ಪ್ರಚಲಿತ

ಹಿಂದೂ ಕಾರ್ಯಕರ್ತರ ಹತ್ಯೆಯ ವಿರುದ್ಧ ಸಿಡಿದೆದ್ದ ಮೋದಿ..! ಕೃಷ್ಣ ನಗರಿಯಲ್ಲಿ ಅಬ್ಬರಿಸಿದ ನಮೋ..!

ರಾಜ್ಯ ಚುನಾವಣಾ ಅಖಾಡಕ್ಕೆ ಇಳಿದ ಪ್ರಧಾನಿ ಮೋದಿಯವರು ಇಂದಿನಿಂದ ಸರಣಿ ಸಮಾವೇಶಗಳಲ್ಲಿ ಭಾಗವಿಹಿಸುವುದರಿಂದ ರಾಜ್ಯದಲ್ಲಿ ಹೊಸ ಚಿತ್ರಣವನ್ನೇ ಬರೆಯಲು ಸಜ್ಜಾಗಿದ್ದಾರೆ. ಈಗಾಗಲೇ ದೇಶಾದ್ಯಂತ ತನ್ನ ಅಸ್ತಿತ್ವ ಕಳೆದುಕೊಂಡಿರುವ ಕಾಂಗ್ರೆಸ್ ಗೆ ಕರ್ನಾಟಕ ಒಂದೇ ನೆಲೆ ಕಂಡುಕೊಳ್ಳಲು ಇರುವ ರಾಜ್ಯ. ಆದರೆ ಮೋದಿ – ಷಾ ಹದ್ದಿನ ಕಣ್ಣು ಕರ್ನಾಟಕದ ಮೇಲೂ ಬಿದ್ದಿರುವುದರಿಂದ ಕರ್ನಾಟಕವೂ ಬಿಜೆಪಿ ತೆಕ್ಕೆಗೆ ಸೇರಿಕೊಳ್ಳುವುದು ಖಚಿತ ಎಂಬಂತಾಗಿದೆ. ಯಾಕೆಂದರೆ ಇಂದು ಕರ್ನಾಟಕಕ್ಕೆ ಬಂದಿಳಿದ ಮೋದಿ ಈಗಾಗಲೇ ಮೈಸೂರಿನ ಚಾಮರಾಜನಗರ ಜಿಲ್ಲೆಯಲ್ಲಿ ಒಂದು ಸಮಾವೇಶ ಮುಗಿಸಿಕೊಂಡರೆ , ಇತ್ತ ಕೃಷ್ಣ ನಗರಿಯಲ್ಲೂ ರಣಕಹಳೆ ಮೊಳಗಿಸಿದ್ದಾರೆ..!

ಉಡುಪಿಯಲ್ಲಿ ನಮೋ ಸಂಚಾರ..!

ಇದೀಗ ಮೈಸೂರಿನಿಂದ ಉಡುಪಿ ಎಂ.ಜಿ.ಎಂ ಮೈದಾನಕ್ಕೆ ಹೆಲಿಕಾಪ್ಟರ್ ನಲ್ಲಿ ಬಂದಿಳಿದ ಪ್ರಧಾನಿ ಮೋದಿ ಅವರನ್ನು ವೇದಿಕೆಗೆ ಬರಮಾಡಿಕೊಂಡ ಬಿಜೆಪಿ ನಾಯಕರು, ಕೇಸರಿ ಶಾಲು ಹೊದಿಸಿ , ಹಾರ ಹಾಕಿ ಸ್ವಾಗತಿಸಿದರು‌. ಗಂಡುಮೆಟ್ಟಿದ ಕಲೆಯಾದ ಯಕ್ಷಗಾನ ಕಿರೀಟವನ್ನು ತೊಡಿಸಿ ವೇದಿಕೆಯಲ್ಲಿ ಗೌರವಿಸಲಾಯಿತು. ಇಂದಿನಿಂದ ಸತತ ಸಮಾವೇಶಗಳನ್ನು ಹಮ್ಮಿಕೊಂಡಿರುವುದರಿಂದ ಮೋದಿ ಇಡೀ ಕರ್ನಾಟಕದಲ್ಲಿ ಸುನಾಮಿ ಎಬ್ಬಿಸಲಿದ್ದಾರೆ.!

ತುಳುವಿನಲ್ಲೇ ಭಾಷಣ ಆರಂಭಿಸಿದ ನಮೋ..!

ನರೇಂದ್ರ ಮೋದಿ ಎಲ್ಲೇ ಹೋದರೂ ಅಲ್ಲಿನ ಪ್ರಾದೇಶಿಕ ಸಂಪ್ರದಾಯವನ್ನು ಗೌರವಿಸಿ, ಆಯಾ ಪ್ರದೇಶದ ಭಾಷೆಯಲ್ಲಿಯೇ ಮಾತು ಆರಂಭಿಸುತ್ತಾರೆ. ಅಂತೆಯೇ ಉಡುಪಿಯಲ್ಲಿ ತುಳುವಿನಲ್ಲಿ ಮಾತು ಆರಂಭಿಸಿದ ಮೋದಿ, ನೆರೆದಿದ್ದ ಎಲ್ಲಾ ಕಾರ್ಯಕರ್ತರಿಗೂ ತಲೆಬಾಗಿ ನಮಿಸುತ್ತೇನೆ ಎಂದು ಹೇಳುವ ಮೂಲಕ ಸೇರಿದಗದ ಲಕ್ಷ ಲಕ್ಷ ಜನರನ್ನು ಒಂದೇ ಮಾತಿನಲ್ಲಿ ಸಂಭ್ರಮದಲ್ಲಿ ತೇಲುವಂತೆ ಮಾಡಿಬಿಟ್ಟರು.

ಇದು ಪರಶುರಾಮನ ಸೃಷ್ಟಿಯ ನಾಡಿನಲ್ಲಿ ನಿಂತು ಮಾತನಾಡುತ್ತಿರುವುದಕ್ಕೆ ಬಹಳ ಹೆಮ್ಮೆ ಇದೆ. ನನಗೆ ನಿಮ್ಮ ಭಾಷೆ ಅರ್ಥ ಆಗುವುದಿಲ್ಲ, ಆದರೂ ಅಡ್ಡಿಯಿಲ್ಲ ಯಾಕೆಂದರೆ ನಿಮ್ಮೆಲ್ಲರ ಪ್ರೀತಿಗೆ ಭಾಷೆ ಅಡ್ಡಿಯಾಗುವುದಿಲ್ಲ ಎಂದ ಮೋದಿ ಸೇರಿದ್ದ ಜನರ ಸಂಭ್ರಮವನ್ನು ನೋಡಿ ಆನಂದಿಸಿದರು.

ಕೃಷ್ಣ ನಗರಿಯಲ್ಲಿ ಮೋದಿ ಅಬ್ಬರ..!

ಇಂದು ಉಡುಪಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿಯವರು, ಪರಮಾತ್ಮ ಶ್ರೀ ಕೃಷ್ಣನ ನಾಡಿದು. ಇಲ್ಲಿ ನಿಮ್ಮ ಮುಂದೆ ನಿಂತು ಮಾತನಾಡುವುದೇ ಒಂದು ರೀತಿಯ ಖುಷಿ ಎಂದು ಹೇಳುತ್ತಾ , ಉಡುಪಿ ಶ್ರೀ ಕೃಷ್ಣನಿಗೂ ನಮಿಸಿದರು. ಶ್ರೀ ಮಧ್ವಾಚಾರ್ಯರು ನೆಲೆಸಿದಂತಹ ಪುಣ್ಯ ಭೂಮಿ ಈ ಉಡುಪಿ. ಇಲ್ಲಿ ಇಂದು ನಿಮ್ಮ ಮುಂದೆ ನಾನಿದ್ದೇನೆ, ಇದಕ್ಕಿಂತ ಪುಣ್ಯ ನನಗೆ ಇನ್ನೇನಿದೆ ಎಂದು ಹೇಳುತ್ತಾ ಸೇರಿದ್ದ ಲಕ್ಷ ಲಕ್ಷ ಕಾರ್ಯಕರ್ತರತ್ತ ಒಮ್ಮೆಗೆ ಕೈ ಬೀಸಿದರು‌ . ಈ ಸಂದರ್ಭದಲ್ಲಿ ಸಭೆಯಲ್ಲಿ ಮೋದಿ, ಮೋದಿ, ಮೋದಿ ಎಂಬ ಘೋಷಣೆ ಮಾತ್ರ ಕೇಳಿಬರುತ್ತಿತ್ತು.

ರಾಜ್ಯದ ಜನತೆಯಿಂದಲೇ ಕಾಂಗ್ರೆಸ್ ಗೆ ಶಿಕ್ಷೆ..!

ರಾಜ್ಯ ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ಆಗಮಿಸಿರುವ ಮೋದಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಈಗಾಗಲೇ ನಡೆದ ಎಲ್ಲಾ ರಾಜ್ಯಗಳಲ್ಲೂ ಕಾಂಗ್ರೆಸ್ ಗೆ ಸೋಲು ಎದುರಾಗಿದೆ. ರಾಜ್ಯದಲ್ಲೂ ಕಾಂಗ್ರೆಸ್ ಗೆ ರಾಜ್ಯದ ಜನತೆಯೇ ಶಿಕ್ಷೆ ನೀಡಲಿದ್ದಾರೆ ಎಂದು ಆರ್ಭಟಿಸಿದ ಮೋದಿ, ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದು ಪುನರುಚ್ಚರಿಸಿದರು. ದೇಶ ಅಭಿವೃದ್ಧಿ ಹೊಂದಬೇಕಾದರೆ ಕಾಂಗ್ರೆಸ್ ಅವಶ್ಯಕತೆ ಇಲ್ಲ. ಕಾಂಗ್ರೆಸ್ ಗೆ ಲೂಟಿ ಹೊಡೆಯುವುದು ಮಾತ್ರ ತಿಳಿದಿದೆಯೇ ವಿನಃ , ಅಭಿವೃದ್ಧಿಯಲ್ಲ ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರ ಮೋದಿ , ಸೇರಿದ್ದ ಕಾರ್ಯಕರ್ತರಲ್ಲಿ ಕಾಂಗ್ರೆಸ್ ನ್ನು ರಾಜ್ಯದಿಂದ ಓಡಿಸಬೇಕು ಎಂದು ಮನವಿ ಮಾಡಿಕೊಂಡರು.!

ವ್ಯವಸ್ಥೆ ಕಡಿಮೆ-ಕಾರ್ಯಕರ್ತರು ಹೆಚ್ಚು..!

ಮೋದಿ ಬರುತ್ತಾರೆ ಎಂದರೆ ಸಾಕು ಅಲ್ಲಿ ಕಾರ್ಯಕರ್ತರ ಸಾಗರವೇ ಸೇರುತ್ತದೆ. ಅದೇ ರೀತಿ ಉಡುಪಿಯಲ್ಲೂ ಸೇರಿದ್ದ ಲಕ್ಷ ಲಕ್ಷ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಇಲ್ಲಿ ಸೇರಿರುವ ಜನರನ್ನು ಕಂಡರೆ ನಮ್ಮ ವ್ಯವಸ್ಥೆ ಕಡಿಮೆಯಾದಂತಿದೆ. ಯಾಕೆಂದರೆ ಈ ಮಟ್ಟದಲ್ಲಿ ಜನ ಸೇರುತ್ತಾರೆ ಎಂದರೆ ಅದಕ್ಕೆ ಬೇಕಾದ ವ್ಯವಸ್ಥೆಯನ್ನು ನಾವು ಮೊದಲೇ ಮಾಡಿಕೊಳ್ಳಬೇಕಲ್ಲವೇ ಎಂದು ವೇದಿಕೆಯಲ್ಲಿದ್ದ ಪಕ್ಷದ ಮುಖಂಡರತ್ತ ನೋಡಿ ಹೇಳಿದರು..!

ಹಿಂದೂ ಕಾರ್ಯಕರ್ತರ ಹತ್ಯೆಯ ವಿರುದ್ಧ ಮೋದಿ ಆಕ್ರೋಶ..!

ಸಿದ್ದರಾಮಯ್ಯನವರ ಆಡಳಿತದಲ್ಲಿ ಹಿಂದೂಗಳಿಗೆ ನೆಮ್ಮದಿಯೇ ಇಲ್ಲದಂತಾಗಿದೆ. ಕಳೆದ ಐದು ವರ್ಷಗಳಲ್ಲಿ ಇಪ್ಪತ್ತ ನಾಲ್ಕಕ್ಕೂ ಅಧಿಕ ಕಾರ್ಯಕರ್ತರ ಹತ್ಯೆ ನಡೆದಿದೆ. ಇವೆಲ್ಲವೂ ಸಿದ್ದರಾಮಯ್ಯನವರ ಕುಮ್ಮಕ್ಕಿನಿಂದಲೇ ನಡೆಯುತ್ತಿದೆ. ನಮ್ಮ ಕಾರ್ಯಕರ್ತರ ಸಾವಿಗೆ ನ್ಯಾಯ ಸಿಗಬೇಕಾದರೆ ಕಾಂಗ್ರೆಸ್ ತೊಲಗಲೇಬೇಕು. ಈ ಅವಕಾಶವನ್ನು ಯಾವುದೇ ಕಾರಣಕ್ಕೂ ಕೈ ಬಿಡಬೇಡಿ. ಪ್ರತಿಯೊಬ್ಬ ಹಿಂದೂ ಕಾರ್ಯಕರ್ತನ ಸಾವಿಗೂ ನ್ಯಾಯ ದೊರಕಲೇಬೇಕು ಎಂದು ಹೇಳಿದ ಪ್ರಧಾನಿ ಮೋದಿ, ರಾಜ್ಯ ಸರಕಾರದ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು.!

ರಾಜ್ಯದ ಜನತೆಯ ತಪಸ್ಸು, ಸಂಕಲ್ಪ ಇದ್ಯಾವುದನ್ನೂ ನಾವು ವೇಸ್ಟ್ ಮಾಡಲು ಬಿಡುವುದಿಲ್ಲ. ರಾಜ್ಯ ಸರಕಾರದ ಪ್ರತಿಯೊಂದು ಜನವಿರೋಧಿ ಧೋರಣೆಗೂ ನಾವು ನ್ಯಾಯ ದೊರಕಿಸಿಕೊಡುತ್ತೇವೆ ಎಂದು ಹೇಳಿದ ಮೋದಿ ಸಿದ್ದರಾಮಯ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.!

ಉಡುಪಿಯ ಯುವಕನಿಂದ ಹಿಂದೂಸ್ಥಾನಕ್ಕೆ ಹೆಮ್ಮೆ..!

ಇತ್ತೀಚೆಗೆ ನಡೆದ ಒಲಿಂಪಿಕ್ ಕ್ರೀಡೆಯಲ್ಲಿ ಇದೇ ಉಡುಪಿಯ ಯುವಕ ಗುರುರಾಜ್ ಪೂಜಾರಿ ವೈಟ್ ಲಿಫ್ಟಿಂಗ್ ನಲ್ಲಿ ಪದಕ ಪಡೆದು ಇಡೀ ಹಿಂದೂಸ್ಥಾನಕ್ಕೆ ಗೌರವ ತಂದಿದ್ದಾರೆ. ಇಂತಹ ಆಟಗಾರನನ್ನು ಬೆಳೆಸಿದ್ದು ಇದೇ ಉಡುಪಿ. ಕೃಷ್ಣನ ನೆಲದಿಂದ ಬಂದ ಆಟಗಾರನಿಂದ ನಮ್ಮ ದೇಶಕ್ಕೆ ಹೆಮ್ಮೆ ಎಂದು ಮೋದಿ ಒಲಿಂಪಿಕ್ ಆಟಗಾರನಾದ ಗುರುರಾಜ್ ಪೂಜಾರಿ ಅವರನ್ನು ಮತ್ತೊಮ್ಮೆ ಅಭಿನಂದಿಸಿದರು.

ಕೇಂದ್ರ ಸರಕಾರದ ಅಭಿವೃದ್ಧಿ ಯೋಜನೆಗಳನ್ನು ಮತ್ತೊಮ್ಮೆ ಸೇರಿದ್ದ ಕಾರ್ಯಕರ್ತರ ಬಳಿ ಹಂಚಿಕೊಂಡ ಮೋದಿ , ರಾಜ್ಯ ಸರಕಾರದ ವೈಫಲ್ಯಗಳನ್ನು ಸಾರಿ ಸಾರಿ ಹೇಳಿದರು. ಭಾಷಣದ ಕೊನೆಯಲ್ಲಿ “ಸರಕಾರ ಬದಲಿಸಿ-ಬಿಜೆಪಿ ಗೆಲ್ಲಿಸಿ” ಎಂಬ ಧ್ಯೇಯ ವಾಕ್ಯವನ್ನು ಉಚ್ಚರಿಸಿದ ಮೋದಿ ಭಾರತ್ ಮಾತೆಗೆ ಜೈಕಾರ ಹಾಕುತ್ತಾ ತಮ್ಮ ಮಾತಿಗೆ ವಿರಾಮ ಹಾಕಿದರು..!

–ಪಿ‌.ಆರ್.ಶೆಟ್ಟಿ

Tags

Related Articles

Close