ಪ್ರಚಲಿತ

ಒಂದು ಭಾಗದಲ್ಲಿ ಅಭಿವೃದ್ಧಿ ಕುಂಠಿತವಾದರೆ ಇಡೀ ದೇಶವೇ ಬಳಲುತ್ತದೆ: ಪ್ರಧಾನಿ ಮೋದಿ

ಕೇಂದ್ರದ ಪ್ರಧಾನಿ ಮೋದಿ ಸರ್ಕಾರ ಈ ದೇಶಕ್ಕಾಗಿ, ಜನರಿಗಾಗಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ನಡೆಸಿದೆ. ಆದರೂ ಎನ್.ಡಿ.ಎ. ವಿರುದ್ಧ ಸದಾ ಕಾಲ ಸಾರ್ವಜನಿಕ ವಲಯದಲ್ಲಿ ಸುಳ್ಳು ಬಿತ್ತುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಲೇ ಬರುತ್ತಿದೆ ಎನ್ನುವುದು ವಿಪರ್ಯಾಸ.

ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಸಂಸತ್ತಿನಲ್ಲಿ ವಂದನಾ ನಿರ್ಣಯ ಭಾಷಣ ಮಾಡಿದ್ದು, ಕಾಂಗ್ರೆಸ್ ಪಕ್ಷದ ನಾಯಕರ ವಿರುದ್ಧ ವಾಗ್ದಾಳಿ ‌ನಡೆಸಿದ್ದಾರೆ.

ನಮ್ಮ ತೆರಿಗೆ, ನಮ್ಮ ಹಣ, ನಮ್ಮ ಲಸಿಕೆ. ಆದರೆ ಕಾಂಗ್ರೆಸ್ ಯಾವ ಭಾಷೆಯನ್ನು ಮಾತನಾಡುತ್ತಿದೆ ಎಂದು ಪ್ರಶ್ನೆ ಮಾಡಿದ್ದಾರೆ. ನಾವು ದೇಶದ ಮೂಲಭೂತ ಅಗತ್ಯಗಳನ್ನು ಒದಗಿಸುವುದು ಮತ್ತು ಜನರ ಜೀವನವನ್ನು ಸುಗಮಗೊಳಿಸುವುದು ನಮ್ಮ ಸರ್ಕಾರದ ಮುಖ್ಯ ಉದ್ದೇಶ ಎಂದು ಅವರು ಹೇಳಿದ್ದಾರೆ. ಜನರು ಗುಣಮಟ್ಟದ ಜೀವನ ನಡೆಸುವುದಕ್ಕೆ ಸೂಕ್ತ ಅವಕಾಶಗಳನ್ನು ಒದಗಿಸುವುದು ನಮ್ಮ ಸರ್ಕಾರದ ಗುರಿ ಎಂದು ಅವರು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ವಿಶ್ವಾಸಾರ್ಹತೆಯನ್ನು ಪ್ರಧಾನಿ ಮೋದಿ ಪ್ರಶ್ನೆ ಮಾಡಿದ್ದಾರೆ. ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆ ಬಗ್ಗೆ ಮಾತನಾಡಲು ಕಾಂಗ್ರೆಸ್ ಪಕ್ಷಕ್ಕೆ ನೈತಿಕತೆ ಇದೆಯೇ ಎಂದು ಅವರು ಕೇಳಿದ್ದಾರೆ. ಕಾಂಗ್ರೆಸ್ ದೇಶಕ್ಕೆ ವಿಭಜಕ ನೀತಿಗಳಿಗೆ ಪ್ರೋತ್ಸಾಹ ನೀಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ನಮ್ಮ ಸರ್ಕಾರ ಜನರಿಗೆ ಮೂಲಭೂತ ಅವಶ್ಯಕತೆಗಳನ್ನು ಒದಗಿಸುವುದಕ್ಕೆ ಕೆಲಸ ಮಾಡುತ್ತಿದೆ. ನಾಗರೀಕರಿಗೆ ಜೀವನ ಸುಲಭಗೊಳಿಸಲು ನಮ್ಮ ಸರ್ಕಾರ ಕ್ರಮಗಳನ್ನು ಕೈಗೊಳ್ಳುತ್ತಿದೆ. ನಮಗೆ ಭಾರತ ಒಂದು ತುಂಡು ಭೂಮಿಯಲ್ಲ. ಇದು ನಮಗೆ ಸ್ಫೂರ್ತಿದಾಯಕ ವಿಷಯ ಎಂದು ತಿಳಿಸಿದ್ದಾರೆ.

ಹಾಗೆಯೇ, ಸಮಾನ ಅಭಿವೃದ್ಧಿಯ ಅಗತ್ಯತೆ, ಮಹತ್ವವನ್ನು ಅವರು ಒತ್ತಿ ಹೇಳಿದರು. ದೇಶದ ಒಂದು ಭಾಗದಲ್ಲಿ ಪ್ರಗತಿ ಕ್ಷೀಣಿಸಿದ್ದರೆ, ಇಡೀ ದೇಶದ ಅಭಿವೃದ್ಧಿಯ ಓಟ ಕುಂಠಿತವಾಗುತ್ತದೆ ಎಂದು ಅವರು ನುಡಿದಿದ್ದಾರೆ. ಕಾಂಗ್ರೆಸ್ ಪಕ್ಷದಂತಹ ಕೆಲವು ರಾಜಕೀಯ ಘಟಕಗಳು ದೇಶದ ವಿಭಜನೆಯ ಭಾಷೆಯ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು. ಹಾಗೆಯೇ, ಅದು ದೇಶದ ಮೇಲೆ ಬೀರುವ ದುಷ್ಪರಿಣಾಮದ ಬಗ್ಗೆ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

Tags

Related Articles

Close