ಪ್ರಚಲಿತ

ಬ್ರೇಕಿಂಗ್: ಹೈಕೋರ್ಟ್‍ನಲ್ಲೂ ಸೋಲು! ಬಿಯರ್ ಬಾಟಲಿ ಆಯುಧವಲ್ಲವಂತೆ! ನಲಪಾಡ್ ಕೇಸ್ ವಿಚಾರಣೆಯಲ್ಲಿ ವಿವಾದ ಸೃಷ್ಟಿಸಿದ ನಲಪಾಡ್ ಪರ ವಕೀಲರ ಹೇಳಿಕೆ!!

ಕಳೆದ ತಿಂಗಳು ಕರ್ನಾಟಕದಲ್ಲಿ ಭಾರೀ ಅವಾಂತರವನ್ನೇ ಸೃಷ್ಟಿಸಿದ್ದ ಕನ್ನಡ ಚಲನ ಚಿತ್ರ ನಟ ಹಾಗೂ ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ಅವರ ಪುತ್ರ ಹಾಗೂ ಆತನ ಸ್ನೇಹಿತನ ಮೇಲೆ ಮಾರಣಾಂತಿಕ ಹಲ್ಲೆಯನ್ನು ಮಾಡಿದ್ದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ಗೂಂಡಾ ಮಹಮ್ಮದ್ ನಲಪಾಡ್ ಗೂಂಡಾಗಿರಿಯ ಪ್ರಕರಣ ಸಧ್ಯಕ್ಕೆ ಮುಗಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ. ನಲಪಾಡ್ ಮೇಲಿನ ಕೊಲೆ ಯತ್ನದ ಕೇಸ್ ವಿಚಾರಣೆಯು ಇಂದು ಕೂಡಾ ಕೋರ್ಟ್‍ನಲ್ಲಿ ಮುಂದುವರೆದಿದ್ದು ವಾದ ವಿವಾದಗಳಿಗೆ ಕಾರಣವಾಗಿತ್ತು.

ಕಳೆದ ತಿಂಗಳು ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಎಂಬ ಕಾಂಗ್ರೆಸ್ ಗೂಂಡಾ ವಿದ್ವತ್ ಎಂಬಾತನ ಮೇಲೆ ನಡೆಸಿದ್ದ ಮಾರಣಾಂತಿಕ ಹಲ್ಲೆಯ ವಿಚಾರವಾಗಿ ಇಂದು ನ್ಯಾಯಲಯದಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದು ವಿಚಾರಣೆ ಮತ್ತೆ ಮುಂದೂಡಲಾಗಿದೆ. ಈ ಮೂಲಕ ಮತ್ತೆ ಹೈಕೋರ್ಟ್ ಸೋಮವಾರಕ್ಕೆ ಮುಂದೂಡಿದ್ದು, ಅಲ್ಲಿಯವರೆಗೂ ಮತ್ತೆ ಗೂಂಡಾ ನಲಪಾಡ್ ಜೈಲುವಾಸವನ್ನೇ ಅನುಭವಿಸುವ ಅನಿವಾರ್ಯತೆ ಎದುರಾಗಿದೆ. ಸೋಮವಾರ 2.30ಕ್ಕೆ ಹೈಕೋರ್ಟ್‍ನಲ್ಲಿ ವಿಚಾರಣೆ ಮುಂದೂಡಲಾಗಿದ್ದು ಅಲ್ಲಿಯವರೆಗೆ ಗೂಂಡ ನಲಪಾಡ್ ಪರಪ್ಪನ ಅಗ್ರಹಾರದ ಮುದ್ದೆಯನ್ನು ಮುರಿಯಬೇಕಾದ ಅನಿವಾರ್ಯತೆ ಎದುರಾಗಿದೆ.

 

ಕೋರ್ಟ್‍ನಲ್ಲಿ ನಡೆದಿತ್ತು ಭಾರೀ ವಾದ..!

ಇಂದು ಕೂಡಾ ಹೈಕೋರ್ಟ್‍ನಲ್ಲಿ ಪರ ವಿರೋಧದ ವಾದ ವಿವಾದಗಳು ನಡೆದಿತ್ತು. ಈ ವಾದದಲ್ಲಿ ವಿದ್ವತ್ ಪರ ವಕೀಲರು ಎಂದಿನಂತೆ ಜಾಮೀನು ಅರ್ಜಿಯ ಕೇಸನ್ನು ದಾಖಲಿಸಿದ ಬಗ್ಗೆ ಒಲ್ಲೆ ಎಂದಿದ್ರು. ವಿದ್ವತ್ ಇನ್ನೂ ಆಸ್ಪತ್ರೆಯಲ್ಲೇ ಇದ್ದ ಕಾರಣ ಯಾವುದೇ ಕಾರಣಕ್ಕೂ ಆತನಿಗೆ ಜಾಮೀನು ನೀಡೋದು ಸರಿಯಲ್ಲ ಎಂಬ ಅಭಿಪ್ರಾಯವನ್ನು ವಿದ್ವತ್ ಪರ ವಕೀಲರು ನೀಡಿದ್ದರು. ಮಾತ್ರವಲ್ಲದೆ ನಲಪಾಡ್ ಜೈಲಿನಿಂದ ಹೊರಬಂದರೆ ಆತ ಮತ್ತೆ ತನ್ನ ಕ್ರೌರ್ಯವನ್ನು ಹೊರತೆಗೆದು ಸಾಕ್ಷಿಗಳ ನಾಶ ಮಾಡುವ ಎಲ್ಲಾ ಸಾಧ್ಯತೆಗಳಿರುವುದರಿಂದ ಈ ಕೇಸ್‍ಗೆ ಜಾಮೀನು ನೀಡೋದು ಸರಿಯಲ್ಲ ಎಂದು ಹೇಳಿದ್ದಾರೆ. ಆರೋಪ ಪ್ರತ್ಯಾರೋಪಗಳನ್ನು ಆಲಿಸಿದ ಹೈಕೋರ್ಟ್ ಮತ್ತೆ ಸೋಮವಾರಕ್ಕೆ ವಿಚಾರಣೆಯನ್ನು ಮುಂದೂಡಿದ್ದ ಕಾರಣ ಇಂದು ಕೂಡಾ ಜಾಮೀನು ಸಿಗದೆ ಜೈಲಿನಲ್ಲಿಯೇ ಕೂರಬೇಕಾದ ಪರಿಸ್ಥಿತಿ ಎದುರಾಗಿದೆ.

Image result for mohammed nalapad

ಬಾಟಲಿ ಆಯುಧ ಅಲ್ಲವಂತೆ..!

ಸೆಷನ್ ನ್ಯಾಯಾಲಯದಲ್ಲಿ ನಡೆದಿದ್ದ ನಲಪಾಡ್ ಪರ ವಕೀಲರ ಕೆಲವು ದಂದ್ವ ವಾದಗಳು ಹೈಕೋರ್ಟ್‍ನಲ್ಲೂ ಮುಂದುವರೆದಿದೆ. ಇಂದು ಹೈಕೋರ್ಟ್‍ನಲ್ಲಿ ವಾದಗಳು ನಡೆಯುತ್ತಿರುವಾಗ ಆರೋಪಿ ಪರವಾಗಿ ವಾದ ಮಂಡಿಸಿದ ವಕೀಲರು ಮತ್ತೆ ಗೊಂದಲವನ್ನು ಉಂಟು ಮಾಡಿದ್ದಾರೆ. “ಬಾಟಲಿ ಒಂದು ಆಯುಧವಲ್ಲ. ಹೀಗಾಗಿ ಅದರಿಂದ ಹಲ್ಲೆ ಮಾಡಿದರೆ ಅದು ಕೊಲೆ ಯತ್ನ ಆಗೋದಿಲ್ಲ. ಹೀಗಾಗಿ ನನ್ನ ಕಕ್ಷಿದಾರನಿಹಗೆ ಜಾಮೀನು ಮಂಜೂರು ಮಾಡಬೇಕು” ಎಂಬ ವಾದವನ್ನು ಮಾಡಿದ್ದಾರೆ. ಕಾನೂನು ಪ್ರಕಾರ ಬಾಟಲಿ ಆಯುಧ ಅಲ್ಲದಿರಬಹುದು, ಆದರೆ ಕೊಲೆ ಮಾಡಲು ಬಾಟಲಿ ಸಾಕಾಗುತ್ತದೆ. ಆ ಬಾಟಲಿಯಿಂದ ಏನನ್ನೂ ಮಡಬಹುದು ಎಂಬ ವಿಚಾರವನ್ನು ನಲಪಾಡ್ ಪರ ವಕೀಲರು ನೆನಪಿನಲ್ಲಿಟ್ಟುಕೊಳ್ಳಬೇಕು. ಸ್ವಲ್ಪನೂ ಕಾಮನ್ ಸೆನ್ಸ್ ಇಲ್ಲದವರ ರೀತಿಯಲ್ಲಿ ಮಾತನಡಬಾರದು ಎಂದು ಟೀಕೆಗಳು ಕೇಳಿ ಬರುತ್ತಿದೆ.

ಮಾತ್ರವಲ್ಲದೆ ಮಾರಣಾಂತಿಕ ಹಲ್ಲೆಗೊಳಗಾದ ವಿದ್ವತ್ ಆರೋಗ್ಯವಾಗಿದ್ದಾನೆ. ಆತ ತನ್ನ ಸ್ನೇಹಿತರೊಂದಿಗೆ ಚೆನ್ನಾಗಿಯೇ ಫೋನಿನಲ್ಲಿ ಹರಟೆ ಹೊಡೆದಿದ್ದಾನೆ. ಆದರೆ ತನಿಖಾಧಿಕಾರಿಗಳೇ ಸುಳ್ಳು ವರದಿಯನ್ನು ನೀಡುತ್ತಿದ್ದಾರೆ. ವೈಧ್ಯರು ಕೂಡಾ ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿ ನಲಪಾಡ್ ಪರ ವಕೀಲರು ತನ್ನ ವಾದವನ್ನು ಮಂಡಿಸಿದ್ದಾರೆ.

ಒಟ್ಟಾರೆ ಸೆಷನ್ ನ್ಯಾಯಾಲಯದಲ್ಲಿ ತನ್ನ ಪರವಾಗಿ ತೀರ್ಪು ಬಾರದ ಕಾರಣ ಹೈಕೋರ್ಟ್ ಮೆಟ್ಟಿಲೇರಿರುವ ಗೂಂಡಾ ನಲಪಾಡ್‍ಗೆ ಹೈಕೋರ್ಟ್‍ನಲ್ಲೂ ಸದ್ಯಕ್ಕೆ ಜಮೀನು ಮಂಜೂರು ಆಗೋ ಸಾಧ್ಯತೆಗಳು ಕಾಣೋದಿಲ್ಲ. ಹೀಗಾಗಿ ಮತ್ತೆ ಪರಪ್ಪನ ಅಗ್ರಹಾರದಲ್ಲಿ ಮುದ್ದೆಯನ್ನೇ ತಿಂದುಕೊಂಡ ಬೀಳಬೇಕಾದ ಅನಿವಾರ್ಯತೆ ಎದುರಾಗಿದೆ.

-ಸುನಿಲ್ ಪಣಪಿಲ

Tags

Related Articles

Close