ಪ್ರಚಲಿತ

ಒಂದೇ ವರ್ಷದಲ್ಲಿ ಬರೋಬ್ಬರಿ 172ಕ್ಕೂ ಅಧಿಕ ಉಗ್ರರ ಬೇಟೆ!

ಭದ್ರತಾ ಪಡೆಗಳು ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರ‌ದಲ್ಲಿ ಮುಂದುವರೆಸಿರುವ ಆಪರೇಷನ್ ಆಲ್ ರನ್ ಔಟ್ ನಲ್ಲಿ, 2022 ರಲ್ಲಿ 42 ವಿದೇಶಿಗರನ್ನೊಳಗೊಂಡಂತೆ 172 ಭಯೋತ್ಪಾದಕರನ್ನು ಹತ್ಯೆ ಮಾಡಿದೆ. ಆ ಮೂಲಕ ಭಯೋತ್ಪಾದಕ ನಿಗ್ರಹಕ್ಕೆ ನಮ್ಮ ಭದ್ರತಾ ಪಡೆ ಶ್ರಮಿಸುತ್ತಲೇ ಇದೆ.

ಕಾಶ್ಮೀರ‌ದ ಎಡಿಜಿಪಿ ವಿಜಯ ಕುಮಾರ್ (ಐಪಿಎಸ್) ಅವರ ಮಾಹಿತಿಯನ್ನು ಆಧರಿಸಿಈ ಬಗ್ಗೆ ಟ್ವೀಟ್ ಮೂಲಕ ಜಮ್ಮು ಕಾಶ್ಮೀರದ ಪೊಲೀಸರು ಮಾಹಿತಿ ನೀಡಿದ್ದಾರೆ.

ಕಣಿವೆ ರಾಜ್ಯದಲ್ಲಿ ನಮ್ಮ ದೇಶದ ಸಶಸ್ತ್ರ ಪಡೆಗಳು 172 ಭಯೋತ್ಪಾದಕರನ್ನು 93 ಎನ್‌ಕೌಂಟರ್‌ಗಳನ್ನು ನಡೆಸುವ ಮೂಲಕ ಯಮಲೋಕಕ್ಕೆ ಅಟ್ಟಿದ್ದಾರೆ. ಇವರ ಪೈಕಿ 108 ಉಗ್ರಗಾಮಿ‌ಗಳು ಲಷ್ಕರ್ ಎ ತೋಯ್ಬಾ ಸಂಘಟನೆಗೆ ಸೇರಿದವರಾಗಿದ್ದಾರೆ. ಹಾಗೆಯೇ ಈ ಕಾರ್ಯಾಚರಣೆಗಳಲ್ಲಿ ಎಲ್ಇಟಿ ಯ ಅಂಗಸಂಸ್ಥೆ ಟಿಆರ್‌ಎಫ್‌ಗೆ ಸೇರಿದವರೂ ಈ ಎನ್‌ಕೌಂಟರ್‌ಗೆ ನರಕ ಸೇರಿದ್ದಾಗಿ ಪೊಲೀಸರು ತಮ್ಮ ಮಾಹಿತಿ‌ಯಲ್ಲಿ ತಿಳಿಸಿದ್ದಾರೆ.

ಭದ್ರತಾ ಪಡೆಗಳ ಈ ಕಾರ್ಯಾಚರಣೆ‌ಯಲ್ಲಿ ಎಲ್‌ಇಟಿ ಭಯೋತ್ಪಾದಕ ಸಂಘಟನೆಗೆ ಭಾರೀ ಪ್ರಮಾಣದಲ್ಲಿ ಹಾನಿ ಉಂಟಾಗಿದೆ. ಈ ಉಗ್ರ ಸಂಘಟನೆಗಳು ಕಣಿವೆ ರಾಜ್ಯದ ನಾಗರಿಕರನ್ನು ಗುರಿಯಾಗಿಸಿ‌ಕೊಂಡು ಹತ್ಯೆಗಳನ್ನು ನಡೆಸುತ್ತಿದ್ದವು. ಹಾಗೆಯೇ ಈ ಉಗ್ರರ ಹಾವಳಿ ಭದ್ರತಾ ಪಡೆಗಳಿಗೆ ತೀರಾ ಸವಾಲನ್ನು ಒಡ್ಡಿದ್ದುದಾಗಿಯೂ ಪೊಲೀಸರು ತಿಳಿಸಿದ್ದಾರೆ.

ಜೆಎಂ ಉಗ್ರ ಸಂಘಟನೆಯ 35 ಉಗ್ರರು, ಎಚ್‌ಎಂ ಸಂಘಟನೆಯ 22 ಮಂದಿ ಉಗ್ರರು, ಅಲ್ ಬದ್ರ್ ಉಗ್ರ ಸಂಘಟನೆಯ 4 ಮಂದಿ ಉಗ್ರರು, AGuH ಉಗ್ರಗಾಮಿ ಸಂಘಟನೆಯ 3 ಮಂದಿ ಉಗ್ರರು ನಮ್ಮ ಭದ್ರತಾ ಪಡೆ‌ಡಳು ಭಯೋತ್ಪಾದಕರನ್ನು ಗುರಿಯಾಗಿಸಿಕೊಂಡು ನಡೆಸಿರುವ ಯಶಸ್ವಿ 93 ಎನ್‌ಕೌಂಟರ್‌ಗಳಲ್ಲಿ ಪರಲೋಕ ಸೇರಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಒಟ್ಟಿನಲ್ಲಿ ಕೇಂದ್ರ‌ದಲ್ಲಿ ಪ್ರಧಾನಿ ಮೋದಿ ಅವರು ಆಡಳಿತ ಚುಕ್ಕಾಣಿ ಹಿಡಿದ ಬಳಿಕ ಈ ದೇಶಕ್ಕೆ ಮಾರಕವಾಗಿ ಪರಿಣಮಿಸಿರುವ ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆಯಲ್ಲಿ ನಮ್ಮ ದೇಶದ ಸೇನೆ ದೊಡ್ಡ ಮಟ್ಟದಲ್ಲಿ ಗುರಿ ಸಾಧಿಸುತ್ತಿದೆ‌. ಭಯೋತ್ಪಾದನೆ‌ಯನ್ನು ತಡೆಯುವ ನಿಟ್ಟಿನಲ್ಲಿ ನಮ್ಮ ಸೇನೆಗೆ ಪ್ರಧಾನಿ ಮೋದಿ ಅವರ ಕೇಂದ್ರ ಸರ್ಕಾರ ಅಗತ್ಯ ಸೌಲಭ್ಯಗಳನ್ನು, ಪೂರಕ ಬೆಂಬಲವನ್ನು ನೀಡುತ್ತಿದ್ದು, ಇದು ಉಗ್ರರನ್ನು ಸೆದೆಬಡಿಯುವಲ್ಲಿ ನಮ್ಮ ರಕ್ಷಣಾ ಪಡೆಗಳಿಗೆ ಹೆಚ್ಚಿನ ಶಕ್ತಿ ನೀಡಿದೆ ಎಂದೆನ್ನಬಹುದು.

Tags

Related Articles

Close