ಪ್ರಚಲಿತ

ಭ್ರಷ್ಟ ಕಾಂಗ್ರೆಸ್ ಪಕ್ಷದ ನಾಯಕರ ಬೆವರಿಳಿಸಿದ ಪ್ರಧಾನಿ ಮೋದಿ

ದೇಶದಲ್ಲಿ ಅಶಾಂತಿ ಸೃಷ್ಟಿ ಮಾಡುವ ಕಾಂಗ್ರೆಸ್ ಪಕ್ಷದ ನಾಯಕರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ಕಿಡಿ ಕಾರಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಕೆಂಡಾಮಂಡಲವಾಗಿರುವ ಅವರು, ಕಾಂಗ್ರೆಸ್‌ನ ರಾಯಲ್ ಕುಟುಂಬದ ರಾಜಕುಮಾರ ‘ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಇಡೀ ದೇಶವೇ ಹೊತ್ತುರಿಯಲಿದೆ’ ಎಂದು ಹೇಳಿಕೆ ನೀಡಿದ್ದಾರೆ. ಇವರ ಪಕ್ಷ ಅರವತ್ತು ದಶಕಗಳ ಕಾಲ ಭಾರತದ ಆಡಳಿತ ಚುಕ್ಕಾಣಿ ಹಿಡಿದಿತ್ತು‌. ಕಳೆದ ಹತ್ತು ವರ್ಷಗಳಲ್ಲಿ ಅವರ ಅಧಿಕಾರ ಕೈತಪ್ಪಿದೆ. ಈ ಕಾರಣಕ್ಕೆ ಅವರು ದೇಶ‌ ಹೊತ್ತುರಿಯುವ ಮಾತುಗಳನ್ನು ಆಡುತ್ತಿದ್ದಾರೆ. ಇದು ಪ್ರಜಾಪ್ರಭುತ್ವದ ಭಾಷೆಯೇ? ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಇಂತಹ ಹೇಳಿಕೆಗಳ ಮೂಲಕ ಸಮಾಜದ ಶಾಂತಿ ಕದಡುವ ವ್ಯಕ್ತಿಗಳಿಗೆ ಜನರೇ ಶಿಕ್ಷೆ ನೀಡಬೇಕು. ಇಂತಹವರನ್ನು ಆಯ್ಕೆ ಮಾಡಿ ಅಂಗಣದಿಂದ ಹೊರ ಹಾಕುವ ಕೆಲಸ ಮಾಡಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಮಗೆ ಎರಡು ಪಾಳಯಗಳು ಎದುರಾಗುತ್ತವೆ. ಒಂದೆಡೆ ನಾವು ಪ್ರಾಮಾಣಿಕತೆ, ಪಾರದರ್ಶಕ ಆಡಳಿತವನ್ನು ಜನತೆಗೆ ತಲುಪಿಸುವ ಕೆಲಸ ಮಾಡುತ್ತಿದ್ದೇವೆ. ಆದರೆ ಇನ್ನೊಂದು ಕಡೆಯಲ್ಲಿ ಭ್ರಷ್ಟರು, ರಾಜವಂಶಜರು ಒಟ್ಟಾಗಿದ್ದಾರೆ. ಇವರು ಪ್ರಧಾನಿ ಮೋದಿ ಅವರನ್ನು ನಿಂದಿಸಿ, ಬೆದರಿಸುವ ಕೆಲಸವನ್ನು ಮಾಡುತ್ತಿದ್ದಾರೆ. ನಾವು ಭ್ರಷ್ಟಾಚಾರ ತೊಲಗಿಸಲು ಹೇಳಿದರೆ, ಅವರು ಭ್ರಷ್ಟಾಚಾರ ಉಳಿಸಿ ಎನ್ನುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಬೆದರಿಕೆಗಳಿಗೆ, ನಿಂದನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಹೆದರುವುದಿಲ್ಲ. ಪ್ರತಿಯೊಬ್ಬ ಭ್ರಷ್ಟಾಚಾರಿಯ ವಿರುದ್ಧ ನಮ್ಮ ಸಮರ ನಡೆಯುತ್ತಲೇ ಇರುತ್ತದೆ. ನಮ್ಮ ಮೂರನೇ ಅವಧಿಯ ಸರ್ಕಾರ ಭ್ರಷ್ಟರ ವಿರುದ್ಧ ದೊಡ್ಡ ಮಟ್ಟದಲ್ಲಿ ಕ್ರಮ ಕೈಗೊಳ್ಳಲಿದೆ ಎಂದು ಪಿ.ಎಂ‌. ಮೋದಿ ನುಡಿದಿದ್ದಾರೆ. ಇದನ್ನು ತಾವು ದೃಢಪಡಿಸುವುದಾಗಿಯೂ ಅವರು ನುಡಿದಿದ್ದಾರೆ.

ಒಟ್ಟಿನಲ್ಲಿ ಪ್ರಧಾನಿ ಮೋದಿ, ಬಿಜೆಪಿ ವಿರುದ್ಧ ಬೇಕಾಬಿಟ್ಟಿ ಹೇಳಿಕೆ ನೀಡಿ, ಸಾರ್ವಜನಿಕ ವಲಯದಲ್ಲಿ ಮರ್ಯಾದೆ ಕಳೆದುಕೊಳ್ಳುವ ಕೆಲಸವನ್ನು ರಾಹುಲ್ ಗಾಂಧಿ ಮಾಡುತ್ತಲೇ ಬಂದಿದ್ದು, ಪ್ರಧಾನಿ ಮೋದಿ, ಬಿಜೆಪಿ ಯವರಿಂದ ಜೊತೆಗೆ ಸಾರ್ವಜನಿಕ ವಲಯದಿಂದಲೂ ಸಾಕ್ಷಷ್ಟು ವಿರೋಧ ಎದುರಿಸುತ್ತಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.

Tags

Related Articles

Close