ಪ್ರಚಲಿತ

ಹಪೀಜ್ ಸಯೀದ್‍ಗೆ ಪಾಕಿಸ್ತಾನ ಸರ್ಕಾರದಿಂದ ಭದ್ರತೆ!! ಮತ್ತೊಮ್ಮೆ ಪಾಕ್‍ನ ಕರಾಳ ಮುಖ ಬಯಲು!!

ಪದೇ ಪದೇ ಒಂದಲ್ಲ ಒಂದು ವಿಚಾರದಲ್ಲಿ ಕಾಲ್ಕೆರೆದು ಜಗಳಕ್ಕೆ ಇಳಿಯುತ್ತಿದ್ದ ಪಾಕಿಸ್ತಾನ ಈಗಾಗಲೇ ವಿಶ್ವದೆಲ್ಲೆಡೆ ಭಯೋತ್ಪಾದನಾ ರಾಷ್ಟ್ರವಾಗಿ ಹೊರಹೊಮ್ಮುತ್ತಿರುವ ವಿಚಾರ ತಿಳಿದೇ ಇದೆ!!  ಭಯೋತ್ಪಾದನೆ ಎಂಬೂದು ಯಾವ ರೀತಿಯಲ್ಲಿ ಜಗತ್ತಿಗೆ ಮಾರಕವಾಗಿದೆ ಎಂದರೆ ಜಗತ್ತಿನ ಪ್ರತಿಯೊಂದು ರಾಷ್ಟ್ರಗಳು ಭಯೋತ್ಪಾದಕ ಕೃತ್ಯಗಳಿಗೆ ತುತ್ತಾಗಿವೆ!! ದಿನ ಕಳೆದಂತೆ ಜಗತ್ತಿನಾದ್ಯಂತ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚುತ್ತಿದ್ದು ಜಗತ್ತನ್ನು ವಿನಾಶದತ್ತ ಕೊಂಡೊಯ್ಯುತ್ತಿದೆ! ಕೆಲವೊಂದು ದೇಶಗಳು ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದ್ದು ಶತ್ರು ರಾಷ್ಟ್ರಗಳ ವಿರುದ್ಧ ಉಗ್ರ ಚಟುವಟಿಕೆಗಳನ್ನು ನಡೆಸಲು ಸಹಕಾರಿಯಾಗುತ್ತಿದೆ..!

ಭಾರತದಲ್ಲೂ ಉಗ್ರರ ದಾಳಿ ನಡೆದಿದ್ದು, ಭಾರತವೂ ಉಗ್ರರ ವಿರುದ್ಧ ಧ್ವನಿ ಎತ್ತುತ್ತಲೇ ಬಂದಿದೆ! ಆದರೆ, ನರೇಂದ್ರ ಮೋದಿ ಅಧಿಕಾರಕ್ಕೆ ಬರುತ್ತಲೇ ಜಗತ್ತಿಗೆ ಮಾರಕವಾಗಿರುವ ಭಯೋತ್ಪಾದನೆಯ ವಿರುದ್ಧ ಗುಡುಗಿದರು. ಭಯೋತ್ಪಾದನೆಯ ನಿರ್ಮೂಲನೆಗೆ ಜಗತ್ತಿನ ಎಲ್ಲಾ ರಾಷ್ಟ್ರಗಳು ಕೈಜೋಡಿಸಬೇಕು ಎಂದು ಸಾರಿದರು! ಉಗ್ರರಿಗೆ ಆಶ್ರಯತಾಣವಾಗಿರುವ ಪಾಕಿಸ್ತಾನ ತನ್ನ ಶತ್ರು ರಾಷ್ಟ್ರಗಳ ವಿರುದ್ಧ ಉಗ್ರರನ್ನು ಕಳುಹಿಸಿ ಭಯೋತ್ಪಾದಕ  ಕೃತ್ಯಗಳನ್ನು ನಡೆಸುತ್ತಲೇ ಬರುತ್ತಿದೆ!!. ದಿನ ಕಳೆದಂತೆ ಪಾಕಿಸ್ತಾನದಲ್ಲಿ ಉಗ್ರ ಸಂಘಟನೆಗಳು ಹೆಚ್ಚುತ್ತಿದ್ದು ಇದು ಜಗತ್ತಿಗೆ ಮಾರಕವಾಗಿದೆ!! ಈಗಾಗಲೇ ಉಗ್ರರಿಗೆ ಪೋಷಣೆ ನೀಡುವ ಹಿನ್ನಲೆಯಲ್ಲಿ ಪಾಕಿಸ್ತಾನಕ್ಕೆ ಯಾವುದೇ ಸಹಾಯ ಮಾಡಬಾರದು ಎಂದು ನಿರ್ಧರಿಸಿದರೂ ಸಹ ಇನ್ನೂ ಆ ಪಾಪಿ ಪಾಕಿಸ್ತಾನಕ್ಕೆ ಬುದ್ಧೀ ಬಂದಂತೆ ಕಾಣುತ್ತಿಲ್ಲ!!

ಮತ್ತೆ ಉಗ್ರ ಪೋಷಣೆಯನ್ನು ಮುಂದುವರಿಸಿದ ಪಾಕ್!!

ಹಫೀಜ್ ಸಯೀದ್, ಹೆಸರು ಕೇಳುತ್ತಲೇ ಜಗತ್ತಿನ ಎಲ್ಲಾ ರಾಷ್ಟ್ರಗಳು ಪಾಕಿಸ್ತಾನದತ್ತ ಬೆರಳು ಮಾಡುತ್ತವೆ. ಕಾರಣ ಲಷ್ಕರ್-ಈ-ತೊಯಿಬಾ ಎಂಬ ಉಗ್ರ ಸಂಘಟನೆಯನ್ನು ಸ್ಥಾಪಿಸಿ ಜಗತ್ತಿನಾದ್ಯಂತದ ದುಷ್ಕಂತ್ಯ ಎಸಗಲು ತಯಾರಾದವನು. 2008ರಲ್ಲಿ  ಮುಂಬಯಿ ಮೇಲೆ ದಾಳಿ ನಡೆಸಿದ ಈ ಸಂಘಟನೆ ಸುಮಾರು 166 ಅಮಾಯಕರ ಬಲಿ ಪಡೆದಿತ್ತು.

ಈ ದಾಳಿಯಲ್ಲಿ ಅನೇಕ ವಿದೇಶಿಗರೂ ಸಾವಿಗೀಡಾಗಿದ್ದರು. ಈ ಪೈಕಿ ಆರು ಮಂದಿ ಅಮೇರಿಕಾ ನಾಗರಿಕರೂ ಕೂಡ ಹತರಾಗಿದ್ದರು. ಈ ಕಾರಣದಿಂದಲೇ ಅಮೇರಿಕಾವು ಹಫೀಸ್ ಸಯೀದ್ ನನ್ನು   ಜಾಗತಿಕ ಮಟ್ಟದಲ್ಲಿ ಉಗ್ರ ಎಂದು ಘೋಷಿಸಿತ್ತು. ಆದ್ದರಿಂದ ಹಫೀಸ್ ಸಯೀದ್ ಮುಖ್ಯಸ್ಥನಾಗಿದ್ದ ಜಮಾತ್  ಉದ್ -ದಾವಾ ಎಂಬ ಸಂಘಟನೆಯನ್ನು ನಿಷೇಧಿಸಲಾಗಿತ್ತು! ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಡಬೇಕೆಂದು ಒತ್ತಾಯಿಸುತ್ತಿರುವ ಹಫೀಜ್ ಸಯೀದ್ ಪದೇ ಪದೇ ಭಾರತದ ಮೇಲೆ ದಾಳಿ ನಡೆಸಲು ಪ್ರಯತ್ನಿಸುತ್ತಲೇ ಬಂದಿದ್ದಾನೆ. ಜಾಗತಿಕ ಮಟ್ಟದಲ್ಲಿ ನಿಷೇಧಿಸಲಾಗಿದ್ದರು ಪಾಕಿಸ್ತಾನ ಹಫೀಜ್ ಸಯೀದ್‍ಗೆ ಆಶ್ರಯ ನೀಡುತ್ತಲೇ ಬಂದಿದ್ದಕ್ಕೆ ಈಗಾಗಲೇ ಹಲವಾರು ರಾಷ್ಟ್ರಗಳು ವಿರೋಧಿತ್ತಾದರೂ ಮತ್ತೇ ಹಳೇ ಚಾಳಿಯನ್ನು ತೋರಿಸಿದ್ದಾರೆ!!

ವಿಶ್ವದ ಭಯೋತ್ಪಾದಕರ ಉತ್ಪಾದನೆಯ ತಾಣ,ಪೋಷಣೆಯ ನೆಲೆ ಎಂದೇ ಕುಖ್ಯಾತಿ ಪಡೆದಿರುವ ಪಾಕಿಸ್ತಾನ ತನ್ನ ಉಗ್ರ ಪೋಷಣೆಯನ್ನು ಮುಂದುವರಿಸಿದೆ. ಮುಂಬೈ ದಾಳಿಯ ಮಾಸ್ಟರ್ ಮೈಂಡ್, ವಿಶ್ವ ಉಗ್ರಪಟ್ಟಿಯಲ್ಲಿರುವ ಭಯೋತ್ಪಾದಕ ಹಫೀಸ್ ಸಯೀದ್ ಗೆ ಪಾಕಿಸ್ತಾನ ಸರ್ಕಾರವೇ ಭದ್ರತೆ ನೀಡುವ ಮೂಲಕ ಮತ್ತೊಮ್ಮೆ ತನ್ನ ಕರಾಳ ಮುಖವನ್ನು ಬಯಲು ಮಾಡಿಕೊಂಡಿದೆ. ಜಮಾತ್ ಉದ್ ದಾವಾ ಭಯೋತ್ಪಾದಕ ಸಂಘಟನೆಯ ಸ್ಥಾಪಕ ಹಫೀಸ್ ಸಯೀದ್ ಗೆ ಕೆಲ ತಿಂಗಳ ಹಿಂದೆ ಪಾಕ್ ಕೋರ್ಟ್ ತೀರ್ಪು ನೀಡಿ, ಭದ್ರತೆಯನ್ನು ವಾಪಸ್ ಪಡೆಯಲಾಗಿತ್ತು. ಇದೀಗ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸರ್ಕಾರ ಹಫೀಸ್ ಸಯೀದ್ ಗೆ ಜೀವಕ್ಕೆ ಆತಂಕವಿದ್ದು, ಆದ್ದರಿಂದ ಭದ್ರತೆ ನೀಡಲಾಗುತ್ತಿದೆ ಎಂದು ನೆಪ ಹೇಳಿದೆ. ಇತ್ತೀಚೆಗೆ ಉಗ್ರ ಹಫೀಸ್ ಸಯೀದ್ ಕಾಶ್ಮೀರದಲ್ಲಿ ಸೈನಿಕರ ಗುಂಡಿಗೆ ಬಲಿಯಾಗಿದ್ದ ಭಯೋತ್ಪಾದಕರ ಸ್ಮರಣೆ ಮಾಡಿ, ಭಾರತ ವಿರೋಧಿ ನಿಲುವು ತಳಿದಿದ್ದ. ಇದೇ ವೇಳೆಯಲ್ಲೇ ಸಯೀದ್ ಗೆ ಭದ್ರತೆ ಒದಗಿಸಿರುವುದು ಪಾಕಿಸ್ತಾನ ನೇರವಾಗಿ ಭಯೋತ್ಪಾದಕರಿಗೆ ನೆರವು ನೀಡುತ್ತಿರುವುದು ಮತ್ತೊಮ್ಮೆ ಸಾಬೀತಾಗಿದೆ.

ಪಾಕಿಸ್ತಾನದ ವಿರುದ್ಧ ಜಾಗತಿಕ ಮಟ್ಟದಲ್ಲಿ ಧ್ವನಿ ಎತ್ತಿದ ನರೇಂದ್ರ ಮೋದಿ ನೇರವಾಗಿ ಪಾಕಿಸ್ತಾನದ ಮೇಲೆ ವಾಗ್ದಾಳಿ ನಡೆಸಿದ್ದರು. ಪಾಕಿಸ್ತಾನವನ್ನು ಜಗತ್ತಿನ ಮುಂದೆ ಮೂಲೆಗುಂಪು ಮಾಡುವ ನರೇಂದ್ರ ಮೋದಿಯವರ ಪ್ರಯತ್ನಕ್ಕೆ ಜಗತ್ತಿನ ದೊಡ್ಡ ದೊಡ್ಡ ರಾಷ್ಟ್ರಗಳು ಕೂಡಾ ಕೈ ಜೋಡಿಸಿವೆ!! ಇದೇ ರೀತಿ ವಿಶ್ವದ ಬಲಿಷ್ಟ ರಾಷ್ಟ್ರಗಳ ಮಾತನ್ನು ತ್ಯಜಿಸಿ ಉಗ್ರರಿಗೆ ಪೋಷಣೆ ನೀಡಿದಲ್ಲಿ ಮುಂದೆ ಪಾಕಿಸ್ತಾನಕ್ಕೆ ಮಾರಕವಾಗುವುದು ಖಂಡಿತ!!

  • ಪವಿತ್ರ
Tags

Related Articles

Close