ಪ್ರಚಲಿತ

ಬರ್ಸನ್ ಕೋಹನ್ ಮತ್ತು ವೋಲ್ಫ್ ಸಮೀಕ್ಷೆಯಲ್ಲಿ ಬಯಲಾದ ಸತ್ಯ !! ಫೇಸ್‍ಬುಕ್ ಜಾಲತಾಣದಲ್ಲಿ ಟ್ರಂಪರನ್ನು ಹಿಂದಿಕ್ಕಿದ ಮೋದಿ!!

ಪ್ರಧಾನಿ ನರೇಂದ್ರ ಮೋದಿ ಅಂದರೇನೇ ಹಾಗೆ!! ವಿಶ್ವದ ಯಾವ ಕಡೆ ಹೋದರೂ ಜನರಿಂದ ಮೋದಿ ಮೋದಿ ಎಂಬ ಹರ್ಷೋಧ್ಗಾರ ಕೇಳಿ ಬರುತ್ತದೆ!! ಕೇವಲ ತನ್ನ ಹೆಸರನ್ನು ವಿಶ್ವ ವಿಖ್ಯಾತಿ ಮಾಡಿದ್ದಲ್ಲದೆ ಇಡೀ ಪ್ರಪಂಚವೇ ಭಾರತವನ್ನು ಗೌರವದಿಂದ ನೋಡುವ ಹಾಗೆ ಮಾಡಿದ್ದು ಇದೇ ಪ್ರಧಾನಿ ನರೇಂದ್ರ ಮೋದಿಯವರು!! ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಭಾರತದ ಖ್ಯಾತಿ ವಿಶ್ವಮಟ್ಟದಲ್ಲಿ ಮಿನುಗುತ್ತಿದೆ. ಅವರು ಯಾವುದೇ ದೇಶಕ್ಕೆ ಹೋದರೂ, ಅಲ್ಲಿ ಭವ್ಯ ಸ್ವಾಗತವೊಂದು ಕಾದಿರುತ್ತದೆ ಹಾಗೂ ಮೋದಿ ಸ್ವಾಗತಿಸಲು ಆ ರಾಷ್ಟ್ರಗಳ ನಾಯಕರು ತುದಿಗಾಲಿನಲ್ಲಿ ನಿಂತಿರುತ್ತಾರೆ. ಹೀಗೆ ನರೇಂದ್ರ ಮೋದಿ ಅವರು ಭಾರತವನ್ನು ಅಭಿವೃದ್ಧಿ ಮಾಡುತ್ತ, ಬೇರೆ ರಾಷ್ಟ್ರಗಳನ್ನು ಸೆಳೆಯುತ್ತ ವಿಶ್ವ ನಾಯಕರಾಗಿದ್ದಾರೆ ಎಂಬುದಕ್ಕೆ ಮತ್ತೊಂದು ಸಾಕ್ಷಿ ದೊರೆತಿದೆ.

ಫೇಸ್‍ಬುಕ್‍ನಲ್ಲಿ ಟ್ರಂಪ್‍ರನ್ನು ಹಿಂದಿಕ್ಕಿದ ನರೇಂದ್ರ ಮೋದಿ!!

ಫೇಸ್ ಬುಕ್‍ನಲ್ಲಿ ವಿಶ್ವ ನಾಯಕರು ಕುರಿತಾಗಿ ಬರ್ಸನ್ ಕೋಹನ್ ಮತ್ತು ವೂಲ್ಫ್ ನಡೆಸಿರುವ ಅಧ್ಯಯನದ ವರದಿಯನ್ನು ಬಿಡುಗಡೆ ಮಾಡಲಾಗಿದೆ. ಅದರ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಇತರ ಅನೇಕ ವಿಶ್ವ ನಾಯಕರಿಗಿಂತ ಸಾಮಾಜಿಕ ಜಾಲ ತಾಣದ ಜನಪ್ರಿಯತೆಯಲ್ಲಿ ಎಷ್ಟೋ ಮುಂದಿರುವುದು ಕಂಡು ಬಂದಿದೆ.

Related image

ಅಧ್ಯಯನದಲ್ಲಿ ಕಂಡು ಬಂದಿರುವ ಪ್ರಕಾರ ಫೇಸ್ ಬುಕ್‍ನಲ್ಲಿ 43.2 ದಶಲಕ್ಷ ಹಿಂಬಾಲಕರನ್ನು ಹೊಂದಿರುವ ಪ್ರಧಾನಿ ಮೋದಿ ವಿಶ್ವ ನಾಯಕರ ಪೈಕಿ ಅಗ್ರ ಸ್ಥಾನದಲ್ಲಿದ್ದಾರೆ. ಟ್ರಂಪ್ ಅವರಿಗಿಂತ ಈ ಸಂಖ್ಯೆ ದುಪ್ಪಟ್ಟಿರುವುದು ದೊಡ್ಡ ಸಾಧನೆಯೇ ಆಗಿದೆ. ಟ್ವಿಟರ್‍ನಲ್ಲಿ ಮೋದಿಗಿಂತ ಮುಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಫೇಸ್ ಬುಕ್ ನಲ್ಲಿ 23.1 ದಶಲಕ್ಷ ಹಿಂಬಾಲಕರನ್ನು ಹೊಂದಿರುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ.

ಈ ಅಧ್ಯಯನವು 2017ರ ಜನವರಿ 1ರಿಂದ ಫೇಸ್ ಬುಕ್‍ನಲ್ಲಿ ಸಕ್ರಿಯರಾಗಿರುವ ಸುಮಾರು 650 ವಿಶ್ವ ನಾಯಕರು ಮತ್ತು ವಿದೇಶ ಸಚಿವರ ಚಟುವಟಿಕೆಗಳನ್ನು ವಿಶ್ಲೇಷಿಸಿದೆ. ಅದಕ್ಕಾಗಿ ಫೇಸ್ ಬುಕ್ ನ ಕ್ರೌಡ್ ಟ್ಯಾಂಗಲ್ ಸಲಕರಣೆಯನ್ನು ಅದು ಬಳಸಿಕೊಂಡಿದೆ. ಕಳೆದ ಹದಿನಾಲ್ಕು ತಿಂಗಳಲ್ಲಿ ವಿಶ್ವದ ಎಲ್ಲ ನಾಯಕರ ಪೈಕಿ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಫೇಸ್‍ಬುಕ್‍ನಲ್ಲಿ ಗರಿಷ್ಠ ಸಂಖ್ಯೆಯಲ್ಲಿ, ಒಟ್ಟು 204.9 ದಶಲಕ್ಷ ಸಂವಹನಗಳನ್ನು (ಕಮೆಂಟ್ಸ್, ಲೈಕ್ಸ್ ಮತ್ತು ಶೇರ್ಗಳನ್ನು ಒಳಗೊಂಡಂತೆ) ನಡೆಸಿರುವುದು ಅತೀ ದೊಡ್ಡ ದಾಖಲೆಯಾಗಿದೆ.

ಪ್ರಧಾನಿ ಮೋದಿ ಅವರ ಫೇಸ್ ಬುಕ್ ಸಂವಹನ ಸಂಖ್ಯೆಯು 113.6 ದಶಲಕ್ಷ ಆಗಿದೆ!! ಇಂಡೋನೇಶ್ಯದ ಅಧ್ಯಕ್ಷ ಜೋಕೋ ವಿದೋದೋ ನಡೆಸಿರುವ ಫೇಸ್ ಬುಕ್ ಸಂವಹನ 46 ದಶಲಕ್ಷ; ಕಾಂಬೋಡಿಯದ ಪ್ರಧಾನಿ ಸಮದೇಚ್ ಹುನ್ ಸೆನ್ ಮತ್ತು ಆರ್ಜೆಂಟೀನಾ ಅಧ್ಯಕ್ಷ ಮಾರಿಶಿಯೋ ಮ್ಯಾಕ್ರಿ ನಡೆಸಿರುವ ಫೇಸ್ ಬುಕ್ ಸಂವಹನಗಳು ಅನುಕ್ರಮವಾಗಿ 36 ಮತ್ತು 33.4 ದಶಲಕ್ಷ ಸಂಖ್ಯೆಯಲ್ಲಿ ದಾಖಲಾಗಿವೆ.

ಫೇಸ್‍ಬುಕ್‍ನ 650 ಪುಟಗಳ ಡೇಟಾವನ್ನು 2017ರ ಜನವರಿ 1ರಿಂದ ವಿಶ್ಲೇಷಿಸಿದ ವರದಿ ಇದು. ಟ್ರಂಪ್ ಅವರ ಫೇಸ್‍ಬುಕ್ ಪುಟದ ಮೇಲಿನ ಪ್ರತಿಕ್ರಿಯೆ ಮೋದಿ ಅವರಿಗಿಂತ ಹಚ್ಚಿದೆ. ವಿಶ್ವಸಂಸ್ಥೆಯ 193 ಸದಸ್ಯ ರಾಷ್ಟ್ರಗಳ ಪೈಕಿ, 175 ರಾಷ್ಟ್ರಗಳು ಫೇಸ್‍ಬುಕ್ ಖಾತೆ ಹೊಂದಿವೆ. ಇದರ ಹೊರತಾಗಿ 109 ದೇಶಗಳ ಅಧ್ಯಕ್ಷರು, 86 ದೇಶಗಳ ಸರ್ಕಾರದ ಮುಖ್ಯಸ್ಥರು (ಪ್ರಧಾನಿ), 72 ವಿದೇಶಾಂಗ ಸಚಿವರು ವೈಯಕ್ತಿಕವಾಗಿಯೂ ಫೇಸ್‍ಬುಕ್ ಖಾತೆ ಹೊಂದಿದ್ದಾರೆ.

ಹೀಗೆ ಎಲ್ಲೇ ಹೋದರೂ ಮೋದೀಜೀ ಮುಂದು ಎನ್ನುವುದಕ್ಕೆ ಭಾರತೀಯರಾದ ನಾವು ಹೆಮ್ಮೆ ಪಡಬೇಕು!! ಇಂತಹ ಪ್ರಧಾನಿಯನ್ನು ಪಡೆದ ನಾವೇ ಧನ್ಯರು!!

source: http://indianexpress.com/article/india/pm-modi-donald-trump-twiplomacy-most-liked-leader-on-facebook-second-most-interactive-study-5160586/

udayavani

  • ಪವಿತ್ರ
Tags

Related Articles

Close