ಪ್ರಚಲಿತ

ಒಂದೇ ದಿನ ಐದು ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಲಿದ್ದಾರೆ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ವಂದೇ ಭಾರತ್ ರೈಲು ದೇಶದಲ್ಲಿಯೇ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಮಹತ್ವದ ಮೈಲಿಗಲ್ಲು ಸಾಧಿಸಿದೆ.

ಜೂನ್ ೨೬ ರಿಂದ ತೊಡಗಿದಂತೆ ಭಾರತೀಯ ರೈಲ್ವೆಯು ಭಾರತದ ಇನ್ನೂ ೫ ಮಾರ್ಗಗಳಲ್ಲಿ ವಂದೇ ಭಾರತ್ ರೈಲುಗಳನ್ನು ಓಡಿಸುವುದಕ್ಕೆ ಸಿದ್ಧತೆ ನಡೆಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಐದೂ ಮಾರ್ಗಗಳ ವಂದೇ ಭಾರತ್ ರೈಲು ಸೇವೆಗಳಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಸಿರು ನಿಶಾನೆ ತೋರಿಸುವ ಸಾಧ್ಯತೆ ಇದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಒಂದೇ ದಿನದಲ್ಲಿ ಐದು ವಂದೇ ಭಾರತ್ ರೈಲುಗಳ ಚಾಲನೆ ಆರಂಭ ಮಾಡುತ್ತಿರುವುದು ಇದೇ ಮೊದಲ ಬಾರಿಗೆ. ಮುಂಬೈ – ಗೋವಾ, ಹುಬ್ಬಳ್ಳಿ-ಬೆಂಗಳೂರು, ಪಾಟ್ನಾ-ರಾಂಚಿ, ಭೋಪಾಲ್- ಇಂದೋರ್, ಭೋಪಾಲ್- ಜಬಲ್ಪುರ ಮಾರ್ಗಗಳಲ್ಲಿ ಈ ಐದು ರೈಲುಗಳು ಸೇವೆ ನೀಡಲಿವೆ. ಈ ವರ್ಷದ ಜೂನ್ ಒಳಗಾಗಿ ದೇಶದ ಎಲ್ಲಾ ರಾಜ್ಯಗಳಲ್ಲಿ ವಂದೇ ಭಾರತ್ ರೈಲು ಸೇವೆಗಳನ್ನು ಆರಂಭ ಮಾಡುವ ಗುರಿಯನ್ನು ತಲುಪಲಾಗುವುದು ಎಂಬುದಾಗಿಯೂ ರೈಲ್ವೆ ಇಲಾಖೆ ಈಗಾಗಲೇ ಮಾಹಿತಿಯನ್ನು ಸಹ ನೀಡಿದೆ.

Tags

Related Articles

Close