ಪ್ರಚಲಿತ

“ನಾರಿ ಶಕ್ತಿ ಪ್ರದರ್ಶನ’ಕ್ಕೆ ಮತ್ತೊಂದು ಗರಿ!! ದಕ್ಷಿಣ ಭಾರತದ ಮೊದಲ ಯುದ್ಧ ವಿಮಾನದ ಮಹಿಳಾ ಪೈಲಟ್ ಆಗಿ ಮೇಘನಾ ಆಯ್ಕೆ!!

ನರೇಂದ್ರ ಮೋದಿಯವರು ಅಧಿಕಾರದ ಗದ್ದುಗೆಯನ್ನು ಏರಿದಂದಿನಿಂದಲೂ ಮಹಿಳೆಯರಿಗೆ ಎಲ್ಲಾ ಕ್ಷೇತ್ರಗಳಲ್ಲೂ ಹೆಚ್ಚಿನ ಸ್ಥಾನಮಾನವನ್ನು ಕಲ್ಪಿಸಿದ್ದಲ್ಲದೇ ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆಯರಿಗೆ ಹೆಚ್ಚಿನ ಆದ್ಯತೆಯನ್ನು ನೀಡಿ ಇಂದು ಮಹಿಳೆ ಸೇನಾ ಕ್ಷೇತ್ರಗಳಲ್ಲಿ ಮಿಂಚುವಂತೆ ಮಾಡಿದ್ದಾರೆ!! ಅದಕ್ಕೆ ಸಾಕ್ಷಿ ಎನ್ನುವಂತೆ ಭಾರತದ ಮಹಿಳೆಯರ ತಾಕತ್ತು ಕೇವಲ ಯುದ್ದಭೂಮಿಯಲ್ಲಿ ಮಾತ್ರವಲ್ಲದೇ ಬಾನಂಗಳದಲ್ಲಿ ಪ್ರದರ್ಶಿತವಾಗಿದ್ದು, ಭಾರತದ ಸೈನ್ಯದಲ್ಲಿರುವ ಅವನಿ ಚತುರ್ವೇದಿ ಮಿಗ್ 21 ಬಿಸನ್ ಯುದ್ಧ ವಿಮಾನವನ್ನು ಏಕಾಂಗಿಯಾಗಿ ಹಾರಾಟ ಮಾಡುವ ಮೂಲಕ ಇತಿಹಾಸ ನಿರ್ಮಿಸಿದ್ದರು.

ಆದರೆ ಇದೀಗ ಆಗಸದಲ್ಲಿ “ನಾರಿ ಶಕ್ತಿ ಪ್ರದರ್ಶನ’ಕ್ಕೆ ಮತ್ತೊಂದು ಕಿರೀಟ ಸೇರ್ಪಡೆಯಾಗಿದ್ದು, ಮೇಘನಾ ಶಾನುಭೋಗ್ ದಕ್ಷಿಣ ಭಾರತದ ಮೊದಲ ಹಾಗೂ ದೇಶದ 6ನೇ ಯುದ್ಧ ವಿಮಾನದ ಮಹಿಳಾ ಪೈಲಟ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ!! ಹೌದು… ಚಿಕ್ಕಮಗಳೂರು ಈವರೆಗೆ ಅತ್ಯುತ್ತಮ ಕಾಫಿ, ಪಶ್ಚಿಮ ಘಟ್ಟ ಮತ್ತು ಬೋರ್ಗರೆಯುವ ಜಲಪಾತಗಳಿಂದ ಖ್ಯಾತಿ ಪಡೆದಿತ್ತು. ಇನ್ನು ಮುಂದೆ ದಕ್ಷಿಣ ಭಾರತದಿಂದ, ಅದರಲ್ಲೂ ಕರ್ನಾಟಕದಿಂದ ಮೊದಲ ಯುದ್ಧವಿಮಾನ ಮಹಿಳಾ ಪೈಲಟ್‍ನ್ನು ನೀಡಿದ ಖ್ಯಾತಿಗೂ ಪಾತ್ರವಾಗಲಿದೆ. ಅಂತಹದ್ದೊಂದು ಸಾಧನೆಯನ್ನು ಜಿಲ್ಲೆಯ ಮೇಘನಾ ಶಾನುಭೋಗ್ ಮಾಡಿ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ.

ಈಗಾಗಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಾರಿಗೆ ತಂದ “ಬೇಟಿ ಪಡವೋ ಬೇಟಿ ಬಚಾವೋ” ಹಾಗೂ “ಸುಕನ್ಯಾ ಸಮೃದ್ಧಿ” ಯೋಜನೆಗಳು ಹೆಣ್ಣು ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ ಆಗಿವೆ. ಅಷ್ಟೇ ಅಲ್ಲದೇ, ಮಹಿಳಾ ಸಬಲೀಕರಣಕ್ಕೆ ಕೌಶಲ್ಯ ತರಬೇತಿ ಅಗತ್ಯವಾಗಿದ್ದು ಇದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರ ಪರಿಣಾಮಕಾರಿ ಯೋಜನೆ ರೂಪಿಸಿ ಹೊಸ ಭರವಸೆಯನ್ನೂ ನೀಡುತ್ತಿದೆ. ಇದರೊಂದಿಗೆ ಮಹಿಳೆಯರಿಗೆ ಹೆಚ್ಚಿನ ಸ್ಥಾನಮಾನ ಕಲ್ಪಿಸುವಲ್ಲಿ ಶ್ರಮ ವಹಿಸುತ್ತಿರುವ ಕೇಂದ್ರ ಸರ್ಕಾರವು ನಾನಾ ಕ್ಷೇತ್ರಗಳಲ್ಲಿ ಮಹಿಳೆಯರು ಮಿಂಚುವಂತೆ ಮಾಡುತ್ತಿದೆ!!

ವಿಶ್ವದಲ್ಲೇ ತನ್ನ ಸೈನಿಕ ಬಲದ ಮೂಲಕ ಗಮನ ಸೆಳೆದಿರುವ ಭಾರತೀಯ ಸೇನೆಯಲ್ಲಿ ಮೊದಲ ಬಾರಿಗೆ ಏಕಾಂಗಿಯಾಗಿ ಮಹಿಳಾ ಪೈಲಟ್ ಅವನಿ ಚತುರ್ವೇದಿ ಯುದ್ಧ ವಿಮಾನವನ್ನು ಏಕಾಂಗಿಯಾಗಿ ಹಾರಾಟ ನಡೆಸಿ ಹೊಸ ಇತಿಹಾಸವನ್ನು ಸೃಷ್ಟಿ ಮಾಡಿದ್ದರು!! ಆದರೆ ಇದೀಗ ದಕ್ಷಿಣ ಭಾರತದ ಮೊದಲ ಹಾಗೂ ದೇಶದ 6ನೇ ಯುದ್ಧ ವಿಮಾನದ ಮಹಿಳಾ ಪೈಲಟ್ ಎಂಬ ಕೀರ್ತಿಗೆ ಮೇಘನಾ ಶಾನುಭೋಗ್ ಪಾತ್ರರಾಗಿದ್ದಾರೆ!!

ಈಗಾಗಲೇ ಹೈದರಾಬಾದ್ ಭೀಂಡಗಲ್ ವಾಯುಪಡೆ ಅಕಾಡೆಮಿಯಲ್ಲಿ ಮೇಘನಾ ಯುದ್ಧವಿಮಾನ ಪೈಲಟ್ ತರಬೇತಿ ಪದವಿ ಪೂರೈಸಿದ್ದಾರೆ. ಪದವಿ ಪೂರೈಸಿದವರ ಪಥಸಂಚಲನ ಶನಿವಾರ ನಡೆದಿದ್ದು, ಆ ಸಂದರ್ಭದಲ್ಲಿ ಮೇಘನಾ ಯುದ್ಧ ವಿಮಾನದ ಪೈಲಟ್ ಆಗಿ ಆಯ್ಕೆ ಮಾಡಿರುವ ವಿಷಯವನ್ನು ಅಧಿಕೃತವಾಗಿ ಘೋಷಿಸಲಾಗಿದೆ!!

ಆಕಾಶಕ್ಕೆ ಏಕಾಂಗಿಯಾಗಿ ಏರಿದಾಗಲೇ ಮೇಘನಾಗೆ ತಾನು ಅಸಾಮಾನ್ಯವಾದುದನ್ನು ಸಾಧಿಸಬೇಕೆಂಬ ಮಹತ್ವಾಕಾಂಕ್ಷೆ ಚಿಗುರೊಡೆದಿತ್ತು. ಗೋವಾ ಬೀಚ್‍ನಲ್ಲಿ ಪ್ಯಾರಾ ಗ್ಲೆ ಡರ್‍ನಿಂದ ಯಾವುದೇ ಆತಂಕಕ್ಕೆ ಒಳಗಾಗದೆ ಜಿಗಿದಾಗ ನೋಡುಗರೆಲ್ಲ ಹುಬ್ಬೇರಿಸಿದ್ದರು. ಆ ಸಮಯದಲ್ಲಿ ತನ್ನಲ್ಲಿರುವ ಧೈರ್ಯ ಅರಿತ ಮೇಘನಾ ತಮ್ಮ ಸಾಹಸದ ಹವ್ಯಾಸವನ್ನೇ ವೃತ್ತಿಯಾಗಿಸಿಕೊಂಡು ಸಾಧನೆ ಮಾಡಲು ನಿರ್ಧರಿಸಿದರು.

ತದನಂತರದಲ್ಲಿ ಸಾಹಸಿ ಮೇಘನಾಗೆ ಮೊದಲ ಅವಕಾಶ ತೆರೆದುಕೊಂಡಿದ್ದು 2016ರ ಜೂನ್‍ನಲ್ಲಿ!! ಯುದ್ಧ ವಿಮಾನದ ಕಾಕ್‍ಪಿಟ್‍ನಲ್ಲಿ ಮಹಿಳಾ ಫೈಲೆಟ್ ಗಳಿಗೂ ಅವಕಾಶ ಎಂಬ ವಾಯುದಳದ ಪ್ರಕಟಣೆ ಅವರ ಬದುಕನ್ನೇ ಬದಲಿಸಿತು. ತಕ್ಷಣ ಏರ್‍ಫೋರ್ಸ್ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಹಾಜರಾಗಲು ಸಿದ್ಧತೆ ನಡೆಸಿ ಉತ್ತೀರ್ಣರಾಗಿದ್ದಲ್ಲದೇ ಆಂಧ್ರದ ಭೀಂಡಿಗಲ್ ಏರ್‍ಫೋರ್ಸ್ ಅಕಾಡೆಮಿಯಲ್ಲಿ ಪ್ರವೇಶ ದೊರೆಯಿತು.

ಎಂಜಿನಿಯರಿಂಗ್ ಓದುತ್ತಿದ್ದಾಗಲೇ ಅಡ್ವೆಂಚರ್ ಕ್ಲಬ್ ಸ್ಥಾಪಿಸಿ ಸ್ನೇಹಿತರೊಂದಿಗೆ ಸಾಹಸಮಯ ಚಟುವಟಿಕೆಗಳನ್ನು ನಡೆಸುತ್ತಿದ್ದ ಮೇಘನಾ 20ನೇ ವರ್ಷದಲ್ಲೇ ಮೊಟ್ಟ ಮೊದಲ ಬಾರಿಗೆ ಏಕಾಂಗಿಯಾಗಿ ಪ್ಯಾರಾ ಗ್ಲೆಡಿಂಗ್ ನಡೆಸಿದ್ದರು!! ಅಷ್ಟೇ ಅಲ್ಲದೆ ಮನಾಲಿಯಲ್ಲಿ ಪರ್ವತಾರೋಹಣ ಮತ್ತು ಗೋವಾದಲ್ಲಿ ಪ್ಯಾರಾಗ್ಲೈಡಿಂಗ್ ತರಬೇತಿ ಪಡೆದಿರುವ ಇವರು ಭೀಂಡಗಲ್ ನ ಏರ್‍ಫೋರ್ಸ್ ಅಕಾಡೆಮಿಗೆ ಅವರು 2017ರ ಜನವರಿಯಲ್ಲಿ ಪ್ರವೇಶ ಪಡೆದಿದ್ದರು.

ಒಟ್ಟಿನಲ್ಲಿ ದೊರೆತ ಅವಕಾಶ ಸದ್ಬಳಕೆ ಮಾಡಿಕೊಂಡಿರುವ ಮೇಘನಾ ಭಾರತೀಯ ವಾಯುದಳ ಸೇರಿದ್ದಾರಲ್ಲದೇ ದಕ್ಷಿಣ ಭಾರತದ ಮೊದಲ ಹಾಗೂ ದೇಶದ 6ನೇ ಯುದ್ಧ ವಿಮಾನದ ಮಹಿಳಾ ಪೈಲಟ್ ಎಂಬ ಕೀರ್ತಿಗೆ ಪಾತ್ರಳಾಗಿರುವುದು ನಿಜಕ್ಕೂ ಕೂಡ ಹೆಮ್ಮೆಯ ವಿಚಾರವಾಗಿದೆ.

ಮೂಲ:   https://www.deccanherald.com/national/south-s-1st-lady-fighter-pilot-state-675332.html

  • ಅಲೋಖಾ
Tags

Related Articles

Close