ಪ್ರಚಲಿತ

ಭಾರತ – ಶ್ರೀಲಂಕಾ ನಡುವಣ ಸಂಪರ್ಕಕ್ಕೆ ಹೊಸ ಕೊಂಡಿ

ಪ್ರಸ್ತುತ ಪ್ರಪಂಚದ ಎಲ್ಲಾ ರಾಷ್ಟ್ರಗಳು ಇಂದು ಭಾರತದ ಸ್ನೇಹ ಹಸ್ತವನ್ನು ಚಾಚಿ ಬರುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾರತವನ್ನು ಮುನ್ನೆಡೆಸಲು ಆರಂಭಿಸಿದಾಗಿನಿಂದ ಪ್ರಪಂಚ ಭಾರತವನ್ನು ನೋಡುವ ದೃಷ್ಟಿಕೋನ ಬದಲಾಗಿದೆ. ಎಲ್ಲಾ ರಾಷ್ಟ್ರಗಳಿಗೂ ಭಾರತದ ಶಕ್ತಿಯ ಅರಿವಾಗಿದೆ ಎನ್ನುವುದು ಸ್ಪಷ್ಟ. ಭಾರತ ವಿಶ್ವಕ್ಕೆ ನಾಯಕನ ಹಾಗೆ ತನ್ನ ವರ್ಚಸ್ಸನ್ನು ವೃದ್ಧಿಸಿಕೊಂಡಿದೆ ಎಂದರೆ, ಅದರ ಹಿಂದೆ ಪ್ರಧಾನಿ ನರೇಂದ್ರ ಮೋದಿ ಮತ್ತು ತಂಡದ ಶ್ರಮವಿದೆ ಎನ್ನುವುದನ್ನು ನಾವು ಅರಿತುಕೊಳ್ಳಬೇಕಿದೆ.

ಭಾರತ ಮತ್ತು ಶ್ರೀಲಂಕಾಗಳ ನಡುವಿನ ರಾಜತಾಂತ್ರಿಕ ಸಂಬಂಧ, ಆರ್ಥಿಕ ಸಂಬಂಧಗಳಲ್ಲಿ ಹೊಸ ಅಧ್ಯಾಯವೊಂದು ತೆರೆದುಕೊಳ್ಳುತ್ತಿದೆ. ಸಂಪರ್ಕ ವ್ಯವಸ್ಥೆಯೊಂದನ್ನು ಉಭಯ ದೇಶಗಳ ನಡುವಿನ ಕೊಂಡಿಯಾಗಿ ಆರಂಭಿಸಲು ನಿರ್ಧರಿಸಿದ್ದು, ಇದರಿಂದಾಗಿ ಉಭಯ ದೇಶಗಳು ಮತ್ತಷ್ಟು ಹತ್ತಿರವಾಗಲಿವೆ ಎಂದು ಪ್ರಧಾನಿ ಮೋದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಶ್ರೀಲಂಕಗೆ ಭಾರತದಿಂದ ದೋಣಿ ಸೇವೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಆರಂಭಿಸಿ ಮಾತನಾಡಿದ ಪ್ರಧಾನಿ ಮೋದಿ, ಆ ಸಂಪರ್ಕ ಸೇತುವೆ ಉಭಯ ದೇಶಗಳ ಬಾಂಧವ್ಯ ವೃದ್ಧಿಗೆ ಕಾರಣವಾಗಲಿದೆ ಎಂದು ತಿಳಿಸಿದ್ದಾರೆ. ಭಾರತ ಮತ್ತು ಶ್ರೀಲಂಕಾ ನಡುವಿನ ಆರ್ಥಿಕ ಮತ್ತು ರಾಜತಾಂತ್ರಿಕ ಸಂಬಂಧ ಹೆಚ್ಚುವುದಕ್ಕೂ ಈ ದೋಣಿ ಸೇವೆ ಆರಂಭವಾಗುವುದು ಮಹತ್ವದ ಮೈಲಿಗಲ್ಲಾಗಲಿದೆ ಎಂದು ಅವರು ನುಡಿದಿದ್ದಾರೆ.

ಶ್ರೀಲಂಕಾದ ಕಂಕಸಂಂತುರೈ ಮತ್ತು ಭಾರತದ ನಾಗಪಟ್ಟಣಂ ನಡುವೆ ಈ ದೋಣಿ ಸೇವೆ ಆರಂಭಿಸಲಾಗಿದೆ. ಇದು ಎರಡು ನಗರಗಳನ್ನು ಹತ್ತಿರ ತರುವುದರ ಜೊತೆಗೆ, ಉಭಯ ದೇಶಗಳು, ಎರಡೂ ದೇಶಗಳ ಜನರನ್ನು ಹತ್ತಿರ ಸೇರಿಸುವಲ್ಲಿ ಮುಖ್ಯ ಪಾತ್ರ ವಹಿಸಲಿದೆ ಎಂದು ಅವರು ಹೇಳಿದ್ದಾರೆ. ಎರಡೂ ರಾಷ್ಟ್ರಗಳ ಸಂಬಂಧ ಹೆಚ್ಚಿಸುವಲ್ಲಿಯೂ ಈ ಸೇವೆ ಮಹತ್ವ ಪಡೆಯಲಿದೆ.

ಭಾರತ ಮತ್ತು ಶ್ರೀಲಂಕಾಗಳ ಸಂಸ್ಕೃತಿ, ವಾಣಿಜ್ಯ ಮತ್ತು ನಾಗರಿಕತೆಯ ಹಂಚಿಕೆ ಇತಿಹಾಸವನ್ನು ಪ್ರಧಾನಿ ಮೋದಿ ಅವರು ಇದೇ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದಾರೆ. ಪ್ರಸ್ತುತ ಆರಂಭ ವಾಗಿರುವ ದೋಣಿ ಸೇವೆ ಎರಡೂ ರಾಷ್ಟ್ರಗಳ ಸಾಂಸ್ಕೃತಿಕ, ಐತಿಹಾಸಿಕ ಸಂಬಂಧಗಳನ್ನು ಜಾಗೃತಗೊಳಿಸಲಿವೆ ಎಂದು ಅವರು ಭರವಸೆ ನೀಡಿದ್ದಾರೆ.

ಒಟ್ಟಿನಲ್ಲಿ ಭಾರತ ಮತ್ತು ಪ್ರಪಂಚದ ನಡುವಿನ ಬಾಂಧವ್ಯ ಹೆಚ್ಚು ಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರು ಹಲವಾರು ಉಪಕ್ರಮಗಳನ್ನು ಕೈಗೊಳ್ಳುತ್ತಿದ್ದು, ಸದ್ಯ ಶ್ರೀಲಂಕಾದ ಜೊತೆಗೂ ದೋಣಿ ಸೇವೆಯನ್ನು ಆರಂಭಿಸಿ ಸಂಬಂಧ ವೃದ್ಧಿಯ ನೆಲೆಯಲ್ಲಿ ಮತ್ತೊಂದು ಹೆಜ್ಜೆ ಮುಂದಿರಿಸಿದ್ದಾರೆ. ಪ್ರಧಾನಿ ಮೋದಿ ಅವರ ಆಡಳಿತ ಸಿಕ್ಕ ಬಳಿಕ ಪ್ರಪಂಚದ ಹಲವು ರಾಷ್ಟ್ರಗಳ ಜೊತೆಗೆ ಭಾರತದ ಸಂಬಂಧ ಉತ್ತಮಗೊಂಡಿದ್ದು, ವಿಶ್ವ ಮಟ್ಟದಲ್ಲಿ ಭಾರತಕ್ಕೆ ನಾಯಕನ ಸ್ಥಾನವನ್ನು ತಂದು ಕೊಡುವ ಲ್ಲಿ ಬಹುಮುಖ್ಯ ಪಾತ್ರ ವಹಿಸಿದೆ ಎನ್ನುವುದು ಸ್ಪಷ್ಟ.

Tags

Related Articles

Close