದಾರೆ.

ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತಾವಧಿಯಲ್ಲಿ ಭಯೋತ್ಪಾದನೆ ಸಂಭವಿಸಿದಾಗ ಕಾಂಗ್ರೆಸ್ ಮತ್ತು ಟಿ ಎಂ ಸಿ ಎರಡೂ ಸಹ ಮೌನಕ್ಕೆ ಶರಣಾಗಿದ್ದವು. ಇದಕ್ಕೆ ಕಾರಣ ಓಟ್ ಬ್ಯಾಂಕ್ ರಾಜಕಾರಣ. ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಅವರು ತಮ್ಮ ಒಳ ನುಸುಳುಕೋರ ಓಟ್ ಬ್ಯಾಂಕ್ ಮತದಾರರು ಅಸಮಾಧಾನ ಪಟ್ಟುಕೊಂಡಾರು ಎನ್ನುವ ಭಯದಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣ ಮಾಡುವ ಶಂಕುಸ್ಥಾಪನೆಯನ್ನೇ ಕೈ ಬಿಡುವಂತೆ ಸೂಚಿಸಿದರು ಎಂದು ಅವರು ಕೆಂಡ ಕಾರಿದ್ದಾರೆ.

ಹಾಗೆಯೇ ಶ್ರೀ ರಾಮ ಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಮಮತಾ ಬ್ಯಾನರ್ಜಿ ಮತ್ತು ಅವರ ಸೋದರಳಿಯನಿಗೆ ಆಹ್ವಾನ ನೀಡಲಾಗಿತ್ತು. ಆದರೆ ಅವರು ಈ ಕಾರ್ಯಕ್ರಮಕ್ಕೆ ಹೋಗಲಿಲ್ಲ. ಯಾತಕ್ಕಾಗಿ ಹೋಗಲಿಲ್ಲ ಗೊತ್ತೇ? ಎಂದು ಪ್ರಶ್ನೆ ಮಾಡಿದರು. ಒಳ ನುಸುಳುಕೋರರು ಮಮತಾ ಬ್ಯಾನರ್ಜಿ ಅವರ ಓಟ್ ಬ್ಯಾಂಕ್. ‍ಇವರಿಗೆ ದೀದಿ ಹೆದರುತ್ತಾರೆ. ಆ ಕಾರಣದಿಂದಲೇ ಅವರು ಈ ಕಾರ್ಯಕ್ರಮಕ್ಕೆ, ಗೈರಾಗಿದ್ದು ಎಂದು ಅವರು ಹೇಳಿದ್ದಾರೆ.

ರಾಮ ಜನ್ಮ ಭೂಮಿಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ವಿರುದ್ದ ಕೋರ್ಟ್ ‌ಗೆ ತೆರಳಿದ್ದ ಜನರೇ ರಾಮ ಮಂದಿರ ಉದ್ಘಾಟನೆಯ ಆಮಂತ್ರಣ ಪಡೆದು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಆದರೆ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಈ ರಾಷ್ಟ್ರ ಕಾರ್ಯಕ್ಕೆ ಆಹ್ವಾನ ನೀಡಲಾಗಿದ್ದರೂ, ಅದನ್ನು ತಿರಸ್ಕರಿಸಿದವರು ಎಂದು ಅವರು ಹೇಳಿದ್ದಾರೆ.

Tags

Related Articles

Close