ದೇಶಪ್ರಚಲಿತ

ಅಯ್ಯಪ್ಪ ಮಾಲಾಧಾರಿಗಳಿಗೆ ನೋ ಎಂಟ್ರಿ! ಕ್ರೈಸ್ತ ಮಿಷನರಿಗಳ ಷಡ್ಯಂತ್ರಕ್ಕೆ ಬಲಿಯಾಯ್ತು ಮತ್ತೊಂದು ರಾಜ್ಯ!

ತೆಲಂಗಾಣದಲ್ಲಿಯೂ ಹಿಂದೂಗಳ ವಿರುದ್ಧ ಕ್ರೈಸ್ತರ ಅಟ್ಟಹಾಸ ಜೋರಾಗಿ ನಡೆಯುತ್ತಿದೆ. ಹಿಂದೂಗಳನ್ನು ಕುಗ್ಗಿಸುವ ನಿಟ್ಟಿನಲ್ಲಿ, ಹಿಂದೂ ಸಂಸ್ಕೃತಿ, ಸಂಪ್ರದಾಯ, ಆಚಾರ, ವಿಚಾರಗಳನ್ನು ಮುರಿಯುವಂತೆ ಮಾಡುವುದಕ್ಕೆ, ಆ ಮೂಲಕ ಹಿಂದೂ ಧರ್ಮದ ಮೇಲೆ ಸವಾರಿ ಮಾಡೋದಕ್ಕೆ ಬೇಕಾದಂತಹ ಎಲ್ಲಾ ಕುಕೃತ್ಯಗಳನ್ನು ಕ್ರೈಸ್ತರು ಮಾಡುತ್ತಿದ್ದಾರೆ.

ಇದಕ್ಕೆ ಪೂರಕವಾಗಿ ಒಂದು ಘಟನೆಯನ್ನು ಹೇಳುವುದಾದರೆ, ರಾಜ್ಯದ ಭಾಗ್ಯನಗರ ಎಂಬಲ್ಲಿನ ‘ಅಯ್ಯಪ್ಪ ಸ್ವಾಮಿ ಮೋಹನಸ’ ಎಂಬ ಶಾಲೆಯಲ್ಲಿ ಅಯ್ಯಪ್ಪ ವ್ರತದಾರಿ ವಿದ್ಯಾರ್ಥಿಗಳನ್ನು ತರಗತಿಗಳಿಗೆ ಪ್ರವೇಶ ಮಾಡದಂತೆ ತಡೆಯಲಾಗಿದೆ. ಶಾಲೆಗೆ ಬರಬೇಕಾದಲ್ಲಿ ಧರಿಸಿದ ಅಯ್ಯಪ್ಪ ಮಾಲೆ, ಕಪ್ಪು ವಸ್ತ್ರ‌ಗಳನ್ನು ಕಳಚಬೇಕು ಎಂದು ಸೂಚನೆ ನೀಡಲಾಯಿತು. ಹಣೆಯ ತಿಲಕವನ್ನು ಅಳಿಸುವಂತೆ ಮಾಡಿದರು. ಅಯ್ಯಪ್ಪ ವ್ರತದಲ್ಲಿದ್ದ ಮಕ್ಕಳಿಗೆ ಅಧ್ಯಾಪಕರು ಎನಿಸಿಕೊಂಡ ಶಾಲೆಯ ಅನಾಚಾರಿ ಶಿಕ್ಷಕರ ಬೈಗುಳದ ಅಭಿಷೇಕ ಸಹ ಆಯ್ತು.

ಈ ಘಟನೆಯನ್ನು ವಿರೋಧಿಸಿ ಅಯ್ಯಪ್ಪ ಸ್ವಾಮಿಗಳು ಶಾಲೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ಸಹ ಮಾಡಿದರು. ಅಯ್ಯಪ್ಪ ವ್ರತದಲ್ಲಿದ್ದ ವಿದ್ಯಾರ್ಥಿಗಳಿಗೂ ಶಾಲೆಗೆ ಪ್ರವೇಶ ನೀಡಬೇಕು ಎಂಬುದಾಗಿ ಒತ್ತಾಯಿಸಿದ ಘಟನೆಯೂ ನಡೆದಿದೆ.

ಅಂದ ಹಾಗೆ ಇಂತಹದ್ದೇ ಘಟನೆ ಮಂದಾಮರಿಯ ಸಿಂಗರೇನಿ ಶಾಲೆಯಲ್ಲಿ ಕೂಡಾ ನಡೆದಿತ್ತು. ವಿದ್ಯಾರ್ಥಿಗಳು ಅಯ್ಯಪ್ಪ ಮಾಲೆ ಧರಿಸಿದ್ದರು ಎಂಬ ಕಾರಣಕ್ಕೆ ಶಾಲೆಗೆ ಪ್ರವೇಶ ನಿರಾಕರಿಸಲಾಗಿತ್ತು.

ಅಂದ ಹಾಗೆ ಅಯ್ಯಪ್ಪ ಸ್ವಾಮಿಯ ಹೆಸರಿರುವ ಶಾಲೆಯಲ್ಲಿಯೇ ,ಅಯ್ಯಪ್ಪ ಭಕ್ತ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಣೆ ಮಾಡಿರುವುದು ದುಃಖಕರ ವಿಷಯ. ನಮ್ಮ ದೇಶದಲ್ಲಿ ಹಿಂದೂಗಳು ಬಹುಸಂಖ್ಯಾತ‌ರು. ಆದರೆ ಬಹುಸಂಖ್ಯಾತ‌ರ ಭಾವನೆಗಳಿಗೆ, ಆಚರಣೆಗಳಿಗೆ ಅಡ್ಡ ಬರುವ, ಅಡ್ಡಿ ಮಾಡುವ ಕೆಲಸವನ್ನು ಅಲ್ಪಸಂಖ್ಯಾತ‌ರೆಂದು ಕರೆಸಿಕೊಳ್ಳುವವರು ಮಾಡುತ್ತಲೇ ಬರುತ್ತಿದ್ದಾರೆ ಎನ್ನುವುದು ನೋವಿನ ಸಂಗತಿ.

ತೆಲಂಗಾಣ‌ದಲ್ಲಿ ಕ್ರೈಸ್ತ ಮಿಷನರಿಗಳ ಆರ್ಭಟ ಜೋರಾಗಿದೆ. ಈ ಕಾರಣದಿಂದಲೇ ಅಲ್ಲಿ ಬಹುಸಂಖ್ಯಾತ‌ರ ಭಾವನೆಗಳಿಗೆ ಬೆಲೆ ಇಲ್ಲದಂತಾಗಿದೆ. ಇನ್ನು ಅಲ್ಲಿನ ಮುಖ್ಯಮಂತ್ರಿ‌ ಕೆ. ಚಂದ್ರಶೇಖರ್ ರಾವ್ ಸಹ ಕ್ರೈಸ್ತ‌ರಿಗೆ ಬೇಕಾದ ಹಾಗೆಯೇ ಆಡಳಿತ ನಡೆಸುತ್ತಿರುವುದು ದುರಂತವೇ ಹೌದು. ಹೀಗೆಯೇ ಮುಂದುವರಿದಲ್ಲಿ ಮುಂದೊಂದು ದಿನ ತೆಲಂಗಾಣ‌ದಲ್ಲಿ ಹಿಂದೂಗಳಿಗೆ ಉಸಿರಾಡುವುದಕ್ಕೂ ಕಷ್ಟ‌ಕರ ಸ್ಥಿತಿ ನಿರ್ಮಾಣ ಆದೀತು. ಆ ಮೊದಲೇ ಹಿಂದೂಗಳು ಎಚ್ಚೆತ್ತು‌ಕೊಂಡು, ಕ್ರೈಸ್ತ ಮಿಷನರಿಗಳು, ಅವರಿಗೆ ಬೆಂಬಲ ನೀಡುವಂತೆ ಆಡಳಿತ ನಡೆಸುತ್ತಾ ಇರುವ ಸರ್ಕಾರ‌ದ ವಿರುದ್ಧ ಸಿಡಿದಿದ್ದಲ್ಲಿ ಉತ್ತಮ. ಇಲ್ಲವಾದಲ್ಲಿ ಅಲ್ಲಿ ಹಿಂದೂಗಳಿಗೆ ನೆಲೆ ಇಲ್ಲದಾಗುತ್ತದೆ ಎನ್ನುವ ುದರಲ್ಲಿ ನೋ ಡೌಟ್.

ಇಂತಹ ಮತಾಂಧ ಶಕ್ತಿ‌ಗಳು ಕೇವಲ ತೆಲಂಗಾಣ‌ದಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತಿಲ್ಲ. ಇಡೀ ದೇಶದಲ್ಲಿ ಇಂತಹ ದುಷ್ಟ ಶಕ್ತಿಗಳು ಕಾರ್ಯಪ್ರವೃತವಾಗಿವೆ. ಇವರೆಲ್ಲರನ್ನೂ ಒಗ್ಗಟ್ಟಿನಿಂದ ಜಯಿಸಬೇಕಾದ ಅನಿವಾರ್ಯ‌ತೆ, ಅಗತ್ಯ‌ತೆ ಹಿಂದೂಗಳದ್ದು.

Tags

Related Articles

Close