ಪ್ರಚಲಿತ

ದೇಶದ ಜನರ ಸಂಪತ್ತು ದೋಚಲು ಹೊಂಚು ಹಾಕುತ್ತಿದೆ ಕಾಂಗ್ರೆಸ್

ದೇಶವನ್ನು, ದೇಶ ವಾಸಿಗಳ ತೆರಿಗೆ ಹಣವನ್ನು ಲೂಟಿ ಮಾಡಿ, ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರು ಎಂಬಂತಿರುವ ಪಕ್ಷ ಕಾಂಗ್ರೆಸ್ ಪಕ್ಷ. ದೇಶ ಕಂಡ ಅತ್ಯಂತ ದೊಡ್ಡ ಲೂಟಿಕೋರ ಪಕ್ಷ ಕೈ ಪಕ್ಷ ಎನ್ನಬಹುದು.

ಇಂತಹ ಭ್ರಷ್ಟ ಪಕ್ಷದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ವಾಗ್ದಾಳಿ ನಡೆಸಿದ್ದಾರೆ. ದೇಶದ ಸಂಪತ್ತನ್ನು ಕೊಳ್ಳೆ ಹೊಡೆದು, ಅಭಿವೃದ್ಧಿಯನ್ನು ಕನಸಾಗಿಸಿದ್ದ ಕೈ ಪಾಳಯದ ವಿರುದ್ಧ ಆವರು ಗುಡುಗಿದ್ದಾರೆ.

ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳ ಒಕ್ಕೂಟವಾದ ಇಂಡಿ ಒಕ್ಕೂಟದ ಬಗ್ಗೆ ಮಾತನಾಡಿರುವ ಅವರು, ಈ ಒಕ್ಕೂಟ ದೇಶದ ಜನರ ಗಳಿಕೆ, ಉಳಿಕೆ, ಆಸ್ತಿಯನ್ನು ಕೊಳ್ಳೆ ಹೊಡೆಯಲು ದುಷ್ಟ ದೃಷ್ಟಿ ಬೀರಿ ಕಾಯುತ್ತಿದೆ. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಪ್ರಸ್ತಾಪನೆ ಮಾಡಲಾದ ಸಂಪತ್ತಿನ ಮರು ಹಂಚಿಕೆಯ ಬಗ್ಗೆ ಉಲ್ಲೇಖ ಮಾಡಿದ ಅವರು, ಇಂಡಿ ಒಕ್ಕೂಟ ದೇಶದ ಜನರ ಸಂಪತ್ತನ್ನು ಲೂಟಿ ಹೊಡೆಯಲು ಕಾಂಗ್ರೆಸ್ ಕಣ್ಣಿಟ್ಟಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ನ ಈ ಕುತಂತ್ರದ ಬಗ್ಗೆ ನಾನು ಜನರನ್ನು ಎಚ್ಚರಿಸಲು ಬಯಸುತ್ತೇನೆ ಎಂದಿರುವ ಅವರು, ಕಾಂಗ್ರೆಸ್ ಮತ್ತು ಅದರ ಮೈತ್ರಿಕೂಟ ನಿಮ್ಮ ಸಂಪತ್ತು ದೋಚುವ ಹುನ್ನಾರ ಮಾಡುತ್ತಿದೆ. ಈ ಬಗ್ಗೆ ಎಚ್ಚರ ಇರಲಿ ಎಂದು ಹೇಳಿದ್ದಾರೆ. ಕಾಂಗ್ರೆಸ್ ನೇತೃತ್ವದ ಇಂಡಿ ಮೈತ್ರಿ ಒಕ್ಕೂಟ ಅಧಿಕಾರಕ್ಕೆ ಬಂದಲ್ಲಿ ಯಾರ ಸಂಪಾದನೆ ಎಷ್ಟು ಎನ್ನುವುದನ್ನು ಸಮೀಕ್ಷೆ ಮಾಡುತ್ತೇವೆ ಎಂದು ಕೈ ಪಕ್ಷ ತನ್ನ ಪ್ರಣಾಳಿಕೆಯಲ್ಲಿಯೇ ಹೇಳಿದೆ ಎಂದು ತಿಳಿಸಿದ್ದಾರೆ.

ಕೈ ಪಕ್ಷದ ರಾಜಕುಮಾರ ಸರ್ಕಾರ ರಚನೆ ಮಾಡಿದಲ್ಲಿ ದೇಶದ ಜನರ ಸಂಪತ್ತನ್ನು ಸಮೀಕ್ಷೆ ನಡೆಸಲು ಮುಂದಾಗಿದ್ದಾರೆ. ಯಾರ ಆಸ್ತಿ ಎಷ್ಟು, ಯಾರು ಎಷ್ಟು ಮನೆಗಳನ್ನು ಹೊಂದಿದ್ದಾರೆ, ಯಾರ ಸಂಪಾದನೆ ಎಷ್ಟು ಎನ್ನುವುದನ್ನು ಸಮೀಕ್ಷೆ ಮಾಡುವುದಾಗಿ ಹೇಳಿದ್ದಾರೆ. ಅವರ ಸರ್ಕಾರ ಜನರ ಸಂಪತ್ತನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲಿದೆ. ಇಂತಹ ಮಾವೋವಾದಿ ಚಿಂತನೆಯನ್ನು ಕಾಂಗ್ರೆಸ್ ಹೊಂದಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷ ಮಾವೋವಾದಿ ಚಿಂತನೆಯನ್ನು ಹೊಂದಿದ್ದು, ಈ ನೀತಿಯನ್ನು ತನ್ನ ಇಂಡಿ ಒಕ್ಕೂಟದ ಜತೆಗೂಡಿ ದೇಶಕ್ಕೆ ಅನ್ವಯಿಸುವ ಪ್ರಯತ್ನವನ್ನು ಕೈ ನಾಯಕರು ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಒಟ್ಟಿನಲ್ಲಿ ಹಲವು ದಶಕಗಳ ಆಡಳಿತದಲ್ಲಿ ಕಾಂಗ್ರೆಸ್ ದೇಶದ ಸಂಪತ್ತನ್ನು ಲೂಟಿ ಮಾಡಿದ್ದು, ಕಳೆದ ಹತ್ತು ವರ್ಷಗಳ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಆಡಳಿತದಲ್ಲಿ ಕಾಂಗ್ರೆಸ್ ನಾಯಕರಿಗೆ ದೇಶವನ್ನು ಲೂಟುವ ಅವಕಾಶ ತಪ್ಪಿದೆ. ಮತ್ತೆ ತಮ್ಮ ಸಂಪತ್ತು ಹೆಚ್ಚಿಸಿಕೊಳ್ಳಲು ದೇಶದ ಅಧಿಕಾರ ಬಯಸುತ್ತಿರುವ ಕಾಂಗ್ರೆಸ್, ಮತ್ತೆ ದೇಶವನ್ನು ಲೂಟಿ ಹೊಡೆಯಲು ಹೊಂಚು ಹಾಕುತ್ತಿದೆ‌. ಕಾಂಗ್ರೆಸ್ ಪಕ್ಷದ ಈ ವರ್ತನೆಯ ವಿರುದ್ಧ ಪ್ರಧಾನಿ ಮೋದಿ ಅವರು ಜನರನ್ನು ಎಚ್ಚರಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಇಂತಹ ದುಷ್ಟ ಮನಸ್ಥಿತಿಗೆ ಜನರೇ ಈ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪ್ರತ್ಯುತ್ತರ ನೀಡಲಿದ್ದಾರೆ.

Tags

Related Articles

Close