ಪ್ರಚಲಿತ

ಭದ್ರತಾ ಸವಾಲುಗಳನ್ನು ನಿರೀಕ್ಷಿತ ರೀತಿಯಲ್ಲಿ ಎದುರಿಸುತ್ತಿದೆ ಭಾರತೀಯ ಸೇನೆ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಭಾರತದ ಆಡಳಿತ ವಹಿಸಿಕೊಂಡ ಬಳಿಕ ಎಲ್ಲಾ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿಯ ನಾಗಲೋಟ ಜೋರಾಗಿದೆ. ನಮ್ಮ ದೇಶದ ರಕ್ಷಣಾ ವಲಯಕ್ಕೆ ಸಂಬಂಧಿಸಿದ ಹಾಗೆಯೂ ಅಭಿವೃದ್ಧಿಯ ಜೊತೆಗೆ ಸೇನೆಗೆ ಸ್ವತಂತ್ರವಾಗಿ ನಿರ್ಧಾರಗಳನ್ನು ಕೈಗೊಳ್ಳುವ ಶಕ್ತಿ ಸಿಕ್ಕಿದೆ ಎನ್ನುವುದು ಸಂತಸದ ವಿಷಯ.

ಈ ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತದ ಸಮಯದಲ್ಲಿ ಸೇನೆ ಯಾವುದೇ ನಿರ್ಣಯಗಳನ್ನು ತೆಗೆದುಕೊಳ್ಳಬೇಕಾದರೂ ಸರ್ಕಾರದ ಅನುಮತಿಗೆ ಕಾಯುವ ದುರಂತ ಸ್ಥಿತಿ ಇತ್ತು. ‘ಊರೆಲ್ಲಾ ಕೊಳ್ಳೆ ಹೊಡೆದ ಮೇಲೆ ಊರ ಬಾಗಿಲು ಹಾಕಿದರು’ ಎಂಬ ಗಾದೆಯ ಹಾಗೆ, ಯುಪಿಎ ಅವಧಿಯಲ್ಲಿ ಸೇನೆಗೆ ಅಗತ್ಯ ಅನುಮತಿ ದೊರೆಯುವ‌ ವೇಳೆಗೆ ಹಾನಿ ಉಂಟಾಗಿ ಆಗುತ್ತಿತ್ತು ಎನ್ನುವುದು ಸತ್ಯ.

ಆದರೆ ಪ್ರಸ್ತುತ ಎನ್‌ಡಿಎ ಆಡಳಿತದಲ್ಲಿ ಸೇನೆಗೆ ಅಗತ್ಯವಾದ ನಿರ್ಣಯಗಳನ್ನು ತೆಗೆದುಕೊಳ್ಳುವ ಎಲ್ಲಾ ಅವಕಾಶವನ್ನು ಅದರ ಮುಖ್ಯಸ್ಥರಿಗೆ ನೀಡುವ ಮೂಲಕ ಸ್ವಾತಂತ್ರ್ಯ ಕಲ್ಪಿಸಿದೆ. ಇದು ಸೇನೆಯ ಪಾಲಿಗೆ ವರದಾನ ಎಂದೇ ಹೇಳಬಹುದು. ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ಸರಿಯಾದ ಸಮಯಕ್ಕೆ ಸೂಕ್ತ ನಿರ್ಣಯಗಳನ್ನು ತೆಗೆದುಕೊಳ್ಳಲು ಅನುಕೂಲ ಒದಗಿಸಿದೆ.

ಇದೀಗ ಭಾರತೀಯ ಸೇನಾ ಪಡೆ ಸೇನಾ ಬಳಕೆಗೆ ವಸ್ತುಗಳನ್ನು ಆಮದು ಮಾಡುವುದನ್ನು ಕಡಿಮೆ ಮಾಡುವ ಉದ್ದೇಶದಿಂದ ಸ್ವಾವಲಂಬಿಯಾಗಲು ಬಯಸುತ್ತಿರುವುದಾಗಿ ಸೇನಾ ಮುಖ್ಯಸ್ಥ ಜ. ಮನೋಜ್ ಪಾಂಡೆ ಅವರು ತಿಳಿಸಿದ್ದಾರೆ.

ಭಾರತೀಯ ಸೇನೆಯು ನಿರೀಕ್ಷಿತ ರೀತಿಯಲ್ಲಿ ಭದ್ರತೆಗೆ ಸಂಬಂಧಿಸಿದ ಆಂತರಿಕ ಸವಾಲುಗಳನ್ನು ಸಮರ್ಥವಾಗಿ ಎದುರಿಸಿದೆ. ಬಲ ಪುನರ್ರಚನೆ, ಆಧುನೀಕರಣ, ತಂತ್ರಜ್ಞಾನದ ಒಳಹರಿವು ಮತ್ತು ಅದರ ವ್ಯವಸ್ಥೆ, ಕಾರ್ಯ ನಿರ್ವಹಿಸುವ ವಿಧಾನ ಜಂಟಿ ಮತ್ತು ಏಕೀಕರಣ, ಮಾನವ ಸಂಪನ್ಮೂಲ ನಿರ್ವಹಣೆ ಮೊದಲಾದ ವಿಷಯಗಳಲ್ಲಿ ಸೇನೆ ಉತ್ತಮ ಬೆಳವಣಿಗೆ ಕಾಣುತ್ತಿದೆ ಎಂದಿದ್ದಾರೆ.

ಭಾರತದ ಗಡಿ ಭಾಗಗಳಲ್ಲಿ ಪರಿಸ್ಥಿತಿ ಸ್ಥಿರ ವಾಗಿದೆ. ಹಾಗೆಯೇ ಅನೇಕ ರೀತಿಯ ಸವಾಲುಗಳನ್ನು ಎದುರಿಸಲು ಪೂರ್ವಭಾವಿಯಾಗಿ ಅನೇಕ ವ್ಯವಸ್ಥೆ‌ಗಳನ್ನು ಮಾಡಿಕೊಳ್ಳುವ ಅಗತ್ಯತೆ ಇದೆ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರ ಯುವಕರಿಗೆ ಸೇನೆ ಸೇರಿ ದೇಶ ಸೇವೆ ಮಾಡಲು ಅನುಕೂಲ ಒದಗಿಸಿದ ಅಗ್ನಿ ಪಥ ಯೋಜನೆಯಡಿ ನಲವತ್ತು ಸಾವಿರ ಅಗ್ನಿ ವೀರರು ಮೊದಲ ಹಂತದಲ್ಲಿ ಸೇನೆಗೆ ಸೇರಿದ್ದಾರೆ. ಈ ಹಿನ್ನೆಲೆಯಲ್ಲಿ ಘಟಕಗಳ ನೆಲ ಮಟ್ಟದ ಪ್ರತಿಕ್ರಿಯೆ ಉತ್ತೇಜನ ನೀಡುತ್ತಿದೆ ಎಂದು ಅವರು ನುಡಿದಿದ್ದಾರೆ.

Tags

Related Articles

Close