ಪ್ರಚಲಿತ

ಸ್ಫೋಟಕ ಮಾಹಿತಿ ಬಹಿರಂಗ!! 2014 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋತ ದಿನವೇ ನೀರವ್ ಮೋದಿ ಮತ್ತು ಚೋಕ್ಸಿಯ 11400 ಕೋಟಿ ಸಾಲವನ್ನು ಮನ್ನಾ ಮಾಡಿದ್ದ ಮಾಜಿ ವಿತ್ತ ಸಚಿವ ಪಿ‌.ಚಿದಂಬರಮ್!!

ಕೆಲವೊಂದು ಸತ್ಯಗಳನ್ನು ಮುಚ್ಚಿಡಲು ಆಗುವುದಿಲ್ಲ ಎಂಬುವುದಕ್ಕೆ ನೀರವ್ ಮೋದಿಯ ಹಗರಣಗಳು ಸಾಕ್ಷಿಯಾಗಿವೆ! ಅದರಲ್ಲಿಯೂ, ದೇಶ ವಿದೇಶಗಳಲ್ಲಿ ಬೇಕಾದಷ್ಟು ಆಸ್ತಿ ಮಾಡಿಟ್ಟ ಚಿದಂಬರಮ್ ರಂತಹವರಿಗೆ ಅಧಿಕಾರ ಕೈನಲ್ಲಿದ್ದಾಗ ಮಾಡಬಾರದ ಹಗರಣಗಳನ್ನೆಲ್ಲ ಮಾಡಾಗಿದೆ ಬಿಡಿ! ಅದರಲ್ಲಿಯೂ, ದೇಶದಲ್ಲಿ ಸಂಚಲನ ಸೃಷ್ಟಿಸಿರುವ ನೀರವ್ ಮೋದಿ ಮತ್ತು ಚೋಕ್ಸಿ ಹಗರಣದಲ್ಲಿಯೂ ಸಹ ಚಿದಂಬರಮ್ ಪಾಲಿತ್ತು ಎನ್ನುವುದನ್ನು ಸಿಎನ್ ಎನ್ ನೆಟ್ವರ್ಕ್ ೧೮ ಮಾಧ್ಯಮವೊಂದು ಸ್ಫೋಟಕ ಮಾಹಿತಿಯನ್ನು ಬಹಿರಂಗಗೊಳಿಸಿದೆ!!

ಹೌದು!! ೨೦೧೪ ರಲ್ಲಿ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತ ದಿನದಂದೇ, ಅಂದಿನ ಹಣಕಾಸು ಸಚಿವರಾಗಿದ್ದ ಪಿ ಚಿದಂಬರಮ್ ೧೩ ಕಂಪೆನಿಗಳ ಅದೆಷ್ಟೋ ಸಾಲವನ್ನು ಮನ್ನಾ ಮಾಡಿದ್ದರು!! ಅದರಲ್ಲಿ, ಈ ನೀರವ್ ಮೋದಿಯ ಕಂಪೆನಿಯಾದ ಗೀತಾಂಜಲಿ ಜ್ಯುವೆಲ್ಲೃಸ್ ಕೂಡಾ ಸೇರಿತ್ತು ಎಂದು ಸಿಎನ್ ಎನ್ ಮಾಧ್ಯಮ ತನಿಖೆಯಾಧಾರಿತವಾದ ಸಾಕ್ಷಿ ನೀಡಿ ಬಹಿರಂಗಪಡಿಸಿದೆ!!

ಯಾವತ್ತು, ಇಡೀ ದೇಶ ಲೋಕಸಭಾ ಚುನಾವಣೆಯ ಫಲಿತಾಂಶವನ್ನು ಎದುರು ನೋಡುತ್ತಿತ್ತೋ, ಒಇ ಚಿದಂಬರಮ್ ಇದ್ದಕ್ಕಿದ್ದ ಹಾಗೆ ಗಡಿಬಿಡಿಯಿಂದ ಆರ್ ಬಿ ಐ ಗೊಂದು ಆರ್ಡರ್ ಪಾಸ್ ಮಾಡಿದ್ದರು!! ಆರ್ ಬಿ ಐ ಗವರ್ನರ್ ಆದ ರಘುರಾಮ್ ರಾಜನ್ ಗೆ ೮೦-೨೦ ಸೂತ್ರದಲ್ಲಿ ಚಿನ್ನವನ್ನು ಆಮದು ಮಾಡಿಕೊಂಡಿರುವ ೧೩ ಕಂಪೆನಿಗಳ ಸಾಲವನ್ನು ಮನ್ನಾ ಮಾಡುವಂತೆ ನೀಡಿದ್ದ ಆರ್ಡರ್ರೊಂದು ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಯ ಸಾಲವನ್ನೂ ಸಹ ಮನ್ನಾ ಮಾಡಿದ್ದಾರೆ!! ಪಿ ಚಿದಂಬರಮ್ ಸುತ್ತೋಲೆ ಹೊರಡಿಸಿದ ಆರು ದಿನಗಳ ನಂತರ, ೧೩ ಕಂಪೆನಿಗಳ ಲೆಕ್ಕ ಪತ್ರವನ್ನು ಮೇ ೨೧ ರದ್ದು ತರಿಸಿ, “Clearence” ಮುದ್ರೆ ಒತ್ತಿದ್ದರು ರಘುರಾಮ್ ರಾಜನ್!! ದುರಾದೃಷ್ಟ ಅದೇ ನೋಡಿ!! ೨೬ ಮೇ ೨೦೧೪ ರಂದು ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದರು!! ಕೇವಲ ಐದು ದಿನಗಳ ಅಂತರವಷ್ಟೇ!! ೧೩ ಕಂಪೆನಿಗಳು ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿ ಹೋಗಿದ್ದವು!!

ಈ ೮೦-೨೦ ಸೂತ್ರವೇ ವಿಚಿತ್ರವಾದದ್ದು!! ಯಾವನಿಗೆ ಆಮದು ಮಾಡಿಕೊಂಡ ಚಿನ್ನವನ್ನು ೨೦% ಮತ್ತೆ ರಫ್ತು ಮಾಡುವಷ್ಟು ವಹಿವಾಟು ಇರುತ್ತದೆಯೋ, ಆತ ಎಷ್ಟು ಬೇಕಾದರೂ ಕೂಡ ತನ್ನ ಕಂಪೆನಿಗೆ ೮೦-೨೦ ಸೂತ್ರದ ಮೂಲಕ ಚಿನ್ನವನ್ನು ಆಮದು ಮಾಡಿಕೊಳ್ಳಬಹುದು! ಉದಾಹರಣೆಗೆ, ನಾನು ಮೊದಲ ಕಂತಿನಲ್ಲಿ ೧೦೦ ಕೆಜಿ ಚಿನ್ನವನ್ನು ಬೇರೆ ದೇಶದಿಂದ ಆಮದು ಮಾಡಿಕೊಂಡರೆ, ಎರಡನೇ ಕಂತು ಬರುವಷ್ಟರಲ್ಲಿ, ಆಮದು ಮಾಡಿಕೊಂಡ ೨೦% ಚಿನ್ನವನ್ನು ರಫ್ತು ಮಾಡಿರಬೇಕು! ಆಗ ಮಾತ್ರ, ಎರಡನೇ ಕಂತಿನಲ್ಲಿ ಚಿನ್ನವನ್ನು ತೆಗೆದುಕೊಳ್ಳಲು ಸಾಧ್ಯ!! ಈ ಕರಾಬ್ ಯೋಜನೆಯನ್ನು ಮೊದಲು ಪರಿಚಯಿಸಿದ್ದು ಇದೇ ಯುಪಿಎ ಸರಕಾರ!! ಅದೂ ೨೦೧೩ ರಲ್ಲಿ!! ಜಗತ್ತಿನಾದ್ಯಂತ, ಟೀಕೆದಗೊಳಗಾಗಿದ್ದ ಈ ಯೋಜನೆ ದೇಶದ ಆರ್ಥಿಕತೆಗೆ ಬಹುದೊಡ್ಡ ಪೆಟ್ಟು ನೀಡಿತ್ಥು!! ಈ ಯೋಜನೆಗಳಿಂದ ಪ್ರಯೋಜನವಾಗಿದ್ದು ಬೆರಳಣಿಕೆಯಷ್ಟು ಕಂಪೆನಿಗಳಿಗೆ ಮಾತ್ರ!!

ಈ ೧೩ ಕಂಪೆನಿಗಳಲ್ಲಿ, ಈ ಯೋಜನೆಯಿಂದ ಶೇ ೫೦ ರಷ್ಟು ಲಾಭ ಗಳಿಸಿದ್ದು ಕೇವಲ ೭ ಕಂಪೆನಿಗಳು ಮಾತ್ರವಾದರೂ, ಆ ಕಂಪೆನಿಗಳಲ್ಲಿ ಗೀತಾಂಜಲಿ ಕಂಪೆನಿಯೂ ಒಂದು!! ದುರಂತಕ್ಕೆ ಪಿ ಚಿದಂಬರಮ್ ಇದೇ ಕಂಪೆನಿಗಳ ಸಾಲವನ್ನು ಮನ್ನಾ ಮಾಡಿದ್ದರು! ಅದೂ ಸಹ ಹರಿಬರಿಯಲ್ಲಿ!! ಅಂದರೆ, ಒಇ ಚಿದಂಬರಮ್ ಗೆ ಆಗಲೇ ಈ ಹಗರಣದ ಅರಿವಿತ್ತಾದರೂ, ಸಾಲ ಮನ್ನಾ ಮಾಡಿ ಕೈ ತೊಳೆದುಕೊಳ್ಳಬೇಕೆಂದು ಯೋಚಿಸಿದ್ದರಾ?! ಅಷ್ಟಕ್ಕೂ, ಹೊಸ ಸರಕಾರದ ರಚನೆಯಾಗುವುದಕ್ಕಿಂತ ಮುಂಚೆಯೇ ಚಿದಂಬರಮ್ ಹೇಳಿದ ಹಾಗೆ ಹರಿಬರಿಯಲ್ಲಿ ಕ್ಲಿಯರೆನ್ಸ್ ಕೊಡುವಷ್ಟು ಅವಶ್ಯಕತೆ ಏನಿತ್ತು ಹೇಳಿ?! ಅಂದರೆ, ಹೊಸ ಸರಕಾರ ರಚನೆಯಾದರೆ ಕಾಂಗ್ರೆಸ್ ನ ಬಣ್ಣ ತಕ್ಷಣ ಬಯಲಾಗುತ್ತದೆ ಎಂಬ ಆತಂಕವೋ ಅಥವಾ ತಮ್ಮ ಕಮಿಷನ್ ತಪ್ಪಿ ಹೋದರೆ ಎಂಬ ಚಿಂತೆಯೋ?! ಹೇಳುವುದೇ ಆದರೆ, ಕೆಲವು ಆಯ್ಕೆ ಮಾಡಿದ ಕಂಪೆನಿಗಳಲಿಗೆ ಸಹಾಯವಾಗಲಿ ಎಂಬ ದೃಷ್ಟಿಯಿಂದ ಈ ಯೋಜನೆಯನ್ನು ತರಲಾಯಿತು ಎಂಬ ಆರೋಪವೂ ಇದೆ!!

ಇದು ಕೇವಲ ಯಾವುದೋ ಒಪ್ಪಂದವಲ್ಲ! ಅಥವಾ , ಗೊತ್ತಿರಲಿಲ್ಲ ಎಂದೆನ್ನುವ ಬೇಜವಾಬ್ದಾರಿ ಪರಿಸ್ಥಿತಿಯೂ ಅಲ್ಲ! ಬದಲಿಗೆ, ಮಿಲಿಯನ್ನುಗಟ್ಟಲೇ ಹಣದ ಹಗರಣ!! ಅಷ್ಟಕ್ಕೂ, ಮೋದಿ ಅಧಿಕಾರ ಸ್ವೀಕರಿಸುವುದಕ್ಕೂ ಮುಂಚೆಯೇ ಸಾಲಗಳನ್ನು ಮನ್ನಾ ಮಾಡಿದ್ಯಾಕೆ?! ಅಂತಹ ತಾರತುರಿ ಏನಿತ್ತು ಚಿದಂಬರಮ್ ಗೆ?! ಅದೂ ಸಹ, ಕಾಂಗ್ರೆಸ್ ಸೋತ ದಿನವೇ , ಕಚೇರಿಯನ್ನು ಬಿಡುವ ಮುಂಚೆ ಈ ದಾಖಲೆಗಳನ್ನೆಲ್ಲ ಕ್ಲಿಯರ್ ಮಾಡಿ ಎಂದು ಎಮರ್ಜೆನ್ಸಿ ಲೆಟರ್ ಕಳುಹಿಸಿದ್ದೇಕೆ?!

ಅಚ್ಚರಿಯೆಂದರೆ, ಮೋದಿ ಅಧಿಕಾರಕ್ಕೆ ಬಂದ ಮೇಲೆ, ನವೆಂಬರ್ ೨೦೧೪ ರಲ್ಲಿ ಈ ೮೦-೨೦ ಯೋಜನೆಯನ್ನು, ಬ್ಯಾಂಕುಗಳಿಗೆ ವಿರುದ್ಧವಾದ ಪರಿಣಾಮ ಬೀರುತ್ತಿದೆಯೆಂದು ಹೇಳಿ, ನಿಷ್ಕ್ರಿಯಗೊಳಿಸಿದರು!! ಆದರೆ, ಯೋಜನೆಯನ್ನು ನಿಷ್ಕ್ರಿಯಗೊಳಿಸುವದಕ್ಕೂ ಅಡ್ಡ ಹಾಯ್ದ ರಘುರಾಮ್ ರಾಜನ್ ಸರಕಾರಕ್ಕೆ ಯೋಜನೆಯನ್ನು ಮತ್ತೆ ಪ್ರಸ್ತುತ ಪಡಿಸುವಂತೆ ಸಲಹೆ ನೀಡಿದರು!! ಅಂದರೆ, ಈ ಯೋಜನೆ ಯಾವ್ಯಾವ ಕಂಪೆನಿಗಳಿಗೆ ಯಾವ್ಯಾವ ರೀತಿಯಲ್ಲಿ ಸಹಾಯ ಮಾಡಲಿದೆ ಎಂಬ ಸಂಪೂರ್ಣ ಮಾಹಿತಿ ರಘುರಾಮ್ ರಿಗಿತ್ತು!! ಬೋಗಸ್ ಯೋಜನೆಗಳ ಮೂಲಕ, ಬ್ಯಾಂಕಿನಲ್ಲಿ ಲೋನ್ ಮಾಫಿಯಾ ಪ್ರಾರಂಭಿಸಿದ್ದ ಯುಪಿಎ ಸರಕಾರ ೨೦೦೪ ರಿಂದ ೨೦೧೪ ರವರೆಗೂ ಮಾಡಿದ್ದು ಇದೇ ಮಾಫಿಯಾವನ್ನೇ!!

ಇಲ್ಲಿಯವರೆಗೂ ಸಹ, ರಾಷ್ಟ್ರೀಯ ಅಧ್ಯಕ್ಷನಾದ ರಾಹುಲ್ ಗಾಂಧಿ ಎಂಬ ಅತೀ ಬುದ್ಧಿವಂತ ನೀರವ್ ಮೋದೊಯ ಹಗರಣಕ್ಕೆ ಕಾರಣ ಪ್ರಧಾನಿ
ನರೇಂದ್ರ ಮೋದಿ ಎಂದು ಹರಿಹಾಯ್ದಿದ್ದೇ ಬಂತು!! ಆದರೆ, ಈಗ ಹೊರಬೀಳುತ್ತಿರುವ ಪ್ರತೀ ದಾಖಲೆಗಳೂ ಸಹ ಕಾಂಗ್ರೆಸ್ ವಿರುದ್ಧವಾಗಿಯೇ ಇದೆ! ಅದರಲ್ಲಿಯೂ ಸಹ, ಪಿ ಚಿದಂಬರಮ್ ಮತ್ತು ಕೆಲ ಕಾಂಗ್ರೆಸ್ ನಾಯಕರ ಕಡೆಗೆ ಬೆಟ್ಟು ಮಾಡುತ್ತಿರುವ ಈ ಹಗರಣ ಕಾಂಗ್ರೆಸ್ ನ ಬುಡವನ್ನೇ ಅಲುಗಾಡಿಸುವುದರಲ್ಲಿ ಸಂಶಯವಿಲ್ಲ!! ಸ್ವತಃ ರಾಹುಲ್ ಗಾಂಧಿಯೇ ಗೀತಾಂಜಲಿ ಜ್ಯುವೆಲ್ಲರ್ಸ್ ನ ಮಾಲೀಕನಾದ ನೀರವ್ ಮೋದಿಯ ಜೊತೆ ನಿಕಟ ಸಂಪರ್ಕದಲ್ಲಿದ್ದರು ಎಂಬ ಮಾಹಿತಿ ಬಹಿರಂಗವಾಗಿರುವಾಗ ಇನ್ನೇನು ಹೇಳಬಲ್ಲರು ಕಾಂಗಿಗಳು?!

“ಗೀತಾಂಜಲಿ ಜೆಮ್ಸ್ ಎನ್ ಎಸ್ ಇ ಯಲ್ಲಿ ಉದ್ಯೋಗ ನಡೆಸದಂತೆ 2013 ರಲ್ಲಿ ಆರು ತಿಂಗಳುಗಳ ಕಾಲ ಅಮಾನತುಗೊಳಿಸಲಾಗಿತ್ತು!! ಆದರೆ, ಸೆಪ್ಟೆಂಬರ್ 13, 2013 ರಂದು ರಾಹುಲ್ ಗಾಂಧಿ ಈ ಜ್ಯುವೆಲ್ಲರಿ ಗ್ರೂಪ್ ನ ಪ್ರಮೋಷನಲ್ ಇವೆಂಟ್ ನಲ್ಲಿ ಭಾಗವಹಿಸಿದ್ದರು!!

ನೀವು ಗೀತಾಂಜಲಿ ಜೆಮ್ಸ್ ನನ್ನು ಪ್ರಮೋಟ್ ಮಾಡುತ್ತೀರಿ! ಕಟ್ಟಡಗಳನ್ನು ಮನಸೋ ಇಚ್ಛೆಯಂತೆ ಲೀಸ್ ಗೆ ನೀಡುತ್ತೀರಿ! ನಿಮ್ಮ ಹೆಂಡತಿ ಅಲ್ಲಿ ಡೈರೆಕ್ಟರ್ ಆಗಿ ಕೂತಿದ್ದಾರೆ! ಆದರೆ, ನಮ್ಮ ಮೇಲೆ ತಪ್ಪು ಮಾಡಿದಿರಿ ಎಂದು ಆರೋಪಿಸುತ್ತೀರಿ!” ಎಂದಿದ್ದರು ನಿರ್ಮಲಾ ಸೀತಾರಾಮನ್!

ಮಜಾ ಎಂದರೆ, ಅವತ್ತು ಯಾರು ಮೇಲ್ವಿಚಾರಕರಾಗಿದ್ದರೋ, ಅವರು ನೀರವ್ ಮೋದಿಗೆ ಬೇಕಾದಷ್ಟು ಹಣ ಕೊಟ್ಟು ‘ಮಗನೇ ದೋಚು” ಎಂದಿದ್ದರೂ ಸಹ, ಇವತ್ತು ಹಗರಣ ಬಯಲಿಗೆ ಬಂದಿದೆ ಎಂಬ ಒಂದೇ ಕಾರಣಕ್ಕೆ ಮೋದಿ ಸರಕಾರವನ್ನು ದೂರುತ್ತಿರುವ ಕಾಂಗಿಗಳಿಗೆ ಬೆನ್ಬೇರಿರುವುದು ಬಹುಷಃ ಶನಿಯೇ! ತೀರಾ ತನಿಖೆ ನಡೆದರೆ, ಬರುವುದು ತನ್ನ ಬುಡಕ್ಕೆ ಎಂದು ಗೊತ್ತಿದ್ದರೂ ಸಹ ಭಂಢ ಧೈರ್ಯ ತೋರುತ್ತಿರುವ ಕಾಂಗಿಗಳ ಮನಃಸ್ಥಿತಿಗೆ ಮೆಚ್ಚಬೇಕು ಬಿಡಿ!

ಈ ಹಗರಣ ಬಯಲಾಗುತ್ತಿದ್ದಂತೆ, ಸ್ವತಃ ಕಾಂಗ್ರೆಸ್ ಪಕ್ಷದ ನಾಯಕರಾದ ಶೆಹಜಾದ್ ಪೂನಾವಾಲ ಕಾಂಗ್ರೆಸ್ ಗೆ ತರಾಟೆಗೆ ತೆಗೆದುಕೊಂಡಿದ್ದಾರೆ! ‘ಯಾವೆಲ್ಲ ಉತ್ತರಗಳಿವೆಯೋ ಅದನ್ನು ಮೋದಿ ಸರಕಾರ ಪ್ರಶ್ನಿಸಬೇಕಿದೆ ಮತ್ತು ಯಾವೆಲ್ಲ ಪ್ರಶ್ನೆಗಳಿವೆಯೋ, ಅದನ್ನು ಮನಮೋಹನ್ ಸರಕಾರ ಉತ್ತರಿಸಬೇಕಿದೆ! ಎಂದು ಕಿಡಿ ಕಾರಿದ್ದಾರೆ!

ಈ ಹಗರಣ ಬಯಲಾಗುತ್ತಿದ್ದಂತೆ, ಸ್ವತಃ ಕಾಂಗ್ರೆಸ್ ಪಕ್ಷದ ನಾಯಕರಾದ ಶೆಹಜಾದ್ ಪೂನಾವಾಲ ಕಾಂಗ್ರೆಸ್ ಗೆ ತರಾಟೆಗೆ ತೆಗೆದುಕೊಂಡಿದ್ದಾರೆ! ‘ಯಾವೆಲ್ಲ ಉತ್ತರಗಳಿವೆಯೋ ಅದನ್ನು ಮೋದಿ ಸರಕಾರ ಪ್ರಶ್ನಿಸಬೇಕಿದೆ ಮತ್ತು ಯಾವೆಲ್ಲ ಪ್ರಶ್ನೆಗಳಿವೆಯೋ, ಅದನ್ನು ಮನಮೋಹನ್ ಸರಕಾರ ಉತ್ತರಿಸಬೇಕಿದೆ! ಎಂದು ಕಿಡಿ ಕಾರಿದ್ದಾರೆ! ನಸು ಕಾಣುತ್ತಿರುದಕ್ಕೆ ಯೆಸ್! We feel pity for them! ಇವತ್ತೂ ದೇಶ ಅದನ್ನೇ ಕೇಳುತ್ತಿರುವುದು ರಾಹುಲ್ ಗಾಂಧಿಗೆ! “ರಾಹುಲ್ ಗಾಂಧಿಯವರೇ! ನೀವು ನೀರವ್ ರ ಬ್ಯುಸಿನೆಸ್ ಪಾರ್ಟನರ್ರಾ?!”

ಇವಿಷ್ಟಕ್ಕೂ ಉತ್ತರ ಕೊಡಬೇಕಾದವರು ಬೇರೆ ಯಾರೂ ಅಲ್ಲ!! ಕೇವಲ ರಾಹುಲ್ ಮತ್ತು ಚಿದಂಬರಮ್ ಅಷ್ಟೇ!!

– ಪೃಥು ಅಗ್ನಿಹೋತ್ರಿ

Tags

Related Articles

Close