ಪ್ರಚಲಿತ

ಚೀನಾದಿಂದ ಹಣ ಪಡೆದು ಭಾರತಕ್ಕೆ ದ್ರೋಹ: ನ್ಯೂಸ್ ಕ್ಲಿಕ್ ಪೋರ್ಟಲ್ ಮುಖ್ಯಸ್ಥ, ಎಚ್.ಆರ್. ಗೆ ನ್ಯಾಯಾಂಗ ಬಂಧನ

ಚೀನಾದ ದೊಡ್ಡ ದೊಡ್ಡ ಸಂಸ್ಥೆಗಳಿಂದ ಹಣ ಪಡೆದು, ಭಾರತದ ವಿರುದ್ಧ ಬರಹಗಳನ್ನು, ದ್ವೇಷ ಹರಡುತ್ತಿದ್ದ ನ್ಯೂಸ್ ಕ್ಲಿಕ್ ಪೋರ್ಟಲ್ ಬಗ್ಗೆ ಕೆಲ ದಿನಗಳ ಹಿಂದಷ್ಟೇ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ದೇಶ ವಿರೋಧಿ, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಆರೋಪದಡಿ ‌ನ್ಯೂಸ್‌ ಕ್ಲಿಕ್ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿತ್ತು.

ಇದರ ಮುಂದುವರಿದ ಭಾಗ ಎಂಬಂತೆ ಯುಎಫಿಎ (ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ) ಯ ಅಡಿಯಲ್ಲಿ ಈ ಪೋರ್ಟಲ್‌ನ ಸಂಸ್ಥಾಪಕ ಪ್ರಬೀರ್ ಪುರಕಾಯಸ್ಥ ಮತ್ತು ಇದರ ಹ್ಯುಮನ್ ರಿಸೋರ್ಸ್ ಮುಖ್ಯಸ್ಥ ಅಮಿತ್ ಚಕ್ರವರ್ತಿಯನ್ನು ಹತ್ತು ದಿನಗಳ ಕಾಲ ದೆಹಲಿ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಮಂಗಳವಾರ ಈ ತೀರ್ಪು ನೀಡಿ ಆದೇಶ ಹೊರಡಿಸಿದೆ.

ಚೀನಾದ ಪರ ಮತ್ತು ಭಾರತ ವಿರೋಧಿ ಕೆಲಸದಲ್ಲಿ ಈ ಪೋರ್ಟಲ್ ತೊಡಗಿಸಿಕೊಂಡಿತ್ತು. ಈ ಆರೋಪ ಕೇಳಿ ಬಂದ ಬೆನ್ನಲ್ಲೇ ಕಳೆದ ಅಕ್ಟೋಬರ್ 3 ರಂದು ದೆಹಲಿಯ ಪೊಲೀಸ್ ವಿಶೇಷ ಘಟಕ, ಈ ಸಂಸ್ಥೆಗೆ ಸಂಬಂಧಿಸಿದ ಇಬ್ಬರನ್ನು ಬಂಧಿಸಿ, ವಿಚಾರಣೆ ನಡೆಸಲಾರಂಭಿಸಿತ್ತು.

ಈ ಬಂಧನದ ಬೆನ್ನಲ್ಲೇ ದೆಹಲಿ ಹೈಕೋರ್ಟ್ ಈ ಪೋರ್ಟಲ್‌ನ ಸಂಪಾದಕ ಮತ್ತು ಮಾನವ ಸಂಪನ್ಮೂಲ ಅಧಿಕಾರಿಗೆ ಮಧ್ಯಂತರ ಜಾಮೀನು ನೀಡಲು ನಿರಾಕರಿಸಿತ್ತು. ಅವರು ಎದುರಿಸುತ್ತಿರುವ ಆರೋಪ ತಕ್ಷಣಕ್ಕೆ ಪರಿಹಾರ ನೀಡುವ ಸಮಸ್ಯೆಯನ್ನು ಹೊಂದಿಲ್ಲ ಎಂಬುದಾಗಿ ಹೇಳಿತ್ತು.

ನಮ್ಮ ದೇಶದ ಶತ್ರು ರಾಷ್ಟ್ರದಂತೆ ಕೆಲಸ ಮಾಡುವ‌ ಚೀನಾದ ದೇಣಿಗೆ ಪಡೆದು, ಭಾರತದ ವಿರುದ್ಧ ಪಿತೂರಿ ನಡೆಸುವ ಕೆಲಸವನ್ನು ನ್ಯೂಸ್ ಕ್ಲಿಕ್ ಎಂಬ ಪೋರ್ಟಲ್ ಮಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ದೆಹಲಿಯ ಪೊಲೀಸರು ಈ‌ ಪೋರ್ಟಲ್ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ‌ ನಡೆಸಲಾರಂಭಿಸಿದ್ದರು. ಭಾರತದ ಸಾರ್ವಭೌಮತೆಗೆ ಧಕ್ಕೆ ತರಲು ಪ್ರಯತ್ನ ನಡೆಸಿದ ಮತ್ತು ಭಾರತದ ವಿರುದ್ಧ ಅಶಾಂತಿ, ಅಸಮಾಧಾನ ಸೃಷ್ಟಿ ಮಾಡಲು ಚೀನಾದಿಂದ ದೊಡ್ಡ ಪ್ರಮಾಣದ ಮೊತ್ತ ಈ ಪೋರ್ಟಲ್‌ಗೆ ಹರಿದು ಬಂದಿದ್ದು, ಈ ಹಿನ್ನೆಲೆಯಲ್ಲಿ‌ ಪೊಲೀಸರು ತನಿಖೆ ನಡೆಸಿದ್ದರು. ಆರೋಪಿಗಳನ್ನು ಬಂಧಿಸಿದ್ದರು.

ಈ ಸಂಬಂಧ ನ್ಯಾಯಾಲಯವು ಆದೇಶ ನೀಡಿದ ಬಳಿಕ ದೆಹಲಿಯ ಪೊಲೀಸರು ನ್ಯೂಸ್ ಕ್ಲಿಕ್ ಪೋರ್ಟಲ್ ‌ಗೆ ಎಫ್ ಐ ಆರ್ ಪ್ರತಿಯನ್ನು ನೀಡಿದ್ದರು. ಆ ಎಫ್ ಐ ಆರ್ ನಲ್ಲಿ ಕ್ಸಿಯೊಮಿ, ವಿವೋ ಮೊದಲಾದ ಚೀನಾ ಮೂಲದ ದೊಡ್ಡ ದೊಡ್ಡ‌‌ ಸಂಸ್ಥೆಗಳಿಂದ ಹಣವನ್ನು ನ್ಯೂಸ್ ಕ್ಲಿಕ್ ಪೋರ್ಟಲ್ ಪಡೆದಿತ್ತು. ಭಾರತದ ವಿರುದ್ಧ ನಕಲಿ ಸುದ್ದಿ ಪ್ರಕಟಿಸಲು ಈ ಹಣವನ್ನು ಪಡೆದಿರುವುದಾಗಿ ಎಫ್‌ಐಆರ್‌ನಲ್ಲಿ ತಿಳಿಸಲಾಗಿತ್ತು. ಈ ಆರ್ಥಿಕ ಮೂಲದ‌ ಸಂಗತಿ‌ ಮರೆ ಮಾಡುವ ಹಿನ್ನೆಲೆಯಲ್ಲಿ ಭಾರತದ ನೀತಿಗಳು, ಭಾರತದ ಅಭಿವೃದ್ಧಿ ಯೋಜನೆಗಳು ಸೇರಿದಂತೆ‌ ಇಲ್ಲಿನ ಹಲವಾರು ಸಂಗತಿಗಳನ್ನು ಟೀಕಿಸುವ ಸುದ್ದಿಗಳನ್ನು ನ್ಯೂಸ್ ಕ್ಲಿಕ್ ವೆಬ್ ಪೋರ್ಟಲ್ ಉದ್ದೇಶಪೂರ್ವಕವಾಗಿ ಬಿತ್ತರಿಸಿರುವುದಾಗಿಯೂ ಪೊಲೀಸರು ತಿಳಿಸಿದ್ದರು.

Tags

Related Articles

Close