ಪ್ರಚಲಿತ

ಕಾಂಗ್ರೆಸ್ ಪಕ್ಷ ನಂಬಿಕೆಗೆ ಅರ್ಹವಲ್ಲ: ಪ್ರಧಾನಿ ಮೋದಿ

ದೇಶಕ್ಕೆ ಸ್ವಾತಂತ್ರ್ಯ ದೊರೆತ ಬಳಿಕ ಭರತ ವನ್ನು ಖಂಡ ತುಂಡ ಮಾಡುವಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕರು ತೋರಿಸಿದ ಉತ್ಸಾಹವನ್ನು ದೇಶದ ಅಭಿವೃದ್ಧಿಯ ವಿಚಾರದಲ್ಲಿ ತೋರಿಲ್ಲ. ಇದಕ್ಕೆ ಜೀವ ಸಂತ ಸಾಕ್ಷಿ ಪಾಕಿಸ್ತಾನ, ಬಾಂಗ್ಲಾದೇಶ ಎನ್ನುವುದು ಸ್ಪಷ್ಟ.

ಕಳೆದ ಹತ್ತು ವರ್ಷಗಳ ಹಿಂದೆಯೂ ಕೇಂದ್ರದ ಆಡಳಿತ ಚುಕ್ಕಾಣಿಯನ್ನು ಕಾಂಗ್ರೆಸ್ ಪಕ್ಷ ಹಿಡಿದಿದ್ದ ಸಮಯದಲ್ಲಿ ನೆರೆಯ ಪಾಕಿಸ್ತಾನ, ಚೀನಾ ‌ಗಳು ಭಾರತದ ಭೂಪ್ರದೇಶವನ್ನು ಕಬಳಿಸಲು ಇನ್ನಿಲ್ಲದ ಪ್ರಯತ್ನ ನಡೆಸಿವೆ ಎನ್ನುವುದು ಸತ್ಯ. ಇದಾದ ಬಳಿಕ, ಕಳೆದ ಹತ್ತು ವರ್ಷಗಳಲ್ಲಿ ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಆಡಳಿತ ವಹಿಸಿಕೊಂಡ ಬಳಿಕ ಇಂತಹ ನೆರೆಯ ದುಷ್ಟ ರಾಷ್ಟ್ರಗಳ ದರ್ಬುದ್ಧಿಯ ವಿರುದ್ಧ ಕಠಿಣ ಕ್ರಮಗಳಾಗುತ್ತಿವೆ. ನೆರೆಯ ಶತ್ರುಗಳ ವಿರುದ್ಧ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಂಡು, ತನ್ನ ಭೂಭಾಗವನ್ನು ರಕ್ಷಣೆ ಮಾಡಲು ಕ್ರಮ ಕೈಗೊಂಡಿದೆ ಎಂದರೆ ತಪ್ಪಾಗಲಾರದು.

ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಪಕ್ಷದ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದು, ಕಾಂಗ್ರೆಸ್ ಪಕ್ಷ ನಂಬಿಕೆಗೆ ಅರ್ಹವಲ್ಲ. ಕಾಂಗ್ರೆಸ್ ಪಕ್ಷ ಈ ಹಿಂದೆ ಭಾರತಕ್ಕೆ ಸೇರಬೇಕಾದ ಕಚ್ಚತೀವು ದ್ವೀಪವನ್ನು ಶ್ರೀಲಂಕಾಗೆ ಬಿಟ್ಟು ಕೊಡುವ ಮೂಲಕ ತನ್ನ ಅಸಾಮರ್ಥ್ಯ ಪ್ರದರ್ಶನಕ್ಕೆ ಇಟ್ಟಿದ್ದು, ಇಂತಹ ಕಾರಣಕ್ಕೆ ಕಾಂಗ್ರೆಸ್ ನಂಬಿಕೆಗೆ ಅರ್ಹವಾದ ಪಕ್ಷವಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷವು ಹೇಗೆ ನಿರ್ದಯವಾಗಿ ಕಚ್ಚತೀವು ದ್ವೀಪವನ್ನು ಶ್ರೀಲಂಕಾಗೆ ಬಿಟ್ಟುಕೊಟ್ಟಿತು ಎನ್ನುವ ಹೊಸ ವಿಷಯವನ್ನು ಪ್ರಧಾನಿ ಮೋದಿ ಅವರು ಬಯಲು ಮಾಡಿದ್ದಾರೆ. ಇದಕ್ಕೆ ಸಂಬಂಧಿಸದ ವರದಿಗಳು ಈ ಸಂಗತಿ ಸತ್ಯ ಎನ್ನುವುದನ್ನು ದೃಢ ಪಡಿಸುತ್ತದೆ. ಇದು ಪ್ರತಿಯೋರ್ವ ಭಾರತೀಯನನ್ನು ಕೆರಳಿಸಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇಂತಹ ಕಾಂಗ್ರೆಸ್ ಪಕ್ಷವನ್ನು ನಂಬುವುದು ಎಂದಿಗೂ ಸಾಧ್ಯವಿಲ್ಲ. ಕಳೆದ ಎಪ್ಪತೈದು ವರ್ಷಗಳಲ್ಲಿ ನಮ್ಮ ದೇಶದಲ್ಲಿ ಶಾಂತಿ, ಸಾಮರಸ್ಯ, ಏಕತೆ, ಸಮಗ್ರತೆ, ಹಿತಾಸಕ್ತಿಗಳನ್ನು ದುರ್ಬಲ ಮಾಡುವ ಕೆಲಸವನ್ನು ಮಾಡಿದೆ ಎಂದು ಅವರು ಕೈ ಪಕ್ಷದ ವಿರುದ್ಧ ಕಿಡಿ ಕಾರಿದ್ದಾರೆ.

ಒಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ದೇಶದೊಳಗೆ ಇದ್ದುಕೊಂಡೇ ಸಾಕಷ್ಟು ಪ್ರಮಾಣದಲ್ಲಿ ದೇಶಕ್ಕೆಯೇ ಅನ್ಯಾಯ ಎಸಗುವ, ದೇಶದ ಜನರಿಗೆ ಪಂಗನಾಮ ಹಾಕುವ ಕೆಲಸ ಮಾಡಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ದೇಶ ಪ್ರೇಮ, ದೇಶದ ಅಭಿವೃದ್ಧಿಯ ಆಶಯದ ಆಡಳಿತ ಕಾಂಗ್ರೆಸ್ ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕುವಂತೆ ಮಾಡಿದ್ದು, ಕಾಂಗ್ರೆಸ್ ಪಕ್ಷದ ಬಣ್ಣ ಜನರ ಮುಂದೆ ಬಯಲಾಗುತ್ತಿದೆ ಎನ್ನುವುದು ಅಕ್ಷರಶಃ ಸತ್ಯ.

Tags

Related Articles

Close