ಪ್ರಚಲಿತ

ಶ್ರೀರಾಮ ನಮ್ಮ ನಾಗರೀಕತೆಯ ಪ್ರತೀಕ: ಜಾವೇದ್ ಅಖ್ತರ್

ಭಾರತಕ್ಕೆ ಹಿಂದೂಸ್ತಾನ ಎಂದು ಹೆಸರಿದೆ ಈ ದೇಶದ ಮೂಲ ಸನಾತನ ಧರ್ಮ. ಇಲ್ಲಿನ ಹಿಂದೂ ಧರ್ಮದ ಜೊತೆಗೆ ಇಂದು ಇತರ ಹಲವಾರು ಧರ್ಮಗಳನ್ನು ರೂಢಿಸಿಕೊಂಡಿರುವ ಜನರು ಭಾರತದಲ್ಲಿ ಇದ್ದಾರೆ. ಭಾರತದ ಹಿಂದೂ ಧರ್ಮ ಅವರಿಗೂ ಭಾರತದಲ್ಲಿ ಬದುಕಲು ಸಮಾನ ಅವಕಾಶ ನೀಡಿದೆ. ಪರಮ ಸಹಿಷ್ಣು ಧರ್ಮ ಪ್ರಪಂಚದಲ್ಲಿದೆ ಎಂದರೆ ಅದು ಹಿಂದೂ ಧರ್ಮ ಎಂದು ನಾವು ಕಣ್ಮುಚ್ಚಿಕೊಂಡು, ಎದೆ ತಟ್ಟಿ ಹೆಮ್ಮೆಯಿಂದ ಹೇಳಬಹುದಾಗಿದೆ.

ಹೀಗಿದ್ದರೂ ಕೆಲ ಅಸಹಿಷ್ಣುಗಳು ಹಿಂದೂ ಧರ್ಮದ ಸಹಿಷ್ಣುತೆಯ ಬಗ್ಗೆ ಪ್ರಶ್ನೆ ಮಾಡುವುದು, ಹಿಂದೂ ಧರ್ಮದ ವಿರುದ್ಧ ಕೆಲಸ ಮಾಡುವುದು, ಹಿಂದೂ ಧರ್ಮದ ಮೇಲೆ ಆಕ್ರಮಣ ಮಾಡುವುದನ್ನು ಮೈಗೂಡಿಸಿಕೊಂಡೇ ಬಂದಿದ್ದಾರೆ. ಅನ್ಯ ಧರ್ಮದವರ ಜೊತೆಗೆ ನಮ್ಮ ದೇಶದ ಕೆಲ ಲದ್ದಿ ಜೀವಿ ಹಿಂದೂಗಳು ಸಹ ಹಿಂದೂ ಧರ್ಮದ ವಿರುದ್ಧ ಅವಹೇಳನಕಾರಿಯಾಗಿ ವರ್ತಿಸುವಾಗಲೂ, ತಾಳ್ಮೆ, ಸಹನೆಯಿಂದ ‌ವರ್ತಿಸುವ ಧರ್ಮ ಒಂದಿದೆ ಎಂದಾದರೆ ಅದು ಹಿಂದೂ ಧರ್ಮ ಎಂದು ಯಾವುದೇ ಅಳುಕಿಲ್ಲದೆ ನಾವು ಹೇಳಬಹುದು.

ಖ್ಯಾತ‌ ಸಾಹಿತಿ ಜಾವೇದ್ ಅಖ್ತರ್ ಅವರು ಹಿಂದೂ ಧರ್ಮದ ಬಗ್ಗೆ ಮುಂಬೈನಲ್ಲಿ ಹೇಳಿಕೆಯೊಂದನ್ನು ‌ನೀಡಿದ್ದಾರೆ. ಹಿಂದೂ ಧರ್ಮ, ಹಿಂದೂಗಳು ಸಹಿಷ್ಣುಗಳು ಮತ್ತು ಭಾರತದಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿರುವುದೇ ಹಿಂದೂಗಳಿಂದ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೆಲವು ಜನರು ಸದಾ ಕಾಲ ಅಸಹಿಷ್ಣುತೆಯಲ್ಲಿಯೇ ಇರುತ್ತಾರೆ. ಆದರೆ ಹಿಂದೂಗಳು ಹಾಗಲ್ಲ. ಅವರು ಉದಾರಿಗಳು ಮತ್ತು ಶ್ರೇಷ್ಠ ಗುಣವನ್ನು ಹೊಂದಿದವರು ಎಂದು ಅವರು ಹೇಳಿದ್ದಾರೆ. ಭಾರತದಲ್ಲಿ ಪ್ರಜಾಪ್ರಭುತ್ವ ಹಿಂದೂ ಸಂಸ್ಕೃತಿ, ಸಂಪ್ರದಾಯಗಳ ಕಾರಣದಿಂದ ಉಳಿದಿದೆ. ಹಿಂದೂಗಳು ಮೂರ್ತಿ ಪೂಜೆ ಮಾಡಿದರೂ, ಮಾಡದಿದ್ದರೂ ಹಿಂದೂಗಳೇ ಆಗಿರುತ್ತಾರೆ ಎಂದು ಅವರು ತಿಳಿಸಿದ್ದಾರೆ.

ರಾಮ, ಸೀತೆ ಜನಿಸಿದ ಈ ದೇಶದಲ್ಲಿ ಹುಟ್ಟಿರುವುದಕ್ಕೆ ನನಗೆ ಹೆಮ್ಮೆಯಾಗುತ್ತಿದೆ. ರಾಮಾಯಣ ನಮ್ಮ ಸಾಂಸ್ಕೃತಿಕ ಪರಂಪರೆಯಾಗಿದೆ ಎಂದು ಹೇಳಿದ್ದಾರೆ. ಹಾಗೆಯೇ ಜೈ ಸಿಯಾ ರಾಮ್ ಎಂದು ಘೋಷಣೆ ಕೂಗಿದ್ದಾರೆ. ನಾನು ನಾಸ್ತಿಕ. ಆದರೂ ಪ್ರಭು ಶ್ರೀರಾಮನನ್ನು ನಾನು ಗೌರವಿಸುತ್ತೇನೆ. ಶ್ರೀರಾಮ ನಮ್ಮ ಸಂಸ್ಕೃತಿ ಮತ್ತು ನಾಗರೀಕತೆಯ ಭಾಗ ಎಂದು ತಿಳಿಸಿದ್ದಾರೆ.

Tags

Related Articles

Close