ಪ್ರಚಲಿತ

ತ್ರಿಪುರಾದಲ್ಲಿ ಇತಿಹಾಸ ಸೃಷ್ಟಿಸಿದ ಮೋದಿ ಮಾಸ್ಟರ್ ಮೈಂಡ್!! ಹೊಸ ಸರ್ಕಾರದಲ್ಲಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಆ ಮಹಿಳೆಯಾದರೂ ಯಾರು ಗೊತ್ತಾ?

ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ನಂತರ ಅಚ್ಚರಿಗೆ ಆದ್ಯತೆ ನೀಡುತ್ತಲೇ ಬರುತ್ತಿದ್ದು, ತಮ್ಮ ಸಚಿವ ಸಂಪುಟದಲ್ಲೂ ಮಹಿಳೆಯರಿಗೆ ಅತೀ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡುತ್ತಿರುವ ವಿಚಾರವೂ ತಿಳಿದೇ ಇದೆ!! ಇದಕ್ಕೆ ಉತ್ತಮ ನಿದರ್ಶನ ಎನ್ನುವಂತೆ, ಪತ್ರಕರ್ತರು ದೇಶದ ರಕ್ಷಣಾ ಸಚಿವರ ಖಾತೆಯನ್ನು ಅರುಣ್ ಜೇಟ್ಲಿಯವರೇ ಉಳಿಸಿಕೊಂಡಿದ್ದಾರೆ ಎಂದು ಟ್ವೀಟ್ ಮಾಡಲು ಪ್ರಾರಂಭಿಸಿದ ಹೊತ್ತಲೇ ರಕ್ಷಣಾ ಸಚಿವರನ್ನಾಗಿ ನಿರ್ಮಲಾ ಸೀತಾರಾಮನ್ ಎಂದು ಘೋಷಿಸಿ ನರೇಂದ್ರ ಮೋದಿ ಸರ್ಕಾರವು ಮಹಿಳೆಯರಿಗೆ ಹೆಚ್ಚಿನ ಒತ್ತು ನೀಡುತ್ತಿದೆ ಎನ್ನುವುದನ್ನು ಮನದಟ್ಟು ಮಾಡಿದ್ದರು. ಆದರೆ ಇದೀಗ ನರೇಂದ್ರ ಮೋದಿ ಸರ್ಕಾರವು ಮತ್ತೊಮ್ಮೆ ಇದನ್ನು ಸಾಬೀತು ಪಡಿಸಿದೆ.

ದೇಶಾದ್ಯಂತ ತನ್ನ ಅಧಿಪತ್ಯ ಸ್ಥಾಪಿಸುವ ಮಹದಾಸೆ ಹೊಂದಿರುವ ಭಾರತೀಯ ಜನತಾ ಪಕ್ಷ, 25 ವರ್ಷಗಳಿಂದ ಕೆಂಪು ರಾಜಕೀಯ ಪಕ್ಷದಿಂದ ಆಡಳಿತಕ್ಕೆ ಒಳಗಾಗಿದ್ದರೂ, ಅಭಿವೃದ್ಧಿಯನ್ನು ಕಾಣದೇ ನಿತ್ಯ ಸಂಕಷ್ಟದಲ್ಲಿ ದಿನದೂಡುತ್ತಿದ್ದ ತ್ರಿಪುರಾದ ಜನರು, ಇದೀಗ ಹೊಸ ಇತಿಹಾಸವನ್ನು ಸೃಷ್ಟಿಸಿದ್ದಾರೆ ಎನ್ನುವ ವಿಚಾರ ತಿಳಿದೇ ಇದೆ. 25 ವರ್ಷಗಳ ಎಡರಂಗದ ರಾಜಕೀಯ ಇತಿಹಾಸಕ್ಕೆ ಕೊನೆ ಹಾಡಿ, ರಾಷ್ಟ್ರದಲ್ಲಿ ಹೊಸ ಭರವಸೆ ಮೂಡಿಸಿರುವ ಕಮಲ ಪಕ್ಷಕ್ಕೆ ಭರ್ಜರಿ ಗೆಲುವು ಸಾಧಿಸಲು ಬೆಂಬಲ ನೀಡಿ ಈಶಾನ್ಯ ರಾಜ್ಯಗಳ ಜನತೆ ಕೇಸರಿಯನ್ನು ಅಪ್ಪಿ ಹಿಡಿದದ್ದು ಮಾತ್ರ ಅಕ್ಷರಶಃ ನಿಜ!!

ಆದರೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಈಗಾಗಲೇ ತನ್ನ ಸರ್ಕಾರದ ಸಚಿವ ಸಂಪುಟ ರಚನೆ ವೇಳೆಯೇ ಇತಿಹಾಸ ಸೃಷ್ಟಿಸಿದ್ದು, ಇದೀಗ ಇತಿಹಾಸದಲ್ಲೇ ಮೊದಲ ಬಾರಿಗೆ ಎನ್ನುವಂತೆ ಚಕ್ಮಾ ಬುಡಕಟ್ಟು ಸಮುದಾಯದ ಮಹಿಳೆಯೊಬ್ಬರಿಗೆ ಸಚಿವ ಸ್ಥಾನ ನೀಡಿದೆ. ಹೌದು… 25 ವರ್ಷ ಕಮ್ಯುನಿಸ್ಟರ್ ನಿರ್ಲಕ್ಷಿತ ಆಡಳಿತಕ್ಕೆ ಬೇಸತ್ತಿರುವ ತ್ರಿಪುರಾದ ಜನರು ಬಿಜೆಪಿಗೆ ಅಧಿಕಾರ ನೀಡಿದ್ದೇ ಒಂದು ಕಡೆ ಇತಿಹಾಸವನ್ನು ಸೃಷ್ಟಿಸಿದ್ದರೆ, ಇತ್ತ ಕಡೆ ಚಕ್ಮಾ ಬುಡಕಟ್ಟು ಸಮುದಾಯದ ಮಹಿಳೆಯೊಬ್ಬರಿಗೆ ಸಚಿವ ಸ್ಥಾನವನ್ನೇ ನೀಡಿದೆ ಎಂದರೆ ಇದಕ್ಕಿಂತ ದೊಡ್ಡ ಹೆಮ್ಮೆಯ ವಿಚಾರ ಮತ್ತೊಂದಿಲ್ಲ.

ಈಗಾಗಲೇ ತ್ರಿಪುರಾದ ಮುಖ್ಯಮಂತ್ರಿ ಪದವಿಗೆ ಮಾಣಿಕ್ ಸರ್ಕಾರ್ ರಾಜೀನಾಮೆ ನೀಡಿದ್ದು, ಸಿಪಿಐನ 25 ವರ್ಷಗಳ ಆಡಳಿತಕ್ಕೆ ತೆರೆ ಬಿದ್ದಿದೆ. 1998 ರಿಂದ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಮಾಣಿಕ್ ಸರ್ಕಾರ್ ಅವರಿಗೆ ರಾಜ್ಯಪಾಲರು ನೂತನ ಸಿಎಂ ಪ್ರಮಾಣ ವಚನ ಸ್ವೀಕರಿಸುವವರೆಗೂ ಅಧಿಕಾರದಲ್ಲಿ ಮುಂದುವರೆಯುವಂತೆ ಸೂಚಿಸಿದ್ದರು!! ಹಾಗಾಗಿ ತ್ರಿಪುರಾ ರಾಜ್ಯದ ನೂತನ ಸಿಎಂ ಆಗಿ ಬಿಪ್ಲಬ್ ದೇಬ್ ಅವರು ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದರೆ ಉಪಮುಖ್ಯಮಂತ್ರಿಯಾಗಿ ಜಿಷ್ಣು ದೇವ್ ಬರ್ಮಾನ್ ಪ್ರಮಾಣ ವಚನ ಸ್ವೀಕರಿಸಿರುವ ವೇಳೆ ಮಾಣಿಕ್ ಸರ್ಕಾರ್ ಅವರು ತಮ್ಮ ಅಧಿಕಾರದಿಂದ ಕೆಳಗಿಳಿದಿದ್ದಾರೆ.

48 ವರ್ಷ ವಯಸ್ಸಿನ ಬಿಪ್ಲಬ್ ದೇಬ್ ಅವರು ತ್ರಿಪುರಾ ಬಿಜೆಪಿ ಘಟಕದ ಅಧ್ಯಕ್ಷರಾಗಿದ್ದು, ಬಿಪ್ಲಬ್ ದೇಬ್ ಅವರು ಗೋಮತಿ ಜಿಲ್ಲೆಯವರಾಗಿದ್ದಾರೆ. 1999ರಲ್ಲಿ ತ್ರಿಪುರಾದ ಉದಯ್ ಪುರ ಕಾಲೇಜಿನಲ್ಲಿ ಪದವಿ ಪಡೆದ ಬಿಪ್ಲಪ್ ದೇಬ್ ಅವರು, ಆರ್ ಎಸ್ ಎಸ್ ಸಂಘಟನೆ ಸೇರಿದ ಬಳಿಕ ದೆಹಲಿಯಲ್ಲೇ 16 ವರ್ಷ ಕಳೆದಿದ್ದರು. ಈ ಸಮಯದಲ್ಲಿ ಆರ್ ಎಸ್ ಎಸ್ ನ ಪ್ರಮುಖರಾದ ಗೋಬಿಂದ್ ಆಚಾರ್ಯ ಮತ್ತು ಕೃಷ್ಣ ಗೋಪಾಲ್ ಶರ್ಮಾ ರೊಂದಿಗೆ ಕಾರ್ಯ ನಿರ್ವಹಿಸಿದ್ದರು. ಅಷ್ಟೇ ಅಲ್ಲದೇ, 2 ವರ್ಷಗಳ ಹಿಂದಷ್ಟೇ ತವರು ರಾಜಕಾರಣಕ್ಕೆ ಮರಳಿದ್ದ ಬಿಪ್ಲಪ್ ದೇಬ್ ಬಂದಷ್ಟೇ ವೇಗದಲ್ಲಿ ತ್ರಿಪುರಾ ಬಿಜೆಪಿ ಘಟಕದ ಮುಖ್ಯಸ್ಥರಾಗಿದ್ದರು. ಆದರೆ ಇದೀಗ, ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಯಶಸ್ವಿಯಾಗಿ ಸಂಘಟಿಸಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ತ್ರಿಪುರಾ ರಾಜ್ಯದಲ್ಲಿ ಕಮಲ ಅರಳಿದ ನಂತರ ಕೇಂದ್ರ ಸರ್ಕಾರದಲ್ಲಿ ಆಗುವಂತಹ ಬದಲಾವಣೆಗಳು ರಾಜ್ಯದಲ್ಲೂ ನಡೆಯುತ್ತಿದ್ದು, ಅದಕ್ಕೆ ಸಾಕ್ಷಿ ಎನ್ನುವಂತೆ ಚಕ್ಮಾ ಬುಡಕಟ್ಟು ಸಮುದಾಯದ ಮಹಿಳೆಯೊಬ್ಬರು ಸಚಿವ ಸ್ಥಾನವನ್ನು ಏರಿದ್ದು!! ಅಷ್ಟಕ್ಕೂ ಆ ಮಹಿಳೆ ಬೇರಾರು ಅಲ್ಲ…. ಪ್ರಪ್ರಥಮ ಬಾರಿಗೆ ಪಚರ್ತಲ ವಿಧಾನಸಭೆ ಕ್ಷೇತ್ರದಿಂದ ಶಾಸಕಿಯಾಗಿ ಆಯ್ಕೆಯಾಗಿರುವ ಸಂತಾನಾ ಚಕ್ಮಾ!!

ಹೌದು…. ಬುಡಕಟ್ಟು ಸಮುದಾಯದವರಿಗೂ ಉತ್ತಮ ಸ್ಥಾನಮಾನವನ್ನು ನೀಡುತ್ತಿರುವ ಮೋದಿ ಸರ್ಕಾರವೂ ಇದೀಗ ಬುಡಗಟ್ಟು ಜನಾಂಗದ ಮಹಿಳೆಯಾದ ಸಂತಾನಾ ಚಕ್ಮಾ ಅವರನ್ನೇ ಸಚಿವ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ ಎಂದರೆ ಅದಕ್ಕಿಂತಲೂ ಹೆಚ್ಚಿನ ಸಂತಸದ ವಿಚಾರ ಮತ್ತೊಂದಿಲ್ಲ. ಹಾಗಾಗಿ ಸಂತಾನಾ ಚಕ್ಮಾ ಅವರು ಸಚಿವರಾಗಿ ಅಧಿಕಾರ ಸ್ವೀಕರಿಸುವ ಮೂಲಕ ಚಕ್ಮಾ ಬುಡಕಟ್ಟು ಸಮುದಾಯದಲ್ಲಿ ಮಹಿಳೆಯೊಬ್ಬರು ಪ್ರಥಮ ಬಾರಿಗೆ ಸಚಿವರಾಗಿ ಆಯ್ಕೆಯಾದ ಇತಿಹಾಸವನ್ನು ಇವರು ಸೃಷ್ಟಿಸಿದ್ದಾರೆ.

ಸಮಾಜ ಸೇವೆ ಪದವಿದಾರರಾಗಿರುವ 32 ವರ್ಷ ವಯಸ್ಸಿನ ಸಂತನಾ ಚಕ್ಮಾ ಅವರು 2015ರಲ್ಲಿ ಬಿಜೆಪಿ ಜೊತೆ ಕೈ ಜೋಡಿಸಿ, ಮೊದಲ ಬಾರಿಗೆ ವಿಧಾನಸಭೆ ಕ್ಷೇತ್ರದಿಂದ ಶಾಸಕಿಯಾಗಿ ಆಯ್ಕೆಯಾಗಿರುವ ಹಿರಿಮೆ ಇವರದ್ದಾಗಿದೆ. ಅಷ್ಟೇ ಅಲ್ಲದೇ, ತ್ರಿಪುರಾ ದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿರುವ ಇವರಿಗೆ ಸಾಮಾಜಿಕ ಕಾಳಜಿ, ಸೇವೆ ಮತ್ತು ಯುವಕರನ್ನು ಬೆಂಬಲಿಸುವ ಹಿತದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾನಾ ಚಕ್ಮಾ ಅವರಿಗೆ ಸಚಿವ ಸ್ಥಾನವನ್ನು ನೀಡುವ ಮೂಲಕ ಹೊಸ ಇತಿಹಾಸವನ್ನೇ ಸೃಷ್ಟಿಸಿದ್ದಾರೆ.

ಒಟ್ಟಿನಲ್ಲಿ, ಮೋದಿ ಅಲೆಗೆ ತ್ರಿಪುರಾದಲ್ಲಿ ಎಡಪಕ್ಷದ ಭದ್ರಕೋಟೆ ಕುಸಿದಿದ್ದಲ್ಲದೇ, 25 ವರ್ಷಗಳ ಬಳಿಕ ಕಮ್ಯುನಿಸ್ಟರ ಸರ್ಕಾರ ಅಧಿಕಾರ ಕಳೆದುಕೊಂಡಿದೆ. 2013ರಲ್ಲಿ ಖಾತೆ ತೆರೆಯಲೂ ಸಾಧ್ಯವಾಗದ ಬಿಜೆಪಿ, ಐಪಿಎಫ್ ಟಿ ಜತೆಗಿನ ಮೈತ್ರಿಯಿಂದಾಗಿ ರಾಜ್ಯದ ಒಟ್ಟು ಜನಸಂಖ್ಯೆಯ ಶೇ.31 ರಷ್ಟಿರುವ ಬುಡಕಟ್ಟು ಮತದಾರರ ಆಶೀರ್ವಾದದೊಂದಿಗೆ 43 ಸ್ಥಾನ ಗೆದ್ದು ಭರ್ಜರಿ ಬಹುಮತ ಪಡೆದಿದೆ. ಈ ದೃಷ್ಟಿಯಿಂದ ಇದೀಗ ನರೇಂದ್ರ ಮೋದಿ ಸರ್ಕಾರವು ಸಂತಾನಾ ಚಕ್ಮಾ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಬುಡಕಟ್ಟು ಸಮುದಾಯಕ್ಕೆ ವಿಶೇಷವಾದ ಗೌರವನ್ನು ನೀಡಿದ್ದಾರೆ.

– ಅಲೋಖಾ

Tags

Related Articles

Close