ಪ್ರಚಲಿತ

ಮೋದಿಯಿಂದ ಮತ್ತೊಂದು ಮಾಸ್ಟರ್ ಸ್ಟ್ರೋಕ್!! ಪಾಕಿಸ್ತಾನಕ್ಕೆ ಕೊಟ್ಟರು ಶಾಕ್!! ಇಸ್ಲಾಮಿಕ್ ಸಹಕಾರ ಸಂಘಟನೆಯಲ್ಲಿ ವೀಕ್ಷಕ ದೇಶವಾಗುವ ಭಾರತದ ಮನವಿಗೆ ಜೈ ಎಂದ ಟರ್ಕಿ!!

ವಿಶ್ವದ ಎಲ್ಲಾ ಇಸ್ಲಾಮಿಕ್ ರಾಷ್ಟ್ರಗಳ ಒಂದು ವೇದಿಕೆಯಾಗಿರುವ ಇಸ್ಲಾಮಿಕ್ ಸಹಕಾರ ಸಂಘಟನೆಯಲ್ಲಿ ( Organisation of Islamic Cooperation) ಭಾರತವನ್ನು ವೀಕ್ಷಕನನ್ನಾಗಿಸಬೇಕು ಎಂಬ ಭಾರತದ ಮನವಿಯನ್ನು ಟರ್ಕಿಯು ಪುರಸ್ಕರಿಸಿದೆ. ಭಾರತದ ಈ ನಡೆಯು ಪಾಕಿಸ್ತಾನದ ಕತ್ತನ್ನು ಹಿಸುಕುವುದು ಖಚಿತ. ಎಕೋನೊಮಿಕ್ ಟೈಮ್ಸ್ ವರದಿಯ ಪ್ರಕಾರ OIC ಯಲ್ಲಿ ಭಾರತವನ್ನು ಸದಸ್ಯ ರಾಷ್ಟ್ರವನ್ನಾಗಿಸುವ ಪ್ರಕ್ರಿಯೆಗೆ ಬಾಂಗ್ಲಾದೇಶ ಮತ್ತು ಟರ್ಕಿಗಳು ಅಸ್ತು ಎಂದಿವೆ.

ಭಾರತಕ್ಕೆ ಟರ್ಕಿಯು ನೀಡಿರುವ ಬೆಂಬಲದಿಂದಾಗಿ ಪಾಕಿಸ್ತಾನದ ಎದೆಯಲ್ಲಿ ಉರಿ ಶುರುವಾಗುವುದು ಖಂಡಿತ. ಪಾಕಿಸ್ತಾನವು, ಭಾರತಕ್ಕೆ ವಿರುದ್ಧವಾಗಿ ಪ್ರಚಾರವನ್ನು ನಡೆಸಲು ಈ ವೇದಿಕೆಯನ್ನು ಸದಾ ಬಳಸುತ್ತಿರುತ್ತದೆ. ಟರ್ಕಿಯ ಬೆಂಬಲ ದೊರೆತರೆ ಭಾರತಕ್ಕೆ ಪಾಕಿಸ್ತಾನವನ್ನು ಮಣಿಸಲು ತೋಳ್ಬಲ ಬಂದಂತಾಗುತ್ತದೆ. ಈ ವೇದಿಕೆಯು 57 ಸದಸ್ಯ ರಾಷ್ಟ್ರಗಳು ಮತ್ತು ಹಲವಾರು ವೀಕ್ಷಕ ದೇಶಗಳನ್ನು ಒಳಗೊಂಡಿದೆ. ಈ ವೇದಿಕೆಯು ತನ್ನನ್ನು “ಮುಸ್ಲಿಂ ಪ್ರಪಂಚದ ಸಾಮೂಹಿಕ ಧ್ವನಿ” ಎಂದು ವರ್ಣಿಸುತ್ತದೆ, ಆದರೆ ಮುಸ್ಲಿಂ ಬಾಹುಳ್ಯದ ಹಲವಾರು ರಾಷ್ಟ್ರಗಳನ್ನು ಈ ವೇದಿಕೆಯಿಂದ ಹೊರಗಿಡಲಾಗಿದೆ ಎನ್ನುವ ಟೀಕೆಯನ್ನು ಎದುರಿಸುತ್ತಲೂ ಇದೆ.

ಭಾರತಕ್ಕೆ ಈ ವೇದಿಕೆಯ ವೀಕ್ಷಕನಾಗುವ ಬಯಕೆ ಏಕೆ?

ಇಸ್ಲಾಮಿಕ್ ಜಗತ್ತಿನಲ್ಲಿ ಭಾರತವು ಒಂದು ಪ್ರಮುಖ ರಾಷ್ಟ್ರವೆಂದು ಪರಿಗಣಿಸಲ್ಪಡುತ್ತದೆ. ಭಾರತದ ಮುಸ್ಲಿಂ ಜನಸಂಖ್ಯೆಯು ಈ ವೇದಿಕೆಯಲ್ಲಿರುವ ಕೆಲವು ದೇಶಗಳ ಒಟ್ಟು ಜನಸಂಖ್ಯೆಗಿಂತಲೂ ಹೆಚ್ಚಿದೆ. ಟರ್ಕಿಯು ಐತಿಹಾಸಿಕವಾಗಿ ಪಾಕಿಸ್ತಾನದ ಮಿತ್ರ ರಾಷ್ಟ್ರವಾಗಿದೆ ಆದರೆ ಅದರ ಬದಲಾಗುತ್ತಿರುವ ನಿಲುವು ವಿಶ್ವದಲ್ಲಿ ವೇಗವಾಗಿ ಬದಲಾಗುತ್ತಿರುವ ರಾಜಕೀಯ ಸಮೀಕರಣಗಳನ್ನು ಪ್ರತಿನಿಧಿಸುತ್ತಿದೆ. ಪಾಕಿಸ್ತಾನವು ಸದಾ ಈ ವೇದಿಕೆಯನ್ನು ತನ್ನ ಸ್ವಾರ್ಥ ಸಾಧನೆಗಾಗಿ ಉಪಯೋಗಿಸುತ್ತದೆ.

ಕಳೆದ ವರ್ಷ ಕಾಶ್ಮೀರಕ್ಕೆ ಸಂಬಂಧ ಪಟ್ಟ ನಿರ್ಣಯವೊಂದರಲ್ಲಿ OICಯು, “ಸ್ವಯಂ ನಿರ್ಣಯದ ಹಕ್ಕನ್ನು ಸಾಧಿಸುವುದಕ್ಕಾಗಿ ತಮ್ಮ ಹೋರಾಟದಲ್ಲಿ ಕಾಶ್ಮೀರದ ಜನರಿಗೆ ಬೆಂಬಲವನ್ನು ಪುನರುಚ್ಚರಿಸಿದೆ” ಎಂದು ಹೇಳಿತ್ತು. ಈ ಹೇಳಿಕೆ ನಿಶ್ಚಿತವಾಗಿಯೂ ಭಾರತ ವಿರೋಧಿ ಹೇಳಿಕೆ ಆಗಿತ್ತು. OIC ಈ ಹೇಳಿಕೆ ನೀಡಲು ಪಾಕಿಸ್ತಾನವೆ ಕಾರಣ. ಹಿಜ್ಬುಲ್ ಭಯೋತ್ಪಾದಕ ಬುರ್ಹನ್ ವಾನಿಯ ಕೊಲೆಯಾದ ನಂತರ ಪಾಕಿಸ್ತಾನವು ನಿರ್ಣಯವನ್ನು ವೇದಿಕೆಯ ಮೂಲಕ ಹೇಳಿಸಿತ್ತು. ಇದಕ್ಕೆ ಭಾರತ ಸಹಿತ OIC ಯ ಇತರ ಸದಸ್ಯ ರಾಷ್ಟ್ರಗಳು ವಿರೋಧ ವ್ಯಕ್ತ ಪಡಿಸಿದ್ದವು ಮತ್ತು ಪ್ರಬಲ ನಿರ್ಣಯದ ವಿರುದ್ಧ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿದ್ದವು.

ವೇದಿಕೆಯಲ್ಲಿ ವೀಕ್ಷಕ ಸ್ಥಾನ ಗಳಿಸಿಕೊಳ್ಳುವುದರಿಂದ ಭವಿಷ್ಯದಲ್ಲಿ ಪಾಕಿಸ್ತಾನದ ಇಂತಹ ಕುಟಿಲ ಕ್ರಮಗಳನ್ನು ಪರಿಶೀಲಿಸಲು ಭಾರತಕ್ಕೆ ಸಾಧ್ಯವಾಗುತ್ತದೆ. ಭಾರತದ ಈ ಮನವಿಗೆ ಬಾಂಗ್ಲಾದೇಶವೂ ಕೂಡಾ ಸಹಮತಿ ವ್ಯಕ್ತ ಪಡಿಸಿದೆ. ಮುಸ್ಲಿಂ ರಾಷ್ಟ್ರಗಳು ಪಾಕಿಸ್ತಾನದ ವಿರುದ್ದ ಭಾರತದ ಬೆಂಬಲಕ್ಕೆ ನಿಂತಿರುವುದು ಸಾಮಾನ್ಯ ವಿಷಯವಲ್ಲ. ಇವತ್ತು ಭಾರತ ವಿಶ್ವ ಮಂಚದಲ್ಲಿ ದೊಡ್ಡಣ್ಣನ ಸ್ಥಾನದಲ್ಲಿ ನಿಂತಿದೆ. ಇದಕ್ಕೆಲ್ಲ ಕಾರಣ ಮೋದಿಯವರ ಪ್ರಬಲ ವಿದೇಶಾಂಗ ನೀತಿ. ತನ್ನ ದೇಶದ ಅಸ್ಮಿತೆಯ ವಿಷಯದಲ್ಲಿ ರಾಜಿ ಮಾಡಿಕೊಳ್ಳದ ಮೋದಿ ಹಗಲಿರುಳೆನ್ನದೆ ವಿದೇಶ ಸುತ್ತುತ್ತಾರೆ. ಅವರು “ಅಜ್ಜಿ ಮನೆಯಲ್ಲಿ ರಜಾದಿನಗಳನ್ನು ಕಳೆಯಲು” ವಿದೇಶ ಸುತ್ತುವುದಲ್ಲ. ಬದಲಾಗಿ ದೇಶದ ಸಂಸ್ಕೃತಿ, ವಾಣಿಜ್ಯ ಮತ್ತು ರಕ್ಷಣಾ ಕ್ಷೇತ್ರಕ್ಕೆ ಸಂಬಂಧ ಪಟ್ಟ ವಿಚಾರಗಳನ್ನು ಚರ್ಚಿಸಿ ವಿಶ್ವದ ಎಲ್ಲಾ ದೇಶಗಳ ಜೊತೆ ಸೌಹಾರ್ದ ಪೂರ್ಣ ಸಂಬಂಧ ಸ್ಥಾಪಿಸಲು ಹೋಗುವುದು.

ಇವತ್ತು ವಿಶ್ವ ಮಟ್ಟದಲ್ಲಿ ಭಾರತದ ಪ್ರತಿಯೊಂದು ಮಾತಿಗೂ ಮನ್ನಣೆ ದೊರಕುತ್ತಿದ್ದರೆ ಅದಕ್ಕೆ ಕಾರಣ ಮೋದಿ. ಭಾರತದಿಂದ ಕೊಳ್ಳೆ ಹೊಡೆದ ಮೂಟೆಗಟ್ಟಲೆ ಹಣವನ್ನು ವಿದೇಶಿ ಬ್ಯಾಂಕ್ ಗಳಲ್ಲಿ ಇಡಲು ಮೋದಿ ವಿದೇಶ ಯಾತ್ರೆ ಕೈಗೊಳ್ಳುವುದಿಲ್ಲ. ಮೋದಿ ಏನೇ ಮಾಡಿದರೂ ಅದರಲ್ಲಿ ಭಾರತದ ಹಿತ ಅಡಗಿರುತ್ತದೆ ಎನ್ನುವುದನ್ನು ನೆನಪಿಡಿ. ಇಂತಹ ನಾಯಕ ಬಾರಿ ಬಾರಿ ನಮಗೆ ಸಿಗುವುದಿಲ್ಲ. ಸಿಕ್ಕಿದ್ದನ್ನು ಉಳಿಸಿಕೊಳ್ಳದಿದ್ದರೆ ನಮ್ಮಂತ ಹತಭಾಗ್ಯರು ಇನ್ನೊಬ್ಬರಿಲ್ಲ….

-ಶಾರ್ವರಿ

Tags

Related Articles

Close