ಪ್ರಚಲಿತ

ಪ್ರಶ್ನೆ ಪತ್ರಿಕೆಯ ಸೋರಿಕೆಯ ವಿಚಾರವಾಗಿ ಪ್ರಶ್ನೆಗಳ ಮೇಲೆ ಪ್ರಶ್ನೆ ಎಸೆದವರಿಗೆ ಸರಿಯಾದ ಉತ್ತರವನ್ನೇ ನೀಡಲು ಹೊರಟಿದ್ದಾರೆ ಮೋದಿ!!

ದೇಶದಲ್ಲಿ ಭ್ರಷ್ಟಾಚಾರ ನಿರ್ಮೂಲನೆಗೆ ಪ್ರಧಾನಿ ನರೇಂದ್ರ ಮೋದಿಯವರು ಕೈಗೊಂಡ ದಿಟ್ಟ ನಿರ್ಧಾರವು ಹೊಸ ಐತಿಹಾಸಿಕ ದಾಖಲೆಯನ್ನು ಸೃಷ್ಟಿ ಮಾಡುವಲ್ಲಿ ಕಾರಣವಾಯಿತು ಎನ್ನುವ ವಿಚಾರ ಗೊತ್ತೇ ಇದೆ!! ಆದರೆ ದೇಶದ ಯಾವುದೇ ಮೂಲೆಯಲ್ಲಿ ಏನೇ ಅವಾಂತರಗಳು ಸಂಭವಿಸದರೂ ಅದಕ್ಕೆ ನರೇಂದ್ರ ಮೋದಿಯವರನ್ನೇ ಹೊಣೆ ಮಾಡುವ ಬುದ್ದಿಜೀವಿಗಳು, ಇತ್ತೀಚೆಗೆ ದ್ವಿತೀಯ ಪಿಯುಸಿಯ ಅರ್ಥಶಾಸ್ತ್ರ ಹಾಗೂ ಹತ್ತನೇ ತರಗತಿಯ ಗಣಿತ ಪ್ರಶ್ನೆಪತ್ರಿಕೆಗಳು ಅಚಾತುರ್ಯವಾಗಿ ಬಹಿರಂಗವಾದಾಗಲೂ ಇದಕ್ಕೆಲ್ಲ ಪ್ರಧಾನಿ ಮೋದಿ ಅವರೇ ಕಾರಣ ಎಂದೆಲ್ಲಾ ಬೊಬ್ಬಿಡುತ್ತಿದ್ದವರಿಗೆ ಇದೀಗ ತಕ್ಕ ಪ್ರತ್ಯುತ್ತರ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ!!

ನರೇಂದ್ರ ಮೋದಿಯವರ ರಾಜತಾಂತ್ರಿಕ ನಡೆಯೇ ವಿಪಕ್ಷಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ದೇಶದಲ್ಲಿ ಯಾವುದಾದರೂ ಅವಾಂತರಗಳು ನಡೆದರೆ ಅದಕ್ಕೆ ನರೇಂದ್ರ ಮೋದಿಯನ್ನು ಹೊಣೆಯನ್ನಾಗಿಸಿ, ಅದನ್ನೇ ಚುನಾವಣೆಯ ಅಸ್ತ್ರವನ್ನಾಗಿ ಮಾಡುತ್ತಿರುವ ಬುದ್ದಿಜೀವಿಗಳಿಗೆ ಅದೇನೂ ಹೇಳಬೇಕೋ ನಾ ಕಾಣೆ!! ಈಗಾಗಲೇ ಇಡೀ ವಿಶ್ವವೇ ನರೇಂದ್ರ ಮೋದಿಯ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ಸೂಚಿಸುತ್ತಿದ್ದರೆ ಇತ್ತ ಬುದ್ದಿಜೀವಿಗಳೆನಿಸಿದವರು ವಿನಾ ಕಾರಣ ಮೋದಿಯನ್ನು ಜರೆಯುತ್ತಿದ್ದಾರಲ್ಲದೇ, ದೇಶದಲ್ಲಿ ಯಾವುದೇ ಅತಂತ್ರಗಳು ನಡೆದರೂ ಅದರಲ್ಲಿ ಮೋದಿ ಕೈವಾಡವೇ ಅಡಗಿದೆ ಎಂದು ಬೊಬ್ಬಿಡುತ್ತಿದ್ದಾರೆ!!

ಅಂತೆಯೇ ಇತ್ತೀಚೆಗೆ ದ್ವಿತೀಯ ಪಿಯುಸಿಯ ಅರ್ಥಶಾಸ್ತ್ರ ಹಾಗೂ ಹತ್ತನೇ ತರಗತಿಯ ಗಣಿತ ಪ್ರಶ್ನೆಪತ್ರಿಕೆಗಳು ಅಚಾತುರ್ಯವಾಗಿ ಬಹಿರಂಗವಾದಾಗಲೂ ಇದಕ್ಕೆಲ್ಲ ಪ್ರಧಾನಿ ಮೋದಿ ಅವರೇ ಕಾರಣ, ಅವರೇ ನಿಂತು ಪ್ರಶ್ನೆಪತ್ರಿಕೆ ಬಹಿರಂಗ ಮಾಡಿಸಿದರು ಎಂಬಂತೆ ಬೊಬ್ಬೆ ಹಾಕಲಾಯಿತು. ಆದರೂ ಈ ಬಗ್ಗೆ ತುಟಿಕ್ ಪಿಟಿಕ್ ಎನ್ನದ ಪ್ರಧಾನಿ ಮೋದಿ ಇದೀಗ ಕೇಂದ್ರ ಪ್ರಾಯೋಗಿಕ ಅಂಶಗಳ ಜಾರಿಯ ಮೂಲಕ ಟೀಕಿಸಿದವರಿಗೆ ಪ್ರತ್ಯುತ್ತರ ನೀಡಲು ಮುಂದಾಗಿದ್ದಾರೆ. ಅಷ್ಟೇ ಅಲ್ಲದೇ ಇನ್ನು ಮುಂದೆ ಪ್ರಶ್ನೆಪತ್ರಿಕೆ ಬಹಿರಂಗವಾಗದಿರಲು ಮಾಸ್ಟರ್ ಪ್ಲಾನ್ ಮಾಡಲು ನರೇದ್ರ ಮೋದಿ ಸರ್ಕಾರ ಮುಂದಾಗಿದೆ.

ಇತ್ತೀಚೆಗಷ್ಟೇ ಎಐಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಣದೀಪ್ ಸುರ್ಜೇವಾಲ ನರೇಂದ್ರ ಮೋದಿಯವರನ್ನು ಟೀಕಿಸುವ ಬರದಲ್ಲಿ, “ಬ್ಯಾಂಕಿಂಗ್ ಕ್ಷೇತ್ರಕ್ಕೆ ಪಾರ್ಶ್ವವಾಯು ಬಡಿಸಿದ ಹೆಗ್ಗಳಿಕೆ ಮೋದಿ ಸರ್ಕಾರಕ್ಕೆ ಸಲ್ಲಬೇಕು. ಅಷ್ಟೆ ಅಲ್ಲದೇ 11 ಬ್ಯಾಂಕ್‍ಗಳ ನಾನಾ ಹಗರಣದಿಂದ 61 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ. ಅದರಲ್ಲಿ ನೀರವ್ ಮೋದಿ ಚೋಟಾ ಮೋದಿ ನಂಬರ್- 2 ಆಗಿದ್ದಾನೆ. ಈತನ ವಿರುದ್ಧ ಕ್ರಮ ಕೈಗೊಳ್ಳಲಾಗಿಲ್ಲ,”ಎಂದು ಹೇಳಿದ್ದರು. ಅಷ್ಟೇ ಅಲ್ಲದೇ, ”ಸಿ ಬಿ ಎಸ್ ಇ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಗೆ ಪ್ರಧಾನಿ ನರೇಂದ್ರ ಮೋದಿ, ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರೇ ಕಾರಣ. ಪ್ರಶ್ನೆ ಪತ್ರಿಕೆ ಸೋರಿಕೆಯಾದದ್ದರಿಂದ ಮೋದಿ ಸರ್ಕಾರವೂ ಸೋರಿಕೆ ಸರ್ಕಾರವಾಗಿದೆ,” ಎಂದು ತರಾಟೆಗೆ ತೆಗೆದುಕೊಂಡಿದ್ದರು!!

ಹೀಗೆ ಪ್ರತಿ ಬಾರಿಯೂ ದೇಶದ ಯಾವುದೇ ಮೂಲೆಯಲ್ಲಿ ಯಾವುದೇ ಅವಾಂತರವಾಗಲಿ, ಅದಕ್ಕೆಲ್ಲ ಪ್ರಧಾನಿ ನರೇಂದ್ರ ಮೋದಿ ಅವರೇ ಕಾರಣ ಎಂಬಂತೆ ಬಿಂಬಿಸಲಾಗುತ್ತದೆ. ಕರ್ನಾಟಕದಲ್ಲಿ ಯಾರ ಹತ್ಯೆಯಾದರೂ, ಯಾವನೋ ಉದ್ಯಮಿ ಬ್ಯಾಂಕುಗಳಿಗೆ ಮೋಸ ಮಾಡಿದರೂ ಅದಕ್ಕೆಲ್ಲ ಕಾರಣ ಮೋದಿಯತ್ತಲೇ ಬೆರಳು ತೋರಿಸುತ್ತಾರೆ. ಹಾಗಾಗಿ ಈಗ ಪ್ರಶ್ನೆ ಪತ್ರಿಕೆಗಳ ಸೋರಿಕೆಯ ವಿಚಾರವಾಗಿ ಕೇಂದ್ರ ಪ್ರಾಯೋಗಿಕ ಅಂಶಗಳ ಜಾರಿ ಮೂಲಕ ಟೀಕಿಸಿದವರಿಗೆ ಪ್ರತ್ಯುತ್ತರ ನೀಡಲು ಮುಂದಾಗಿದ್ದು, ಇನ್ನು ಮುಂದೆ ಪ್ರಶ್ನೆಪತ್ರಿಕೆ ಬಹಿರಂಗವಾಗದಿರಲು ಮಾಸ್ಟರ್ ಪ್ಲಾನ್ ಮಾಡಿದೆ.

ಹೌದು, ಪ್ರಶ್ನೆಪತ್ರಿಕೆ ಬಹಿರಂಗದ ಹಿಂದಿನ ಕಾಣದ ಕೈಗಳನ್ನು ಭೇದಿಸುವುದು ಹಾಗೂ ಮುಂದೆ ಪ್ರಶ್ನೆಪತ್ರಿಕೆ ಬಹಿರಂಗವಾಗದಂತೆ ತಡೆಯಲು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಸರ್ವ ಅಧಿಕಾರಗಳುಳ್ಳ ಸಮಿತಿಯೊಂದನ್ನು ರಚಿಸಿದೆ!! ಹಾಗಾಗಿ ಇನ್ನು ಮುಂದೆ ವಿದ್ಯಾರ್ಥಿಗಳು ನಿರಾತಂಕವಾಗಿ ಪರೀಕ್ಷೆ ಬರೆಯಲು ಅನುಕೂಲವಾಗುವ ಹಾಗೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ.

ಇದಕ್ಕಾಗಿ ಮಾನವ ಸಂಪನ್ಮೂಲ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆ ನಿವೃತ್ತ ಕಾರ್ಯದರ್ಶಿ ವಿನಯ್ ಶೀಲ್ ಅವರ ನೇತೃತ್ವದಲ್ಲಿ ಏಳು ಸದಸ್ಯರ ಸಮಿತಿಯೊಂದು ರಚಿಸಲಾಗಿದೆ. ಈ ತಂಡ ಇತ್ತೀಚೆಗೆ ಪ್ರಶ್ನೆಪತ್ರಿಕೆ ಹೇಗೆ ಬಹಿರಂಗವಾದವು? ಯಾವ ರೀತಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಯಿತು? ಇದರಲ್ಲಿ ಯಾರ ಕೈವಾಡವಿದೆ, ಯಾರ ವೈಫಲ್ಯವಿದೆ ಎಂಬುದು ಸೇರಿ ಮುಂದೆ ಯಾವ ಕ್ರಮ ಕೈಗೊಳ್ಳಬೇಕು ಎಂಬುದರ ಕುರಿತು ವರದಿ ತಯಾರಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಒಟ್ಟಿನಲ್ಲಿ ದೇಶದ ಜನತೆಯ ಸುಭಿಕ್ಷೆಗಾಗಿ ಶ್ರಮಿಸುತ್ತಲೇ ಇರುವ ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರ ಸ್ವೀಕರಿಸಿದ ನಾಲ್ಕೇ ನಾಲ್ಕು ವರ್ಷಗಳಲ್ಲಿ ಮಾಡಿರುವಂತಹ ಸಾಧನೆಗಳಿಂದಾಗಿ ಇಂದು ಇಡೀ ವಿಶ್ವವೇ ನರೇಂದ್ರ ಮೋದಿಯನ್ನು ಹಾಡಿ ಹೊಗಳುತ್ತಿರುವುದೇ ಇದಕ್ಕೆ ಜ್ವಲಂತ ಸಾಕ್ಷಿಯಾಗಿದೆ!! ಅಷ್ಟೇ ಯಾಕೆ, ಕಪ್ಪುಕುಳಗಳನ್ನು ಮಟ್ಟಹಾಕಲು ನೋಟ್‍ಬ್ಯಾನ್, ಜಿಎಸ್’ಟಿಯಂತಹ ಕ್ರಮಗಳನ್ನು ಜಾರಿಗೊಳಿಸಿರುವ ಮೋದಿಯವರ ನಿರ್ಧಾರವನ್ನು ವಿಶ್ವದ ಅದೆಷ್ಟೋ ಆರ್ಥಿಕ ತತ್ಞರು ಇದನ್ನು ” ಎದೆಗಾರಿಕೆಯ ನಿರ್ಧಾರ” ಎಂದು ಬಣ್ಣಿಸಿದ್ದರು!!

ಹೀಗಿರಬೇಕಾದರೆ ನರೇಂದ್ರ ಮೋದಿಯವರು ದೇಶದ ಜನತೆಗೆ ಅನ್ಯಾಯ ಎಸಗಲು ಸಾಧ್ಯವೇ?? ಅದು ಸಾಧ್ಯವೇ ಇಲ್ಲ!! ಯಾಕೆಂದರೆ ನರೇಂದ್ರ ಮೋದಿಯವರು ದೇಶವನ್ನು ಲೂಟಿ ಮಾಡಿಲ್ಲ, ಹಗರಣಗಳನ್ನು ಮಾಡಿಲ್ಲ!! ಬದಲಾಗಿ ಭ್ರಷ್ಟಾಚಾರ ರಹಿತ ಸರ್ಕಾರ ನಡೆಸುವುದರ ಜತೆಗೆ ಭ್ರಷ್ಟಾಚಾರ ಮುಕ್ತ ಭಾರತವನ್ನಾಗಿಸಲು ಪಣತೊಟ್ಟದಂತಹ ಒರ್ವ ಪ್ರಭಾವಿ ನಾಯಕ. ಅಷ್ಟೇ ಅಲ್ಲದೇ, ಕಿಂಚಿತ್ತೂ ಅಸ್ತಿ ಅಂತಸ್ಥನ್ನು ಮಾಡಿಕೊಳ್ಳದೇ ಬರೀ ದೇಶಪ್ರೇಮವನ್ನೇ ಮೈಗೂಡಿಸಿಕೊಂಡಿರುವಂತಹ ಅಪ್ಪಟ ಭಾರತೀಯನಿಗೆ, ಹಿಂದೂ ಧರ್ಮ ಪರಿಪಾಲಕನಿಗೆ ಮೋಸದಾಟ ಗೊತ್ತಿರಲು ಅದು ಹೇಗೆ ಸಾಧ್ಯ…. ನೀವೇ ಹೇಳಿ!

ಮೂಲ:https://tulunadunews.com/tnn11961

– ಅಲೋಖಾ

Tags

Related Articles

Close