ಪ್ರಚಲಿತ

ಮೋದಿ ಸರಕಾರದ ಸಾಧನೆಗೆ ಮತ್ತೊಂದು ಗರಿ!! ಕೇಂದ್ರ ಸರಕಾರದಿಂದ ಒಂದೇ ತಿಂಗಳಿನಲ್ಲಿ 6.8 ಲಕ್ಷ ಉದ್ಯೋಗ ಸೃಷ್ಟಿ!!

ಉದ್ಯೋಗ ಸೃಷ್ಟಿಗೆ ಕೇಂದ್ರ ಸರಕಾರ ಯಾವುದೇ ರೀತಿಯ ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬ ಪ್ರತಿಪಕ್ಷಗಳ ಟೀಕಾಪ್ರಹಾರಕ್ಕೆ ಅಂಕಿ- ಅಂಶಗಳ ಮೂಲಕವೇ ತಿರುಗೇಟು ನೀಡಲು ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿರುವ ವಿಚಾರ ಗೊತ್ತೇ ಇದೆ!! ಆದರೆ ಇದೀಗ ಉದ್ಯೋಗ ಕ್ಷೇತ್ರದಲ್ಲಿ ಮಹತ್ವದ ಸುಧಾರಣೆಯನ್ನು ತೋರಿಸುತ್ತಿದೆ ಎನ್ನುವುದನ್ನು ಸೆಂಟ್ರಲ್ ಸ್ಟ್ಯಾಟಿಸ್ಟಿಕ್ಸ್ ಆಫೀಸ್ (ಸಿ ಎಸ್ ಒ) ವರದಿ ಬಿಡುಗಡೆ ಮಾಡಿದ್ದು, ಈ ಮೂಲಕ ನರೇಂದ್ರ ಮೋದಿಯವರ ರಾಜತಾಂತ್ರಿಕತೆಯ ಯಶಸ್ಸು ದೇಶದಲ್ಲಿ ಉದ್ಯೋಗ ಸೃಷ್ಟಿಯ ಮೇಲೆ ಯಾವ ರೀತಿ ಪರಿಣಾಮ ಬೀರಿದೆ ಎನ್ನುವುದು ತಿಳಿದು ಬಂದಿದೆ!!

ಸಣ್ಣ ಸಣ್ಣ ವಿಚಾರಗಳಲ್ಲೂ ಹುಳುಕನ್ನು ತೆಗೆದು ಅದನ್ನೇ ಬೊಬ್ಬಿಡುವ ಕಾಂಗ್ರೆಸ್ಸಿಗರಿಗೆ ಇದೀಗ ನರೇಂದ್ರ ಮೋದಿ ಸರಕಾರದ ಮತ್ತೊಂದು ಸಾಧನೆ ವಿರೋಧಿಗಳಿಗೆ ಸಂಕಟವನ್ನು ಉಂಟು ಮಾಡಲಿರುವುದಂತೂ ಖಂಡಿತಾ!! ಹೌದು… ನರೇಂದ್ರ ಮೋದಿಯವರು ದೇಶದಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಅದೇನೂ ಕ್ರಮ ಕೈಗೊಂಡಿಲ್ಲ ಎಂದು ಬೊಬ್ಬಿರುವವರಿಗೆ ಮೋದಿ ಸರ್ಕಾರದ ಸಾಧನೆ ಇದೀಗ ಗರ ಬಡಿಯುವಂತೆ ಮಾಡಿದೆ!!

ಈಗಾಗಲೇ 2018ರ ಬಜೆಟ್ ನ ಮುಖ್ಯ ಗುರಿಗಳಲ್ಲಿ ಉದ್ಯೋಗ ಸೃಷ್ಟಿಯ ಬಗ್ಗೆ ಹೆಚ್ಚು ಒತ್ತು ನೀಡಲಿದ್ದು, ಮೂಲಭೂತಸೌಕರ್ಯ ಅಭಿವೃದ್ಧಿಗಳಿಗಾಗಿ ಶೇ. 50ರಷ್ಟು ಹೆಚ್ಚು ಅನುದಾನ ನೀಡಿರುವ ಬಗ್ಗೆ ತಿಳಿದೇ ಇದೆ!! ಅಷ್ಟೇ ಅಲ್ಲದೇ, ಮೂಲಭೂತಸೌಕರ್ಯ ಅಭಿವೃದ್ಧಿಗಳಿಗೆ ಹೆಚ್ಚಿನ ಬಜೆಟ್ ಮೀಸಲಿರಿಸಿದರೆ ಉದ್ಯೋಗ ಸೃಷ್ಟಿ ಹಾಗು ಅಭಿವೃದ್ಧಿ ಉದ್ದೇಶಗಳು ಏಕಕಾಲದಲ್ಲಿ ಈಡೇರಲಿವೆ ಎಂಬುದು ಸರಕಾರದ ಲೆಕ್ಕಾಚಾರವಾಗಿದೆ.

ಹಾಗಾಗಿ ಇತ್ತೀಚಿನ ದಿನಗಳಲ್ಲಿ ಭಾರತ ಉದ್ಯೋಗ ಕ್ಷೇತ್ರದಲ್ಲಿ ಮಹತ್ವದ ಸುಧಾರಣೆಯನ್ನು ತೋರಿಸುತ್ತಿದೆ ಎನ್ನುವುದನ್ನು ಸೆಂಟ್ರಲ್ ಸ್ಟ್ಯಾಟಿಸ್ಟಿಕ್ಸ್ ಆಫೀಸ್ (ಸಿ ಎಸ್ ಒ) ತನ್ನ ವರದಿಯಲ್ಲಿ ಹೇಳಿದೆ!! ಕಳೆದ 8 ತಿಂಗಳಲ್ಲಿ ದೇಶದಲ್ಲಿ 41 ಲಕ್ಷಕ್ಕೂ ಅಧಿಕ ಉದ್ಯೋಗಗಳು ಸೃಷ್ಟಿಯಾಗಿದೆ ಎಂದು ಸೆಂಟ್ರಲ್ ಸ್ಟ್ಯಾಟಿಸ್ಟಿಕ್ಸ್ ಆಫೀಸ್ (ಸಿ ಎಸ್ ಒ) ವರದಿಯಲ್ಲಿ ತಿಳಿಸಿರುವ ಮೂಲಕ ಮೋದಿ ಸರಕಾರವು ಮತ್ತೊಂದು ಸಾಧನೆಯ ಗರಿಯನ್ನು ತನ್ನ ಮುಡಿಗೇರಿಸಿಕೊಂಡಿದೆ!!

Related image

ಸೆಂಟ್ರಲ್ ಸ್ಟ್ಯಾಟಿಸ್ಟಿಕ್ಸ್ ಆಫೀಸ್ (ಸಿ ಎಸ್ ಒ) 2017ರ ಸೆಪ್ಟಂಬರ್ ಬಳಿಕದ ಔಪಚಾರಿಕ ವಲಯದಲ್ಲಿನ 8 ತಿಂಗಳ ಉದ್ಯೋಗ ಸಂಬಂಧಿ ಅಂಕಿ ಅಂಶಗಳನ್ನು ಬಿಡುಗಡೆಗೊಳಿಸಿದೆ. ಈ ವರ್ಷದ ಎಪ್ರಿಲ್ ತಿಂಗಲೊಂದರಲ್ಲೇ ಅತೀ ಹೆಚ್ಚು ಅಂದರೆ ಸುಮಾರು 6.8 ಲಕ್ಷ ಉದ್ಯೋಗಿಗಳು ಸೃಷ್ಟಿಯಾಗಿದ್ದು, ಎಂಪ್ಲಾಯಿಸ್ ಪ್ರೊವಿಡೆಂಟ್ ಫಂಡ್ ಸಂಸ್ಥೆ ಯಲ್ಲಿ ಇದು ದಾಖಲೆಗೊಂಡಿದೆ!! ಅಷ್ಟೇ ಅಲ್ಲದೇ, 2017ರ ಸೆಪ್ಟೆಂಬರ್ ನಿಂದ 2018ರ ಎಪ್ರಿಲ್ ವರೆಗೆ 5 ಲಕ್ಷ 12 ಸಾವಿರ ಜನರು ರಾಷ್ಟ್ರೀಯ ಪಿಂಚಣಿಯ ಯೋಜನೆಯ ಗ್ರಾಹಕರಾಗಿದ್ದಾರೆ ಎಂದು ಸಿ ಎಸ್ ಒ ಹೇಳಿದೆ.

ಕೇಂದ್ರ ಅಂಕಿ ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಅಂಗವಾಗಿ ಕಾರ್ಯನಿರ್ವಹಿಸುತ್ತಿರುವ ಸಿ ಎಸ್ ಒ ನೀಡಿರುವ ವರದಿಯು ಪ್ರಧಾನಿ ನರೇಂದ್ರ ಮೋದಿ ಆಡಳಿತಕ್ಕೆ ಬಂದ ನಂತರ ಉದ್ಯೋಗ ಸೃಷ್ಟಿಯಲ್ಲಿ ವಿಫಲರಾಗಿದ್ದಾರೆ ಎಂದು ದೇಶಾದ್ಯಂತ ಸುಳ್ಳು ಸುದ್ಧಿ ಹಬ್ಬಿಸುವವರಿಗೆ ಗರ ಬಡಿಯುವಂತೆ ಮಾಡಿದೆ!! ಈಗಾಗಲೇ ಭಾರತದಲ್ಲಿ ಐಸಿಇಟಿ ವಲಯ ಉತ್ಕೃಷ್ಟ ಉತ್ಪನ್ನ ಮತ್ತು ಸೇವೆಯೊಂದಿಗೆ ಮುನ್ನಡೆಯುತ್ತಿದೆಯಲ್ಲದೇ ಅನನ್ಯ ಸಂಶೋಧನೆಯತ್ತ ದೃಷ್ಟಿ ಹಾಯಿಸುತ್ತಿರುವುದೇ ಹೆಮ್ಮೆಯ ವಿಚಾರವಾಗಿದೆ. ಈಗಿನ ಹೊಸ ನೀತಿ ಮತ್ತು ಕೇಂದ್ರ ಸರಕಾರದ ಮೇಕ್ ಇನ್ ಇಂಡಿಯಾ ಕನಸುಗಳು ಸೇರಿದಂತೆ ಮುಂದಿನ ದಿನಗಳಲ್ಲಿ ಭಾರತ ಜಾಗತಿಕ ನಾಯಕನಾಗುವ ಕನಸಿಗೆ ಈ ವರದಿ ಸೂಕ್ತ ಉದಾಹರಣೆಯಾಗಿ ನಿಂತಿದೆ!!

ಒಟ್ಟಿನಲ್ಲಿ, ಪ್ರಧಾನಿ ನರೇಂದ್ರ ಮೋದಿ ಸರಕಾರವು ಉದ್ಯೋಗಗಳನ್ನು ಸೃಷ್ಟಿಸುವ ಬಗ್ಗೆ ಭರವಸೆಯನ್ನು ನೀಡಿತ್ತಾದರೂ ಆ ಭರವಸೆಗಳನ್ನು ಕೇಂದ್ರ ಈಡೇರಿಸಿಲ್ಲ ಅನ್ನೋ ಟೀಕೆಗಳ ಸುರಿಮಳೆಯನ್ನು ಹರಿಸುವವರಿಗೆ ಎಂಪ್ಲಾಯಿಸ್ ಪ್ರೊವಿಡೆಂಟ್ ಫಂಡ್ ಸಂಸ್ಥೆಯು ತನ್ನ ವರದಿಯ ಮೂಲಕ ದಿಟ್ಟ ಉತ್ತರವನ್ನು ನೀಡಿದೆ!!

ಮೂಲ: http://news13.in/archives/105015

– ಅಲೋಖಾ

Tags

Related Articles

Close