ಪ್ರಚಲಿತ

ಅಂತರಿಕ್ಷದಲ್ಲಿ ಭಾರತದ ಮೂರನೆ ಕಣ್ಣು NavIC ಉಡಾವಣೆಗೆ ಕ್ಷಣಗಣನೆ!! ಕಾರ್ಗಿಲ್ ಯುದ್ದದ ಸಮಯದಲ್ಲಿ GPS ನೀಡಲು ನಿರಾಕರಿಸಿದ ಅಮೇರಿಕಾಕ್ಕೆ ಅಂತರಿಕ್ಷದಲ್ಲಿ ಸೆಡ್ಡು ಹೊಡೆದ ಭಾರತ!!

ಅದೊಂದು ಕಾಲವಿತ್ತು ಭಾರತ ಏನೇ ಸಹಾಯ ಕೇಳಿದರೂ ದೊಡ್ಡಣ್ಣ ಆಗದು ಎಂದು ಅಡ್ಡಡ್ಡ ತಲೆ ಆಡಿಸುತ್ತಿದ್ದ. ಸೂಪರ್ ಕಂಪ್ಯೂಟರ್ ತಂತ್ರಜ್ಞಾನ, ಪರಮಾಣು ಬಾಂಬ್ ತಯಾರಿಸುವ ತಂತ್ರಜ್ಞಾನ, GPS ತಂತ್ರಜ್ಞಾನ, ಭಾರತ ಏನೇ ಸಹಾಯ ಕೇಳಿದರೂ ಅಮೇರಿಕಾ ತಾನು ಕೊಡುವುದಿಲ್ಲ ಎನ್ನುತ್ತಿತ್ತು. ಪದೆ ಪದೆ ನಿರಾಕರಣೆಗೊಳಗಾದರೂ ಭಾರತ ಮಾತ್ರ “ಆಗದು ಎಂದು ಕೈ ಕಟ್ಟಿ ಕುಳಿತುಕೊಳ್ಳುತ್ತಿರಲಿಲ್ಲ”, ಬದಲಾಗಿ ತನ್ನ ಸ್ವಂತ ಪ್ರಯತ್ನದಿಂದ ಎಲ್ಲವನ್ನೂ ತಾನೇ ತಯಾರಿಸುತ್ತಾ ಹೋಯಿತು. ಇವತ್ತು ಅಮೇರಿಕಾದಂತಹ ಬಲಿಷ್ಟ ರಾಷ್ಟ್ರಗಳೆ ಭಾರತದ ಕೈ ಕಾಲು ಹಿಡಿಯುವ ಕಾಲ ಬಂದಿದೆ ಎಂದರೆ ಕಾಲನ ಮಹಿಮೆ ಮತ್ತು ಭಾರತೀಯರ ಸ್ಥೆರ್ಯ ಎರಡಕ್ಕೂ ನಮೋ ಎನ್ನಲೆ ಬೇಕು.

1999 ರಲ್ಲಿ ಕಾರ್ಗಿಲ್ ಯುದ್ದ ಸಮಯದಲ್ಲಿ ಭಾರತಕ್ಕೆ ಉಗ್ರರ ಅಡಗುದಾಣಗಳನ್ನು ಪತ್ತೆ ಹಚ್ಚಲು GPS ಸಹಾಯ ಬೇಕಾಗಿತ್ತು. ಭಾರತದ ಬಳಿ GPS ಉಪಗ್ರಹ ಇಲ್ಲದ ಕಾರಣ ಅಮೇರಿಕಾದ ಬಳಿ ಸಹಾಯ ಕೋರಿತು. ಆದರೆ ಧಿಮಾಕಿನ ದೊಡ್ಡಣ್ಣ ಭಾರತ ಮುಖಕ್ಕೆ ಬಾಗಿಲು ಬಡಿದು ಬಿಟ್ಟ. ಭಾರತಕ್ಕೆ ತನ್ನದೆ ಆದ GPS ಉಪಗ್ರಹ ತಯಾರಿಸುವ ಅಗತ್ಯತೆ ಕಂಡು ಬಂದಿದ್ದು ಆಗಲೆ. ಹತ್ತು ವರ್ಷಗಳ ಯೂಪಿಎ ಆಡಳಿತದಲ್ಲಿ ಮಂತ್ರಿ ಮಾಗಧರು ಹಗರಣಗಳನ್ನು ಮಾಡುವ ಕೆಲಸದಲ್ಲಿ ನಿರತರಾಗಿದ್ದರಿಂದ ಮತ್ತು ದೇಶವನ್ನು ಅಭಿವೃದ್ದಿ ಮಾಡಲು ಪುರುಸೊತ್ತಿಲ್ಲದ ಕಾರಣ ಭಾರತದ ಸ್ವಂತ GPS ಉಪಗ್ರಹ ಉಡಾವಣೆಯ ಕನಸು ಹಳ್ಳ ಹಿಡಿಯಿತು.

ನಾಲ್ಕು ವರ್ಷಗಳ ಹಿಂದೆ ಅಭಿವೃದ್ದಿಯ ಹರಿಕಾರ ಮೋದಿ, ಭಾರತದ ಭಾಗ್ಯವನ್ನೆ ಬದಲಾಯಿಸಲು ಭಗವಂತನಿಂದ ನಿಯೋಜಿತನಾಗಿ ಬಂದರು ನೋಡಿ, ಅಲ್ಲಿಗೆ ಖುಲಾಯಿಸಿತು ಭಾರತೀಯರ ಭಾಗ್ಯ. ಭಾರತವನ್ನು ಸ್ವಾವಲಂಬಿಯಾಗಿಸುವ ಅವರ ಶತಪ್ರತ್ನಕ್ಕೆ ಕಡೆಗೂ ಫಲ ದೊರಕಲಿದೆ. ಎರಡು ದಶಕಗಳ ಭಾರತದ ಕನಸು ನನಸಾಗಲಿದೆ. ಭಾರತ ತನ್ನ ಮೊತ್ತ ಮೊದಲ ಸ್ವದೇಶೀ ನಿರ್ಮಿತ GPS ಉಪಗ್ರಹ ಉಡಾವಣೆ ಮಾಡಲಿದೆ! ಮೋದಿಯವರ ಕನಸಿನ ಕೂಸು ‘NavIC’ ಇನ್ನೇನು ಬಾನಂಗಳಕ್ಕೆ ನೆಗೆಯಲಿದೆ. ಈ ಉಡಾವಣೆಯೊಂದಿಗೆ, ಭಾರತ ತಮ್ಮ ಸ್ವಂತ ಉಪಗ್ರಹ ಸಂಚಾರ ವ್ಯವಸ್ಥೆ ಹೊಂದಿರುವ ಕೆಲವೇ ಕೆಲವು ರಾಷ್ಟ್ರಗಳ ಕೂಟವನ್ನು ಸೇರಿಕೊಳ್ಳಲಿದೆ!

ಅಮೇರಿಕಾ, ರಷ್ಯಾ, ಯೂರೋಪ್ ನ ಹೆಗಲಿಗೆ ಹೆಗಲು ಕೊಟ್ಟು ಭಾರತವಿನ್ನು ಅಂತರಿಕ್ಷದಲ್ಲಿ ಸಾಗಲಿದೆ. ವಿಶೇಷವೆಂದರೆ ಏಳು ಉಪಗ್ರಹಗಳನ್ನು ಹೊಂದಿರುವ ಭಾರತದ NavIC, ಇಪ್ಪತ್ತ ನಾಲ್ಕು ಉಪಗ್ರಹಗಳನ್ನು ಹೊಂದಿರುವ ಅಮೇರಿಕಾದ GPS ಗಿಂತಲೂ ಹೆಚ್ಚು ನಿಖರವಾಗಿದೆ! ನವಿಕ್ 20-30 ಮೀಟರ್ಗಳಷ್ಟು ಪ್ರದೇಶವನ್ನು ನಿಖರವಾಗಿ ತೋರಿಸಬಲ್ಲುದು ಎನ್ನುತ್ತಾರೆ ವಿಜ್ಞಾನಿಗಳು. ಸುಮಾರು 1,400 ಕೋಟಿ ವೆಚ್ಚದಲ್ಲಿ ತಯಾರಿಸಲಾದ NavIC ಭಾರತವನ್ನು ಮತ್ತು ಭಾರತದ ಗಡಿಯಿಂದ 1,500 ಕಿಲೋಮೀಟರುಗಳಷ್ಟು ಪ್ರದೇಶವನ್ನು ಆವರಿಸುತ್ತದೆ ಎಂದು ತಿಳಿದು ಬಂದಿದೆ. NavIC ಉಪಗ್ರಹ ಭೌಗೋಳಿಕ, ವೈಮಾನಿಕ ಮತ್ತು ಸಮುದ್ರ ಸಂಚಾರಕ್ಕೆ ಸಹಾಯ ಮಾಡುತ್ತದೆ. ಒಂದರ್ಥದಲ್ಲಿ NavIC ಅಂತರಿಕ್ಷದಲ್ಲಿ ಭಾರತದ ಮೂರನೆ ಕಣ್ಣಿನಂತೆ ಕೆಲಸ ಮಾಡಲಿದೆ ಎಂದರೆ ತಪ್ಪಾಗಲಾರದು. ಇನ್ನು ಕೆಲವೆ ದಿನಗಳಲ್ಲಿ ಭಾರತದ NavIC GPS ನಿಮ್ಮ ಸ್ಮಾರ್ಟ್ ಫೋನ್ ಗಳಲ್ಲಿ ದೊರಕಲಿದೆ. ವಿದೇಶೀ ತ್ಯಜಿಸಿ ಸ್ವದೇಶೀ ಬಳಸಿ.

ಉಗ್ರರ ಮೇಲೆ ಹದ್ದಿನ ಕಣ್ಣಿಟ್ಟಿರುವ ಮೋದಿ ಸರಕಾರ ಮತ್ತು ಸೇನೆ ಎರಡು ಕಣ್ಣುಗಳಾದರೆ NavIC ಮೂರನೆ ಕಣ್ಣಾಗಲಿದೆ. ಇನ್ನು NavIC ನ ಕಣ್ಣು ತಪ್ಪಿಸಿ ಹಕ್ಕಿಯೂ ಕೂಡಾ ಭಾರತದ ಗಡಿ ಪ್ರವೇಶಿಸಲಾರದು! ಎರಡು ಆವರ್ತನ(ಎಸ್ ಮತ್ತು ಎಲ್ ಬ್ಯಾಂಡ್) ವ್ಯವಸ್ಥೆ ಹೊಂದಿರುವ NavIC ಅಮೇರಿಕಾದ GPS ಗಿಂತ ಹೆಚ್ಚು ಕರಾರುವಾಕ್ಕಾಗಿ ಕಾರ್ಯ ನಿರ್ವಹಿಸಲಿದೆ ಎಂದು ಹೇಳಲಾಗಿದೆ. ಬರೋಬ್ಬರಿ ಎರಡು ದಶಕಗಳ ಬಳಿಕ ಭಾರತಕ್ಕೆ ತನ್ನ ಸ್ವಂತ GPS ದೊರಕಲಿರುವುದು ಭಾರತೀಯರೆಲ್ಲರಿಗೂ ಸಂತಸದ ವಿಷಯ. ಭಾರತೀಯ ಸೇನೆಗೆ ಇದರಿಂದ ಆನೆ ಬಲ ಬರಲಿದೆ. ಮೋದಿ ನಾಯಕತ್ವದಲ್ಲಿ ಭಾರತ ಅಸಾಧ್ಯವಾದುದನ್ನು ಸಾಧಿಸುತ್ತಿದೆ. ಭಾರತದ ಅಭಿವೃದ್ದಿ ಇದೆ ತೆರನಾಗಿ ಸಾಗಬೇಕಾದರೆ ಮುಂದಿನ ಬಾರಿಯೂ ಮೋದಿ ಅವರನ್ನು ಗೆಲ್ಲಿಸಿ…

ಭಾರತವನ್ನು ಅಂತರಿಕ್ಷದ ಬಾಹುಬಲಿಯಾಗಿಸಲು ಹಗಲಿರುಳು ದುಡಿಯುತ್ತಿರುವ ವಿಜ್ಞಾನಿಗಳಿಗೊಂದು ಸಲಾಂ… ಜೈ ಜವಾನ್.. ಜೈ ಕಿಸಾನ್.. ಜೈ ವಿಜ್ಞಾನ್….

-ಶಾರ್ವರಿ

Tags

Related Articles

Close