ಪ್ರಚಲಿತ

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸೋಲು: ಪ್ರಧಾನಿ ಮೋದಿ

ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಈ ದೇಶದ ಜನರ ಸರ್ವಾಂಗೀಣ ಅಭಿವೃದ್ಧಿಯ ಕನಸನ್ನು ನನಸು ಮಾಡುವ ಹಾದಿಯಲ್ಲಿ ದೃಢ ಹೆಜ್ಜೆಗಳನ್ನು ಕಳೆದ ಹತ್ತು ವರ್ಷಗಳಿಂದ ಇಡುತ್ತದೆ. ಕೇಂದ್ರ ಸರ್ಕಾರದ ಮುಂದಾಲೋಚನೆ, ದೂರದೃಷ್ಟಿಯ ಕಾರಣದಿಂದ ಭಾರತದಲ್ಲಿ ಸಕಾರಾತ್ಮಕ ಕೆಲಸಗಳು ಸಾಗರೋಪಾದಿಯಲ್ಲಿ ನಡೆಯುವ ಹಾಗಾಗಿದೆ‌. ಅಭಿವೃದ್ಧಿಯ ನಾಗಾಲೋಟದಲ್ಲಿ ಭಾರತ‌ ಮುಂಚೂಣಿಯಲ್ಲಿದೆ ಎನ್ನುವುದು ಸತ್ಯ.

ಕಳೆದ ಹತ್ತು ವರ್ಷಗಳ ಹಿಂದೆ ಭಾರತದ ಆಡಳಿತ ಚುಕ್ಕಾಣಿಯನ್ನು ಸಮರ್ಥ ನಾಯಕನೊಬ್ಬನ ಕೈಗೆ ಜನರು ನೀಡಿದ್ದರ ಪರಿಣಾಮ ನಮ್ಮ ದೇಶ ವಿಶ್ವದಲ್ಲಿ ತನ್ನ ಸ್ಥಾನಮಾನವನ್ನು ಹೆಚ್ಚಿಸಿಕೊಂಡಿದೆ. ಪ್ರಪಂಚದ ಯಾವುದೇ ರಾಷ್ಟ್ರ ಸಮಸ್ಯೆಯ ಸುಳಿಗೆ ಸಿಲುಕಲಿ, ಪರಿಹಾರಕ್ಕಾಗಿ ಮೊದಲು ಭಾರತದತ್ತ ನೋಡುತ್ತದೆ, ಭಾರತದ ಜೊತೆಗೆ ನೆರವು ಕೇಳುವಂತಾಗಿದೆ. ವಿಶ್ವದ ದೊಡ್ಡಣ್ಣ ಎನಿಸಿಕೊಂಡ ಅಮೆರಿಕಾಗೂ ಭಾರತದ ಶಕ್ತಿಯ ಅರಿವಾಗಿರುವುದು ಪ್ರಧಾನಿ ಮೋದಿ ಎಂಬ ವ್ಯಕ್ತಿ ಶಕ್ತಿಯ ಕಾರಣಕ್ಕೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ.

ಈ ವರ್ಷ ಲೋಕಸಭಾ ಚುನಾವಣೆ ನಡೆಯಲಿದ್ದು, ಈ ಬಾರಿಯೂ ಮತದಾರರು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರಕ್ಕೆಯೇ ಆಡಳಿತ ಸಿಗುವಂತೆ ಮಾಡುತ್ತಾರೆ ಎನ್ನುವ ಭರವಸೆಯೂ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳಲ್ಲಿ ಮನೆ ಮಾಡಿದೆ. ಎನ್.ಡಿ.ಎ. ನೇತೃತ್ವದ ಪಕ್ಷಗಳು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೆಲುವು‌ ಸಾಧಿಸುವ ನಿಟ್ಟಿನಲ್ಲಿ ಭರ್ಜರಿ ಉಪಾಯಗಳನ್ನ ಹೂಡುತ್ತಿದೆ.

ಮುಂದಿನ ಲೋಕಸಭಾ ಚುನಾವಣೆಗೆ ಸಂಬಂಧಿಸಿದ ಹಾಗೆ ಮಧ್ಯಪ್ರದೇಶದ‌ ಝುಬುವಾದಲ್ಲಿ ಪ್ರದಾನ ಮೋದಿ ಅವರು ಮಾತನಾಡಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ‌ಗೆ 370 ಕ್ಕೂ ಹೆಚ್ಚು ಸ್ಥಾನಗಳನ್ನು ಮತ್ತು ಎನ್‌ಡಿ‌ಎ ಒಕ್ಕೂಟ 400 ಕ್ಕೂ ಹೆಚ್ಚಿನ ಸ್ಥಾನ ಲಭಿಸುತ್ತದೆ ಎಂಬ ಭರವಸೆ ನೀಡಿದ್ದಾರೆ.

ನಾನು ಜನರಿಗಾಗಿ ಹಗಲು ರಾತ್ರಿ ಎನ್ನದೆ ದುಡಿಯುತ್ತಿದ್ದೇನೆ. ಮಧ್ಯಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ನಮಗೆ ಬೆಂಬಲ ನೀಡಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿಯೂ ಜನತೆ ನಮಗೆ ಮತ ನೀಡಿ, ನಮ್ಮನ್ನು ಹರಸಲಿದ್ದಾರೆ. ಕಾಂಗ್ರೆಸ್‌ಗೆ ಮದ್ಯಪ್ರದೇಶದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಿದ್ದಾರೆ.‌ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಸಹ ಸೋಲೇ ‌ಉತ್ತರವಾಗಲಿದೆ ಎಂದು ಅವರು ಹೇಳಿದ್ದಾರೆ.

ಬಿಜೆಪಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ 370ಕ್ಕೂ ಅಧಿಕ‌ ಸ್ಥಾನಗಳನ್ನು ಗೆಲ್ಲಲಿದೆ. ಎನ್‌ಡಿಎ ಒಕ್ಕೂಟ 400 ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಿ, ಕೇಂದ್ರದಲ್ಲಿ ಮತ್ತೆ ಗದ್ದುಗೆ ಏರಲಿದೆ ಎಂದು ಪಿ ಎಂ ಮೋದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Tags

Related Articles

Close