ಪ್ರಚಲಿತ

ನಿವೃತ್ತ ಸೈನಿಕರನ್ನು ಉಗ್ರವಾದಕ್ಕೆ ಬಳಸಿಕೊಳ್ಳುತ್ತಿದೆ ಈ ಪಾಪಿ ರಾಷ್ಟ್ರ

ಪರಮ ಪಾತಕಿ ‌ಪಾಕಿಸ್ತಾನ ತನ್ನ ದೇಶದ ನಿವೃತ್ತ ಸೈನಿಕರನ್ನು ಸಹ ಉಗ್ರವಾದಿಗಳನ್ನಾಗಿ ಮಾಡಿ, ಭಯೋತ್ಪಾದನೆಯನ್ನು ಮತ್ತಷ್ಟು ಹೆಚ್ಚು ಮಾಡಲು, ಆ ಮೂಲಕ ಸಾಮಾಜಿಕ ಸ್ವಾಸ್ಥ್ಯ ಕದಡಲು ‌ಮುಮದಾಗಿದೆ. ಈ ಆರೋಪಕ್ಕೆ ಈಗ ಸಾಕ್ಷಿ ಸಹ ಸಿಕ್ಕಿದೆ.

ಭಾರತದೊಳಕ್ಕೆ ಗಡಿಯಾಚೆಗಿನಿಂದ ಕೆಲವು ಭಯೋತ್ಪಾದಕರು ನುಸುಳಿದ್ದು, ಅವರಲ್ಲಿ ಪಾಕಿಸ್ತಾನದ ನಿವೃತ್ತ ಸೈನಿಕರೂ ಸೇರಿದ್ದಾರೆ ಎಂದು ಸೇನಾ ಪಡೆಗಳ ಮೂಲಗಳಿಂದ ತಿಳಿದು ಬಂದಿದೆ.

ಉತ್ತರ ಕಮಾಂಡ್‌ನ ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಲೆ. ಜ. ಉಪೇಂದ್ರ ದ್ವಿವೇದಿ ಅವರು ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ರಜೌರಿಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿ ಹುತಾತ್ಮರಾದ ಇಬ್ಬರು ಕ್ಯಾಪ್ಟನ್‌ಗಳನ್ನೊಳಗೊಂಡಂತೆ ಐವರು ವೀರ ಯೋಧರಿಗೆ ಅಂತಿಮ ನಮನ ಸಲ್ಲಿಸಿದ ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದು, ಆ ಸಂದರ್ಭದಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿರುವುದಾಗಿದೆ.

ಈ ಎನ್‌ಕೌಂಟರ್‌ನಲ್ಲಿ ನಾವು ನಮ್ಮ ಐವರು ಯೋಧರನ್ನು ಕಳೆದುಕೊಂಡಿದ್ದೇವೆ. ಇಬ್ಬರು ಅಪಾಯಕಾರಿ ಭಯೋತ್ಪಾದಕರನ್ನು ‌ಸಂಹರಿಸಿದ್ದೇವೆ. ನಮ್ಮ ದೇಶದ ವೀರ ಯೋಧರು ತಮ್ಮ ವೈಯಕ್ತಿಕ ಸುರಕ್ಷತೆಯನ್ನೂ ಮರೆತು, ಎಲ್ಲಾ ರೀತಿಯಿಂದಲೂ ಸುಸಜ್ಜಿತರಾಗಿದ್ದ ಭಯೋತ್ಪಾದಕಕನ್ನು ಎದುರಿಸಿದ್ದಾರೆ. ನಮ್ಮ ಯೋಧರ ಈ ಆಕ್ರಮಣ ಭಯೋತ್ಪಾದಕರ ಪರಿಸರ ವ್ಯವಸ್ಥೆ ಮತ್ತು ಉಗ್ರರನ್ನು ಬೆಳೆಸುತ್ತಿರುವ ಪಾಕಿಸ್ತಾನಕ್ಕೆ ದೊಡ್ಡ ಮಟ್ಟದ ಹೊಡೆತವನ್ನು ನೀಡಿದೆ ಎಂದು ಹೇಳಿದ್ದಾರೆ.

ಹಾಗೆಯೇ, ರಜೌರಿಯಲ್ಲಿ ಇನ್ನೂ ಹಲವಾರು ಉಗ್ರರು ಕಾರ್ಯಾಚರಣೆ ನಡೆಸುತ್ತಿರುವ ಬಗ್ಗೆ ಅನುಮಾನವಿದೆ. ಈ ಪ್ರದೇಶದಲ್ಲಿ ಮುಂದಿನ ಒಂದು ವರ್ಷದ ಅವಧಿಯಲ್ಲಿ ಸ್ಥಳೀಯರ ನೆರವಿನ ಜೊತೆಗೆ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ನಮಗೆ ಸಾಧ್ಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಅಮಾಯಕ ನಾಗರಿಕರನ್ನು ಗುರಿಯಾಗಿಸಿಕೊಂಡು, ಅವರನ್ನು ಹತ್ಯೆ ಮಾಡುವಲ್ಲಿ ರಜೌರಿ, ಕಂಡಿ ಮತ್ತು ಡ್ಯಾಂಗ್ರಿ ಪ್ರದೇಶದಲ್ಲಿ ಭಯೋತ್ಪಾದಕರು ತೊಡಗಿಸಿಕೊಂಡಿದ್ದಾರೆ. ಅವರನ್ನು ನಿಗ್ರಹ ಮಾಡುವುದೇ ಕಾರ್ಯಾಚರಣೆ ನಡೆಸುತ್ತಿರುವ ಭದ್ರತಾ ಪಡೆಗಳ ಮುಖ್ಯ ಆದ್ಯತೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

Tags

Related Articles

Close