ಪ್ರಚಲಿತ

ಪ್ರತಿಭಟನೆಗಳ ನಡುವೆಯೇ ಕರುನಾಡಿಗೆ ಎಂಟ್ರಿ ಕೊಟ್ಟ ವಿಶ್ವದೊರೆ…! ಬಂದ್ ಗೆ ಕ್ಯಾರೇ ಎನ್ನಲಿಲ್ಲ ಕಮಲಪಡೆ!!

ನರೇಂದ್ರ ಮೋದಿ ಹೆಸರು ಕೇಳುತ್ತಿದ್ದಂತೆ ಅಭಿಮಾನಿಗಳ ಸಮೂಹವೇ ಅಲ್ಲಿ ಸೇರಿರುತ್ತದೆ. ನರೇಂದ್ರ ಮೋದಿಯವರ ಸಮಾವೇಶ ನಡೆಯುತ್ತದೆ ಎಂದ ತಕ್ಷಣ ವಿರೋಧಿಗಳು ಕಾರ್ಯಕ್ರಮವನ್ನು ವಿಫಲಗೊಳಿಸಲು ಪ್ರಯತ್ನಿಸುತ್ತಾರೆ.ಆದರೆ ವಿರೋಧಿಗಳನ್ನು ಹೆಡೆಮುರಿ ಕಟ್ಟಲು ಮೋದಿ ಸೈನ್ಯ ತಯಾರಾಗಿರುತ್ತದೆ.

ಇಂದು ಕರ್ನಾಟಕಕ್ಕೆ ಆಗಮಿಸುತ್ತಿರುವ ನರೇಂದ್ರ ಮೋದಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ನವರ ನೇತ್ರತ್ವದಲ್ಲಿ ನಡೆಯುತ್ತಿರುವ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಈಗಾಗಲೇ ಕರ್ನಾಟಕ ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಹುರುಪು ಮೂಡುವಂತೆ ಮಾಡಿದ ಪರಿವರ್ತನಾ ಯಾತ್ರೆ ರಾಜ್ಯಾದ್ಯಂತ ಸಂಚರಿಸಿದ್ದು ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಯಶಸ್ವಿಯಾಗಿ ಕಾರ್ಯಕ್ರಮಗಳು ನಡೆದಿವೆ.
ಇದೀಗ ಸಮಾರೋಪ ಸಮಾರಂಭದ ಸಮಾವೇಶವು ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯಲಿದೆ.

ಈಗಾಗಲೇ ರಾಜ್ಯ ಸರಕಾರಕ್ಕೆ ತಲೆನೋವಾದ ಪರಿವರ್ತನಾ ಯಾತ್ರೆಯನ್ನು ವಿಫಲಗೊಳಿಸಲು ಕಾಂಗ್ರೆಸ್ ತಂತ್ರ ರೂಪಿಸುತ್ತಲೇ ಬಂದಿದೆ. ಆದರೆ ಕಾಂಗ್ರೆಸ್ ನ ಎಲ್ಲಾ ತಂತ್ರಗಳನ್ನು ಭೇದಿಸಿದ ಬಿಜೆಪಿ ಯಶಸ್ವಿಯಾಗಿ ಸಮಾವೇಶಗಳನ್ನು ನಡೆಸಿದೆ.

ಮೈಸೂರಿನಲ್ಲಿ ನಡೆದ ಪರಿವರ್ತನಾ ಯಾತ್ರೆಗೆ ಬಿಜೆಪಿ ಚಾಣಕ್ಯ ಅಮಿತ್ ಷಾ ಆಗಮಿಸುವ ಸುದ್ದಿ ತಿಳಿಯುತ್ತಲೇ ಸಿದ್ದರಾಮಯ್ಯ ಸರಕಾರ ಕಂಗಾಲಾಗಿತ್ತು.ಅಮಿತ್ ಷಾ ಭೇಟಿಯನ್ನು ವಿಫಲಗೊಳಿಸಲು ಕಾಂಗ್ರೆಸ್ ನಾನಾ ರೀತಿಯ ತಂತ್ರ ರೂಪಿಸಿತ್ತು.ಆದರೆ ಕಾಂಗ್ರೆಸ್ ನ ಎಲ್ಲಾ ತಂತ್ರವನ್ನು ಛಿದ್ರಗೊಳಿಸುತ್ತಿರುವ ಬಿಜೆಪಿ ಯಶಸ್ವಿಯಾಗಿ ತನ್ನ ಸಮಾವೇಶಕ್ಕೆ ಸಜ್ಜಾಗಿದೆ.

ಮೋದಿ ಆಗಮನದ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಬೆಚ್ಚಿಬಿದ್ದಿದ್ದು, ಬೆಂಗಳೂರು ಬಂದ್ ಮಾಡಲು ತಂತ್ರ ರೂಪಿಸಿತ್ತು.ಆದರೆ ಕಾಂಗ್ರೆಸ್ ನ‌ ಈ ನಡೆಗೆ ಸ್ವತಃ ಹೈಕೋರ್ಟ್ ಕೆಂಡಕಾರಿದೆ.
ಈಗಾಗಲೇ ಅಮಿತ್ ಷಾ ಮೈಸೂರಿನ‌ ಕಾರ್ಯಕ್ರಮದಲ್ಲಿ ಭಾಗವಹಿಸುವ ದಿನ ಕಾಂಗ್ರೆಸ್ ಮತ್ತು ಕೆಲ ಕಾಂಗ್ರೇಸ್ ಪ್ರೇರಿತ ಕನ್ನಡ ಚಳುವಳಿ ಸಂಘಟನೆಗಳು ಕರ್ನಾಟಕ ಬಂದ್ ಮಾಡಿ ಕಾರ್ಯಕ್ರಮ ವಿಫಲಗೊಳಿಸಲು ಯತ್ನಿಸಿದ್ದರು.ಆದರೆ ಬಿಜೆಪಿ ಕಾರ್ಯಕರ್ತರು ಇವೆಲ್ಲವನ್ನೂ ಭೇದಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದರು.ಇದರಿಂದ ರಾಜ್ಯ ಸರಕಾರಕ್ಕೆ ಮತ್ತು ವಾಟಾಳ್ ನಾಗರಾಜ್ ನೇತ್ರತ್ವದ ಕನ್ನಡ ಚಳುವಳಿ ವಾಟಾಳ್ ಪಕ್ಷಕ್ಕೆ ತೀವ್ರ ಮುಖಭಂಗವಾಗಿತ್ತು.

ದೇಶದಲ್ಲಿ ನೆಲಕಚ್ಚಿರುವ ಕಾಂಗ್ರೆಸ್ ಕರ್ನಾಟಕವನ್ನು ಉಳಿಸಿಕೊಳ್ಳಲು ಹರಸಾಹಸಪಡುತ್ತಿದೆ.
ಬಿಜೆಪಿ ಕಾರ್ಯಕ್ರಮಗಳಿಗೆ ಅಡ್ಡಿಪಡಿಸಲು ಪ್ರಯತ್ನಿಸುತ್ತಿದೆ.

ನರೇಂದ್ರ ಮೋದಿಯವರು ರಾಜ್ಯಕ್ಕೆ ಆಗಮಿಸುತ್ತಿದ್ದು ಲಕ್ಷ ಲಕ್ಷ ಸಂಖ್ಯೆಯಲ್ಲಿ ಕಾರ್ಯಕರ್ತರು ಸಮಾವೇಶದಲ್ಲಿ ಸೇರಿದ್ದಾರೆ.
ಬೆಂಗಳೂರು ಬಂದ್ ಹೆಸರಿನಲ್ಲಿ ಬಿಜೆಪಿ ಸಮಾವೇಶಕ್ಕೆ ಅಡ್ಡಿಪಡಿಸಲು ಸೋಕಾಲ್ಡ್ ಕನ್ನಡ ಸಂಘಟನೆಗಳ ಜೊತೆ ಸೇರಿ ರಾಜ್ಯ ಸರಕಾರವು ಅಧಿಕಾರ ದುರುಪಯೋಗ ಪಡಿಸಿಕೊಳ್ಳಲು ಯತ್ನಿಸಿತ್ತು ,ಆದರೆ ಇದಕ್ಕೆ ಸ್ವತಃ ಹೈಕೋರ್ಟ್ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಬಂದ್ ರದ್ದುಗೊಳಿಸಲಾಗಿದೆ.

ರೈತರನ್ನು ಬಳಸಿ ರಾಜ್ಯ ಸರಕಾರ ಮೋದಿ ಸಮಾವೇಶಕ್ಕೆ ಘೇರಾವ್ ಹಾಕಲು ಪ್ರಯತ್ನಿಸುತ್ತಿದೆ.ಆದರೆ ಕಾಂಗ್ರೆಸ್ ನ ಎಲ್ಲಾ ಪ್ರಯತ್ನಗಳನ್ನು ರಾಜ್ಯ ಬಿಜೆಪಿ ವಿಫಲಗೊಳಿಸುತ್ತಲೇ ಬರುತ್ತಿದೆ.

ಮೋದಿ ಆಗಮನಕ್ಕೆ ಹೆದರಿದ ಕಾಂಗ್ರೆಸ್ ಈಗಾಗಲೇ ರೈತರನ್ನು ಮತ್ತು ಕೆಲ ಕಾಂಗ್ರೆಸ್ ಪ್ರೇರಿತ ವಿದ್ಯಾರ್ಥಿಗಳನ್ನು ಬಳಸಿ ಅಡ್ಡಿಪಡಿಸಲು ಯತ್ನಿಸುತ್ತಲೇ ಇದೆ.ಇವೆಲ್ಲದಕ್ಕೂ ಉತ್ತರವಾಗಿ ಮೋದಿ ಅಭಿಮಾನಿಗಳು ಸಮಾವೇಶದಲ್ಲಿ ಭಾಗಿಯಾಗಿದ್ದಾರೆ.
ಇಡೀ ರಾಜ್ಯವೇ ಮೋದಿ ಸ್ವಾಗತಕ್ಕೆ‌ ಸಜ್ಜಾಗಿದ್ದು ಮೋದಿ ಅಲೆಯಲ್ಲಿ ಕಾಂಗ್ರೆಸ್ ಕೊಚ್ಚಿಹೋಗಲಿದೆ.

ರಾಜ್ಯದಲ್ಲಿ ನಡೆಯುವ ಮುಂದಿನ ವಿಧಾನಸಭಾ ಚುನಾವಣೆಗೆ ನರೇಂದ್ರ ಮೋದಿಯವರ ಈ ಆಗಮನ ಮಹತ್ವದ್ದಾಗಿದ್ದು ರಾಜ್ಯ ಬಿಜೆಪಿಯಲ್ಲಿ ಹೊಸ ಸಂಚಲನ ಮೂಡಿಸಿದೆ.
ರಾಜ್ಯ ಸರಕಾರ ಈಗಾಗಲೇ ತಲೆ ಚಚ್ಚಿಕೊಳ್ಳುತ್ತಿದ್ದು ಮೋದಿ ಆಗಮನಕ್ಕೆ ವಿರೋಧಿ ಬಣಗಳು ಕಂಗಾಲಾಗಿವೆ…!!

ಮೋದಿ ಕರ್ನಾಟಕಕ್ಕೆ ಆಗಮಿಸುವುದನ್ನು ವಿರೋಧಿಸಿದ ಕಾಂಗ್ರೆಸ್ ಇದೀಗ ಸ್ವತಃ ನರೇಂದ್ರ ಮೋದಿಯವರಿಗೆ ಸ್ವಾಗತ ಕೋರಿ ದಾರಿ ಉದ್ದಕ್ಕೂ ಫ್ಲೆಕ್ಸ್ ಅಳವಡಿಸಿದೆ.ರಾಜ್ಯಕ್ಕೆ ಮೋದಿ ಆಗಮನದಲ್ಲಿ ರಾಜ್ಯಾದ್ಯಂತ ಕಾರ್ಯಕರ್ತರು ಬೆಂಗಳೂರು ಕಡೆ ಆಗಮಿಸಿದ್ದು ತನ್ನ ಸೋಲನ್ನು ಮರೆಮಾಚಲು ಸಿದ್ದರಾಮಯ್ಯ ಸರಕಾರ ಅಲ್ಲಲ್ಲಿ ಬ್ಯಾನರ್ ಅಳವಡಿಸಿದೆ…!!

ತಾನು ನಡೆಸಿದ ಎಲ್ಲಾ ತಂತ್ರಗಳು ವಿಫಲವಾದ ಪರಿಣಾಮ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಪ್ರೇರಿತ ಕೆಲ ಸೋಕಾಲ್ಡ್ ಕನ್ನಡ ಪರ ಸಂಘಟನೆಗಳು ಅವಮಾನಕ್ಕೀಡಾಗಿದ್ದು ಬಿಜೆಪಿಯ ಸಮಾವೇಶದ ಮುಂದೆ ಎಲ್ಲಾ ವಿರೋಧಿ ಬಣಗಳ ತಂತ್ರವೂ ತಲೆಕೆಳಗಾಗಿದೆ.!

ಮೋದಿ ಆಶ್ವಮೇಧ ಕುದುರೆಯನ್ನು ಕಟ್ಟಿಹಾಕಲು ನಾನಾ ರೀತಿಯಲ್ಲಿ ಯತ್ನಿಸಿದ ಎಲ್ಲಾ ವಿರೋಧೀಗಳನ್ನು ಮೆಟ್ಟಿ ನರೇಂದ್ರ ಮೋದಿಯವರು ಕರ್ನಾಟಕಕ್ಕೆ ಬಂದಿಳಿದಿದ್ದಾರೆ.

ಬೆಂಗಳೂರಿನ ಎಚ್ ಎ ಎಲ್ ವಿಮಾನ ನಿಲ್ದಾಣಕ್ಕೆ‌ ಬಂದಿಳಿದ ನರೇಂದ್ರ ಮೋದಿ ಅರಮನೆ ಮೈದಾನದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್ ನ ಎಲ್ಲಾ ಹಗರಣಗಳ ಬಗ್ಗೆ ಮೋದಿ ಭಾಷಣ ಮಾಡಲಿದ್ದು ಕಾಂಗ್ರೆಸ್ ನ‌ ಭ್ರಷ್ಟ ರಾಜಕೀಯಕ್ಕೆ ಪ್ರಹಾರ ಮಾಡಲಿದ್ದಾರೆ…!!

ರಾಜ್ಯದ ಮೂಲೆ ಮೂಲೆಗಳಿಂದಲೂ ಕಾರ್ಯಕರ್ತರು ಆಗಮಿಸಿದ್ದು ಬಿಸಿಲಬೇಗೆಯ ನಡುವೆಯೇ ವಿಶ್ವನಾಯಕನ ಮಾತಿಗಾಗಿ ಕಾತರದಿಂದ ಕಾಯುತ್ತಿದ್ದಾರೆ…!
ರಾಜ್ಯ ಸರಕಾರದ ವಿರೋಧದ ನಡುವೆಯೇ ರಾಜ್ಯ ಬಿಜೆಪಿ ನಾಯಕರು ಸಮಾವೇಶ ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ.

–ಅರ್ಜುನ್

Tags

Related Articles

Close