ಪ್ರಚಲಿತ

‘ನಡೆಯಿರಿ ನಿಮಗೆಲ್ಲಾ ಶಿಕ್ಷೆ ನೀಡುತ್ತೇನೆ’ ಎಂದು ಮೋದಿ ಸಂಸದರುಗಳಿಗೆ ಹೇಳಿದ್ದೇಕೆ?

ಆರೋಗ್ಯಕರ ರಾಜಕಾರಣ ಮಾಡುವುದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಗುಣ ಎಲ್ಲಾ ರಾಜಕಾರಣಿಗಳಿಗೂ ಮಾದರಿ ಎಂದರೆ ತಪ್ಪಾಗದು.

ದೇಶ, ಧರ್ಮ, ದೇಶವಾಸಿಗಳ ಅಭಿವೃದ್ಧಿಯ ವಿಷಯದಲ್ಲಿ ಪ್ರಧಾನಿ ಮೋದಿ ಅವರು ಯಾವುದೇ ರಾಜಿ ಮಾಡಿಕೊಳ್ಳಲಾರರು. ಹಾಗೆಯೇ ಈ ವಿಷಯದಲ್ಲಿ ತಪ್ಪು ಹೆಜ್ಜೆ ಇಟ್ಟರೆ ಸ್ವ ಪಕ್ಷೀಯರಾದರೂ ಅವರನ್ನು ಸುಮ್ಮನೆ ಬಿಟ್ಟಿಲ್ಲ.‌ ಇಂತಹ ಧೀಮಂತ, ಮಾದರಿ ವ್ಯಕ್ತಿತ್ವದ ನಾಯಕ ಪ್ರಧಾನಿ ಮೋದಿ. ಭ್ರಷ್ಟರ ಪಾಲಿಗೆ ಸಿಂಹ ಸ್ವಪ್ನ, ಅಂದುಕೊಂಡದ್ದನ್ನು ಮತ್ತು ಜನರಿಗೆ ಅಗತ್ಯ ಎನಿಸಿದ್ದನ್ನು ಯಾವುದೇ ತೊಂದರೆ ಬಂದರೂ, ಯಾರೇ ಅಡ್ಡಗಾಲು ಹಾಕಿದರೂ ‌ಅದಕ್ಕೆ ಸೊಪ್ಪು ಹಾಕಿದೆ ಮಾಡಿ ಮುಗಿಸುವ ಚತುರ. ಎಲ್ಲರನ್ನೂ ಒಗ್ಗೂಡಿಸುವ ತಾಕತ್ತುಳ್ಳ ಸಂಘಟನಾ ಚತುರ.

ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಹತ್ತು ವರ್ಷಗಳ ಕಾಲ ದೇಶದ ಪ್ರಧಾನಿಯಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದು, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಎನ್.ಡಿ.ಎ. ಸರ್ಕಾರವೇ ಆಡಳಿತ ಚುಕ್ಕಾಣಿ ಹಿಡಿಯುವ ಎಲ್ಲಾ ಸಾಧ್ಯತೆಗಳೂ ನಿಚ್ಚಳವಾಗಿ ಕಾಣುತ್ತಿವೆ.

ಈ ಬಾರಿಯ ಎನ್‌ಡಿಎ ಅಧಿಕಾರಾವಧಿ ಸಂಪೂರ್ಣವಾಗುತ್ತಾ ‌ಬಂದಿದ್ದು, ಅದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ಪಕ್ಷ ಬೇಧ ಮರೆತು ಎಲ್ಲಾ ಸಂಸದರುಗಳ ಜೊತೆ ಕುಳಿತು ಹೋ ಜನ ಸ್ವೀಕರಿಸಿದರು.

ಸಂಸತ್ತಿನ ಕ್ಯಾಂಟೀನ್‌ನಲ್ಲಿ ಸಂಸದರುಗಳ ಜೊತೆ ಕುಳಿತು ಊಟ‌ ಮಾಡಿದರು. ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಂಸದರುಗಳು ಪ್ರಧಾನಿ ಮೋದಿ ಅವರ ಜೊತೆ ಕುಳಿತು ಆಹಾರ ಸೇವನೆ ಮಾಡಿದರು.

ಪ್ರಧಾನಿ ಅವರು ಸಂಸದರುಗಳನ್ನು ಉದ್ದೇಶಿಸಿ, ತಮಾಷೆಯಾಗಿ ‘ಬನ್ನಿ ನಾನಿಂದು ‌ನಿಮ್ಮೆಲ್ಲರನ್ನೂ ಶಿಕ್ಷಿಸುತ್ತೀವೆ ಎನ್ನುತ್ತಲೇ ಭೋಜನಕ್ಕೆ ಆಹ್ವಾನಿಸಿದರು. ಭೋಜನ ಸ್ವೀಕರಣೆ ವೇಳೆ ಅವರು ಸಂಸದರ ಜೊತೆಗೆ ದೈನಂದಿನ ದಿನಚರಿ, ಆಹಾರ, ಕಚ್ ‌ನಿರ್ಮಾಣ ಮತ್ತು ಪಾಕಿಸ್ತಾನ ಭೇಟಿ ಮೊದಲಾದ ವಿಷಯಗಳ ಬಗ್ಗೆ ಹರಟೆ ಹೊಡೆದರು.

ಒಟ್ಟಿನಲ್ಲಿ ಎಲ್ಲರನ್ನೂ ಒಳಗೊಳ್ಳುವ ಮೂಲಕ, ಏವರ ಪ್ರಶ್ನೆಗಳಿಗೆ ಉತ್ತರ ನೀಡುವ ಮೂಲಕ ಮತ್ತೆ ತಮ್ಮ ಪಾರದರ್ಶಕ ಆಡಳಿತವನ್ನು ನೀಡಿದ್ದಾರೆ. ಅವರದ್ದು ಮಾದರಿ ಮತ್ತು ಅನುಕರಣೀಯ, ಪ್ರಶಂಸನೀಯ ವ್ಯಕ್ತಿತ್ವ ಎನ್ನುವುದು ನಿರ್ವಿವಾದ.

Tags

Related Articles

Close