ಪ್ರಚಲಿತ

ನಮ್ಮ ಸರ್ಕಾರ ದೇಶದ 25 ಕೋಟಿ ಜನರನ್ನು ಬಡತನ ರೇಖೆಯಿಂದ ಮೇಲೆತ್ತಿದೆ: ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಜನರ ಅಭಿವೃದ್ಧಿಯ ಆಕಾಂಕ್ಷೆಯ ಹಿನ್ನೆಲೆಯಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ದೇಶದ ಹಿಂದುಳಿದ ಜನರು, ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಾದಲ್ಲಿ ದೇಶದ ಚಿತ್ರಣವೇ ಬದಲಾಗುತ್ತದೆ ಎಂಬ ಭಾರತದ ನಾಡಿಯನ್ನರಿತ ಮೋದಿ ಸರ್ಕಾರದ ಸಾಧನೆ ಒಂದೆರಡಲ್ಲ.

ಪ್ರಧಾನಿ ಮೋದಿ ಅವರು ಮಹಾರಾಷ್ಟ್ರದಲ್ಲಿ ನಡೆದ ಬಹುವಿಧ ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಕೇಂದ್ರದ ಎನ್‌ಡಿ‌ಎ ಸರ್ಕಾರ ಭಾರತದ ಹಿಂದುಳಿದ ಜನರ, ಹಿಂದುಳಿದ ಕುಟುಂಬಗಳ ಕಲ್ಯಾಣಕ್ಕಾಗಿ ಸಮರ್ಪಿತವಾಗಿದೆ ಎಂದು ತಿಳಿಸಿದ್ದಾರೆ.

ದೇಶದ ಬಡ ಕುಟುಂಬಗಳ ಜೀವನವನ್ನು ಸುಧಾರಿಸಲು, ಸುಗಮಗೊಳಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಸರ್ಕಾರ ಈಗಾಗಲೇ ನಾಲ್ಕು ಕೋಟಿ ಪಕ್ಕಾ ಮನೆಗಳು ಮತ್ತು ಹತ್ತು ಕೋಟಿ ಶೌಚಾಲಯಗಳನ್ನು ನಿರ್ಮಾಣ ಮಾಡಿರುವುದಾಗಿ ಹೇಳಿದ್ದಾರೆ.

ಸುಮಾರು ಇಪ್ಪತೈದು ಕೋಟಿ ಜನರನ್ನು ಕೇಂದ್ರ ಸರ್ಕಾರ ಬಡತನ ರೇಖೆಗಿಂತ ಮೇಲೆ ಬರುವ ನಿಟ್ಟಿನಲ್ಲಿ ಹಲವಾರು ಕೆಲಸಗಳನ್ನು ಮಾಡಿದೆ. ಮುಂದಿನ ಐದು ವರ್ಷಗಳ ವರೆಗೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯನ್ನು ಮುಂದುವರಿಸುವುದಾಗಿಯೂ ಅವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದ್ದಾರೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಪೂರ್ಣ ವಾಗಿರುವ ತೊಂಬತ್ತು ಸಾವಿರ ಮನೆಗಳ ಪೈಕಿ ಹದಿನೈದು ಸಾವಿರ ಮನೆಗಳನ್ನು ಲೋಕಾರ್ಪಣೆ ಮಾಡಿದ್ದಾರೆ. ಮಹಾರಾಷ್ಟ್ರದ ಒಂದು ಲಕ್ಷಕ್ಕೂ ಹೆಚ್ಚಿನ ಕುಟುಂಬಗಳು ಸ್ವಂತ ಸೂರು ಪಡೆಯಲಿವೆ ಎಂದು ಅವರು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಅವರು ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹಿಂದಿನ ಸರ್ಕಾರಗಳು ಗರೀಹಿ ಹಠಾವೋ ಭರವಸೆ ನೀಡಿದ್ದವು. ಆದರೆ ಅದನ್ನು ಸಾಧಿಸುವಲ್ಲಿ ಮಾತ್ರ ಸೋತಿದ್ದವು. ಆದರೆ ನಮ್ಮ ಸರ್ಕಾರ ಪಾರದರ್ಶಕವಾಗಿ ಈ‌ ಕೆಲಸಗಳನ್ನು ಮಾಡಿ ಮುಗಿಸಿದೆ ಎಂದು ಪ್ರಧಾನಿ ಹೇಳಿದ್ದಾರೆ.

Tags

Related Articles

Close