ಪ್ರಚಲಿತ

ಒಂದೇ ಒಂದು ಟ್ವೀಟ್‍ಗೆ ಚಿನ್ನದ ಸರವನ್ನೇ ಪಾರ್ಸಲ್ ಮಾಡಿದ ಮೋದಿ!! ಟ್ವಿಟರ್‍ನಲ್ಲಿ ಭಾವನಾತ್ಮಕ ಸ್ಟೋರಿ!!

ಪ್ರಧಾನಿ ನರೇಂದ್ರ ಮೋದೀ ಅಂದರೇನೇ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ!! ಅವರೋರ್ವ ವಿಶ್ವ ನಾಯಕ!! ವಿಶ್ವವನ್ನೇ ಭಾರತದತ್ತ ಮುಖಮಾಡಿ ನೋಡುವಂತೆ ಮಾಡಿದ್ದಾರೆ!! ಮೋದೀಜೀ ಎಲ್ಲೇ ಹೋದರೂ ಮೋದಿ ಮೋದಿ ಎಂಬ ಘೋಷಣೆಯೊಂದಿಗೆ ಅವರನ್ನು ಸ್ವಾಗತಿಸುತ್ತಾರೆ!! ಅವರನ್ನು ನೋಡಲೆಂದು ಕೋಟಿ ಕೋಟಿ ಜನರು ಕಾಯುತ್ತಿರುತ್ತಾರೆ!! ಇಂತಹವರ ಮಧ್ಯೆ ಓರ್ವ ಅಭಿಮಾನಿಗೆ ತಾನು ಹಾಕಿದ ಚಿನ್ನದ ಸರ ಇಷ್ಟವಾಯಿತು ಎಂದಿದ್ದಕ್ಕೆ ಆ ಚಿನ್ನದ ಸರವನ್ನೇ ಅವರಿಗೆ  ಗಿಫ್ಟ್ ಆಗಿ ನೀಡಿದ್ದಾರೆ..!!

ಐಐಟಿ ವಿದ್ಯಾರ್ಥಿಗೆ ಪ್ರಧಾನಿಯಿಂದ ಚಿನ್ನದ ಸರ ಗಿಫ್ಟ್!!

ಎಂಜಿನಿಯರಿಂಗ್ ಓದುತ್ತಿರುವ ವಿದ್ಯಾರ್ಥಿಯೊಬ್ಬರಿಗೆ ಪ್ರಧಾನಿ ನರೇಂದ್ರ ಮೋದಿಯವರು ಚಿನ್ನದ ಸರವನ್ನು ಉಡುಗೊರೆಯಾಗಿ ನೀಡಿದ್ದಾರೆ. ಜಾರ್ಖಂಡ್ ಧನ್‍ಬಾದ್ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮೆಕ್ಯಾನಿಕಲ್ ಎಂಜಿನಿನಿಯರಿಂಗ್ ಓದುತ್ತಿರುವ ರಬೆಶ್ ಕುಮಾರ್ ಅವರಿಗೆ ಮೋದಿ ಚಿನ್ನದ ಸರವನ್ನು ಗಿಫ್ಟ್ ನೀಡಿದ್ದಾರೆ. ಮಧ್ಯಪ್ರದೇಶದ ಸಾರ್ವಜನಿಕ ಜಾಥಾದ ವೇಳೆ ಮೋದಿ ಭಾಷಣ ಮಾಡಿದ್ದರು. ಆ ಸಮಯದಲ್ಲಿ ಮೋದಿ ಅವರು ಚಿನ್ನದ ಸರವೊಂದನ್ನು ತನ್ನ ಕೊರಳಲ್ಲಿ ಹಾಕಿಕೊಂಡಿದ್ದರು. ಆ ವೇಳೆ ಇದನ್ನು ವಿದ್ಯಾರ್ಥಿ ಗಮನಿಸಿದ್ದಾರೆ.

ಕೆಲ ದಿನಗಳ ಬಳಿಕ ವಿದ್ಯಾರ್ಥಿ `ಕಳೆದ ತಿಂಗಳಿನಲ್ಲಿ ಮಧ್ಯಪ್ರದೇಶದಲ್ಲಿ ನಡೆಸಿದ ಜಾಥಾದ ಸಂದರ್ಭದಲ್ಲಿ ವೇಳೆ ತಾವು ಧರಿಸಿದ್ದ ಸರವನ್ನು ತನಗೆ ನೀಡುವಂತೆ ಮನವಿ ಮಾಡಿ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಬರೆದು ಮೋದಿಗೆ ಟ್ಯಾಗ್ ಮಾಡಿದ್ದಾರೆ. ಟ್ವೀಟ್ ನಲ್ಲಿ `ಪಂಚಾಯತ್ ರಾಜ್ ದಿನದಂದು ನೀವು ಮಾಡಿದ ಭಾಷಣವನ್ನು ಕೇಳಿದ್ದೇನೆ. ನಿಮ್ಮ ಭಾಷಣ ಉತ್ತಮವಾಗಿತ್ತು. ಆ ಸಂದರ್ಭದಲ್ಲಿ ನೀವು ಧರಿಸಿದ್ದ ಚಿನ್ನದ ಬಣ್ಣ ಇರೋ ಸರ ನನಗೆ ತುಂಬಾ ಇಷ್ಟವಾಯಿತು. ಆ ಸರವನ್ನು ನನಗೆ ಕೊಡುತ್ತೀರಾ?’ ಅಂತ ಸಿಂಗ್ ಟ್ವೀಟ್ ನಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಸಿಂಗ್ ಟ್ವೀಟ್ ಮಾಡಿದ ಮರಿದಿನವೇ, ಪ್ರಧಾನಿಯವರ ಹೆಸರಿನಲ್ಲಿ ಚಿನ್ನದ ಸರದ ಜೊತೆ ಪತ್ರವೊಂದು ವಿದ್ಯಾರ್ಥಿಯ ಕೈ ಸೇರಿದೆ. `ಟ್ವಿಟ್ಟರ್ ನಲ್ಲಿ ನೀನು ಬರೆದ ಮೆಸೇಜ್ ಓದಿದ್ದೇನೆ. ನಾನು ಧರಿಸಿದ್ದ ಚಿನ್ನದ ಸರ ನಿನಗೆ ಇಷ್ಟವಾಗಿರುವುದಾಗಿ ಬರೆದಿದ್ದೆ. ಹೀಗಾಗಿ ಪತ್ರದ ಜೊತೆಗೆ ಸರವನ್ನೂ ಕೂಡ ಕಳುಹಿಸಿದ್ದೇನೆ. ನಿನ್ನ ಮುಂದಿನ ಭವಿಷ್ಯ ಉಜ್ವಲವಾಗಿರಲಿ’ ಅಂತ ಪತ್ರದಲ್ಲಿ ತಿಳಿಸಲಾಗಿತ್ತು. ಚಿನ್ನದ ಸರ ಕೈ ಸೇರಿದ ಕೂಡಲೇ ಸಿಂಗ್ ಮತ್ತೆ ಟ್ವೀಟ್ ಮಾಡಿದ್ದು, ಚಿನ್ನದ ಸರ ಹಾಗೂ ಪತ್ರ ನನ್ನ ಕೈ ಸೇರಿದ ಬಳಿಕ ನನಗೆ ನಿಮ್ಮ ಮೇಲಿನ ಗೌರವ ಮತ್ತಷ್ಟು ಹೆಚ್ಚಾಗಿದೆ. ಒಂದು ಸುಂದರವಾದ ಉಡುಗೊರೆ ನೀಡಿದ್ದಕ್ಕೆ ಹಾಗೂ ನಿಮ್ಮ ಗುಡ್ ಲಕ್ ಮೆಸೇಜ್ ಗೆ ಧನ್ಯವಾದಗಳು ಅಂತ ಸಂತಸ ಹಂಚಿಕೊಂಡಿದ್ದಾರೆ.

ನಾಟ್ಯ ಮಯೂರಿಗೂ ಸಿಕ್ಕಿತ್ತು ಗಿಫ್ಟ್!!

ಪ್ರಧಾನಿ ನರೇಂದ್ರ ಈ ಮೊದಲು ಕೂಡಾ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಪತ್ನಿ ನಾಟ್ಯ ಮಯೂರಿ ಎಂದೇ ಪ್ರಖ್ಯಾತಿ ಪಡೆದಿರುವ ಮಯೂರಿ ಉಪಾಧ್ಯ, ತಮ್ಮ ನೃತ್ಯದ ಮೂಲಕ ಹೆಸರುವಾಸಿಯಾಗಿದ್ದ ಇವರಿಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದಲೇ ಒಂದು ವಿಷೇಶವಾದ ಉಡುಗೊರೆ ಸಿಕ್ಕಿತ್ತು!!

ನೃತ್ಯದ ಮೂಲಕ ದೇಶ ವಿದೇಶದಲ್ಲಿ ಮಿಂಚುತ್ತಿರುವ ಮಯೂರಿ ತಮ್ಮದೇ ಆದ ನೃತ್ಯ ತಂಡವನ್ನು ಕಟ್ಟಿಕೊಂಡು ದೇಶ ವಿದೇಶಗಳಲ್ಲಿ ನಾಟ್ಯವನ್ನು ಪ್ರದರ್ಶನ ಮಾಡುತ್ತಾರಲ್ಲದೇ, ಸಿನಿಮಾಗಳಿಗೂ ಕೋರಿಯೋಗ್ರಫಿ ಮಾಡಿರುವ ಹಿರಿಮೆ ಇವರದ್ದಾಗಿತ್ತು!! ಇದರ ಜೊತೆಗೆ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿರುವ ಇವರು ಕಲೆಯೆಂದರೆ ಹವ್ಯಾಸವಲ್ಲ, ಬದುಕು ಅನ್ನುವ ಅವರದ್ದು ಅಂತಾರಾಷ್ಟ್ರೀಯ ಕೀರ್ತಿ!! ಇಂತಹ ಕಲಾ ಆರಾಧಕಿ ಮಯೂರಿ ಅವರಿಗೆ ಗಣರಾಜ್ಯೋತ್ಸವದ ಅಂಗವಾಗಿ ಪ್ರಧಾನಮಂತ್ರಿ ಕಡೆಯಿಂದ ಮೇಕ್ ಇನ್ ಇಂಡಿಯಾದಲ್ಲಿ ತಯಾರಾದ ಥೀಮ್‍ನಲ್ಲಿ ಸಿದ್ಧವಾಗುವ ಕೈಗಡಿಯಾರವನ್ನು ಮಯೂರಿಯವರಿಗೆ ಉಡುಗೊರೆಯಾಗಿ ಕೊಟ್ಟಿದ್ದರು!!

ಇದರಲ್ಲಿಯೇ ತಿಳಿಯುತ್ತದೆ ಮೋದಿಜೀಯ ಸರಳತೆ!! ಒಬ್ಬ ವಿದ್ಯಾರ್ಥಿಗೆ ಚಿನ್ನದ ಸರ ಇಷ್ಟವಾಯಿತು ಎಂದು ಟ್ವೀಟ್ ಮಾಡಿದ ಕೆಲವೇ ದಿನಗಳಲ್ಲಿ ಆ ಚಿನ್ನದ ಸರ ಪಾರ್ಸಲ್ ಮಾಡುವುದರ ಮೂಲಕ ತನ್ನ ಸರಳತೆಯನ್ನು ಮೆರೆದಿದ್ದಾರೆ!!

ಪವಿತ್ರ

Tags

Related Articles

Close