ಪ್ರಚಲಿತ

ಜಾಮೀನಿಗಾಗಿ ಹೈ ಕೋರ್ಟ್ ಮೊರೆ ಹೋದ ನಲಪಾಡ್‍ಗೆ ಮತ್ತೆ ಶಾಕ್!! ಸಿಸಿಬಿ ಪೊಲೀಸರ ಮುಂದೆ ಸ್ಫೋಟಕ ಸಂದರ್ಶನ!!

ಶಾಂತಿನಗರ ಶಾಸಕ ಹಾರಿಸ್ ನಲಪಾಡ್‍ನ ಗೂಂಡಾ ಮಗ ಮೊಹಮ್ಮದ್ ನಲಪಾಡ್ ಗೂಂಡಾಗಿರಿಯಿಂದ ಕಳೆದ ಎರಡು ವಾರದಿಂದ ಭಾರೀ ಕೋಲಾಹಲಗಳನ್ನೇ ಸೃಷ್ಟಿಸಿದ್ದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ಗುಂಡಾ ನಲಪಾಡ್ ನ ಗೂಂಡಾಗಿರಿ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು!! ವಿದ್ವತ್ ಎಂಬ ಅಮಾಯಕನ ಮೇಲೆ ಮಾರಣಾಂತಿಕ ಹಲ್ಲೆಯನ್ನು ನಡೆಸಿದ್ದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ಗೂಂಡಾ ನಲಪಾಡ್ ಜೈಲಿನಲ್ಲೇ ಕೊಳೆಯುವ ಸ್ಥಿತಿ ಬರುತ್ತದೋ ಅಂತ ಅನಿಸುತ್ತಿದೆ!!

ಜಾಮೀನಿಗಾಗಿ ಹೈಕೋರ್ಟ್ ಮೊರೆ ಹೋದ ನಲಪಾಡ್‍ಗೆ ಮತ್ತೆ ಶಾಕ್!!!

ಗೂಂಡಾ ನಲಪಾಡ್ ಮಾತ್ರವಲ್ಲದೆ ಆತನ ಜೊತೆಗಿದ್ದ 6 ಮಂದಿ ಗೂಂಡಾ ಸಹಚರರು ಸಲ್ಲಿಸಿದ್ದ ಜಾಮೀನು ಅರ್ಜಿಯೂ ಈಗಾಗಲೇ ವಜಾಗೊಂಡಿದೆ. ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆಗಳು ನಡೆದಿದ್ದು 9 ಕಡೆ ಮೂಲೆಗಳು ಮುರಿದಿದ್ದು ತುಟಿ ಬಿಚ್ಚಲಾಗುತ್ತಿಲ್ಲ. ಆಸ್ಪತ್ರೆಯಿಂದ ಬಿಡುಗಡೆಯೂ ಆಗಿರಲಿಲ್ಲ. ಹೀಗಾಗಿ ಆರೋಪಿಗಳಿಗೆ ಯಾವುದೇ ರೀತಿಯ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶ ಪರಮೇಶ್ವರ್ ನೇತೃತ್ವದ ನ್ಯಾಯಾಲಯ ಅಭಿಪ್ರಾಯ ಪಟ್ಟಿದ್ದರು.. ಹ್ಯಾರಿಸ್ ಮಗ ನಲಪಾಡ್ ಓರ್ವ ಪ್ರಭಾವಿ ವ್ಯಕ್ತಿ ಹಾಗೂ ಕಾಂಗ್ರೆಸ್ ಶಾಸಕ. ಹೀಗಾಗಿ ಜಾಮೀನು ನೀಡಿದರೆ ಸಾಕ್ಷ್ಯ ನಾಶದ ಸಂಭವವೂ ಇದೆ. ಮಾತ್ರವಲ್ಲದೆ ಹಲ್ಲೆಗೊಳಗಾದ ವಿದ್ವತ್ ಇನ್ನೂ ಪೆÇಲೀಸರ ಮುಂದೆ ಹೇಳಿಕೆ ನೀಡದಿರುವುದು. ಈ ಮೂಲಕ ನಲಪಾಡ್ ಸೇರಿ ಉಳಿದ 6 ಮಂದಿಗೂ ಜೈಲು ಶಿಕ್ಷೆಯನ್ನು ನ್ಯಾಯಾಲಯ ಖಾಯಂಗೊಳಿಸಿತ್ತು…

ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ಗೂಂಡಾ ನಲಪಾಡ್ ಸಹಿತ 7 ಮಂದಿಯ ಜಾಮೀನು ಅರ್ಜಿ 63ನೇ ಸೆಷನ್ ನ್ಯಾಯಾಲಯ ಬಿಡುಗಡೆಗೊಳ್ಳುತ್ತಿದ್ದಂತೆ ನಲಪಾಡ್ ಪರ ವಕೀಲರು ಹೈಕೋರ್ಟ್‍ಗೆ ಮೇಲ್ಮನವಿ ಅರ್ಜಿ ಸಲ್ಲಿಸಲು ಈಗಾಗಲೇ ನಿರ್ಧಾರ ಮಾಡಿದ್ದಾರೆ. ಇಂದು ಹೈಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿ ಅಲ್ಲಿ ಜಾಮೀನು ನೀಡುವಂತೆ ಕೋರಲಾಗಿತ್ತು.. ಎಂದು ಹೇಳಿದ್ದರು.. ಆದರೆ ಅಷ್ಟರಲ್ಲೂ ವಿದ್ವತ್ ಆಸ್ಪತ್ರೆಯಿಂದ ಬಿಡುಗಡೆ ಹೊಂದದಿದ್ದರೆ ಮತ್ತೆ ಜೈಲುವಾಸ ಖಾಯಂಗೊಳಿಸುವ ಸಾಧ್ಯತೆಯೂ ಇದೆ ಎಂದು ಎನ್ನಲಾಗಿತ್ತು…

Image result for haris nalapad

ಉದ್ಯಮಿ ಪುತ್ರ ವಿದ್ವತ್ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆರೋಗ್ಯದಲ್ಲಿ ವಿದ್ವತ್ ಆರೋಗ್ಯ ಸುಧಾರಿಸುತ್ತಿದೆ!! ಉದ್ಯಮಿ ಪುತ್ರ ವಿದ್ವತ್ ಮೇಲೆ ಹಲ್ಲೆ ನಡೆಸಿದ ಜೈಲು ಸೇರಿದ್ದ ಶಾಸಕ ಹ್ಯಾರಿಸ್ ಪುತ್ರ ಮಹಮ್ಮದ್ ನಲಪಾಡ್ ಜಾಮೀನು ಅರ್ಜಿಯನ್ನು ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿರುವ ಹಿನ್ನೆಲೆಯಲ್ಲಿ ನಲಪಾಡ್ ಪರ ವಕೀಲರು ತುರ್ತು ವಿಚಾರಣೆಗೆ ಕೋರಿ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ತಳ್ಳಿಹಾಕಿದೆ.!!

ಮಧ್ಯಾಹ್ನ 2:30ಕ್ಕೆ ವಿಚಾರಣೆ ನಡೆಸುವಂತೆ ನಲಪಾಡ್ ಪರ ವಕೀಲರರು ಏಕಸದಸ್ಯ ಪೀಠಕ್ಕೆ ಮೆಮೋ ಸಲ್ಲಿಸಿ ಮನವಿ ಮಾಡಿದ್ದರು. ಅರ್ಜಿಯ ತುರ್ತು ವಿಚಾರಣೆಗೆ ನಿರಾಕರಿಸಿದ ನ್ಯಾಯಮೂರ್ತಿ ಶ್ರೀನಿವಾಸ ಹರೀಶ್ ಕುಮಾರ್, ಮಾ.7 ಕ್ಕೆ ವಿಚಾರಣೆ ನಿಗದಿ ಮಾಡಿದ್ದಾರೆ. ಮಾ.2ರಂದು ನಲಪಾಡ್ ಜಾಮೀನು ಅರ್ಜಿ ವಜಾ ಆಗಿತ್ತು.

ಸಿಸಿಬಿ ಪೊಲೀಸರ ಮುಂದೆ ಸ್ಫೋಟಕ ರಹಸ್ಯ ಬಿಚ್ಚಿಟ್ಟ ವಿದ್ವತ್!!

ಶಾಸಕ ಹ್ಯಾರಿಸ್ ಪುತ್ರ ಮಹಮದ್ ನಲಪಾಡ್ ಮತ್ತು ತಂಡದ ಗೂಂಡಾಗಿರಿ ಪ್ರಕರಣದಲ್ಲಿ ಹಲ್ಲೆಗೊಳಗಾದ ವಿದ್ವತ್ ಹೇಳಿಕೆಯನ್ನು ಸಿಸಿಬಿ ಪೆÇಲೀಸರು ಶನಿವಾರ ದಾಖಲಿಸಿಕೊಂಡಿದ್ದಾರೆ.
ಸತತ 3 ಗಂಟೆಗಳ ಕಾಲ ಸಿಸಿಬಿ ಪೆÇಲೀಸರ ಪ್ರಶ್ನೆಗಳಿಗೆ ಉತ್ತರಿಸಿದ ವಿದ್ವತ್, ಫೆ.17ರಂದು ಐವರು ಸ್ನೇಹಿತರ ಜತೆ ಫರ್ಜಿ ಕೆಫೆಗೆ ಊಟಕ್ಕೆ ತೆರಳಿದ್ದಾಗ ನಡೆದ ಘಟನೆಯನ್ನು ಅವರ ಸಂಪೂರ್ಣವಾಗಿ ವಿವರಿಸಿದ್ದಾರೆ.

ಕಿಸ್ ಮೈ ಫುಟ್, ಸೇ ಸಾರಿ ಎಂದ ನಲಪಾಡ್!

ರಾತ್ರಿ 10.30ಕ್ಕೆ ಹೋಟೆಲ್‍ನಿಂದ ನಿರ್ಗಮಿಸುವಾಗ ನಲಪಾಡ್ ಮತ್ತು ಸ್ನೇಹಿತರು ಕೆಫೆಗೆ ಬಂದರು. ಫ್ರಾಕ್ಚರ್ ಆಗಿದ್ದ ನನ್ನ ಕಾಲಿಗೆ ನಲಪಾಡ್ ಕಾಲು ಟಚ್ ಆದಾಗ, ಬ್ರದರ್ ನೋಡ್ಕೊಂಡು ಓಡಾಡಿ ಎಂದು ಹೇಳಿದೆ. ಆಗ ನಾನ್ಯಾರು ಗೊತ್ತಾ? ಲೋಕಲ್ ಎಂಎಲ್‍ಎ ಮಗ ಅಂತಾ ಆವಾಜ್ ಹಾಕಿದ್ರು ಬಳಿಕ ನಿನಗೆ ಗತಿ ಕಾಣಿಸ್ತೀನಿ ಅಂತಾ ಕಪಾಳಕ್ಕೆ ಹೊಡೆದ್ರು. ಅವರ ಸ್ನೇಹಿತರು ಬೈದು ನನ್ನ ಮೇಲೆ ಹಲ್ಲೆ ನಡೆಸಿದ್ರು. ಇಷ್ಟಾದ ನಂತರವೂ ನಲಪಾಡ್ `ಕಿಸ್ ಮೈ ಫುಟ್. ಸೇ ಸಾರಿ’ (ನನ್ನ ಪಾದಕ್ಕೆ ಮುತ್ತಿಟ್ಟ್ ಕ್ಷಮೆ ಕೇಳು), `ಐ ವಿಲ್ ಕಿಲ್ ಯೂ’ (ನಿನ್ನ ಕೊಂದು ಬಿಡುತ್ತೇನೆ) ಎಂದು ನನ್ನ ಮೇಲೆ ಹಲ್ಲೆ ಮಾಡಿದರು.

Related image

ಆಸ್ಪತ್ರೆಯಲ್ಲೂ ಧಮ್ಕಿ

ನಲಪಾಡ್ ಸ್ನೇಹಿತರು ನನಗೆ ಗಾಜಿನ ಮಗ್, ಐಸ್ ಮಗ್ ಮತ್ತು ಬಿಯರ್ ಬಾಟಲ್‍ಗಳಿಂದ ಹೊಡೆಯುತ್ತಿದ್ದಾಗ ಬೌನ್ಸರ್‍ಗಳು ಬಂದು ಥಳಿತದಿಂದ ಬಿಡಿಸಿದರೂ, ಮತ್ತೆ ಮತ್ತೆ ಬಂದು ನನ್ನ ಮೇಲೆ ಹಲ್ಲೆ ಮಾಡಲು ಯತ್ನಿಸಿದರು. ಅಷ್ಟರಲ್ಲಾಗಲೇ ತೀವ್ರವಾಗಿ ಗಾಯಗೊಂಡಿದ್ದ ನನ್ನನ್ನು ಸ್ನೇಹಿತರು ಮಲ್ಯ ಆಸ್ಪತ್ರೆಗೆ ದಾಖಲಿಸಿದರು. ಆ ವೇಳೆ ಸ್ನೇಹಿತ ಗುರು ರಾಜ್‍ಕುಮಾರ್ (ರಾಜ್‍ಕುಮಾರ್ ಮೊಮ್ಮಗ), ನನ್ನ ಅಣ್ಣ ಸಾತ್ವಿಕ್‍ಗೆ ಹಲ್ಲೆ ಕುರಿತ ಮಾಹಿತಿ ತಿಳಿಸಿದೆ.. ಆಸ್ಪತ್ರೆ ಸೇರಿ ನಾಲ್ಕೈದು ನಿಮಿಷದಲ್ಲೇ ಎಮರ್ಜೆನ್ಸಿ ವಾರ್ಡ್‍ಗೆ ಬಂದ ನಲಪಾಡ್ ಗ್ಯಾಂಗ್ ಮತ್ತೆ ಧಮ್ಕಿ ಹಾಕಿದರು.

ಪುನೀತ್ ರಾಜ್ ಕುಮಾರ್ ಮೈ ಕ್ಲೋಸ್ ಫ್ರೆಂಡ್

ಆಸ್ಪತ್ರೆಯಲ್ಲಿ ನಲಪಾಡ್ ನನಗೆ ಧಮ್ಕಿ ಹಾಕುತ್ತಿರುವಾಗ ` ಅಣ್ಣ ಸಾತ್ವಿಕ್ ಸ್ಥಳಕ್ಕೆ ಬಂದರು. ನಲಪಾಡ್ ಅವನ ಜತೆಯೂ ಜಗಳವಾಡಿ ಆತನನ್ನೂ ಸಾಯಿಸ್ತೀವಿ ಎಂದು ಬೆದರಿಕೆ ಹಾಕಿದರು. ಆಗ ಗುರು ರಾಜ್‍ಕುಮಾರ್ ಮಧ್ಯ ಪ್ರವೇಶಿಸಿ, ನಾನು ರಾಜ್ ಕುಮಾರ್ ಮೊಮ್ಮಗ, ಇದೆಲ್ಲಾ ಸರಿ ಇರುವುದಿಲ್ಲ ಎಂದು ಹೇಳಿದಾಗ ನಲಪಾಡ್ `ಬ್ರದರ್ ಐ ನೋ ಪುನೀತ್‍ರಾಜ್‍ಕುಮಾರ್. ಎಂದು ಹೊರಟು ಹೋದರು. ಎಂದು ವಿದ್ವತ್ ಹೇಳಿಕೆಯನ್ನು ನೀಡಿದ್ದಾರೆ!!

ಸದ್ಯ ಜಾಮೀನಿಗಾಗಿ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದು ಸದ್ಯ ಅರ್ಜಿಯೂ ನಿರಾಕರಣೆಯಾಗಿದ್ದು, ಅರ್ಜಿಯನ್ನು ಸ್ವೀಕರಿಸಲು ಇದೇ 7ಕ್ಕೆ ಮುಂದೂಡಲಾಗಿದೆ..ಮುಂದೆ ಜಾಮೀನು ಸಿಗದೇ ಇದ್ದಲ್ಲಿ ಮತ್ತೆ ಗೂಂಡಾ ನಲಪಾಡ್ ಜೈಲು ಕಂಬಿ ಎಣಿಸುವುದು ಖಂಡಿತ!!

ಪವಿತ್ರ

Tags

Related Articles

Close