ಪ್ರಚಲಿತ

ಕಾಂಗ್ರೆಸ್‌ನ ಸರ್ಟಿಫಿಕೇಟ್‌ಗಳಿಗೆ ಲೋಕಸಭಾ ಚುನಾವಣೆಯಲ್ಲಿ ಜನರೇ ಉತ್ತರಿಸುತ್ತಾರೆ: ಪ್ರಲ್ಹಾದ ಜೋಶಿ

ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯೂ ಸಹ ಬಿಜೆಪಿ ಭರ್ಜರಿ ಜಯಭೇರಿ ಬಾರಿಸುವ ಎಲ್ಲಾ ಲಕ್ಷಣಗಳೂ ಗೋಚರವಾಗುತ್ತಿವೆ. ದೇಶದೆಲ್ಲೆಡೆ ಕಳೆದ ಹತ್ತು ವರ್ಷಗಳ ಆಡಳಿತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಮಾಡಿದ ಅಭಿವೃದ್ಧಿ ಕಾರ್ಯಗಳು ಜನರಿಗೆ ಅವರ ಮೇಲಿನ ನಂಬಿಕೆಯನ್ನು ಮತ್ತಷ್ಟು ಹೆಚ್ಚಿಸಿದ್ದು, ಜನರು ಈ ಬಾರಿಯೂ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಅಭ್ಯರ್ಥಿಗಳಿಗೆ ಬಹುಪರಾಕ್ ಎನ್ನುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

ಪ್ರದಾನಿ ಮೋದಿ ಅವರು ಮೂರನೇ ಬಾರಿಗೆ ಸರ್ಕಾರ ರಚಿಸಬೇಕಾದರೆ, ಅವರಿಗೆ ಹೆಚ್ಚಿನ ಎಂ.ಪಿ. ಗಳ ಬೆಂಬಲ ಬೇಕಾಗುತ್ತದೆ. ದೇಶದೆಲ್ಲೆಡೆ ಚುನಾವಣೆಗೆ ಸ್ಪರ್ಧೆ ಮಾಡುತ್ತಿರುವ ಬಿಜೆಪಿ ಅಭ್ಯರ್ಥಿಗಳ ಗೆಲುವಿನ ಮೇಲೆ, ಪ್ರಧಾನಿ ಮೋದಿ ಅವರು ಮೂರನೇ ಬಾರಿಗೆ ಸರ್ಕಾರ ರಚನೆ ಮಾಡುವುದು ನಿಂತಿದೆ.

ಈ ಚುನಾವಣೆಗೆ ಸಂಬಂಧಿಸಿದ ಹಾಗೆ ಧಾರವಾಡದ ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಅವರು ಮಾತನಾಡಿದ್ದು, ಪ್ರಧಾನಿ ಮೋದಿ ಅವರು ಮತ್ತೆ ಸರ್ಕಾರ ರಚಿಸಲು ಹೆಚ್ಚಿನ ಬಿಜೆಪಿ ಎಂ. ಪಿ. ಗಳ ಗೆಲುವಿನ ಅವಶ್ಯಕತೆ ಇದ್ದು, ಅವರಲ್ಲಿ ನಾನೂ ಒಬ್ಬ ಎಂದು ಹೇಳಿದ್ದಾರೆ.

ದೇಶದ ಅಭಿವೃದ್ಧಿಯ ಹಿತದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗಬೇಕು. ಕಳೆದ ಹತ್ತು ವರ್ಷದಲ್ಲಿ ದೇಶದಲ್ಲಿ ಪ್ರಧಾನಿ ಮೋದಿ ಅವರು ಮಾಡಿದ ಬದಲಾವಣೆಯನ್ನು ಜನತೆ ನೋಡಿದ್ದಾರೆ. ಪ್ರಧಾನಿ ಮೋದಿ ಅವರ ಸಮರ್ಥ ಆಳ್ವಿಕೆಯಿಂದ ದೇಶ ವಿಶ್ವದ ಐದನೇ ಬಲಿಷ್ಟ ರಾಷ್ಟ್ರ ಎಂಬ ಹೆಗ್ಗಳಿಕೆ ಗಳಿಸಿದೆ. ಈ ಬಾರಿ ಅಧಿಕಾರ ಸಿಕ್ಕರೆ ಜಗತ್ತಿನ ಮೂರನೇ ದೊಡ್ಡ ಆರ್ಥಿಕತೆಯನ್ನಾಗಿ ಭಾರತವನ್ನು ಮುಂದೆ ತರುವ ಸಂಕಲ್ಪವನ್ನು ಇರಿಸಿಕೊಂಡಿದ್ದಾರೆ ಬಂದಿರುವ ಅವರು, ಕರ್ನಾಟಕದಲ್ಲಿ ಎಲ್ಲಾ ಸ್ಥಾನಗಳೂ ಬಿಜೆಪಿ ಪಾಲಾಗುವ ಭರವಸೆ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬಗ್ಗೆ ನಾಲಿಗೆ ಎಳೆದ ಕಾಂಗ್ರೆಸ್ ಪಕ್ಷದ ಯಂತೀಂದ್ರ ಸಿದ್ದರಾಮಯ್ಯ ಬಗ್ಗೆ ಮಾತನಾಡಿದ ಜೋಶಿ, ಅವರ ಮಾತುಗಳು ಅವರ ಸಂಸ್ಕೃತಿ ಏನು ಎಂಬುದನ್ನು ತಿಳಿಸುತ್ತದೆ. ಮನಸ್ಸಿಗೆ, ಬಾಯಿಗೆ ಬಂದಂತೆ ಏಕವಚನದಲ್ಲೇ ಟೀಕಿಸಿ, ತಮ್ಮ ಹತಾಶೆ ಹೊರ ಹಾಕುತ್ತಾರೆ. ಇವರು ನೀಡುವ ಇಂತಹ ಸರ್ಟಿಫಿಕೇಟ್‌ಗಳಿಗೆ ಜನರೇ ಉತ್ತರ ನೀಡುತ್ತಾರೆ ಎಂದು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಸರ್ಕಾರ ರಚಿಸಿದ ಅಹಂಕಾರ ಕಾಂಗ್ರೆಸ್ ‌ಪಕ್ಷದವರಲ್ಲಿದೆ. ಈ ದುರಹಂಕಾರ ಬೇಡ. ನಾವು ಕೇಂದ್ರದಲ್ಲಿ ಅಮಿತ್ ಶಾ ಅವರ ನೇತೃತ್ವದ ಎರಡು ಬಾರಿ ಸರ್ಕಾರ ರಚಿಸಿದ್ದೇವೆ ಎಂದು ಟಾಂಗ್ ಕೊಟ್ಟಿದ್ದಾರೆ.

Tags

Related Articles

Close