ಪ್ರಚಲಿತ

ಭಗ್ನವಾದ ನಲಪಾಡ್ ಬೇಲ್ ಕನಸು!! ಕಣ್ಣೀರಿಟ್ಟ ಮಹಮ್ಮದ್! ಆದರೆ, ಇಡೀ ನ್ಯಾಯಾಲಯ ನಗೆಗಡಲಲ್ಲಿ ತೇಲಿದ್ದೇಕೆ ಗೊತ್ತಾ?!

ಶಾಂತಿನಗರದ ಆಸು ಪಾಸಿನಲ್ಲಿ ಭಯಂಕರವಾಗಿ ಹಕ್ಕು ಚಲಾಯಿಸುತ್ತಿದ್ದ ಮಹಮ್ಮದ್ ಹ್ಯಾರಿಸ್ ನಲಪಾಡ್ ಮೊನ್ನೆ ಮೊನ್ನೆ ಯಷ್ಟೇ ಉದ್ಯಮಿ ಮಗನಾದ ವಿದ್ವತ್ ಎಂಬುವವರಿಗೆ ಬಿಯರ್ ಬಾಟಲಿನಲ್ಲಿ ಹಲ್ಲೆ ಮಾಡಿ, ಕೈ ಕಾಲು ಮುರಿದು, ಮಾರಣಾಂತಿಕ ಹಲ್ಲೆಗಿಳಿದಿದ್ದ ಮಹಮ್ಮದ್ ತಂಡವನ್ನು ಕೊನೆಗೂ ಬಂಧಿಸುವ ಧೈರ್ಯ ತೋರಿದ ಪೋಲಿಸರು, ನ್ಯಾಯಾಂಗ ಬಂಧನದಲ್ಲಿರಿಸಿದ್ದಾರಷ್ಟೇ!!

ಜಾಮೀನು ಅರ್ಜಿಯ ವಿಚಾರಣೆಯನ್ನೂ ಮುಂದೂಡಿದ ಸೆಷನ್ಸ್ ನ್ಯಾಯಾಲಯ!!

ಬಿಡಿ!! ನಲಪಾಡ್ ಗಂತೂ ತಾನು ಮಾಡಿದ್ದು ಅಪರಾಧ ಎನ್ನಿಸುತ್ತಿಲ್ಲ ಎನ್ನುವುದು ಅವನ ಮೇರೆ ಮೀರಿದ ಅಹಂಕಾರದ ವರ್ತನೆಯಿಂದಲೇ ಸಾಬೀತಾಗಿ ಹೋಗಿದೆ! ಹಾಗಿದ್ಯಾಗಿಯೂ, ಸಹ ಮಗನ ಪರ ನಿಂತಿರುವ ಹ್ಯಾರಿಸ್ ಶತಾಯಗತಾಯ ಮಗನನ್ನು ಉಳಿಸಿಕೊಳ್ಳಬೇಕೆಂದು ಕೋರ್ಟು ಕಚೇರಿ ಅಲೆಯುತ್ತಿದ್ದಾರೆ! ಮೊನ್ನೆ ಮೊನ್ನೆಯಷ್ಟೇ ಮಹಮ್ಮದ್ ಹ್ಯಾರಿಸ್ ನನ್ನು ಬಂಧಿಸಿದ್ದ ಪೋಲಿಸರು, ೧೪ ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿರಿಸಿದ್ದರು! ಆದರೆ, ಮಧ್ಯಂತರ ಜಾಮೀನಿಗೋಸ್ಕರ ಮಹಮ್ಮದ್ ಪರ ವಾದಿಸುತ್ತಿದ್ದ ಟಾಮಿ ಸೆಬಾಸ್ಟಿಯನ್ನರ ಎಲ್ಲಾ ಪ್ರಯತ್ನಗಳೂ ವಿಫಲವಾಗಿದ್ದು, 63rd ಸೆಷನ್ಸ್ ನ್ಯಾಯಾಲಯ ಜಾಮೀನು ಅರ್ಜಿ ವಿಚಾರಣೆಯನ್ನು ಫೆಬ್ರುವರಿ ೨೭ ಕ್ಕೆ ಮುಂದೂಡಿದೆ!!

ನಿರ್ಭಯಾ ಪ್ರಕರಣದ ಬರ್ಬರತೆ ಇದರಲ್ಲಿಯೂ ಇದೆ! ತಲೆಗೆ ಬಿಯರ್ ಬಾಟಲಿಯಿಂದ ಹೊಡೆದು, ಪಕ್ಕೆಲುಬು ಮುರಿಯುವಂತೆ ಬಡಿದು, ದೇಹದ ವಿವಿಧ
ಮುಖ್ಯ ಭಾಗಗಳ ಮೂಳೆಯೇ ಮುರಿದು ಹೋಗಿದೆ! ಅದರಲ್ಲಿಯೂ, ಸಹ ಆಸ್ಪತ್ರೆಗೆ ಕೊಲೆಯ ಯತ್ನ ನಡೆಸಲೇ ಬಂದಿದ್ದಾರೆ! ವಿದ್ವತ್ ಅಷ್ಟು ಚೇತರಿಸಿಕೊಂಡಿಲ್ಲ! ಅವನಿಗೆ ಮಹಮ್ಮದ್ ಕಡೆಯಿಂದ ಪ್ರಾಣ ಭೀತಿಯಿದೆ! ಆತ ಶ್ರೀಮಂತ ಶಾಸಕನ ಮಗ! ವಿದ್ವತ್ ಮೇಲಿನ ದ್ವೇಷದ ಹಿನ್ನೆಲೆಯಲ್ಲಿ ಏನು ಬೇಕಾದರೂ ಮಾಡುವ ಸಾಮರ್ಥ್ಯವಿರುವುದರಿಂದ ಖಂಡಿತವಾಗಿಯೂ ಜಾಮೀನು ನೀಡಬಾರದು! ಮಾಫಿಯಾ ಸಂಪರ್ಕವೂ ಸಹ ನಲಪಾಡ್ ಗೆ ಇರುವ ಸಾಧ್ಯತೆಯಿದೆ! ಎಂದು ಶ್ಯಾಮ್ ಸುಂದರ್ ಪ್ರಸಾದ್ ಪ್ರತಿವಾದ ನಡೆಸಿದ್ದೇ ಟಾಮಿ ಮೌನವಾಗಿದ್ದಾರೆ!!

ವಿದ್ವತ್ ಚೇತರಿಸಿಕೊಳ್ಳಲು ಇನ್ನೂ ಎಂಟು ತಿಂಗಳು ಬೇಕಾಗಬಹುದು ! ಅಷ್ಟರೊಳಗೆ ಜಾಮೀನು ಹೇಗೆ ಕೊಡಲು ಸಾಧ್ಯ?! ಅದರಲ್ಲೂ ಬಂಧನವಾದ ಎಂಟೇ ದಿನಗಳೊಳಗಾಗಿ ?! ವಿಚಿತ್ರವೆಂದರೆ, ಎರಡನೇ ಆರೋಪಿ ಅರುಣ್ ಬಾಬು ಹೇಳಿಕೆ ನೀಡಿರುವುದೇ ವಿಚಿತ್ರವಾಗಿದೆ! “ಮೊದಲು ವಿದ್ವತ್ ಹೊಡೆಯಲು ಬಂದಿದ್ದಾನೆ! ನನ್ನ ತಂದೆ ಲೋಕೇಶ್ ಯಾರು ಗೊತ್ತೇ ಎಂದಿದ್ದಾನೆ! ಮಹಮ್ಮದ್ ಗೆ ಹೊಡೆಯಲು ಹೋಗಿ ಮಕಾಡೆ ಬಿದ್ದು ಪೆಟ್ಟಾಗಿದೆಯಂತೆ!! ಇದನ್ನು ನಂಬಬೇಕೇ ಎಂದ ಶ್ಯಾಮ್ ಸುಂದರ್ ಮಾತಿಗೆ ಇಡೀ ಕೋರ್ಟು ಗಹಗಹಿಸಿ ನಕ್ಕಿದೆ!!

ಮೊದಲನೆಯದಾಗಿ, ವಿದ್ವತ್ ನ ಅಪ್ಪನ ಹೆಸರು ಲೋಕೇಶ್ ಅಲ್ಲ! ಎರಡನೆಯದಾಗಿ, ಹೊಡೆಯಲು ಹೋಗಿ ಮಕಾಡೆ ಬಿದ್ದು ತಲೆ ಒಡೆದು, ಎದೆ ಭಾಗದ ಮೂಳೆ ಮುರಿದು, ಬೆನ್ನೆಲುಬು ಮುರಿದು ಹೋಗುವುದಕ್ಕೆ, ವಿದ್ವತ್ ೨೩ ನೇ ಮಹಡಿಯಲ್ಲಿದ್ದನಾ?! ಅಥವಾ , ನೆಲವೇ ತಲೆಕೆಳಗಾಗಿ ವಿದ್ವತ್ ರ ಮೂಳೆ ಮುರಿದಿತ್ತಾ?!

ಯಾವಾಗ ಜಾಮೀನು ಇಂದೂ ಸಿಗಲಿಲ್ಲವೆಂದಾಯಿತೋ, ಮಹಮ್ಮದ್ ನಲಾಪಡ್ ಮತ್ತೆ ಮೊಸಳೆ ಕಣ್ಣೀರು ಹಾಕುತ್ತಾ ಹೊರನಡೆದಿದ್ದಾನೆ!! ಪಾಪ!

ಮಹಮ್ಮದ್ ನಲಪಾಡ್ ಕೇವಲ ವಿದ್ವತ್ ಮೇಲೆ ಮಾತ್ರ ಹಲ್ಲೆ ಮಾಡಿರುವುದಲ್ಲ! ಬದಲಿಗೆ ಅದೆಷ್ಟೋ ಸುಲಿಗೆಗಳನ್ನು ಮಾಡಿ, ಬೆದರಿಕೆಗಳನ್ನು ಒಡ್ಡಿ ಹಲ್ಲೆ ಮಾಡಿದ್ದಾನೆಂಬ ವಿಚಾರಗಳು ಬಯಲಿಗೆ ಬರುತ್ತಿರುವುದರಿಂದ ಪ್ರಕರಣ ಇನ್ನೂ ಬಿಗಿಯಾಗುತ್ತ ಹೋಗುತ್ತಿದೆ! ಅದಲ್ಲದೇ, ವಿದ್ವತ್ ಪರ ವಾದಿಸುತ್ತಿರುವ ಶ್ಯಾಮ್ ಪ್ರಸಾದ್ ಗೆ ಬೆದರಿಕೆ ಒಡ್ಡಿರುವ ನಲಪಾಡ್ ಬೆಂಬಲಿಗರಿಂದ ನ್ಯಾಯಾಲಯ ಮಹಮ್ಮದ್ ನ ಬಗೆಗೆ ಮೃದು ಧೋರಣೆ ತಳೆಯುವುದು ಕಷ್ಟ ಸಾದ್ಯವೇ ಸರಿ!! ಅದರಲ್ಲಿಯೂ, ಜಾಮೀನು ಅರ್ಜಿ ವಿಚಾರಣೆಯನ್ನು ಮುಂದೂಡಿರುವ ಸೆಷನ್ಸ್ ನ್ಯಾಯಾಲಯದ ನಡೆ ಎಲ್ಲರಿಗೂ ನಲಪಾಡ್ ಗೆ ಜೈಲೇ ಗತಿ ಸೂಚನೆಯನ್ನು ನೀಡಿದೆಯಷ್ಟೇ!!

ಪಾಪ!! ಮುಂಚೆ ಸ್ಕ್ರ್ಯಾಪ್ ನಾಯಕನಾಗಿದ್ದ ಹ್ಯಾರಿಸ್, ತದನಂತರ ರಾಜಕೀಯಕ್ಕೆ ಧುಮುಕಿ, ಬೆಂಗಳೂರಿನ ಶಾಂತಿನಗರದ ಎಮ್ ಎಲ್ ಎ ಆಗಿ ಅಧಿಕಾರ ಸ್ವೀಕರಿಸಿದ ಮೇಲೆ ಜನನಾಯಕ ನೆಂದು ಗುರುತಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ, ‘ಸಹವಾಸ ಬೇಡ’ ಎನ್ನುವಷ್ಟರ ಮಟ್ಟಿಗೆ ಬೆಳೆದ ಹ್ಯಾರಿಸ್ ಗೆ ಬಹುಷಃ ಮಗನ ಚಟುವಟಿಕೆಗಳ ಮೇಲೆ ಗಮನ ಕೊಡಲಾಗಲಿಲ್ಲವೋ ಅಥವಾ, ಹೆತ್ತವರಿಗೆ ಹೆಗ್ಗಣ ಮುದ್ದು ಎಂಬಂತೆ ಮಗ ಆಡಿದ ಆಟಗಳನ್ನೆಲ್ಲ ನೋಡಿಯೂ ನೋಡದಂತೆ ಇದ್ದರೋ ಏನೋ! ಇವತ್ತು ಮಗ ಜೈಲಿನಲ್ಲಿದ್ದಾನೆ!! ಪಾಪ! ಶಾಂತಿ ಸಂಧಾನ ಮಾಡಲು ಹೋದರೂ ಕೂಡ ಫಲಿಸದೇ ವಾಪಾಸು ಮನೆಗೆ ಬಂದಿರುವ ಎನ್ ಎ ಹ್ಯಾರಿಸ್ ಮಗನಿಗೆ ಹರಾಮ್ ಮತ್ತು ಹಲಾಲ್ ಗಳ ವ್ಯತ್ಯಾಸ ತಿಳಿಸಿಕೊಡಬೇಕಿತ್ತು!! ಹ್ಯಾರಿಸ್ ರಿಗೆ ಮಗನ ಗೂಂಡಾಗಿರಿ ಯ ಬಗ್ಗೆ ಅರಿವಿದ್ದರೂ ಈ ಹಿಂದೆ ತನ್ನ ಅಧಿಕಾರದ ಬಲದಿಂದ ಯಾವುದೇ ವಿಷಯಗಳು ಬಯಲಾಗಿರಲಿಲ್ಲ. ಆದರೆ ಇದೀಗ ರೆಸ್ಟೋರೆಂಟ್ ನಲ್ಲಿ ವಿದ್ವತ್ ನ ಮೇಲೆ ನಡೆದ ಹಲ್ಲೆ ರಾಜ್ಯ ಮಾತ್ರವಲ್ಲದೆ ರಾಷ್ಟ್ರಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಯಾಕೆಂದರೆ ಕರ್ನಾಟಕದಲ್ಲಿ ಆಡಳಿತವಿರುವ ಕಾಂಗ್ರೆಸ್ ನಾಯಕರೇ ಗೂಂಡಾಗಿರಿ ನಡೆಸಿ ರಾಜ್ಯದ ಅಮಾಯಕ ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಕಾಂಗ್ರೆಸ್ ನ ಪ್ರಭಾವಿ ಶಾಸಕ ರಾಗಿರುವಂತಹ ಹ್ಯಾರಿಸ್ ನಲಪಾಡ್ ಗೆ ತನ್ನ ಗೂಂಡಾ ಮಗ ಮಾಡಿರುವಂತಹ ದಾಂಧಲೆಯಿಂದಾಗಿ ರಾಜಕೀಯ ವರ್ಚಸ್ಸಿಗೆ ಧಕ್ಕೆಯಾಗಿದೆ. ಅದೇ ಕಾರಣದಿಂದ ಹಲ್ಲೆಗೊಳಗಾದ ವಿದ್ವತ್ ನ ಭೇಟಿ ಮಾಡಿ ರಾಜಿ ಸಂಧಾನ ಮಾಡಲು ಹ್ಯಾರಿಸ್ ಮತ್ತು ಆತನ ಪತ್ನಿ ಆಸ್ಪತ್ರೆಗೆ ಧಾವಿಸಿದ್ದರು!!

ಹ್ಯಾರಿಸ್ ನಲಪಾಡ್ ಅಂತೂ, ಮಗನನ್ನು ಉಳಿಸಬೇಕೆಂದು ಸಹಸ್ರ ಪ್ರಯತ್ನ ಮಾಡುತ್ತಿರುವ ಹ್ಯಾರಿಸ್ ಗೆ ಬಹುಷಃ ನಿರಾಸೆಯೇ ಕಾದಂತಿದೆ! ಚುನಾವಣಾ ಸಮಯದಲ್ಲಿಯೇ ಹೀಗಾಗಿದ್ದಕ್ಕೆ ಕಾಂಗ್ರೆಸಾ್ ನವರಿಗೂ ಕೂಡ ನಡುಕ ಪ್ರಾರಂಭವಾಗಿದೆ!! ಅತ್ತ ಒಬ್ಬೊಬ್ಬರದೇ ಗೂಂಡಾಗಿರಿ ಕಾಂಗ್ರೆಸ್ ಗೆ ಮಾರಕವಾಗುತ್ತಿದೆ ಎನ್ನುವುದಂತೂ ಸುಳ್ಳಲ್ಲ!! ಅಷ್ಟಾದರೂ, ರಾಜಿ ಸಂಧಾನಕ್ಕೆ ಪ್ರಯತ್ನಿಸುತ್ತಿರುವ ಸಿದ್ಧರಾಮಯ್ಯ ಸರಕಾರಕ್ಕೆ ಈ ಸಲ ಕಾದಿದೆ ಭಾರೀ ಮುಖಭಂಗ ಅಷ್ಟೇ!

– ಪೃಥು ಅಗ್ನಿಹೋತ್ರಿ

Tags

Related Articles

Close