ಪ್ರಚಲಿತ

ಭಾರತದ ಅನ್ನ ತಿಂದು, ಚೀನಾಗೆ ಸೇವೆ ಸಲ್ಲಿಕೆ: ನ್ಯೂಸ್ ಕ್ಲಿಕ್ ವಿರುದ್ಧ FIR

ತಿನ್ನುವುದು ಭಾರತದ ಅನ್ನ.‌ ಉಸಿರಾಡುವುದು ಈ ದೇಶದ ಗಾಳಿ. ಕುಡಿದು ಬಾಯಾರಿಕೆ‌ ತಣಿಸಿಕೊಳ್ಳಲು ಈ ದೇಶದ ನೀರು ಬೇಕು. ಕುಡಿಯಲು ಭಾರತದ ಜಾಗ ಬೇಕು. ಅಸ್ಮಿತೆ ನಮ್ಮ ದೇಶದ್ದು. ಇನ್ನೂ ಹಲವಾರು ಋಣ ಈ ದೇಶದ ಮೇಲಿದ್ದರೂ ಕೆಲವು ಧೂರ್ತರು ಕೆಲಸ ಮಾಡುವುದು, ಸೇವೆ ಸಲ್ಲಿಸುವುದು ಭಾರತದ ವಿರುದ್ಧ ಷಡ್ಯಂತ್ರ ರೂಪಿಸುವ ದೇಶಗಳಿಗೆ ಎನ್ನುವುದು ನೋವಿನ ಸಂಗತಿ.

ನಮ್ಮ ದೇಶದಲ್ಲಿ ಹುಟ್ಟಿ, ಬೆಳೆದು.. ಇಲ್ಲಿಯೇ ಶಿಕ್ಷಣ ಪಡೆದು, ಕೊನೆಗೆ ಈ ದೇಶಕ್ಕೆ ದ್ರೋಹ ಬಗೆಯುವ ‌ನಾಮರ್ಧರು ಅನೇಕರಿದ್ದಾರೆ. ಇಲ್ಲಿನ ಋಣ ಇಟ್ಟುಕೊಂಡು, ಚೀನಾ ದೇಶಕ್ಕಾಗಿ ಕೆಲಸ ಮಾಡಿ‌ ಸಿಕ್ಕಿ ಬಿದ್ದ ಖತರ್‌ನಾಕ್ ಪೋರ್ಟಲ್ ಒಂದರ ಕಥೆ ಇದು. ಚೀನಾದಿಂದ ಹಣ ಪಡೆದು, ಭಾರತದ ವಿರುದ್ಧ ಕಾರ್ಯ ನಿರ್ವಹಿಸುವ ಮೂಲಕ ದೇಶ ದ್ರೋಹ ಎಸಗಿದ ಸಂಸ್ಥೆಯ ವಿರುದ್ಧ ದೆಹಲಿ ಪೊಲೀಸರು ಕೇಸು ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.

ನಮ್ಮ ದೇಶದ ಶತ್ರು ರಾಷ್ಟ್ರದ ತೆ ಕೆಲಸ ಮಾಡುವ‌ ಚೀನಾದ ದೇಣಿಗೆ ಪಡೆದು, ಭಾರತದ ವಿರುದ್ಧ ಪಿತೂರಿ ನಡೆಸುವ ಕೆಲಸವನ್ನು ನ್ಯೂಸ್ ಕ್ಲಿಕ್ ಎಂಬ ಪೋರ್ಟಲ್ ಮಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ದೆಹಲಿಯ ಪೊಲೀಸರು ಈ‌ ಪೋರ್ಟಲ್ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ‌ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಭಾರತದ ಸಾರ್ವಭೌಮತೆಗೆ ಧಕ್ಕೆ ತರಲು ಪ್ರಯತ್ನ ನಡೆಸಿದ ಮತ್ತು ಭಾರತದ ವಿರುದ್ಧ ಅಶಾಂತಿ, ಅಸಮಾಧಾನ ಸೃಷ್ಟಿ ಮಾಡಲು ಚೀನಾದಿಂದ ದೊಡ್ಡ ಪ್ರಮಾಣದ ಮೊತ್ತ ಈ ಪೋರ್ಟಲ್‌ಗೆ ಹರಿದು ಬಂದಿದ್ದು, ಈ ಹಿನ್ನೆಲೆಯಲ್ಲಿ‌ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ಸಂಬಂಧ ನ್ಯಾಯಾಲಯವು ಆದೇಶ ನೀಡಿದ ಬಳಿಕ ದೆಹಲಿಯ ಪೊಲೀಸರು ನ್ಯೂಸ್ ಕ್ಲಿಕ್ ಪೋರ್ಟಲ್ ‌ಗೆ ಎಫ್ ಐ ಆರ್ ಪ್ರತಿಯನ್ನು ನೀಡಿದ್ದಾರೆ. ಆ ಎಫ್ ಐ ಆರ್ ನಲ್ಲಿ ಕ್ಸಿಯೊಮಿ, ವಿವೋ ಮೊದಲಾದ ಚೀನಾ ಮೂಲದ ದೊಡ್ಡ ದೊಡ್ಡ‌‌ ಸಂಸ್ಥೆಗಳಿಂದ ಹಣವನ್ನು ನ್ಯೂಸ್ ಕ್ಲಿಕ್ ಪೋರ್ಟಲ್ ಪಡೆದಿತ್ತು. ಭಾರತದ ವಿರುದ್ಧ ನಕಲಿ ಸುದ್ದಿ ಪ್ರಕಟಿಸಲು ಈ ಹಣವನ್ನು ಪಡೆದಿರುವುದಾಗಿ ತಿಳಿದು ಬಂದಿದೆ. ಈ ಆರ್ಥಿಕ ಮೂಲದ‌ ಸಂಗತಿ‌ ಮರೆ ಮಾಡುವ ಹಿನ್ನೆಲೆಯಲ್ಲಿ ಭಾರತದ ನೀತಿಗಳು, ಭಾರತದ ಅಭಿವೃದ್ಧಿ ಯೋಜನೆಗಳು ಸೇರಿದಂತೆ‌ ಇಲ್ಲಿನ ಹಲವಾರು ಸಂಗತಿಗಳನ್ನು ಟೀಕಿಸುವ ಸುದ್ದಿಗಳನ್ನು ನ್ಯೂಸ್ ಕ್ಲಿಕ್ ವೆಬ್ ಪೋರ್ಟಲ್ ಉದ್ದೇಶಪೂರ್ವಕವಾಗಿ ಬಿತ್ತರಿಸಿರುವುದಾಗಿಯೂ ‌ಮೂಲಗಳು ಹೇಳಿವೆ.

Tags

Related Articles

Close