ಪ್ರಚಲಿತ

ಗ್ರಾಮಗಳ ಅಭಿವೃದ್ಧಿಗಾಗಿ ಪ್ರಧಾನಿ ಮೋದಿಯವರ ವಿನೂತನ ಅಭಿಯಾನ ಆರಂಭ!! ರಾಷ್ಟ್ರದ ಪಂಚಾಯತ್ ರಾಜ್ ವ್ಯವಸ್ಥೆಗೆ ಸಿಕ್ಕಿದೆ ಆನೆಬಲ!!

ದೇಶವನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯಲು ನಾನಾ ಯೋಜನೆಗಳನ್ನು ಜಾರಿಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗಷ್ಟೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ ನಾನಾ ಯೋಜನೆಗಳ ಬಗ್ಗೆ ಹಳ್ಳಿಗಳಲ್ಲಿರುವ ದಲಿತರಿಗೆ ಅರಿವು ಮೂಡಿಸುವ ಉದ್ದೇಶದಿಂದಾಗಿ, ಕೇಂದ್ರ ಸರ್ಕಾರವು ಮಹತ್ತರವಾದ ಯೋಜನೆಯೊಂದನ್ನು ಜಾರಿಗೊಳಿಸಿದೆ. ಅಷ್ಟೇ ಅಲ್ಲದೇ ರಾಷ್ಟ್ರದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಸದೃಢಗೊಳಿಸುವ ಸಲುವಾಗಿ ಕೇಂದ್ರ ಸರ್ಕಾರವು ಮಹತ್ತರವಾದ ಕಾರ್ಯವೊಂದನ್ನು ಕೈಗೊಂಡಿದೆ!!

ಈಗಾಗಲೇ ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರದ ಚುಕ್ಕಾಣಿಯನ್ನು ಹಿಡಿದಂದಿನಿಂದಲೂ ನಾನಾ ಯೋಜನೆಗಳನ್ನು ಜಾರಿಗೊಳಿಸಿ ದೇಶವನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯುವಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸಿದ್ದಲ್ಲದೇ, ಇಂದು ಭಾರತವು ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮುವಲ್ಲಿ ಕಾರಣೀಭೂತರಾಗಿದ್ದಾರೆ!!! ಆದರೆ ಇದೀಗ ರಾಷ್ಟ್ರದ ಪಂಚಾಯತ್ ರಾಜ್ ವ್ಯವಸ್ಥೆ ಸದೃಢಗೊಳಿಸುವ ನಿಟ್ಟಿನಲ್ಲಿ ಮತ್ತೊಂದು ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.

ಹೌದು….. ಪಂಚಾಯತ್ ರಾಜ್ ದಿನದ ಅಂಗವಾಗಿ ಬುಡಕಟ್ಟು ಜನರ ಪ್ರಾಬಲ್ಯ ಹೆಚ್ಚಾಗಿರುವ ಮಧ್ಯಪ್ರದೇಶದ ರಾಮನಗರದಲ್ಲಿ ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನಕ್ಕೆ ಚಾಲನೆ ನೀಡಿರುವ ಪ್ರಧಾನಿ ನರೇಂದ್ರ ಮೋದಿಯವರು ಗ್ರಾಮೀಣ ಸ್ಥಳೀಯ ಸಂಸ್ಥೆಯನ್ನು ಸ್ವಸಾಮರ್ಥ್ಯದ ಆಧಾರದಲ್ಲಿ ಸುಸ್ಥಿರಗೊಳಿಸುವುದು, ಆರ್ಥಿಕ ಭದ್ರತೆ ಹಾಗೂ ಹೆಚ್ಚಿನ ದಕ್ಷತೆ ಒದಗಿಸುವುದು ಈ ಯೋಜನೆಯ ಪ್ರಮುಖ ಗುರಿಯಾಗಿದೆ.

Related image

ಈ ವೇಳೆ ಮಾತನಾಡಿದ ಅವರು, ಪಂಚಾಯತ್ ರಾಜ್ ದಿನದಂದು ಮಧ್ಯಪ್ರದೇಶಕ್ಕೆ ಬಂದು ಸಂತುಷ್ಟನಾಗಿದ್ದೇನೆ. ಅಷ್ಟೇ ಅಲ್ಲದೇ ಬಾಪು ಹಳ್ಳಿಗಳ ಮಹತ್ವದ ಬಗ್ಗೆ ಮತ್ತು ಗ್ರಾಮ ಸ್ವರಾಜ್ ದ ಬಗ್ಗೆ ಸಾರಿ ಹೇಳಿದ್ದಾರೆ. ಅಷ್ಟೇ ಅಲ್ಲದೇ, ‘ಗ್ರಾಮೀಣ ಅಭಿವೃದ್ಧಿ ವಿಷಯ ಬಂದಾಗ ಬಜೆಟ್ ಅತಿ ಮುಖ್ಯವಾಗುತ್ತದೆ. ಕಳೆದ ನಾಲ್ಕು ವರ್ಷದಲ್ಲಿ ಬಿಡುಗಡೆಯಾದ ಹಣ ಗ್ರಾಮದ ಅಭಿವೃದ್ಧಿಗೆ ಪಾರದರ್ಶಕ ರೀತಿಯಲ್ಲಿ ಬಳಕೆಯಾಗಿದೆ’ ಎಂದು ಹೇಳಿದ್ದಾರೆ.

ಮಾಂಡ್ಲ ಜಿಲ್ಲೆಯ ರಾಮನಗರದಲ್ಲಿ ರಾಷ್ಟ್ರೀಯ ಪಂಚಾಯತ್ ರಾಜ್ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿದ ಮೋದಿ, ಬುಡಕಟ್ಟು ಅಥವಾ ಆದಿವಾಸಿ ಪ್ರದೇಶಗಳ ಸಮಗ್ರ ಅಭಿವೃದ್ದಿಗೆ 5 ವರ್ಷಗಳ ಅವಧಿಯ ಯೋಜನೆಯನ್ನು ಸರ್ಕಾರ ರೂಪಿಸಿದೆ ಎಂದು ಹೇಳಿದ್ದಲ್ಲದೇ ಮಧ್ಯಪ್ರದೇಶದ ಆದಿವಾಸಿ ಪ್ರದೇಶಗಳ ಅಭಿವೃದ್ಧಿಗೆ ನೀಲನಕಾಶೆಯೊಂದನ್ನು ಇದೇ ವೇಳೆ ಪ್ರಧಾನಿ ಅನಾವರಣಗೊಳಿಸಿದರು!! ಸರಿಸುಮಾರು 200 ಪಂಚಾಯತ್ ರಾಜ್ ತಜ್ಞರು ಈ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಈ ಯೋಜನೆಯಡಿ ತರಬೇತಿ, ಮೂಲಸೌಕರ್ಯ ನಿರ್ಮಾಣ, ಇ-ಆಡಳಿತದ ಕ್ರಮಗಳಿಗೆ ವಿಶೇಷ ಒತ್ತು ನೀಡಲಾಗಿದೆ.

ಮುಂದಿನ ಐದು ವರ್ಷಗಳಲ್ಲಿ ಮಧ್ಯಪ್ರದೇಶದಲ್ಲಿನ ಬುಡಕಟ್ಟು ಸಮುದಾಯ ಪ್ರದೇಶದ ಅಭಿವೃದ್ದಿಯ ನೀಲಿನಕ್ಷೆಯನ್ನು ಪ್ರಧಾನಿ ಅನಾವರಣಗೊಳಿಸಿದ್ದಲ್ಲದೇ, ಈ ಯೋಜನೆಯಡಿ ಪಂಚಾಯಿತಿಯ ಬುಡಕಟ್ಟು ಪ್ರದೇಶಗಳ ಅಭಿವೃದ್ದಿಗಾಗಿ 2 ಲಕ್ಷ ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಅಲ್ಲದೇ ಮಾನೆರಿಯಲ್ಲಿ ಎಲ್ ಪಿಜಿ ಬಾಟ್ಲಿಂಗ್ ಘಟಕ ನಿರ್ಮಾಣಕ್ಕೆ ಪ್ರಧಾನಿ ಶಂಕುಸ್ಥಾಪನೆ ಈ ವೇಳೆ ನೆರವೇರಿಸಿದ್ದಾರೆ!! ಆದರೆ ಪಂಚಾಯತ್ ರಾಜ್ ಸಂಸ್ಥೆ ವ್ಯವಸ್ಥೆಯಡಿಯಲ್ಲಿ ಸ್ಥಾಪನೆಯಾಗಿರುವ ಅನೇಕಾನೇಕ ಸಮಿತಿಗಳು ಮತ್ತು ವೇದಿಕೆಗಳ ಮೂಲಕ ವಿಶೇಷವಾಗಿ ಮಹಿಳೆಯರು ಮತ್ತು ದುರ್ಬಲ ವರ್ಗದವರು ಪಾಲ್ಗೊಳ್ಳಲು ಅನುಕೂಲವಾಗಲಿದೆ!!

ಆದರೆ, ಗ್ರಾಮಸಭೆ ಹಾಗೂ ಗ್ರಾಮ ಪಂಚಾಯತಿ ಸಭೆಗಳನ್ನು ನಡೆಸುವುದರಲ್ಲಿ ಎದುರಿಸುವ ಸಮಸ್ಯೆಗಳು, ಸಾಮಾನ್ಯ ಆಸ್ತಿ, ಸಂಪನ್ಮೂಲಗಳ ನಿರ್ವಹಣೆ, ಗ್ರಾಮೀಣಾಭಿವೃದ್ಧಿ ಹಾಗೂ ಕಲ್ಯಾಣ ಕಾರ್ಯಕ್ರಮಗಳ ಜಾರಿ, ತಮ್ಮ-ತಮ್ಮ ಪಾತ್ರ ನಿರ್ವಹಣೆಯಲ್ಲಿ ಅವರು ಎದುರಿಸುತ್ತಿರುವ ಸಾಮಾಜಿಕ ಸಾಂಸ್ಕೃತಿಕ ಅಡೆತಡೆಗಳು ಹಾಗೂ ತಮ್ಮ ಪಾತ್ರ ಪ್ರಭಾವಿಯಾಗಿ ನಿಭಾಯಿಸಲು ಆಗಬೇಕಾಗಿರುವ ಪರಿಹಾರ ಕ್ರಮಗಳು ಮುಖ್ಯವಾಗುತ್ತದೆ. ಇದಕ್ಕೆ ಕಾರಣ ಅನಕ್ಷರತೆಯ ಜತೆಗೆ ಸಾಮಾನ್ಯ ಅರಿವಿನ ಅಭಾವ, ಬಡತನ, ಸಂಪನ್ಮೂಲ ಕೊರತೆ, ಪಂಚಾಯತ್ ಸಂಸ್ಥೆಗಳ ಅಧಿಕಾರ ಹಾಗೂ ಕಾರ್ಯ ನಿರ್ವಹಣೆ ಬಗ್ಗೆ ಅಜ್ಞಾನ, ಸಾಮಾಜಿಕ ಅಸಮಾನತೆ, ಜಾತಿಯತೆಗಳು ಅವರು ಎದುರಿಸುತ್ತಿರುವ ಸಮಸ್ಯೆಗಳು,

ವಿಶೇಷವಾಗಿ ಬಹುತೇಕ ಪರಿಶಿಷ್ಟ ಜಾತಿ, ಪಂಗಡ, ಹಾಗೂ ಹಿಂದುಳಿದ ವರ್ಗಗಳ ಮಹಿಳಾ ನಾಯಕರು ಎದುರಿಸುತ್ತಿರುವ ಪ್ರಮುಖ ಸಮಸ್ಯೆ ಎಂದರೆ, ಮೇಲ್ವರ್ಗದ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತಿಗಳ ಬಲಾಢ್ಯ ಶಕ್ತಿಗಳಿಂದ ತೀವ್ರ ಅಸಹಕಾರ, ಈ ಸಮಸ್ಯೆಗಳು ಪಂಚಾಯಿತಿಗಳ ಚುನಾಯಿತ ಪ್ರತಿನಿಧಿಗಳು ತಮ್ಮ ಕರ್ತವ್ಯ ನಿರ್ವಹಿಸಲು ಅಡ್ಡಿಯಾಗಿರುವುದಲ್ಲದೆ, ಚುನಾಯಿತ ಪ್ರತಿನಿಧಿಗಳು ಪಂಚಾಯತಿ ಕೆಲಸಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ.

ಆದರೆ ಈತನಕ ಆಗಿರುವ ಅನುಭವವನ್ನು ಗಮನಿಸಿದರೆ, ಸ್ಥಳೀಯ ಆಡಳಿತದಲ್ಲಿ ಮಹಿಳೆಯರು ಹಾಗೂ ಅಸಹಾಯ ಗುಂಪುಗಳಿಗೆ ದೊರೆತಿರುವ ಅವಕಾಶಗಳಿಂದಾಗಿ, ಈ ಜನರಲ್ಲಿ ಮುಖ್ಯವಾಹಿನಿ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಜೀವನದಲ್ಲಿ ಬೆರೆಯಬೇಕೆಂಬ ತವಕ ಮೂಡಲು, ಸಾಮಾಜಿಕ ಮಾನ್ಯತೆ, ರಾಜಕೀಯ ಜಾಗೃತಿ ಬೆಳೆಯಲು ಸಾಧ್ಯವಾಯಿತು. ಆರಂಭದಲ್ಲಿದ್ದ ಮೇಲ್ಜಾತಿ ಹಾಗೂ ಕೆಳಜಾತಿಯವರ ನಡುವಿನ ಕಲಹ ಈಗ ಮಾಯವಾಗಿ, ಸ್ಥಳೀಯ ಮಟ್ಟಗಳಲ್ಲಿ ಸಾಮಾಜಿಕ ಸಾಮಾರಸ್ಯದ ಸೂಚನೆಗಳು ಕಂಡು ಬಂದಿವೆ. ಅಸಹಾಕರಿಗೆ ದೊರೆತ ರಾಜಕೀಯ ಅವಕಾಶಗಳಿಂದಾಗಿ ಶ್ರೇಣೀಕೃತ ಸಾಮಾಜಿಕ ಹಂದರಕ್ಕೆ ಸ್ವಲ್ಪ ಹೊಡೆತ ಬಿದ್ದಿದೆ. ಸ್ಥಳೀಯ ಹಂತದಲ್ಲಿ ನಿರ್ಧಾರ ಮಾಡುವ ಪ್ರಕ್ರಿಯೆಯಲ್ಲಿ ಅವರಿಗೆ ಪಾತ್ರ -ಪಾಲುದಾರಿಕೆ ದಕ್ಕಿದೆ.

ಹಾಗಾಗಿ ಇದೀಗ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ರೂಪಿಸಿರುವ ನಾನಾ ಯೋಜನೆಗಳ ಬಗ್ಗೆ ಹಳ್ಳಿಗಳಲ್ಲಿರುವ ಎಸ್ಸಿ, ಎಸ್ಟಿಗಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದಾಗಿ, ಕೇಂದ್ರ ಸರ್ಕಾರವು “ಗ್ರಾಮ ಸ್ವರಾಜ್ ಅಭಿಯಾನ’ ವನ್ನು ಆರಂಭಿಸಿದ್ದು, ಮೇ 8ರೊಳಗೆ 26 ರಾಜ್ಯಗಳ 20,844 ಹಳ್ಳಿಗಳನ್ನು ಯಶಸ್ವಿಯಾಗಿ ತಲುಪುವ ಗುರಿ ಹೊಂದಿರುವ ಈ ಯೋಜನೆಯಿಂದ ಚುನಾವಣೆ ಹೊಸ್ತಿಲಲ್ಲಿರುವ ಕರ್ನಾಟಕ ಹಾಗೂ ಪಶ್ಚಿಮ ಬಂಗಾಳವನ್ನು ಹೊರಗಿಡಲಾಗಿದೆ.

ಈ ವಿಶೇಷ ಅಭಿಯಾನದ ರೂಪು ರೇಷೆಗಳನ್ನು ಕೇಂದ್ರ ಸಂಪುಟದ ಕಾರ್ಯದರ್ಶಿ ಪ್ರದೀಪ್ ಕುಮಾರ್ ಸಿನ್ಹಾ ವಿನ್ಯಾಸಗೊಳಿಸಿದ್ದು, 2011ರ ಜನಗಣತಿಯ ಪ್ರಕಾರ, ಯಾವ ಗ್ರಾಮಗಳಲ್ಲಿ ಶೇ. 50ಕ್ಕಿಂತ ಹೆಚ್ಚು ಎಸ್ಸಿ, ಎಸ್ಟಿ ಜನಸಂಖ್ಯೆ ಇರುವುದೋ ಆ ಹಳ್ಳಿಗಳಿಗೆ ಈ ಅಭಿಯಾನದ ವೇಳೆ ಮೊದಲ ಆದ್ಯತೆ ನೀಡಲಾಗಿದೆ ಎಂದು ತಿಳಿದು ಬಂದಿದೆ!! ಒಟ್ಟಿನಲ್ಲಿ ರಾಷ್ಟ್ರದ ಪಂಚಾಯತ್ ರಾಜ್ ವ್ಯವಸ್ಥೆ ಸದೃಢಗೊಳಿಸುವ ನಿಟ್ಟಿನಲ್ಲಿ ನರೇಂದ್ರ ಮೋದಿಯವರು ಈ ಯೋಜನೆಯನ್ನು ಜಾರಿಗೊಳಿಸಿ ಗ್ರಾಮಗಳ ಅಭಿವೃದ್ಧಿಗಾಗಿ ಕೈಗೊಂಡ ದಿಟ್ಟ ನಿರ್ಧಾರ ಎಂದರೆ ಅದು ತಪ್ಪಾಗಲಾರದು!!

ಮೂಲ: https://www.firstpost.com/india/narendra-modi-launches-rashtriya-gram-swaraj-abhiyan-in-madhya-pradesh-on-panchayati-raj-day-4443751.html

– ಅಲೋಖಾ

Tags

Related Articles

Close