ಪ್ರಚಲಿತ

ಆಯುಷ್ಮಾನ್ ಭಾರತ್ ಯೋಜನೆ ಜಾರಿಗೆ ಕೇಂದ್ರ ಸಚಿವ ಸಂಪುಟ ಅಸ್ತು!! ಬಡ ಜನತೆಗಿಲ್ಲ ಇನ್ನು ಆಪತ್ತು!!

ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರದ ಗದ್ದುಗೆಯನ್ನು ಏರಿದಾಗಿನಿಂದ ದೇಶದ ಪ್ರಗತಿಯಾಗಿದ್ದು ಒಂದಾ ಎರಡಾ? ಪ್ರತೀಯೊಂದು ಕ್ಷೇತ್ರದಲ್ಲಿಯೂ ಮೋದಿ ಮೋಡಿ ನಿಜವಾಗಿಯೂ ವಿರೋಧ ಪಕ್ಷದವರನ್ನೂ ತಲ್ಲಣಗೊಳಿಸುವಂತೆ ಮಾಡುತ್ತದೆ!! ಒಂದು ಬಾರಿ ದೇಶದ ಅಭಿವೃದ್ಧಿಗಾಗಿ ದೃಢ ನಿರ್ಧಾರ ಮಾಡಿದರೆ ಆ ಕೆಲಸವಾಗದೆ ಅದನ್ನು ಬಿಡುವವರಲ್ಲ ಪ್ರಧಾನಿ ನರೇಂದ್ರ ಮೋದಿಯವರು!!

ನೋಟ್ ಬ್ಯಾನ್ ಹಾಗೂ ಜಿಎಸ್‍ಟಿ ಯಂತಹ ಮಹತ್ವದ ಆದೇಶಗಳನ್ನು ಜಾರಿಗೊಳಿಸಿದ ಮೋದಿ ಸರ್ಕಾರದ ಮೇಲೆ ಭರವಸೆಯ ಮಹಾಪೂರವನ್ನೇ ಜನತೆ ಇಟ್ಟುಕೊಂಡಿದ್ದಾರೆ!! ಇದನ್ನು ಹುಸಿ ಮಾಡದ ಮೋದಿ ಸರ್ಕಾರ ಭಾರೀ ಘೋಷಣೆಗಳನ್ನೇ ಬಜೆಟ್‍ನಲ್ಲಿ ಜನತೆಗೆ ಘೋಷಿಸಿದ್ದರು!! ಅಂದು ಸಂಸತ್‍ನಲ್ಲಿ ಜೇಟ್ಲಿ ಮಂಡಿಸಿದ್ದ ಬಜೆಟ್‍ನಲ್ಲಿ ಭಾರೀ ಕೊಡುಗೆಗಳನ್ನು ಘೋಷಿಸಿದ್ದರು.. ಅಂದುಕೊಂಡಂತೆಯೇ ಮೋದಿ ಸರ್ಕಾರ ಇದೀಗ ಜನರ ಆಶೋತ್ತರಗಳನ್ನು ಈಡೇರಿಸಲು ಸಿದ್ಧವಾಗಿದೆ!!

ವಿಶ್ವದ ಬೃಹತ್ ಆರೋಗ್ಯ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅಸ್ತು!!

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವೇ ಹಾಗೆ. ಅದು ಯಾವುದೇ ಯೋಜನೆಯನ್ನು ಬಜೆಟ್‍ನಲ್ಲಿ ಘೋಷಿಸಲಿ, ಕೂಡಲೇ ಅದನ್ನು ಜಾರಿಗೊಳಿಸುವ ಪಣ ತೊಡುತ್ತದೆ !! ಈಗ ಮೋದಿ ಸರ್ಕಾರ ಅಂತಹದ್ದೇ ಮತ್ತೊಂದು ನಿರ್ಧಾರ ಕೈಗೊಂಡಿದ್ದು, ಕಳೆದ ಬಜೆಟ್ಟಿನಲ್ಲಿ ಘೋಷಿಸಿದ್ದ, ವಿಶ್ವದ ಬೃಹತ್ ಆರೋಗ್ಯ ಯೋಜನೆಯೆಂದೇ ಖ್ಯಾತಿಯಾಗಿರುವ ಆಯುಷ್ಮಾನ್ ಭಾರತ್ ಯೋಜನೆ ಜಾರಿಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದ್ದು, ಶೀಘ್ರದಲ್ಲೇ ಯೋಜನೆ ಜಾರಿಗೆ ಬರಲಿದೆ.

ಯೋಜನೆಯಿಂದ ದೇಶದ 10 ಕೋಟಿ ಕುಟುಂಬಗಳ 50 ಕೋಟಿ ಜನರಿಗೆ ಈ ಯೋಜನೆ ಅನುಕೂಲವಾಗಲಿದ್ದು, ಬಡತನ ರೇಖೆಗಿಂತ ಕೆಳಗಿರುವವರು ಕೆಳ ಹಾಗೂ ಮಧ್ಯಮ ಹಂತದ ಆಸ್ಪತ್ರೆಯಲ್ಲಿ ಪಡೆಯುವ ಚಿಕಿತ್ಸೆಗೆ ಕೇಂದ್ರ ಸರ್ಕಾರ 5 ಲಕ್ಷ ರೂ. ಆರೋಗ್ಯ ವಿಮೆ ನೀಡಲಿದೆ. ಇದರಿಂದ ಕೋಟ್ಯಂತರ ಜನ ಆರೋಗ್ಯ ಭದ್ರತೆ ಪಡೆಯಲಿದ್ದಾರೆ.

ಈ ಕುರಿತು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಪ್ರತಿಕ್ರಿಯಿಸಿದ್ದು, ಆಯುಷ್ಮಾನ್ ಭಾರತ್ ಯೋಜನೆಗೆ ಒಪ್ಪಿಗೆ ಸೂಚಿಸಿರುವುದಕ್ಕೆ ಸಂಸತ್ತು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೃದಯಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ. ಸಾರ್ವಜನಿಕರ ಆರೋಗ್ಯ ಭದ್ರತೆಗೆ ಈ ಯೋಜನೆ ಅನುಕೂಲವಾಗಿದೆ ಎಂದು ತಿಳಿಸಿದ್ದಾರೆ.

ಯೋಜನೆ ಅನ್ವಯ ದೇಶದ ಜಿಲ್ಲಾ ಕೇಂದ್ರಗಳಲ್ಲಿ ಮೆಡಿಕಲ್ ಕಾಲೇಜು ಸಹ ಸ್ಥಾಪಿಸಿ, ಸಾವಿರಾರು ವೈದ್ಯಕೀಯ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡುವುದು ಸಹ ಯೋಜನೆಯ ಭಾಗವಾಗಿದೆ. ಆರೋಗ್ಯ ವಲಯಕ್ಕೆ ಭಾರೀ ಒತ್ತು ನೀಡಿದ ಮೋದಿ ಸರ್ಕಾರ ಬಜೆಟ್‍ನಲ್ಲಿ ಹೊಸ ವಿಶ್ವ ದಾಖಲೆಯನ್ನೇ ಬರೆದಿದ್ದಾರೆ. ಒಂದು ಕುಟುಂಬಕ್ಕೆ ಬರೋಬ್ಬರಿ 5 ಲಕ್ಷ ರೂಪಾಯಿಗಳ ಉಚಿತ ಆರೋಗ್ಯ ಸೇವೆಯನ್ನು ಘೋಷಿಸಿದ್ದರು!!

Image result for modi budget

ಒಂದು ಕುಟುಂಬಕ್ಕೆ ಬರೋಬ್ಬರಿ 5 ಲಕ್ಷ ರೂಪಾಯಿಗಳ ಉಚಿತ ಆರೋಗ್ಯ ಸೇವೆಯನ್ನು ಘೋಷಿಸಿದ್ದು, ಆ ಕುಟುಂಬದಲ್ಲಿ ಯಾವುದೇ ಅನಾರೋಗ್ಯ ಸಮಸ್ಯೆಗೆ ಯಾವುದೇ ಆಸ್ಪತ್ರೆಯಲ್ಲೂ 5 ಲಕ್ಷದವರೆಗಿನ ಚಿಕಿತ್ಸಾ ವೆಚ್ಚ ಉಚಿತವಾಗಿ ದೊರೆಯಲಿದೆ. ಈ ಯೋಜನೆ ಭಾರತದ 10 ಕೋಟಿ ಕುಟುಂಬಗಳಿಗೆ ತಲುಪಲಿದ್ದು, ಬರೋಬ್ಬರಿ 50 ಕೋಟಿ ಜನರು, ಅಂದರೆ ಭಾರತದಲ್ಲಿ ವಾಸವಿರುವ ಅರ್ಧದಷ್ಟು ಜನರು ಈ ಯೋಜನೆಯ ಫಲಾನುಭವಿಗಳಾಗಲಿದ್ದಾರೆ. 10 ಕೋಟಿ ಕುಟುಂಬಗಳಿಗೆ ಈ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಭಾರತದ ಯಾವುದೇ ಕುಟುಂಬವೂ ಆರೋಗ್ಯದ ತೊಂದರೆಯಿಂದ ಹಣದ ಸಮಸ್ಯೆಯನ್ನು ಎದುರಿಸಬಾರದು ಎಂಬ ಆಶೋತ್ತರವನ್ನು ಮೋದಿ ಸರ್ಕಾರ ಈಡೇರಿಸಿದೆ ಎಂದು ಹೇಳಬಹುದು!!

ಈ ಯೋಜನೆ ವಿಶ್ವದಲ್ಲೇ ಮೊದಲ ಬಾರಿಗೆ ಜಾರಿಗೆ ಬಂದಿದ್ದು ಪ್ರಧಾನಿ ನರೇಂದ್ರ ಮೋದಿ ಸರಕಾರದ ಈ ಮಹತ್ವದ ಹೆಜ್ಚೆ ಇದು ವಿಶ್ವ ದಾಖಲೆಯಾಗಿದೆ. ಸಂಸತ್‍ನಲ್ಲಿ ಬಜೆಟ್ ಮಂಡಿಸಿದ ಅರುಣ್ ಜೇಟ್ಲಿಯವರು ಸ್ವತಃ ಈ ಘೋಷಣೆಯನ್ನು ಮಾಡಿದ್ದು, ಇದು ಜಗತ್ತಿನಲ್ಲೇ ಪ್ರಥಮ ಎಂದು ಹೇಳಿದ್ದಾರೆ. ಈ ವಿಷಯ ಬಜೆಟ್‍ನಲ್ಲಿ ಮಂಡಿಸುತ್ತಿದ್ದಂತೆ ಒಂದು ಕ್ಷಣ ಸಂಸತ್‍ಗೆ ಸಂಸತ್ತೇ ಕರತಾಡನದಲ್ಲಿ ಮುಳುಗಿತ್ತು.

ದೇಶಕ್ಕೆ ಹತ್ತು ಮೆಡಿಕಲ್ ಕಾಲೇಜುಗಳನ್ನು ಘೋಷಿಸಿದ್ದು ಇದರಲ್ಲಿ ಕರ್ನಾಟಕಕ್ಕೆ ಒಂದು ಮೆಡಿಕಲ್ ಕಾಲೇಜು ಘೋಷಣೆಯಾಗಿದೆ. ಕರ್ನಾಟಕದಲ್ಲಿಯೂ ಬಡ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ಧೇಶದೊಂದಿಗೆ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ದೇಶದಲ್ಲಿ ಅನೇಕ ಬಡ ಕುಟುಂಬಗಳು ಆನಾರೋಗ್ಯ ಭಾಧಿತರಾಗಿ ಸಮರ್ಥ ಚಿಕಿತ್ಸೆ ಇಲ್ಲದೆ ಸಾವನ್ನಪ್ಪುತ್ತಿದ್ದಾರೆ. ಇದನ್ನು ದೃಷ್ಟಿಯಲ್ಲಿ ಇಟ್ಟುಕೊಂಡ ಮೋದಿ ಸರ್ಕಾರ ಇಂತಹ ಯೋಜನೆಯನ್ನು ಜಾರಿಗೆ ತಂದು ಭಾರೀ ಕೊಡುಗೆಯನ್ನು ನೀಡಿದೆ. ಇದು ಪ್ರತಿ ಬಡ ಕುಟುಂಬಗಳ ಹತ್ತಿರಕ್ಕೆ ಹೋಗಿ ಈ ಯೋಜನೆ ಉಪಯೋಗವಾಗಲಿದೆ!!

ಅದೆಷ್ಟೋ ಕಡೆಗಳಲ್ಲಿ ಬಡ ಜನರು ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅತಿಯಾದ ಆರೋಗ್ಯ ಸಮಸ್ಯೆಯಿಂದ ದಿಕ್ಕೇ ತೋಚದೆ ಭಿಕ್ಷೆ ಬೇಡುವ ಸ್ಥಿತಿಯನ್ನೂ ತಲುಪುವ ಸನ್ನಿವೇಶಗಳನ್ನು ನಾವು ನೋಡುತ್ತಿರುತ್ತೇವೆ. ದುಬಾರಿಯಾಗುತ್ತಿರುವ ಆಸ್ಪತ್ರೆಗಳ ಬಿಲ್‍ಗಳಿಂದ ಅದೆಷ್ಟೋ ಜೀವಗಳು ತಮ್ಮ ಜೀವವನ್ನೇ ಕಳೆದುಕೊಂಡಿದ್ದರು. ಸರ್ಕಾರ ಅದೆಷ್ಟು ಪ್ರಯತ್ನ ಪಡುತ್ತಿದ್ದರೂ ಸಹ ಈ ಸಮಸ್ಯೆಯಿಂದ ಮುಕ್ತಿ ಕಂಡುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಆದರೆ ನರೇಂದ್ರ ಮೋದಿ ಸರ್ಕಾರ ಈ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಹೊಸ ಹೆಜ್ಜೆಯನ್ನೇ ಇಟ್ಟಿದೆ. ಯಾರೂ ನಿರೀಕ್ಷಿಸದಂತೆ ಅತಿ ದೊಡ್ಡ ಯೋಜನೆಯನ್ನು ಮೋದಿ ಸರ್ಕಾರ ಜಾರಿಗೊಳಿಸಿದ್ದು, ಬಡವರ ಪಾಲಿಗೆ ಭಾರೀ ಕೊಡುಗೆಯನ್ನೇ ನೀಡಿದ್ದಾರೆ.

ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಸೌಲಭ್ಯ:

ದೇಶದ ಎಲ್ಲ ಸರಕಾರಿ ಆಸ್ಪತ್ರೆಗಳನ್ನು ಈ ಯೋಜನೆಗೆ ಸ್ವಯಂಚಾಲಿತವಾಗಿ ನಿಯೋಜನೆ ಮಾಡಲಾಗಿರುತ್ತದೆ. ಖಾಸಗಿ ಆಸ್ಪತ್ರೆಗಳನ್ನು ಆನ್‍ಲೈನ್‍ನಲ್ಲಿ ನಿಗದಿತ ಮಾನದಂಡದ ಆಧಾರದಲ್ಲಿ ನಿಯೋಜಿಸಲಾಗುತ್ತದೆ.

ಚಿಕಿತ್ಸೆ ವೆಚ್ಚ ನಿಗದಿ:

ಚಿಕಿತ್ಸೆ ವೆಚ್ಚವನ್ನು ಪ್ಯಾಕೇಜ್ ಆಧಾರದಲ್ಲಿ ಪೂರ್ವನಿಗದಿಗೊಳಿಸಲಾಗುತ್ತದೆ. ಚಿಕಿತ್ಸೆಯ ಎಲ್ಲ ವೆಚ್ಚವನ್ನೂ ಈ ಪ್ಯಾಕೇಜ್ ಒಳಗೊಂಡಿರುತ್ತದೆ. ಇದರಿಂದ ಆಸ್ಪತ್ರೆಗಳು ಫಲಾನುಭವಿಗಳಿಗೆ ಚಿಕಿತ್ಸೆಗೆ ವಿಪರೀತ ವೆಚ್ಚವನ್ನು ವಿಧಿಸುವುದನ್ನು ನಿಯಂತ್ರಿಸಬಹುದಾಗಿದೆ. ಪ್ಯಾಕೇಜ್ ದರವನ್ನು ನಿಗದಿತ ಮಿತಿಯಲ್ಲಿ ರಾಜ್ಯಗಳು ಬದಲಿಸಬಹುದಾಗಿದೆ.
ವಿಮೆ ಯೋಜನೆಯನ್ನು ರಾಜ್ಯಗಳೇ ಅನುಷ್ಠಾನಗೊಳಿಸ ಬೇಕಿದ್ದು, ಯಾವ ವಿಧಾನದಲ್ಲಿ ಜಾರಿಗೊಳಿಸಬೇಕು ಎಂಬುದನ್ನೂ ಅವು ನಿರ್ಧರಿಸಲಿವೆ. ವಿಮೆ ಕಂಪೆನಿಗಳ ಮೂಲಕ ಇದನ್ನು ಜಾರಿಗೊಳಿಸಲೂ ಅವಕಾಶವಿದೆ. ಜತೆಗೇ ಟ್ರಸ್ಟ್ ಅಥವಾ ಸೊಸೈಟಿಯ ಮೂಲಕ ನಿರ್ವಹಿಸ ಬಹುದು.

Image result for modi budget

ಪ್ರತ್ಯೇಕ ಕೌನ್ಸಿಲ್ ಸ್ಥಾಪನೆ:

ಯೋಜನೆಯನ್ನು ನಿರ್ವಹಿಸಲು ಪ್ರತ್ಯೇಕ ಆಯುಷ್ಮಾನ್ ಭಾರತ್ ರಾಷ್ಟ್ರೀಯ ಆರೋಗ್ಯ ರಕ್ಷಣೆ ಮಿಷನ್ ಕೌನ್ಸಿಲ್ ಸ್ಥಾಪಿಸಲಾಗುತ್ತದೆ. ಇದರ ನೇತೃತ್ವವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ವಹಿಸಿರುತ್ತಾರೆ. ಅಲ್ಲದೆ ಆಡಳಿತ ಮಂಡಳಿ ಹಾಗೂ ಏಜೆನ್ಸಿಯನ್ನೂ ಸ್ಥಾಪಿಸಲಾಗಿದ್ದು, ಇವು ವಿವಿಧ ಹಂತದಲ್ಲಿ ಯೋಜನೆ ಅನುಷ್ಠಾನದ ಮೇಲ್ವಿಚಾರಣೆ ವಹಿಸಲಿವೆ. ರಾಜ್ಯ ಮಟ್ಟದಲ್ಲಿ ರಾಜ್ಯ ಆರೋಗ್ಯ ಏಜೆನ್ಸಿಯನ್ನು ಸ್ಥಾಪಿಸಬೇಕಿದೆ. ಕೇಂದ್ರ ಸರಕಾರದಿಂದ ಈ ರಾಜ್ಯದ ಏಜೆನ್ಸಿಗಳಿಗೆ ನೇರವಾಗಿ ಅನುದಾನ ವರ್ಗಾವಣೆ ಮಾಡಲಾಗುತ್ತದೆ.

ಆರೋಗ್ಯ ವಿಮೆ ಪ್ರೀಮಿಯಂ ಹೆಚ್ಚಳ:

ಆನುವಂಶಿಕ ರೋಗಗಳನ್ನೂ ಆರೋಗ್ಯ ವಿಮೆ ವ್ಯಾಪ್ತಿಗೆ ಒಳಪಡಿಸುವಂತೆ ವಿಮೆ ನಿಯಂತ್ರಕ ಪ್ರಾಧಿಕಾರ (ಐಆರ್‍ಡಿಎಐ) ಸೂಚಿಸಿದ ನಂತರದಲ್ಲಿ, ವಿಮೆ ಪ್ರೀಮಿಯಂ ಹೆಚ್ಚಳ ಮಾಡಲು ಅವಕಾಶ ನೀಡುವಂತೆ ವಿಮೆ ಕಂಪೆನಿಗಳು ಐಆರ್‍ಡಿಎಐ ಮೊರೆ ಹೋಗಲಿವೆ. ಆನುವಂಶಿಕ ರೋಗದ ಆಧಾರದಲ್ಲಿ ಯಾವುದೇ ವಿಮೆ ಕ್ಲೇಮ್ ತಿರಸ್ಕರಿಸಬಾರದು ಎಂದು ವಿಮೆ ಕಂಪೆನಿಗಳಿಗೆ ಸೂಚನೆ ನೀಡಲಾಗಿತ್ತು. ಈ ಬಗ್ಗೆ ದಿಲ್ಲಿ ಹೈಕೋರ್ಟ್ ಇತ್ತೀಚೆಗಷ್ಟೇ ತೀರ್ಪು ನೀಡಿತ್ತು.

ಪ್ರೀಮಿಯಂ ಮೊತ್ತ ಎಷ್ಟು?

ಸದ್ಯಕ್ಕೆ ಪ್ರೀಮಿಯಂ ಮೊತ್ತದ ಬಗ್ಗೆ ಯಾವುದೇ ನಿರ್ಧಾರವನ್ನು ಕೇಂದ್ರ ಸರಕಾರ ಪ್ರಸ್ತಾಪಿಸಿಲ್ಲ. ಆದರೆ ಪ್ರೀಮಿಯಂ ಮೊತ್ತದ ಹಂಚಿಕೆಯನ್ನು ರಾಜ್ಯದೊಂದಿಗೆ ಕೇಂದ್ರ ಹಂಚಿಕೊಳ್ಳಲಿದೆ.
ಕಚ್ಚಾ ಗೋಡೆ, ಛಾವಣಿ ಹೊಂದಿರುವ 1 ಕೋಣೆಯ ಮನೆಯಲ್ಲಿರುವರು ಪರಿಶಿಷ್ಟ ಜಾತಿ, ಪಂಗಡದ ಕುಟುಂಬ ನಿರಾಶ್ರಿತ ಕೂಲಿ ಕಾರ್ಮಿಕರ ಕುಟುಂಬ ಮಲಹೊರುವ ಕುಟುಂಬ, ಬುಡಕಟ್ಟು ಕುಟುಂಬ ಹಾಗೂ ಇತರ

ಶೀಘ್ರದಲ್ಲಿ ಆನ್‍ಲೈನ್ ವ್ಯವಸ್ಥೆ

ನೀತಿ ಆಯೋಗದ ಸಹಭಾಗಿತ್ವದಲ್ಲಿ ಕೇಂದ್ರ ಸರಕಾರವು ಈ ಯೋಜನೆಗೆ ಪ್ರತ್ಯೇಕ ಆನ್‍ಲೈನ್ ವ್ಯವಸ್ಥೆಯನ್ನು ರೂಪಿಸಲಿದ್ದು, ಇದು ಅನುಷ್ಠಾನದ ಜತೆಗೆ ದುರ್ಬಳಕೆಯನ್ನೂ ನಿಯಂತ್ರಿಸಲಿದೆ.

ಒಟ್ಟಾರೆ ಆರೋಗ್ಯ ಕ್ಷೇತ್ರಕ್ಕೆ ಭಾರೀ ಕೊಡುಗೆಯನ್ನು ಘೋಷಣೆ ಮಾಡಿದ ಮೋದಿ ಸರ್ಕಾರ ಬಡ ಕುಟುಂಬಗಳಿಗೆ ಆಶಾಕಿರಣವಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ವಿಶ್ವಾದಾಖಲೆಯನ್ನೂ ಮಾಡಿದ್ದು ಇದು ಜನರಿಗೆ ನೇರವಾಗಿ ತಲುಪುವ ನಿರೀಕ್ಷೆಯನ್ನೂ ಹುಟ್ಟುಹಾಕಿದೆ. ಕೇಂದ್ರ ಸರ್ಕಾರದ ಈ ಮಹತ್ತರ ಯೋಜನೆ ಕೋಟ್ಯಂತರ ಜನರಿಗೆ ಉಪಯೋಗವಾಗಲಿದೆ ಎಂಬುದರಲ್ಲಿ ಎರಡು ಮಾತಿಲ್ಲ.!!

ಪವಿತ್ರ

Tags

Related Articles

Close