ಪ್ರಚಲಿತ

ತ್ರಿಪುರಾಕ್ಕೆ ಭರ್ಜರಿ ಗಿಫ್ಟ್ ನೀಡಲಿರುವ ಕೇಂದ್ರ ಸರ್ಕಾರ!! ಭರವಸೆಯನ್ನು ಹುಸಿ ಮಾಡದೇ ತ್ರಿಪುರಾದ ಅಭಿವೃದ್ಧಿಗೆ ಮೋದಿ ಮಾಡಿದ್ದೇನು ಗೊತ್ತೇ??

25 ವರ್ಷಗಳಿಂದ ಕೆಂಪು ರಾಜಕೀಯ ಪಕ್ಷದಿಂದ ಆಡಳಿತಕ್ಕೆ ಒಳಗಾಗಿದ್ದರೂ, ಅಭಿವೃದ್ಧಿಯನ್ನು ಕಾಣದೇ ನಿತ್ಯ ಸಂಕಷ್ಟದಲ್ಲಿ ದಿನದೂಡುತ್ತಿದ್ದ ತ್ರಿಪುರಾದ ಜನರು, ಇದೀಗ ಮೋದಿ ಅಲೆಯನ್ನು ಅಪ್ಪಿಕೊಳ್ಳುವ ಮೂಲಕ ಹೊಸ ಇತಿಹಾಸವನ್ನು ಸೃಷ್ಟಿಸಿದ್ದಾರೆ. 25 ವರ್ಷಗಳ ಎಡರಂಗದ ರಾಜಕೀಯ ಇತಿಹಾಸಕ್ಕೆ ಕೊನೆ ಹಾಡಿ, ರಾಷ್ಟ್ರದಲ್ಲಿ ಹೊಸ ಭರವಸೆ ಮೂಡಿಸಿರುವ ಕಮಲ ಪಕ್ಷಕ್ಕೆ ಭರ್ಜರಿ ಗೆಲುವು ಸಾಧಿಸಲು ಬೆಂಬಲ ನೀಡಿ ಈಶಾನ್ಯ ರಾಜ್ಯಗಳ ಜನತೆ ಕೇಸರಿಯನ್ನು ಅಪ್ಪಿ ಹಿಡಿದದ್ದು ಮಾತ್ರ ಅಕ್ಷರಶಃ ನಿಜ!! ಆದರೆ ತ್ರಿಪುರಾದ ಜನತೆಯ ನಂಬಿಕೆಯನ್ನು ಹುಸಿ ಮಾಡದೆ ಮೋದಿ ಸರ್ಕಾರವು ಭರ್ಜರಿ ಗಿಫ್ಟ್ ನೀಡುವ ಮೂಲಕ ಅಭಿವೃದ್ಧಿಯ ಹೊಳೆಯನ್ನೇ ಹರಿಸಲಿದ್ದಾರೆ!!

ಕಳೆದ 25 ವರ್ಷಗಳಿಂದ ತ್ರಿಪುರಾ ರಾಜ್ಯದಲ್ಲಿ ಸಿಪಿಎಮ್ ಎಂಬ ಎಡ ಪಂಥೀಯ ಸರ್ಕಾರ ಆಡಳಿತವನ್ನು ನಡೆಸುತ್ತಿದ್ದು, ಚೀನಾ ಪ್ರೇರಿತ ಎಡ ಪಂಥೀಯ ಸರ್ಕಾರ ಭಾರತದ ಆ ರಾಜ್ಯದಲ್ಲಿ ಕಮಾಲ್ ಮಾಡಿತ್ತು. ಅಷ್ಟೇ ಅಲ್ಲದೇ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ನೇತೃತ್ವದ ಆಡಳಿತ ಅಲ್ಲಿ ಅಭಿವೃದ್ಧಿಯನ್ನೇ ಕಾಣದೆ ಅಲ್ಲಿನ ಜನ ರೋಸಿ ಹೋಗಿದ್ದದಂತೂ ಅಕ್ಷರಶಃ ನಿಜ!! ಆದರೆ ಈ ಬಾರಿ ಭಾರತೀಯ ಜನತಾ ಪಕ್ಷ ಭರ್ಜರಿ ಭೇಟೆಯಾಡಿ ಕೆಂಪು ನಾಡಿನಲ್ಲಿ ಕೇಸರಿ ಪತಾಕೆಯನ್ನು ಹಾರಿಸಿದೆ. ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ರನ್ನು ಕೆಳಗಿಳಿಸಿದ ಭಾರತೀಯ ಜನತಾ ಪಕ್ಷದ ಮಾಣಿಕ್ಯ (ಪ್ರಧಾನಿ ಮೋದಿ) ಶೂನ್ಯ ಸಾಧನೆ ಮಾಡಿದ್ದ ಭಾರತೀಯ ಜನತಾ ಪಕ್ಷವನ್ನು ಅಧಿಕಾರಕ್ಕೇರಿಸುವಂತೆ ಮಾಡಿದೆ.

ಅಭಿವೃದ್ಧಿಯನ್ನೇ ಕಾಣದೇ ಕಂಗಾಲಾಗಿ ಹೋಗಿದ್ದ ತ್ರಿಪುರಾದ ಜನತೆ ಕೇಸರಿಯನ್ನು ಅಪ್ಪಿ ಹಿಡಿಯುವ ಮೂಲಕ ಕೆಲವೇ ದಿನಗಳಲ್ಲಿ ತ್ರಿಪುರಾದ ಜನತೆ ಕೇಂದ್ರ ಸರ್ಕಾರದಿಂದ ಭರ್ಜರಿ ಗಿಫ್ಟ್ ನ್ನೇ ಪಡೆದುಕೊಂಡಿದೆ!! ಹೌದು… ಅಭಿವೃದ್ಧಿ ಯೋಜನೆಗಳಿಗಾಗಿ ತ್ರಿಪುರಾದ ನೂತನ ಬಿಜೆಪಿ ಸರ್ಕಾರ ಕೇಂದ್ರದಿಂದ 2,587 ಕೋಟಿ ರೂಪಾಯಿಯನ್ನು ಅನುದಾನ ಪಡೆದುಕೊಳ್ಳಲಿದ್ದು, ಈ ಮೂಲಕ ತ್ರಿಪುರಾದ ಜನತೆಯ ಮೊಗದಲ್ಲಿ ಮಂದಹಾಸ ಮೂಡಿದೆ.

ವಸತಿ ಯೋಜನೆ, ಶಿಕ್ಷಣ, ಗ್ರಾಮೀಣ ಉದ್ಯೋಗಗಳಿಗಾಗಿ ಕೇಂದ್ರದಿಂದ ಬರುವ ಅನುದಾನವನ್ನು ಬಳಸಿಕೊಳ್ಳಲಾಗುತ್ತದೆ ಎಂದು ಅಲ್ಲಿನ ಸಿಎಂ ಬಿಪ್ಲಬ್ ಕುಮಾರ್ ದೇಬ್ ಹೇಳಿದ್ದಾರೆ. ಅಷ್ಟೇ ಅಲ್ಲದೇ ವಿಧಾನಸಭಾ ಚುನಾವಣೆಗೂ ಮುನ್ನ ಕೇಂದ್ರದ ವತಿಯಿಂದ ಅನುದಾನವನ್ನು ದೊರಕಿಸಿ ಕೊಡುವುದಾಗಿ ಬಿಜೆಪಿ, ತ್ರಿಪುರಾ ಜನತೆಗೆ ಭರವಸೆಯನ್ನು ನೀಡಿತ್ತು. ಅದರಂತೆ ಇದೀಗ ಅಭಿವೃದ್ದಿ ಕಾರ್ಯಗಳಿಗಾಗಿ ಅನುದಾನ ಬಿಡುಗಡೆ ಮಾಡಿ ತ್ರಿಪುರಾದಲ್ಲಿ ಮೋದಿ ಸರ್ಕಾರದ ದಿಟ್ಟ ಹೆಜ್ಜೆ ಏನೆಂಬುವುದನ್ನು ಈ ಮೂಲಕ ಜನತೆಗೆ ಸಾರಿದ್ದಾರೆ.

ಅಭಿವೃದ್ಧಿ ಮಂತ್ರದ ಉತ್ತಮ ಕಾರ್ಯವೈಖರಿಯಿಂದಾಗಿ ಭರ್ಜರಿ ಬಹುಮತ ಸಾಧಿಸಿದ ಬಿಜೆಪಿ!!

ನರೇಂದ್ರ ಮೋದಿಯವರು ಅಧಿಕಾರದ ಗದ್ದುಗೆಯನ್ನು ಏರಿದ ನಂತರದಿಂದ ದೇಶದೆಲ್ಲೆಡೆ ಅಭಿವೃದ್ಧಿಯ ಮಂತ್ರವನ್ನು ಪಠಿಸುತ್ತಿರುವ ವಿಚಾರ ಗೊತ್ತೇ ಇದೆ!! ಅದಕ್ಕೆ ಸಾಕ್ಷಿ ಎಂಬಂತೆ ಇಂದು ಭಾರತ ಆರ್ಥಿಕತೆಯಲ್ಲಿ ಉನ್ನತ ಸ್ಥಾನವನ್ನು ಏರುತ್ತಿರುವುದು!! ಆದರೆ ಇದು ತ್ರಿಪುರಾದಲ್ಲೂ ಕೆಲಸ ಮಾಡಿದ್ದು ಹೇಗೆಂದರೆ ಈ ಹಿಂದೆ ಯುಪಿಎ ಸರ್ಕಾರದಲ್ಲಿ ಘೋಸಿಸಲ್ಪಟ್ಟ ಯೋಜನೆಗಳು ಬಿಜೆಪಿ ಅವಧಿಯಲ್ಲಿ ಪೂರ್ಣಗೊಂಡಿದ್ದು ಅವುಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಬಿಜೆಪಿ ಯಶಸ್ವಿಯಾಗಿ ಮಾಡಿತ್ತು.

ಇನ್ನು, ತ್ರಿಪುರಾದ ಪುಟ್ಟ ರಾಜ್ಯದಲ್ಲಿ ಏಳು ಲಕ್ಷಕ್ಕೂ ಹೆಚ್ಚು ಮಂದಿಗೆ ನಿರುದ್ಯೋಗ ಸಮಸ್ಯೆಯಿತ್ತು. ಈ ಸಮಸ್ಯೆ ಪರಿಹರಿಸಲು ವಿಷನ್ ಡಾಕ್ಯುಮೆಂಟ್ 2018 ಹೆಸರಿನಲ್ಲಿ ಯುವಕರಿಗೆ ಪ್ರತಿ ಮನೆಯಲ್ಲೂ ಉದ್ಯೋಗ ಭರವಸೆ ನೀಡಿತ್ತು. ಅಲ್ಲದೇ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ, ಮಹಿಳೆಯರಿಗೆ ಪದವಿ ತನಕ ಉಚಿತ ಶಿಕ್ಷಣ, ಏಳನೇ ವೇತನ ಆಯೋಗ ಜಾರಿಗೊಳಿಸುವುದು, ಪ್ರವಾಸೋದ್ಯಮ ಅಭಿವೃದ್ಧಿ, ಸಾರಿಗೆ ಉತ್ತೇಜನ, ಡಿಜಿಟಲ್ ತ್ರಿಪುರ ಮಾಡುವ ಕನಸನ್ನು ಜನರಲ್ಲಿ ಬಿತ್ತಿತ್ತು.

ಅಷ್ಟೇ ಅಲ್ಲದೇ, ತನ್ನ ಬುಟ್ಟಿಯಲ್ಲಿರುವ ಕೇಂದ್ರದ ಅಭಿವೃದ್ಧಿ ಮಂತ್ರವನ್ನು ಬಿಜೆಪಿ ಅತ್ಯಂತ ಯಶಸ್ವಿಯಾಗಿ ಇಲ್ಲಿ ಬಳಸಿಕೊಂಡಿದೆ. ಕೇಂದ್ರ ಸರ್ಕಾರದ ಸಾಧನಗಳ ಜೊತೆ, ಚಲೋ ಪಾಲ್ಟಾಯ್ ಎಂಬ ಘೋಷಣೆಯೊಂದಿಗೆ ಇಪ್ಪತೈದು ವರ್ಷಗಳಿಂದ ಅಧಿಕಾರ ನಡೆಸುತ್ತಿದ್ದ ಎಡಪಂಥಿಯ ಸರ್ಕಾರದ ವಿರುದ್ಧ ಚುನಾವಣಾ ಪ್ರಚಾರದ ಉದ್ದಕ್ಕೂ ಆಂದೋಲನ ನಡೆಸಿತು. ತನ್ನ ಪ್ರಣಾಳಿಕೆಯಲ್ಲಿ ಭರಪೂರ ಕೊಡುಗೆಗಳನ್ನು ಬಿಜೆಪಿ ಘೋಷಿಸಿತು. ವಿಶೇಷ ಏನೆಂದರೆ ಕೇಂದ್ರದ 52 ಮಂತ್ರಿಗಳನ್ನು ಬಿಜೆಪಿ ಪ್ರಚಾರಕ್ಕೆ ಬಳಸಿಕೊಂಡಿರುವುದೇ ಶೂನ್ಯ ಸಾಧನೆಯಲ್ಲಿದ್ದ ಬಿಜೆಪಿ ಇಂದು ಇದೇ ತ್ರಿಪುರಾದಲ್ಲಿ ಭರ್ಜರಿ ಜಯವನ್ನು ಸಾಧಿಸಲು ಕಾರಣವಾಗಿದೆ.

ಅಭಿವೃದ್ಧಿ ಮಂತ್ರವನ್ನು ಜಪಿಸಿದ ಬಿಜೆಪಿ ಹುಸಿ ಮಾಡದೆ ತ್ರಿಪುರಾದ ಜನತೆಗೆ ನೀಡಿತು ಬಿಗ್ ಗಿಫ್ಟ್!!!

ತ್ರಿಪುರಾದ ನೂತನ ಬಿಜೆಪಿ ಸರ್ಕಾರವು ಅಭಿವೃದ್ಧಿಯ ಹಿತದೃಷ್ಟಿಯಿಂದಾಗಿ ಕೇಂದ್ರದಿಂದ 2,587 ಕೋಟಿ ರೂಪಾಯಿಯನ್ನು ಅನುದಾನ ಪಡೆದು ಕೊಳ್ಳಲಿರುವುದೇ ಸಂತಸದ ವಿಚಾರವಾಗಿದೆ. ವಸತಿ ಯೋಜನೆ, ಶಿಕ್ಷಣ, ಗ್ರಾಮೀಣ ಉದ್ಯೋಗಗಳಿಗಾಗಿ ಕೇಂದ್ರದಿಂದ ಬರುವ ಅನುದಾನವನ್ನು ಬಳಸಿಕೊಳ್ಳಲಾಗುತ್ತದೆ ಎಂದು ಅಲ್ಲಿನ ಸಿಎಂ ಬಿಪ್ಲಬ್ ಕುಮಾರ್ ದೇಬ್ ಹೇಳಿದ್ದಾರೆ

ವಿಧಾನಸಭಾ ಚುನಾವಣೆಗೂ ಮುನ್ನ ಕೇಂದ್ರದ ವತಿಯಿಂದ ಅನುದಾನವನ್ನು ದೊರಕಿಸಿಕೊಡುವುದಾಗಿ ಬಿಜೆಪಿ ತ್ರಿಪುರಾ ಜನತೆಗೆ ಭರವಸೆಯನ್ನು ನೀಡಿರುವ ಕಾರಣದಿಂದಾಗಿ ಇದೀಗ ಅಭಿವೃದ್ದಿ ಕಾರ್ಯಗಳಿಗಾಗಿ ಅನುದಾನ ಬಿಡುಗಡೆ ಮಾಡುತ್ತಿದೆ. ಅಷ್ಟೇ ಅಲ್ಲದೇ 25ವರ್ಷ ಆಳಿದ್ದ ತ್ರಿಪುರಾದ ಕಮ್ಯೂನಿಸ್ಟ್ ಸರ್ಕಾರವು ಅನುದಾನ ಬಳಕೆ ಸರ್ಟಿಫಿಕೇಟ್ ಅನ್ನು ಹಿಂದಿನ ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ ಮಾಡದ ಹಿನ್ನಲೆಯಲ್ಲಿ ಎನ್ ಡಿ ಎ ಸರ್ಕಾರ ಅದಕ್ಕೆ ಅನುದಾನ ನೀಡುವುದನ್ನು ನಿಲ್ಲಿಸಿತ್ತು ಎಂದು ಬಿಪ್ಲಬ್ ಹೇಳಿದ್ದಾರೆ.

ಕಳೆದ 25 ವರ್ಷಗಳ ಕಾಲ ಆಡಳಿತ ನಡೆಸುತ್ತಿದ್ದ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ನೇತೃತ್ವದ ಎಡಪಕ್ಷ ಈ ಬಾರಿ ಮಖಾಡೆ ಮಲಗಿದ್ದು, ಹೀನಾಯ
ಸೋಲನುಭವಿಸಿದ್ದಂತೂ ಅಕ್ಷರಶಃ ನಿಜ. ಈವರೆಗೆ ಒಂದೇ ಒಂದು ಸೀಟನ್ನೂ ಗೆಲ್ಲದ ಭಾರತೀಯ ಜನತಾ ಪಕ್ಷ ಈ ಬಾರಿ ಭರ್ಜರಿ ಜಯವನ್ನು ಗಳಿಸುವುದರೊಂದಿಗೆ ವಿಜಯ ಪತಾಕೆಯನ್ನು ಹಾರಿಸಿದೆ!! ಈ ದೃಷ್ಟಿಯಿಂದ ನರೇಂದ್ರ ಮೋದಿ ಸರ್ಕಾರವು ಇಷ್ಟು ವರ್ಷಗಳ ಕಾಲ ಅಭಿವೃದ್ಧಿ ಕಾಣದೇ ಇರುವ ವಲಯಗಳು ಮೋದಿ ಸರ್ಕಾರದ ಕಾರ್ಯವೈಖರಿಯಿಂದಾಗಿ ಮತ್ತೆ ಅಭಿವೃದ್ಧಿಯತ್ತ ಮುನ್ನಡೆಯಲು ಸಿದ್ಧವಾಗಿದೆ.

Source :http://news13.in/archives/99374

– ಅಲೋಖಾ

Tags

Related Articles

Close