ಪ್ರಚಲಿತ

ಹಿಂದಿನ ಸರ್ಕಾರದ ರಾಜಕೀಯಕ್ಕೆ ರೈಲ್ವೆ ಬಲಿಯಾಗಿತ್ತು: ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎರಡನೇ ಅವಧಿಯ ಆಡಳಿತವನ್ನು ಯಶಸ್ವಿಯಾಗಿ ಮುಗಿಸಿ, ಮುಂದಿನ ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆಸುತ್ತಿದೆ. ದೇಶದ ಅಭಿವೃದ್ಧಿ, ಜನರ ಪ್ರಗತಿಯನ್ನೇ ಗುರಿಯಾಗಿಸಿಕೊಂಡು ಸಮರ್ಥ ಮತ್ತು ಮಾದರಿ ಆಡಳಿತ ನೀಡುವ ಮೂಲಕ ದೇಶವಾಸಿಗಳಿಗೆ ಮತ್ತೆ ಮೋದಿ ಅವರೇ ಪ್ರಧಾನಿ ಆಗಬೇಕು, ಬಿಜೆಪಿಯೇ ಅಧಿಕಾರದ ಗದ್ದುಗೆ ಏರಬೇಕು ಎನ್ನುವ ಭಾವನೆ ಮೂಡುವಂತೆ ಜನ ಸ್ನೇಹಿ ಯೋಜನೆಗಳಿಗೆ ಜೀವ ತುಂಬಿದ ಕೀರ್ತಿ ಪ್ರಧಾನಿ ಮೋದಿ ಸರ್ಕಾರದ್ದು.

ಪ್ರಧಾನಿ ನರೇಂದ್ರ ಮೋದಿ ಅವರು ಸಾರಿಗೆ ಸಂಪರ್ಕ ಸಾಧನವನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ 41,000 ಕೋಟಿ ರೂ. ಗಳ ಎರಡು ಸಾವಿರಕ್ಕೂ ಅಧಿಕ ರೈಲ್ವೆ ಮೂಲಸೌಕರ್ಯಗಳ ಅಭಿವೃದ್ಧಿಗೆ ಚಾಲನೆ ನೀಡಿದ್ದಾರೆ.

ಪ್ರಸ್ತುತ ಭಾರತವು ದೊಡ್ಡ ದೊಡ್ಡ ಕನಸುಗಳನ್ನು ಕಾಣುವಂತಾಗಿದೆ. ಆ ಕನಸುಗಳನ್ನು ನನಸಾಗಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಹಗಲಿರುಳು ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಮುಂದಿನ ಜೂನ್ ತಿಂಗಳಿನಿಂದ ನಾವು ಮೂರನೇ ಅವಧಿಯ ಸರ್ಕಾರವನ್ನು ರಚಿಸಿ, ಕೇಂದ್ರದಲ್ಲಿ ಆಡಳಿತ ನಡೆಸಲಿದ್ದೇವೆ. ಆ ಆಡಳಿತ ಹೇಗಿರಬಹುದು ಎನ್ನುವ ಸೂಚನೆ ದೇಶದ ಜನರಿಗೆ ಈಗಾಗಲೇ ದೊರೆತಿದೆ. ನವ ಭಾರತದ ನಿರ್ಮಾಣವನ್ನು ದೇಶದ ಜನರು ಈಗಾಗಲೇ ಕಳೆದ ಹತ್ತು ವರ್ಷಗಳಲ್ಲಿ ಕಂಡಿದ್ದಾರೆ. ವಂದೇ ಭಾರತ್ ರೈಲುಗಳ ಆರಂಭ, ರೈಲ್ವೆ ಹಳಿಗಳ ವಿದ್ಯುದೀಕರಣ, ಸ್ವಚ್ಛತೆ ಮೊದಲಾದಂತೆ‌ ಅಭೂತಪೂರ್ವ ಎಂಬಂತೆ ರೈಲ್ವೆ ವಲಯ ಅಭಿವೃದ್ಧಿಯ ಪರಿವರ್ತನೆಗೆ ತೆರೆದುಕೊಂಡಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಇದೇ ಸಂದರ್ಭದಲ್ಲಿ ಸಾರ್ವಜನಿಕರ ಹಣವನ್ನು ಲೂಟಿ ನಡೆಸಿದ ವಿರೋಧ ಪಕ್ಷಗಳ ವಿರುದ್ಧ ಅವರು ವಾಗ್ದಾಳಿ ನಡೆಸಿದ್ದಾರೆ. ನಮ್ಮ ಆಡಳಿತವು ಸಾರ್ವಜನಿಕರ ಹಣವನ್ನು ಲೂಟಿ ಮಾಡಿತ್ತಿಲ್ಲ. ಬದಲಾಗಿ ಪೈಸೆ ಪೈಸೆಯನ್ನೂ ಅಭಿವೃದ್ಧಿಯ ಕಾರ್ಯಗಳಿಗೆ ಬಳಕೆ ಮಾಡುತ್ತಿದ್ದೇವೆ. ಈ ಹಿಂದಿನ ಆಡಳಿತಗಾರರ ರಾಜಕೀಯಕ್ಕೆ ರೈಲ್ವೆ ವಲಯ ಬಲಿಪಶುವಾಗಿತ್ತು. ಆದರೆ ಈಗ ಇದು ಜನರಿಗೆ ಪ್ರಯಾಣದ ಸುಲಭತೆಯ ಆಧಾರವಾಗಿ ಮಾರ್ಪಾಡಾಗಿದೆ ಎಂದು ಅವರು ಸಂತಸಪಟ್ಟಿದ್ದಾರೆ.

Tags

Related Articles

Close