ಪ್ರಚಲಿತ

ನೂತನ ಇತಿಹಾಸ ಸೃಷ್ಟಿಸಿದ ಮೋದಿ ಸರ್ಕಾರ!! ಯುಪಿಎ ಆಡಳಿದ ದಾಖಲೆ ಮುರಿದ ಎನ್ ಡಿ ಎ!!

ನರೇಂದ್ರ ಮೋದಿಯವರು ಅಧಿಕಾರದ ಚುಕ್ಕಾಣಿಯನ್ನು ಹಿಡಿದಂದಿನಿಂದಲೂ ದೇಶ ಅಭಿವೃದ್ದಿಯತ್ತ ಸಾಗುತ್ತಿದೆಯಲ್ಲದೇ, ನರೇಂದ್ರ ಮೋದಿಯವರ ಸಾಧನೆಗೆ ಇಡೀ ವಿಶ್ವವೇ ತಾ ಮುಂದು ನಾ ಮುಂದು ಎಂದು ಸ್ನೇಹ ಬಯಸಲು ಮುಂದಾಗುತ್ತಿದ್ದರೆ ಬುದ್ದಿಜೀವಿಗಳು ಮಾತ್ರ ಮೋದಿಯನ್ನು ತೆಗಳುವುದರಲ್ಲಿ ಬ್ಯುಸಿಯಾದರು!! ಆದರೆ ನರೇಂದ್ರ ಮೋದಿಯವರು ಅಧಿಕಾರ ಸ್ವೀಕರಿಸಿದ ಕೆಲವೇ ವರ್ಷಗಳಿಗೆ ದೇಶ ಅದೆಷ್ಟು ಬದಲಾವಣೆಯ ಹಾದಿಯನ್ನು ಹಿಡಿದೆ ಎಂದರೆ ಅತೀ ಕಡಿಮೆ ಅವಧಿಯಲ್ಲಿ ಹೆಚ್ಚು ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಾಣ ಮಾಡಿ ಇಂದು ಹೊಸ ಇತಿಹಾಸವನ್ನೇ ಸೃಷ್ಟಿ ಮಾಡುವಷ್ಟು!!

ಹೌದು… ವಂಶ ಪಾರಂಪರೆಯ ಆಡಳಿತದಲ್ಲಿ ಬೇಸತ್ತಿದ್ದ ದೇಶ ಇಂದು ಪ್ರಗತಿ ಪಥದತ್ತ ಸಾಗುತ್ತಿದೆ ಎಂದರೆ ಅದು ನರೇಂದ್ರ ಮೋದಿಯವರ ರಾಜತಾಂತ್ರಿಕ ಯಶಸ್ಸಿನಿಂದ ಮಾತ್ರ ಸಾಧ್ಯ!! 2014ರಲ್ಲಿ ಚರಿತ್ರಾರ್ಹ ಗೆಲುವನ್ನು ದಾಖಲಿಸುವ ಮೂಲಕ ಬಿಜೆಪಿಯು ಪ್ರಚಂಡ ಜಯದೊಂದಿಗೆ ಹತ್ತು ವರ್ಷಗಳ ಯುಪಿಎ ಆಡಳಿತವನ್ನು ಬದಿಗೊತ್ತಿ ಕೇಂದ್ರದಲ್ಲಿ ಅಧಿಕಾರ ಸ್ಥಾಪಿಸಿತು. ಅಷ್ಟೇ ಅಲ್ಲದೇ ಮೋದಿ ಅಧಿಕಾರಕ್ಕೆ ಬಂದಿದ್ದು ಜನಸಾಮಾನ್ಯರಲ್ಲಿ, ಸಾಮಾಜಿಕ ವಲಯಗಳಲ್ಲಿ ಹೊಸ ಆಶಾಕಿರಣ ಮೂಡಿಸಿತ್ತಲ್ಲದೆ, ಷೇರು ಪೇಟೆಯಲ್ಲೂ ದೊಡ್ಡ ಮಟ್ಟದ ಏರಿಕೆ ದಾಖಲಿಸಿತು. ಆದರೆ ಇದೀಗ ಹೆಚ್ಚು ರಾಷ್ಟ್ರೀಯ ಹೆದ್ದಾರಿಗಳ ಅತೀ ಕಡಿಮೆ ಅವಧಿಯಲ್ಲಿ ನಿರ್ಮಾಣ ಮಾಡುವ ಮೂಲಕ ಹೊಸ ಇತಿಹಾಸವನ್ನೇ ಸೃಷ್ಟಿಸಿದ್ದಾರೆ ಎಂದರೆ ಅದಕ್ಕಿಂತಲೂ ಹೆಮ್ಮೆಯ ವಿಚಾರ ಮತ್ತೊಂದಿಲ್ಲ

Image result for modi.

ಕೇಂದ್ರ ಸರಕಾರ ಅಸ್ತಿತ್ವಕ್ಕೆ ಬಂದ ಮೇಲೆ ಹಲವು ಮಹತ್ತರ ಬದಲಾವಣೆಗಳು ಕಂಡು ಬಂದಿದ್ದು, ಅದರಲ್ಲೂ ಸರ್ಕಾರಿ ಯೋಜನೆಗಳು, ಕಾಮಗಾರಿಗಳು ತೀವ್ರ ವೇಗ ಪಡೆದುಕೊಂಡಿವೆ!! ಅದಕ್ಕೆ ನಿದರ್ಶನವೆಂಬಂತೆ ಕಳೆದ ನಾಲ್ಕು ವರ್ಷಗಳಲ್ಲಿ 9 ಕೋಟಿ ಶೌಚಾಲಯ ನಿರ್ಮಾಣ, ಜನಧನ್ ಯೋಜನೆ ಅನ್ವಯ ಖಾತೆ ತೆರೆಯುವುದು ಸೇರಿ ಹಲವು ಯೋಜನೆಗಳು ಕ್ಷಿಪ್ರಗತಿಯಲ್ಲಿ ಸಾಗಿವೆ. ಇಂತಹ ವೇಗಕ್ಕೆ ಮತ್ತೊಂದು ನಿದರ್ಶನ ಎನ್ನುವಂತೆ, ಯುಪಿಎ ಅವಧಿಯಲ್ಲಿನ ನಾಲ್ಕು ವರ್ಷಕ್ಕಿಂತಲೂ ವೇಗವಾಗಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಸಾಧನೆಯ ಹಾದಿಯನ್ನು ಹಿಡಿದಿದ್ದು!!

2010-11ರ ಯುಪಿಎ ಆಡಳಿತಕ್ಕೆ ಹೋಲಿಸಿದರೆ 2017-18ರ ನರೇಂದ್ರ ಮೋದಿ ಆಡಳಿತದಲ್ಲಿ ಶೇಕಡಾ 73ರಷ್ಟು ಹೆಚ್ಚು ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣವಾಗಿದೆ. ಅಷ್ಟೇ ಅಲ್ಲದೇ 2014-15ನೇ ಸಾಲಿನಿಂದ 2017-18ನೇ ಸಾಲಿನವರೆಗೆ ದೇಶಾದ್ಯಂತ 28,534 ಕಿಲೋ ಮೀಟರ್ ಉದ್ದದ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಾಣ ಮಾಡಿದೆ. ಆದರೆ ಇಷ್ಟೇ ಅವಧಿಯಲ್ಲಿ ಯುಪಿಎ ಸರ್ಕಾರ ಇದ್ದಾಗ ಕೇವಲ 16,505 ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಿತ್ತು. ಹಾಗಾಗಿ ದೇಶದಲ್ಲಿ ಅಭಿವೃದ್ಧಿ ಮಂತ್ರವನ್ನು ಜಪಿಸುತ್ತಿರುವ ನರೇಂದ್ರ ಮೋದಿಯವರು ದೇಶಾದ್ಯಂತ ವೇಗವಾಗಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಿದ ಕೀರ್ತಿಗೂ ಭಾಜನರಾಗಿದ್ದಾರೆ.

ದೇಶದ ಸಾರಿಗೆ ಸಂಪರ್ಕ ವ್ಯವಸ್ಥೆಯನ್ನು ಬಲಪಡಿಸುವುದು ಕೇಂದ್ರ ಸರ್ಕಾರದ ಮುಖ್ಯ ಧ್ಯೇಯವಾಗಿದ್ದು, ರಸ್ತೆ ಕಾಮಗಾರಿಗಳಲ್ಲಿ ಲಕ್ಷಾಂತರ ಯುವಕರಿಗೆ ಉದ್ಯೋಗ ನೀಡುವ ಗುರಿಯನ್ನು ಹೊಂದಿರುವ ವಿಚಾರ ಗೊತ್ತೇ ಇದೆ. ಅಷ್ಟೇ ಅಲ್ಲದೇ ಒಳ್ಳೆಯ ಸಾರಿಗೆ ವ್ಯವಸ್ಥೆಯು ಲಭ್ಯವಿರುವ ಸಂಪನ್ಮೂಲಗಳು, ಉತ್ಪಾದನಾ ಕೇಂದ್ರಗಳು ಮತ್ತು ಮಾರುಕಟ್ಟೆಯ ನಡುವೆ ಅಗತ್ಯವಾದ ಸಂಪರ್ಕ ಸೇತುವಿನಂತೆ ಕೆಲಸ ಮಾಡುತ್ತ, ದೇಶದ ಆರ್ಥಿಕ ಬೆಳವಣಿಗೆಗೆ ನೆರವು ನೀಡುತ್ತಿದೆ. ಹಾಗಾಗಿ ಮೋದಿ ಸರಕಾರವು ಕಳೆದ ನಾಲ್ಕು ವರ್ಷದಲ್ಲಿ ಯುಪಿಎ ಅವಧಿಗಿಂತಲೂ 12 ಸಾವಿರಕ್ಕೂ ಅಧಿಕ ಕಿಲೋಮೀಟರ್ ಉದ್ದದ ರಸ್ತೆ ನಿರ್ಮಾಣ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದೆ.

ಈಗಾಗಲೇ ನರೇಂದ್ರ ಮೋದಿಯವರು 2014- 15ರ ಅವಧಿಯಲ್ಲಿ 1.40 ಲಕ್ಷ ಕಿ.ಮೀ ಉದ್ದದ ರಸ್ತೆಯಲ್ಲಿ ನಿರ್ಮಾಣ ಮಾಡಿದ್ದು, ಇದು ಈ ಮೂರು ವರ್ಷದಲ್ಲೇ ಅತ್ಯಧಿಕವಾಗಿದೆ. ಇನ್ನು, 2015-16 ಅವಧಿಯಲ್ಲಿ ಪ್ರತಿ ದಿನ 16 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗಿತ್ತು. ಒಟ್ಟಿನಲ್ಲಿ ಅತೀ ಕಡಿಮೆ ಸಮಯದಲ್ಲಿ 12 ಸಾವಿರಕ್ಕೂ ಅಧಿಕ ಕಿಲೋಮೀಟರ್ ಉದ್ದದ ರಸ್ತೆ ನಿರ್ಮಾಣ ಮಾಡುವ ಮೂಲಕ ನರೇಂದ್ರ ಮೋದಿ ಸರಕಾರವು ಹೊಸ ಇತಿಹಾಸ ಸೃಷ್ಟಿಸಿದ್ದಂತೂ ಅಕ್ಷರಶಃ ನಿಜ.

ಮೂಲ: http://news13.in/archives/104085

– ಅಲೋಖಾ

Tags

Related Articles

Close