ಪ್ರಚಲಿತ

ನಮ್ಮ ಯೋಧರಿರುವ ಜಾಗ ನಮಗೆ ದೇಗುಲದಷ್ಟೇ ಪವಿತ್ರ

ಪ್ರಧಾನಿ ಮೋದಿ ಅವರ ಆಡಳಿತದಲ್ಲಿ, ಕಳೆದ ಒಂಬತ್ತು ವರ್ಷಗಳಲ್ಲಿ ಭಾರತೀಯ ಸೇನೆಯ ಸಾಮರ್ಥ್ಯ ಮತ್ತು ಸ್ವಾತಂತ್ರ್ಯ ಎರಡೂ ಹೆಚ್ಚಾಗಿದೆ.‌ ಯಾವುದೇ ಸಮಯದಲ್ಲಿ, ಯಾವುದೇ ನಿರ್ಣಯವನ್ನು ತಾನೇ ತೆಗೆದುಕೊಂಡು ಮುಂದುವರಿಯುವ ಅವಕಾಶವನ್ನು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಮ್ಮ ಸೇನೆಗೆ ನೀಡಿದೆ. ಆ ಮೂಲಕ ಸೇನಾ ಪಡೆಗಳನ್ನು ಮತ್ತಷ್ಟು ಸಶಕ್ತಗೊಳಿಸುವ ಕಾರ್ಯದಲ್ಲಿ ಕೇಂದ್ರ ಸರ್ಕಾರ ಸಫಲವಾಗಿದೆ‌.

ಈ ಹಿಂದೆ ಭಾರತವನ್ನು ಕಾಂಗ್ರೆಸ್ ನೇತೃತ್ವದ ಯುಪಿಎ ವಹಿಸಿಕೊಂಡಿದ್ದ ಸಂದರ್ಭದಲ್ಲಿ ನಮ್ಮ ದೇಶದ ರಕ್ಷಣಾ ವಲಯ ಯಾವ ನಿರ್ಧಾರ ತೆಗೆದುಕೊಳ್ಳಬೇಕಾದರೂ ಆಗಿನ ಸರ್ಕಾರದ ಅನುಮತಿಗೆ ಕಾಯುವ ಸ್ಥಿತಿ ನಿರ್ಮಾಣವಾಗಿತ್ತು. ‘ಕೊಳ್ಳೆ ಹೊಡೆದಾದ ‌ಮೇಲೆ,‌ಕೋಟೆ ಮುಚ್ಚುವ ಸಮಯ ಬಂದೆೊದಗಿತ್ತು. ಆದರೆ ಪ್ರಸ್ತುತ ನಮ್ಮ ಸೇನೆ ಸಶಕ್ತವಾಗಿ ಎಲ್ಲಾ‌ ಸವಾಲುಗಳನ್ನು ಸಮರ್ಥವಾಗಿ, ಯಾವುದೇ ಎಗ್ಗಿಲ್ಲದೆ ಮಾಡುವಷ್ಟು ಸಬಲವಾಗಿದೆ.

ನಮ್ಮ ರಕ್ಷಣಾ ಪಡೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದ್ದು, ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಹಾಗೆ ಭಾರತವು ಅತ್ಯಂತ ದೊಡ್ಡ ಆಟಗಾರನಾಗಿ ಹೊರಹೊಮ್ಮುತ್ತಿದೆ. ಹಾಗೆಯೇ, ಭದ್ರತಾ ಪಡೆಗಳ ಸಾಮರ್ಥ್ಯ ನಿರಂತರವಾಗಿ ಹೆಚ್ಚುತ್ತಿದೆ ಎಂದು ಅವರು ಹೇಳಿದ್ದಾರೆ.

ದೀಪಾವಳಿ ಸಂದರ್ಭದಲ್ಲಿ ಅವರು ಹಿಮಾಚಲ ಪ್ರದೇಶದ ಲೆಪ್ಚಾದಲ್ಲಿ ಸೈನಿಕರ ಜೊತೆಗೆ ದೀಪಾವಳಿ ಆಚರಿಸಿ ಮಾತನಾಡಿದ ಅವರು, ಪ್ರಪಂಚದ ಪರಿಸ್ಥಿತಿಗಳು ಮತ್ತು ಭಾರತದ ನಿರೀಕ್ಷೆಗಳು ನಿರಂತರವಾಗಿ ಹೆಚ್ಚುತ್ತಿವೆ. ಇಂತಹ ಮಹತ್ವದ ದಿನಗಳಲ್ಲಿ, ಭಾರತದ ಗಡಿಗಳನ್ನು ರಕ್ಷಣೆ ಮಾಡುವುದು ಹಾಗೂ ದೇಶದಲ್ಲಿ ಶಾಂತಿಯ ವಾತಾವರಣ ನಿರ್ಮಾಣ ಮಾಡುವುದು ಇಂತವೇ ಮೊದಲಾದ ಹಲವಾರು ಕಾರ್ಯಗಳಲ್ಲಿ ಸೈನಿಕರ ಪಾತ್ರ ದೊಡ್ಡದು ಎಂದಿದ್ದಾರೆ.

ನಮ್ಮ ಧೈರ್ಯಶಾಲಿಗಳಾದ ಯೋಧರು ಹಿಮಾಲಯದಂತಹ ಪ್ರದೇಶದಲ್ಲಿ ಭಾರತವನ್ನು ರಕ್ಷಣೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಸ್ವಾತಂತ್ರ್ಯದ ನಂತರ ಈ ವೀರ ಹೃದಯಗಳು ಯುದ್ಧಗಳ ಮೂಲಕ ದೇಶವನ್ನು ಕಾಪಾಡಿ ನಮ್ಮೆಲ್ಲರ ಹೃದಯ ಗೆದ್ದಿದ್ದಾರೆ. ಸವಾಲುಗಳ ನಡುವೆಯೂ ನಮ್ಮ ಯೋಧರು ಗೆಲುವು ಸಾಧಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಹಾಗೆಯೇ, ನಮ್ಮ ಯೋಧರು ಪ್ರಾಣವನ್ನು ಪಣಕ್ಕಿಟ್ಟು ನಮ್ಮ ದೇಶದ ರಕ್ಷಣೆ ಮಾಡುತ್ತಿದ್ದಾರೆ. ಗಡಿಯಲ್ಲಿನ ಬಲವಾದ ಗೋಡೆಗಳ ಹಾಗೆ ಕಾರ್ಯ ನಿರ್ವಹಿಸುತ್ತಿದ್ದಾರೆ. ನಮಗೆ ನಮ್ಮ ಯೋಧರನ್ನು ನಿಯೋಜಿಸಲ್ಪಟ್ಟ ಸ್ಥಳ ದೇಗುಲದಷ್ಟೇ ಪವಿತ್ರ ಎಂದು ತಿಳಿಸಿದ್ದಾರೆ.

Tags

Related Articles

Close