ಪ್ರಚಲಿತ

ದೇಶದ 10 ಲಕ್ಷ ಯುವ ಜನರಿಗೆ ಉದ್ಯೋಗ ಒದಗಿಸುವ ಗುರಿ ಪ್ರಧಾನಿ ಮೋದಿ ಸರ್ಕಾರದ್ದು: ಪ್ರಲ್ಹಾದ ಜೋಶಿ

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿ‌ಎ ಸರ್ಕಾರ ಆಡಳಿತ ವಹಿಸಿಕೊಂಡ ಬಳಿಕ ಔದ್ಯೋಗಿಕ ಕ್ಷೇತ್ರದಲ್ಲಿಯೂ ಸಾಕಷ್ಟು ಸಕಾರಾತ್ಮಕ ಬದಲಾವಣೆಗಳಾಗಿವೆ. ನಿರುದ್ಯೋಗ ಕಡಿಮೆ ಮಾಡಲು ಹಲವಾರು ಉಪಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಯುವಕರಿಗೆ ಬದುಕಿನ ದಾರಿ ತೋರುವ ಪ್ರಯತ್ನ ನಡೆಸಿದೆ ಎನ್ನಬಹುದು.

ಆತ್ಮನಿರ್ಭರ, ಸ್ವದೇಶಿ ಉತ್ಪನ್ನಗಳಿಗೆ ಬೆಂಬಲ ನೀಡುವ ನಿಟ್ಟಿನಲ್ಲಿಯೂ ಕೇಂದ್ರ ಸರ್ಕಾರ ಕ್ರಮಗಳನ್ನು ಕೈಗೊಂಡಿದ್ದು, ಇದು ಹಲವು ಜನರಿಗೆ ಸ್ವಂತ ಉದ್ದಿಮೆ ಹೊಂದುವ, ಸ್ವಂತ ವಹಿವಾಟು ನಡೆಸುವ ಅನುಕೂಲ, ಸಾಮರ್ಥ್ಯ ಒದಗಿಸಿ ಕೊಟ್ಟಿದೆ. ಭಾರತದ ಪ್ರತಿಭೆಗಳು ಇಲ್ಲಿಯೇ ನೆಲೆ ಕಾಣುವ ಹಾಗೆ ಮಾಡಲು ಮತ್ತು ಇಲ್ಲಿಯೇ ಅವರ ಚಾತುರ್ಯಕ್ಕೆ ಬೆಲೆ ಸಿಗುವ ಹಾಗೆ ಮಾಡುವ ದೃಷ್ಟಿಯಿಂದಲೂ ಕೆಲಸ ಮಾಡಿದ ಕೀರ್ತಿ ಪ್ರಧಾನಿ ಮೋದಿ ಸರ್ಕಾರಕ್ಕೆ ಸಲ್ಲಬೇಕು.

ದೇಶದ ಔದ್ಯೋಗಿಕ ವಲಯಕ್ಕೆ ಸಂಬಂಧಿಸಿದ ಹಾಗೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರು ಮಾತನಾಡಿದ್ದು, ಸರ್ಕಾರಿ ಮತ್ತು ಸಾರ್ವಜನಿಕ ವಲಯಗಳಿಗೆ ಸಂಬಂಧಿಸಿದ ಹಾಗೆ ಉದ್ಯಮಗಳಲ್ಲಿ ದೇಶದ ಹತ್ತು ಲಕ್ಷ ಯುವಕರಿಗೆ ಉದ್ಯೋಗ ಒದಗಿಸಿ ಕೊಡುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ತಿಳಿಸಿದ್ದಾರೆ.

ಅವರು ಬೆಂಗಳೂರಿನ ಯಲಹಂಕಾದಲ್ಲಿ ಇರುವ ಬಿ ಎಸ್‌ ಎಫ್ ತರಬೇತಿ ಕೇಂದ್ರದಲ್ಲಿ ಆಯೋಜನೆ ಮಾಡಲಾಗಿದ್ದ ರೋಜ್ಗಾರ್ ಮೇಳದಲ್ಲಿ ನಿನ್ನೆ ಮಾತನಾಡಿದ್ದು, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈಗಾಗಲೇ ಎಲ್ಲಾ ವಲಯಗಳಿಗೆ ಸಂಬಂಧಿಸಿದ ಹಾಗೆ ಎಂಟು ಲಕ್ಷ ಗಳಷ್ಟು ಜನರಿಗೆ ಉದ್ಯೋಗ ಒದಗಿಸಿ ಕೊಡುವಲ್ಲಿ ಸಫಲವಾಗಿದೆ. ಹತ್ತು ಲಕ್ಷ ಯುವಕರಿಗೆ ಉದ್ಯೋಗ ಒದಗಿಸುವ ಗುರಿ ಪ್ರಧಾನಿ ಮೋದಿ ಸರ್ಕಾರದ್ದಾಗಿದ್ದು, ಶೀಘ್ರವೇ ಈ ಗುರಿಯನ್ನು ಸಾಧಿಸಲು ಬೇಕಾದ ಎಲ್ಲಾ ಕಾರ್ಯಗಳನ್ನು ಮಾಡಲಾಗುವುದು ಎಂದು ಹೇಳಿದ್ದಾರೆ.

ನಮ್ಮ ದೇಶವು ವಿಶ್ವದ ದುರ್ಬಲ ಆರ್ಥಿಕತೆಗಳ ಪೈಕಿ ಐದನೇ ಸ್ಥಾನದಲ್ಲಿತ್ತು. ಆದರೆ ಕಳೆದ ಹತ್ತು ವರ್ಷಗಳಲ್ಲಿ ಈ ವಿಷಯಕ್ಕೆ ಸಂಬಂಧಿಸಿದ ಹಾಗೆ ಅಮೂಲಾಗ್ರ ಬದಲಾವಣೆ ಆಗಿತ್ತು, ವಿಶ್ವದ ಉತ್ತಮ ಆರ್ಥಿಕತೆಗಳ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಏರಿದೆ. ನಮ್ಮ ದೇಶವು ಯುವ ಜನಸಂಖ್ಯೆಯ ವಿಚಾರದಲ್ಲಿ 65% ಗಳಷ್ಟು ಯುವ ಜನರನ್ನು ಹೊಂದಿದೆ. 2047 ರ ಹೊತ್ತಿಗೆ ಭಾರತ ವಿಶ್ವದ ಅಭಿವೃದ್ಧಿ ಹೊಂದಿದ ದೇಶಗಳ ಪಟ್ಟಿಗೆ ಸೇರಿರಲಿದೆ ಎಂದೂ ಅವರು ನುಡಿದಿದ್ದಾರೆ.

Tags

Related Articles

Close